ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈಗಲೂ ಇಂಥ ಮಹಾನ್ ಶಾಸಕರು ಇರಲೇ ಬೇಕು!

ಪಶ್ವಿಮ ಬಂಗಾಲದ ಬಿರಭೂಮ್ ಜಿಲ್ಲೆಯ ರಾಜನಗರ ಕ್ಷೇತ್ರದ ಫಾವರ್ಡ ಬ್ಲಾಕ್ ಶಾಸಕ ಬಿಜೆಯ್ ಬಾಗ್ದಿ 1987 ರಿಂದ ಸತತ ಎರಡು ಬಾರಿ ರಾಜ್ಯ ವಿಧಾನ ಸಭೆಗೆ  ಆಯ್ಕೆಯಾಗಿದ್ದರು.  ಆದರೆ, ಸಂಸಾರ ನಿಭಾಯಿಸಲು ಕೆಲಸ ಹುಡುಕುತ್ತಾ, ಪ್ರೈಮರಿ ಶಾಲಾ ಶಿಕ್ಷಕರೂ ಆದರು.  ಸ್ಥಳೀಯ ಶಾಸಕನೆಂದು ಯಾವ ರಿಯಾಯಿತಿಯನ್ನೂ ಆತ ಅಪೇಕ್ಷಿಸಲಿಲ್ಲ.  ತಮಗೆ ಶಾಸಕನಾಗಿ ದೊರಕುವ ರೂ.950/ (ಈಗಿನ ಶಾಸಕರಿಗ

ಹನೀಫ್ ಎಂಬ ಮೂಡಿಗೆರೆ ಹುಡುಗ

ಆಸ್ಟ್ರೇಲಿಯಾದ ಆತಂಕವಾದಿ ಕಾನೂನಿನಡಿ ಬಂಧಿತನಾದ ಡಾ|| ಮೊಹಮ್ಮದ್ ಹನೀಫ್‌ನ ಜತೆ ಫೆಡೆರಲ್ ಪೋಲೀಸರು ನಡೆಸಿದ ಮೊದಲ ಸಂದರ್ಶನವನ್ನು ಪೂರ್ತಿಯಾಗಿ 'ದ ಆಸ್ಟ್ರೇಲಿಯನ್' ಪತ್ರಿಕೆ ಪ್ರಕಟಿಸಿಬಿಟ್ಟಿತು. ಸರ್ಕಾರ 'ಲೀಕ್, ಲೀಕ್' ಎಂದು ಬೊಬ್ಬೆ ಹೊಡೆಯಿತು. ಹನೀಫ್ ಬಗ್ಗೆ ಜಡ್ಚಮೆಂಟಲ್ಲಾಗಿ ಮೊದಲಿಂದಲೂ ಮಾಧ್ಯಮದ ಜತೆ ಮಾತಾಡುತ್ತಲೇ ಬಂದಿದ್ದ ಪ್ರಧಾನಿಯಾದಿಯಾಗಿ ಎಲ್ಲರೂ ಈಗ ಕೂಗಲು ತೊಡಗಿದ್ದು ವಿಪರ್ಯಾಸವೆಂದು ಎಲ್ಲರಿಗೂ ತೋರಿತು. ಆಗ ಹನೀಫ್ ಲಾಯೆರ್‍ ಮುಂದೆ ಬಂದು "ನಾನೇ ಮಾಧ್ಯಮಕ್ಕೆ ಕೊಟ್ಟಿದ್ದು. ಆ ಸಂದರ್ಶನ ಪೋಲೀಸರ ಆಸ್ತಿಯಾಗಿರುವಷ್ಟೇ ತನ್ನ ಕ್ಲೈಂಟಿಗೂ ಸೇರಿದ್ದು. ನಾನು ತಪ್ಪು ಮಾಡಿದ್ದರೆ, ಬಂದು ಹಿಡಿದುಕೊಂಡು ಹೋಗಿ" ಎಂದು ಪ್ರಧಾನಿ, ಅಟರ್ನಿ-ಜನರಲ್ ಆದಿಯಾಗಿ ಎಲ್ಲರನ್ನೂ ಹೆಸರಿಸಿ ಸವಾಲೆಸದ. ಗಪ್‌ಚಿಪ್.

ಸಾವು

 ನಮ್ಮ ಕಛೇರಿಯ ಬಳಿ ತರಕಾರಿ ಮಿನಿ ಮಾರ್ಕೆಟ್ ಇದೆ. ನಾವು ದಿನಾ ಬಂಧು ಬಳಗ ತುಂಬಿದ  ಕುಟುಂಬದವಳಾದ ಒಬ್ಬು ಅಜ್ಜಿಯ ಹತ್ತಿರ ತರಕಾರಿ ಕರೀದಿಸುತ್ತೇವೆ. ಯಾಕಜ್ಜಿ ಎಲ್ಲಾ ಇದ್ದರೂ ಸುಮ್ಮನೆ ವ್ಯಾಪಾರ ಮಾಡ್ತಿ ಅಂದ್ರೆ, ದುಡ್ಡಿದ್ರೆ ಎಲ್ಲಾ ಅವ್ವಾ ಅನ್ನೋಳು.

ಹೆಸರು ಬರೆಯುವುದು ಹೇಗೆ?

ಸ್ನೇಹಿತರೆ, ಹಲವು ದಿನಗಳ ನಂತರ ಬರೆಯುತ್ತಿದ್ದೇನೆ. ನನಗೆ ಉಂಟಾಗಿರುವ ಅನುಮಾನವನ್ನು ಇಲ್ಲಿ ಕೆಳಗೆ ಕೊಟ್ಟಿರುತ್ತೇನೆ. ಅದೇನೆಂದರೆ:

ಪರವಲ್ ಪುರಾಣ

ಫ್ರಿಜ್ಜು ಭಣಭಣ ಅನ್ನುತ್ತಿದ್ದ ಒಂದು ದಿನ. ಏನು ಅಡಿಗೆ ಮಾಡಲಪ್ಪಾ ಅಂತ ಯೋಚಿಸುತ್ತಿದ್ದೆ. ಇದನ್ನ ಯೋಚಿಸೋದು ಕವನ ಬರೆದಷ್ಟೇ ಕಷ್ಟ...ಅಥವಾ ಕೆಲವು ಸಲ ಸುಲಭ. ಆದರೆ ಈವತ್ತು ಕಷ್ಟದ ದಿನ. ಬೆಳಗಾತೆದ್ದು ದಿನಾ ಇದೇ ಮಂಡೆಬಿಸಿಯಾಯ್ತಲ್ಲ ಅಂತ ಅಂದುಕೊಳ್ಳೋದಕ್ಕೂ ಫೋನ್ ಬರೋದಕ್ಕೂ ಸರಿ ಹೋಯ್ತು. 'ಇವತ್ತು ಸಾಯಂಕಾಲ ನೀವಿಬ್ಬರೂ ಮನೇಲಿ ಇರ್ತೀರಾ?' 'ಹೂಂ ಇರ್ತೀವಿ, ಏನು, ಈ ಕಡೆ ಬರ್ತಿದೀರಾ?' 'ಹೌದು, ನಾನೂ ನನ್ನ ಸ್ನೇಹಿತಾನೂ ಬರೋಣ ಅಂತ ಇದ್ವಿ. ಆದ್ರೆ ನೀನು ಅಡಿಗೆ-ಗಿಡಗೆ ಏನೂ ಮಾಡೋಕೆ ಹೋಗ್ಬೇಡ, ಅಷ್ಟೊತ್ತು ನಾವು ಇರಲ್ಲ' 'ಅಯ್ಯೋ ಹಾಗಂದ್ರೆ ಹೇಗೆ, ಬಂದ ಮೇಲೆ ಊಟಮಾಡಿಕೊಂಡೇ ಹೋಗಿ' 'ಸರಿ ಹಾಗಾದ್ರೆ, ಸಂಜೆ ಸಿಗೋಣ' 'ಆಯ್ತು ಬನ್ನಿ.'

ಫೋನಿಟ್ಟೆ, ತಲೆ ಚಿತ್ರಾನ್ನ ಆಯ್ತು. ಫೋನ್ ಮಾಡಿದವರು ಅಪರೂಪದವರೇನು ಅಲ್ಲ. ಊರಿಗೆ ಬಂದಾಗೆಲ್ಲ ನಮ್ಮ ಮನೇಗೆ ಬರ್ತಿರ್ತಾರೆ. ಒಂದೇ ಟ್ರಿಪ್ಪಲ್ಲಿ ಎರಡು ಮ್+ಊ+ರು ಸಲ ಬಂದರೂ ಬಂದರೇ. ಆಗೊಂದು ಈಗೊಂದು ಸಿನೆಮಾ ತೆಗೆಯೋದು, ನಾಟ್ಕ ಆಡ್ಸೋದು, ಇನ್ನೂ ಏನೇನೋ ಮಾಡೋದು ಅವರ ಕೆಲಸ. ಆದರೆ ನಮಗೆ ಅವರೊಂಥರಾ घर की मुर्गी ಇದ್ದ ಹಾಗೆ (...दाल बराबर - ಹಿಂದಿಯಲ್ಲಿ ಹಿಂದುಳಿದವರಿಗೆ = ಸಾಕಿದ ಕೋಳಿ ಪುಳ್ಚಾರಿಗಿಂತ ಕಡೆ ಅಂತ). ಪರಿಪರಿಯಾಗಿ ಮಾಡಿ ಹಾಕಬೇಕಂತೇನೂ ಇಲ್ಲ. ಒಂದು ಅನ್ನ, ಪುಳ್ಚಾರೇ ಸಾಕು. ಜೀವಮಾನದಲ್ಲೇ ಇನ್ನು ಇಂಥ ಸಾರು ಸಿಗತ್ತೋ ಇಲ್ಲವೋ ಅನ್ನೋ ಥರ ಸುರಿದು ಉಂಡು ಬಟ್ಟಲು ಕೀಸಿ ಬೆರಳು ನೆಕ್ಕುವವರು. ಅಂಥದ್ದರಲ್ಲಿ ಅವರಿಗೊಂದು ಅಡಿಗೆ ಮಾಡಿ ಹಾಕುವುದೆಂದರೆ ಕಡಿಗೆ ಕೊಚ್ಚುವಷ್ಟು ದೊಡ್ಡ ಕೆಲಸವೇನೂ ಅಲ್ಲ. ಆದರೆ,ಅವರು ಸಿನೆಮಾ ಮಾಡೋಷ್ಟೇ ಸಲೀಸಾಗಿ ಸೌಂಟೂ ಹಿಡೀತಾರೆ, ರು..ಚ್ಚಿಯಾಗಿ ಅಡಿಗೇನೂ ಮಾಡ್ತಾರೆ! ಇಂಥಾ ನಳನಿರ್ದೇಶಕನಿಗೆ ಬರೀ ಒಂದು ಸಾರು ಮಾಡಿಹಾಕೋದೇ? ಸಾಧ್ಯವೇ ಇಲ್ಲ.

2006-2007 ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳು ಪ್ರಕಟ!!!!

2006-2007 ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ

ಮುಂಗಾರು ಮಳೆ ಮೊದಲ ಅತ್ಯುತ್ತಮ ಚಿತ್ರ
ದುನಿಯಾ ಎರಡನೇ ಅತ್ಯುತ್ತಮ ಚಿತ್ರ
ಸೈನೈಡ್ ಮೂರನೇ ಅತ್ಯುತ್ತಮ ಚಿತ್ರ.

ದುನಿಯಾ ವಿಜಯ್ ಅತ್ಯುತ್ತಮ ನಟ
ತಾರಾ (ಸೈನೈಡ್) ಅತ್ಯುತ್ತಮ ನಟಿ

ಸಿಂಗೀತಂ ಶ್ರೀನಿವಾಸ್ - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಎಂ.ಎನ್.ಲಕ್ಷ್ಮೀದೇವಿ - ಡಾ. ರಾಜ್ ಕುಮಾರ್ ಪ್ರಶಸ್ತಿ

ನಾವು ಭಾರತೀಯರು ಏಕೆ ಹೀಗೆ?

ಇತ್ತೀಚೆಗೆ ಬೀದಿಯಲ್ಲಿ ನಡೆಯುತ್ತಿದ್ದಾಗ ಮನೆಯೊಂದರಿಂದ ತಾಯಿ ಮಗನಿಗೆ ಕೂಗಿ ಹೇಳುವ ಮಾತು ಕೇಳಿ ಬಂತು.."ಜೂಲೀನ ಹೊರಗಡೆ ಕರ್ಕೊಂಡು ಹೋಗಿ ಬಾ, ಇಲ್ಲಾಂದ್ರೆ ಮನೆ ಒಳ್ಗೇ ಗಲೀಜು ಮಾಡುತ್ತೆ" ಆ ಹುಡುಗ ನಾಯಿಯನ್ನು ರಸ್ತೆ ಬದಿಯಲ್ಲಿ ’ಗಲೀಜು’ ಮಾಡಿಸಲು ಕರೆದುಕೊಂಡು ಹೊರಟ.

ಹಿತನುಡಿ

ಇದೂ ಪೂರ್ಣ, ಅದೂ ಪೂರ್ಣ, ಪೂರ್ಣದಿಂದ ಪೂರ್ಣವು ಹುಟ್ಟುತ್ತದೆ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ