ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓಪನ್ ಆಫೀಸಿನ ಬಗ್ಗೆ ಸಹಾಯ

ನಾನು ಇವಾಗ ಓಪನ್ ಸೋರ್ಸಿನ ಅಭಿಮಾನಿಯಾಗತೊಡಗಿದ್ದೇನೆ. ಓಪನ್ ಆಫೀಸನ್ನು ಡೌನ್ಲೋಡ್ ಮಾಡಿ ನನ್ನ ಕಂಪ್ಯೂಟರಿನಲ್ಲಿ ಹಾಕಿಕೊಂಡಿದ್ದೇನೆ. ಆದರೆ ಪೇಜ್ ಸೆಟಪ್ಪನ್ನು ಹುಡುಕಿ ಸುಸ್ತಾಗುತ್ತಿದೆ. ಯಾರಿಗಾದರೂ ಸಿಕ್ಕಿದ್ದರೆ ಒಂದಿಷ್ಟು ತಿಳಿಸಿ ಸಹಾಯ ಮಾಡೀಪ್ಪ! ಕೈ ಕೈ ಜೋಡಿಸಿ ಜಯಕಾರ ಮಾಡಿ ಓಪನ್ಸೋರ್ಸಿಗೆ ಜೈ!

ಕವಿಕಾಯಚೂಡಾಮಣಿ - ಒಂದು ನೆನಪು

ನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಗೆ ಬರುತ್ತಿದ್ದ ಒಬ್ಬ ಮಾವನವರು ನನಗೆ ಹೇಗೆ ಮಾವನವರು ಎಂಬುದೇ ಮರೆತುಹೋಗಿದೆ. ದೂರದ ಸಂಬಂಧಿ. ಸಂಬಂಧದಲ್ಲಿ ಮಾವ ಎಂಬುದಕ್ಕಿಂತ ಅವರು ನನ್ನೊಡನೆ ನಡೆದುಕೊಳ್ಳುತ್ತಿದ್ದ ರೀತಿಗೆ ಅವರನ್ನು ಮಾವ ಎಂದು ಕರೆಯತೊಡಗಿದೆ ಎಂದು ಕಾಣುತ್ತದೆ. ಅದಕ್ಕೆ ಯಾರೂ ಅಕ್ಷೇಪಣೆ ಎತ್ತಿರಲಿಲ್ಲ. ಅವರ ಹೆಸರು ಅರಳೆ ಪುಟ್ಟಣ್ಣ ಎಂದು ಎಲ್ಲರೂ ಕರೆಯುತ್ತಿದ್ದುದು. ಆದರೆ ತನ್ನ ಹೆಸರು ಅರಳಿ ಪುಟ್ಣಣ್ಣ ಎಂದು ಎಲ್ಲರನ್ನೂ ಸದಾ ತಿದ್ದುತ್ತಿದ್ದರು. ಅಜಾನುಬಾಹುವಾಗಿದ್ದ ಅವರೊಡನೆ ಯಾರೂ ಜಗಳವಾಡುವ ಧೈರ್ಯ ಮಾಡುತ್ತಿರಲಿಲ್ಲ.
ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ ಹಳೆಗನ್ನಡ ಪದ್ಯ ಉರು ಹೊಡೆಯುವುದನ್ನು ಕೇಳಿ ಅವರು ನನಗೆ ಹೇಳಿದ ವಿಷಯವಿದು. ನೆನಪಿದ್ದಷ್ಟು ವಿವರಿಸುತ್ತೇನೆ.
ಸುಮಾರು ಹದಿಮೂರನೇ ಶತಮಾನದಲ್ಲಿ ರಚಿಸಲಾಯಿತೆನ್ನಲಾದ ಒಂದು ವಿಶಿಷ್ಟ ಕನ್ನಡ ಕೃತಿ ಕವಿಕಾಯಚೂಡಾಮಣಿ. ಕುಗ್ರಾಮವೊಂದರಲ್ಲಿ ಒಂಟಿಯಾಗಿ ವಾಸವಾಗಿರುವ ಒಬ್ಬ ಕುರುಡು ಅಜ್ಜಿಯ ವಿಶಾಲವಾದ ಮನೆಯ ಅಟ್ಟದಲ್ಲಿ ಕವಿಕಾಯಚೂಡಾಮಣಿ ಸಿಕ್ಕತು. ಕಾಗದದ ಮೇಲೆ ಮೂಲದಿಂದ ಮಾಡಿಕೊಂಡ ಪ್ರತಿಯಾಗಿದ್ದು, ಲಭ್ಯವಿರುವ ಏಕಮಾತ್ರ ಪ್ರತಿ. ಸುಮಾರು ೭೦೦ಕ್ಕೂ ಹೆಚ್ಚು ಪದ್ಯಗಳಿದೆ ಎಂದು ಊಹಿಸಲಾಗಿರುವ ಈ ಕೃತಿಯ ಕೇವಲ ೧೦೬ ಪದ್ಯಗಳು ಈಗ ಲಭ್ಯವಿದೆ. ಹೆಚ್ಚು ಜನ ಕನ್ನಡ ವಿದ್ವಾಂಸರಿಗೇ ಇನ್ನೂ ಈ ಕೃತಿಯ ಬಗ್ಗೆ, ಅದರ ಕರ್ತೃವಿನ ಬಗ್ಗೆ ಗೊತ್ತಿರುವಂತಿಲ್ಲ. ಗೊತ್ತಿರುವವರೂ ಈ ಕೃತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಂತೆ ತೋರುವುದಿಲ್ಲ. ಅದಕ್ಕೆ ಬಹುಶಃ ಎರಡು ಕಾರಣಗಳಿವೆ. ಒಂದು - ಕವಿಕಾಯಚೂಡಾಮಣಿ ಯಾವುದೇ ಪುರಾಣವನ್ನಾಗಲಿ, ಹಿಂದಿನ ಕವಿಯ ಬಗ್ಗೆಯಾಗಲಿ ಅಥವಾ ಕಾವ್ಯದ ಪುರ್ನಸೃಷ್ಠಿಯಾಗಲಿ ಅಲ್ಲ. ಎರಡದನೆಯದಾಗಿ - ಕವಿಕಾಯಚೂಡಾಮಣಿ ಕನ್ನಡದಲ್ಲಿದ್ದರೂ ಕೂಡ ಕನ್ನಡ ನಾಡು ನುಡಿ ಬಗ್ಗೆ ಒಂದು ಚೂರೂ ಪ್ರಸ್ತಾಪ ಮಾಡುವುದಿಲ್ಲ.

ಸಹಸ್ರಮುಖಿ ಹತ್ತಿ : ಹತ್ತಿಯ ಹಲವು ಮುಖಗಳು- ಒಂದು ಸಂಕ್ಷಿಪ್ತ ವಿವರಣೆ :

ಹತ್ತಿ, ನಮ್ಮ ಭಾರತದ ಉದ್ಯೋಗ ಕ್ಷೇತ್ರದಲ್ಲಿ ಮಾಡಿರುವ 'ಛಾಪು ' ಅಮೋಘ ! ಇದು ನಮ್ಮ ಜನರ ಜೀವನವನ್ನು ರೂಪಿಸುವಲ್ಲಿ ಕೃಷಿ, ಮೊದಲನೆಯದಾದರೆ, ಇದು ಎರಡನೆಯದು. ಒಟ್ಟು ಹತ್ತಿಗೆ ಸಂಬಂಧಪಟ್ಟ ಉದ್ಯೋಗಗಳಲ್ಲಿ ನಿರತರಾಗಿರುವವರ ಸಂಖ್ಯೆ ೬೦ ಮಿಲಿಯನ್ ಎಂದು ಅಂದಾಜುಮಾಡಲಾಗಿದೆ. ಸುಮಾರು, ೮೫ ಲಕ್ಷ ಹೆಕ್ಟೇರ್ ಗಳಲ್ಲಿ ಹತ್ತಿ ಕೃಷಿಯನ್ನು ಮಾಡಲಾಗುತ್ತಿದೆ. ಅನಂತಾನಂತಕಾಲದಿಂದಲೂ ಮನುಷ್ಯನಿಗೆ ತೀರ ಬೇಕಾದ ಅಗತ್ಯಗಳಲ್ಲಿ ಮೊದಲು ಅನ್ನ, ಎರಡನೆಯದು ವಸ್ತ್ರ, ಮೂರನೆಯದು ಮನೆ. ಬಟ್ಟೆಯ ಅಗತ್ಯ ಪ್ರಾಚೀನ ಕಾಲದಲ್ಲಿ ಮೈಮುಚ್ಚುವ ಸಾಧನವಾಗಿದ್ದರೆ, ಆಧುನಿಕ ಕಾಲದಲ್ಲಿ ಅದರ ಪ್ರತಿರೂಪ ಬೇರೆಯೇ ಯಾಗಿದೆ. ಇಂದಿನ ಫ್ಯಾಶನ್ ಯುಗದಲ್ಲಿ ಅತ್ಯಂತ ಕಡಿಮೆ ವಸ್ತ್ರದ ಬಳಕೆ ಅನಿವಾರ್ಯವೇನೋ ಅನ್ನುವಷ್ಟು ಸಹಜ [ಅಸಹಜವಾದರೂ] ಸ್ಥಿತಿಯನ್ನು ನಾವು ಮುಟ್ಟಿದ್ದೇವೆ. ಇಲ್ಲೂ ನಾವು, "ಅಶ್ಲೀಲ ಪ್ರದರ್ಶನಗಳ ಪರಿಧಿ" ಯಿಂದ ಹೊರಬಂದು ಮಿಂಚಲೂ ಸಾಧ್ಯ !

ಹತ್ತಿಯ ಉಪಯೋಗಗಳು ನೂರಾರು. ದೇವರು ಕರುಣಿಸಿದ ಮತ್ತೊಂದು ಕಲ್ಪ ವೃಕ್ಷದ ಹೆಸರು- ಹತ್ತಿ ! ಹತ್ತಿ ಮೊದಲು ವೃಕ್ಷವಾಗಿಯೇ ಇತ್ತು. ಈಗಲೂ ಪೆರು, ಮೆಕ್ಸಿಕೋ ದೇಶಗಳಲ್ಲಿ ಹತ್ತಿ ಮರಗಳನ್ನು ನಾವು ಕಾಣಬಹುದು. ಅದನ್ನು ಸಂಸ್ಕರಿಸಿ ಅದರ ಎತ್ತರವನ್ನು ಅನುಸಂಧಾನಗಳಿಂದ ಈಗಿರುವಂತೆ ಪೊದೆಹತ್ತಿ, ಅಥವಾ ಗಿಡಹತ್ತಿಯ ರೂಪ ಕೊಡಲು ವಿಶ್ವದ ನೂರಾರು ಸಂಶೋಧಕರ ಅನವರತ ಪರಿಶ್ರಮದ ಫಲದಿಂದಾಗಿ ಈಗಿನ ರೂಪ-ಗುಣಗಳನ್ನು ಪಡೆದಿದೆ. ಅವಿನಾಶಿಯಾದ ಹತ್ತಿ, ತನ್ನ ಅಸ್ತಿತ್ವದಿಂದ ತನ್ನ ಸೋದರ 'ತೆಂಗಿನಂತೆ' "ಕಲ್ಪವೃಕ್ಷ" ದ ಪದವಿಯನ್ನು ಪಡೆದಿದೆ. ಪೆಟ್ರೋಲಿಯಮ್ ಮೂಲದಿಂದ ತಯಾರಾಗುತ್ತಿರುವ ಹಲವಾರು ಫೈಬರ್ ಗಳು ಮುಂದಿನ ನೂರುವರ್ಷಗಳಲ್ಲಿ ಪೆಟ್ರೋಲ್ ಮುಗಿಯುತ್ತಿದ್ದಂತೆ ಮಾಯವಾಗುತ್ತವೆ. ಆದರೆ ಹತ್ತಿಗೆ ಅದರ ಯಾವ ಭಯವೂ ಇಲ್ಲ. ವಿಶ್ವದ ಎಲ್ಲಾ ದೇಶಗಳಲ್ಲೂ ಹತ್ತಿ ಬೆಳೆಯಬಹುದು. ಕೆಲವು ದೇಶಗಳು ಇದಕ್ಕೆ ಅನುಕೂಲವಾದ ವಾತಾವರಣ ಹೊಂದಿವೆ. ಇನ್ನು ಕೆಲವು ಜಾಗಗಳಲ್ಲಿ ನಾವು ಬೆಳೆಸಲು ವಿಜ್ಞಾನ ತಂತ್ರಜ್ಞಾನಗಳ ಸಹಾಯದಿಂದ ಹೊಸ ವಿಧಾನಗಳನ್ನು ಬಳಸಿ ಕೃಷಿಮಾಡಬಹುದು.

ಹಿತನುಡಿ

ಧ್ಯಾನ - ಕೇವಲ ಗುರಿಯೆಡೆಗೆ ಕೊಂಡೊಯ್ಯುವ ಮಾರ್ಗವಲ್ಲ. ಅದು ಗುರಿಯೂ, ಮಾರ್ಗವೂ, ಕಾರ್ಯವೂ, ಕಾರಣವೂ ಆಗಿದೆ.

ಅಶ್ವ-ಮೇಧ

ಅಯ್ಯೋ..!! ಗೊಡ್ಡು ಕತ್ತೆ..!
ಅಂದಿನಿಂದ ಇಂದಿನವರೆಗೆ
ಅದೇ ಗತಿ,ಅದೇ ಬಟ್ಟೆ.

ಆಹಾ! ಏನಿದು ಸೊಬಗು,
ಇದೆಲ್ಲಿಯ ಸುಂದರ ಅಶ್ವ..?
ಅದರ ಹೊಳಪೇನು,
ವೈಯಾರದ ನಡೆಯೇನು.

ಏರಲೇ..?ಕಟ್ಟಿಹಾಕಲೇ..?
ಸನಿಹದಿಂದ ಮನದುಂಬಿ ನೋಡಲೇ..?
ಇದೇನಿದು ಹಣೆಪಟ್ಟಿ..!
ಯಾವುದೋ...
ಸಾಮ್ರಾಜ್ಯದ್ದಂತೆ.
ಕಟ್ಟಿದರೆ ಕದನವು,
ಸೋತವರ ಅಡಿಯಾಳು.

ಈ ಕತ್ತೆಯೊಡನೆ ಏಗುವುದೇ..?
ಬಾಳೆಲ್ಲ ಗೋಳಿಡುವುದೇ..?

ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?

ವೇಗವಾಗಿ ಕಾರು ಬಂದು ನಿಲ್ಲುತ್ತದೆ. ಅದರ ಬಾಗಿಲು ತೆರೆಯಿತು.
ಅದರಿಂದ ಕೆಳಗಿಳಿದವನ ಬೂಟು ಕಾಣಿಸುವುದು.ನಿದಾನಕ್ಕೆ ಬೆನ್ನು, ತಲೆ..
ಈಗ ಮುಖ ತಿರುಗಿಸುವನು.. ಹೀರೋ!!!..ಥಿಯೇಟರ್ ತುಂಬಾ ಚಪ್ಪಾಳೆ ವಿಷಲ್.
ಈಗಿನ ಸಿನೆಮಾದಲ್ಲಿ ಹೀರೋಯಿನ್ ಕಾಲಿಂದ ಸುರುವಾಗಿ ಎಲ್ಲೆಲ್ಲೋ
ಸುತ್ತಿ ಬಳಸುತ್ತಿರುತ್ತದೆ ಕ್ಯಾಮರ...ಹೀರೋ ಎಲ್ಲಿ?

ಬರುತ್ತಿರಲಿ ಪ್ರಭುಗಳು....

ಎಲ್ಲಿಂದಲೊ ಬಂತು ಸುದ್ದಿ,

ಬರ್‍ತಾರಂತೆ ಪ್ರಭುಗಳು,

ಓಟು, ಸೀಟೂ ಕೇಳಿಕೊಂಡು,

ಬರ್‍ತಾರಂತೆ ಪ್ರಭುಗಳು!

 

ತಣ್ಣಗಿದ್ದ ಸಣ್ಣ ಹಳ್ಳಿ, ಬಣ್ಣ ಬಳ್ಕೊಂಡು ನಿಂತ್ಕೊಳ್ಳುತ್ತೆ,

ಎಲ್ಲರ್ ಬಾಯಲ್ಲೂ ಒಂದೇ ಮಾತು, ಪ್ರಭುಗಳು ಬರ್‍ತಾರಂತೆ!

ಧೂಳು ತುಂಬಿದ್ ದಾರಿಯೆಲ್ಲ ಡಾಂಬಾರು ಮೆತ್ಕೊಂಡು ಮೆರೀತಾವೆ,

ಇಸ್ಕೂಲ್ಗ್‍ಹೋಗೊ ಹಳ್ಳಿ ಹೈಕ್ಳು, ಓದು ಪಾಠ ಮರೀತಾವೆ!

 

ಹಳ್ಳಿ ತುಂಬ ಹೊಸ ಮಂದಿ, ನಗ್ತಾರೆ ಗುರ್ತಿರೋರಂತೆ,

ಕೈಕೈ ಮುಗಿದು ಮಾತ್ನಾಡಿಸ್ತಾರೆ, ಪ್ರಭುಗಳ ಚೇಲಗಳಂತೆ!

ಒಡ್ಡರ ಓಣಿ, ಊರಿನ ಬಾವಿ, ಎಲ್ಲ ಕಡೆ ಒಂದೇ ಮಾತು,

ಗುಂಪು ಗುಂಪಾಗಿ ನಿಂತ್ಕೊತಾರೆ, ಪಕ್ಕದೂರಿನ್ ಸಂತೆ ಮರೆತು!

 

ದೇವ-ಭೂಮಿಯ ಭವ್ಯಸಂಗಮ

ನನ್ನ ಜೀವನವೊಂದು ದೇವರಿತ್ತ ವರವೆಂದು ನಾನು ಭಾವಿಸುತ್ತೇನೆ. ಹಲವಾರು ಕಾರಣಗಳನ್ನು ನಾನಿದಕ್ಕೆ ಕೊಡಬಲ್ಲೆ. ಈಗಿನ ದಿನಗಳಲ್ಲಿ ನಾವು ಬಯಸುವ ಪರಿಸರದಲ್ಲಿಯೇ ಕೆಲಸ ಸಿಗುವುದು ಮತ್ತು ಕೆಲಸವನ್ನು ಮನದಣಿಯೇ ಆಸ್ವಾದಿಸುವುದು ಪೂರ್ವಜನ್ಮದ ಸುಕೃತವಿದ್ದಲ್ಲಿ ಮಾತ್ರ ಸಾಧ್ಯವೆಂಬುದು ನನ್ನ ಅಚಲವಾದ ನಂಬಿಕೆ. ೯೦ ಪ್ರತಿಶತ ಮಂದಿಗೆ ಇದು ಅನುಭವಕ್ಕೆ ಬಂದಿರಬಹುದು. ಉದಾಹರಣೆಗೆ: ಸಮುದ್ರದೊಂದಿಗೆ ಸ್ನೇಹ ಮಾಡಲಿಚ್ಚಿಸಿದವನಿಗೆ ನೌಕಾಪಡೆಯಲ್ಲಿ ಸೈನಿಕನ ಕೆಲಸವೇನೋ ಸಿಕ್ಕರೂ ದೆಹಲಿಯಲ್ಲಿ ಕೇಂದ್ರಕಚೇರಿಯಲ್ಲಿ ಪೋಸ್ಟಿಂಗ್ ಆದರೇನು ಮಾಡುವುದು? ಪರ್ವತಾರೋಹಣದಲ್ಲಿ ಆಸಕ್ತಿಯಿರುವ ವ್ಯಕ್ತಿಗೆ ಗುರಗಾಂವಿನಲ್ಲೆಲ್ಲೋ ಸಾಫ್ಟ್ವೇರ್ ಇಂಜಿನಿಯರ್ರಾಗಿ ಕೆಲಸ ಸಿಕ್ಕರೆ ಹೇಗಿರುವುದು? ಈ ಮಟ್ಟಿಗೆ ನಾನು ಸಂತಸದಿಂದಿರುವ ವ್ಯಕ್ತಿ. ನನಗೆ ಪರ್ವತಗಳು, ವೇಗವಾಗಿ ಹರಿಯುವ ನದಿ, ರುದ್ರರಮಣೀಯವೆನಿಸುವ ಪ್ರಕೃತಿ ಇವೆಲ್ಲವೂ ಅತ್ಯಂತ ಪ್ರೀತಿ. (ಯಾರಿಗಿಷ್ಟವಿಲ್ಲ ಹೇಳಿ) ದೇವರ ದಯೆಯಿಂದ ನಾನು ದೇವಭೂಮಿಯೆಂದೇ ಪ್ರಖ್ಯಾತವಾದ ಉತ್ತರಾಂಚಲದಲ್ಲಿ ವರ್ಷಕ್ಕೆ ಹಲವಾರು ಬಾರಿ ಕೆಲಸದ ಮೇಲೆ ಸಂಚರಿಸುತ್ತೇನೆ.

ಪ್ರೀತಿ-ಬ್ಯಾನಿ

ಪ್ರೀತಿ ಗೀತಿ ಶ್ಯಾನೆ ಬ್ಯಾನಿ...
ಬುಟ್ ಬುಡಿ ತಂದಿ ನನ್ನ ಸುಮ್ನೆ...
ಮಾಡ್ಬೇಡಿ ಅನ್ನೋಕೆ ನಾ
ಏನ ದೊಣ್ಣೆನಾಯಕನೇ..?
ಮಾಡೊರಿಗೆ ಒಳ್ಳೆದು ಆಗ್ಲಿ,
ನಂಗದ್ರ ಸುದ್ದಿ ಬ್ಯಾಡ..
ಎಲ್ಲ ಕುಸಿಯಾಗಿದ್ರೆ ಸಾಕು,
ನಂಗಿನ್ನೇನು ಹೆಚ್ಗೆ ಬ್ಯಾಡ.
ಹೇಳ್ಬೆಕು ಅನಿಸ್ದ್ನ ಹೇಳ್ದೆ ಹೋದ್ರೆ
ಎದಿ ಮ್ಯಾಲ ಚಪ್ಪಡಿ ಭಾರ.
ಪ್ರೀತಿ ಬದ್ಕೊಕೆ ದಾರಿ ಸರಿ,
ಕಾಲ ಕೆಟ್ಟದು ಹುಸಾರ..