MPEG 4 ಫಾರ್ಮ್ಯಾಟ್‌ನಲ್ಲಿ ಏನೇ ಆಗಲಿ, ಒಳ್ಳೆಯದನ್ನೆ ಮಾಡಿ - ಕೇಳು-ಪುಸ್ತಕ
ಗೆಳೆಯ ಪ್ರದೀಪ್ ಸಿಂಹ (www.humanglory.org), - "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ" ವನ್ನು MPEG 4 ಫಾರ್ಮ್ಯಾಟ್‌ಗೆ ಕನ್ವರ್ಟ್ ಮಾಡಿದ್ದಾರೆ. ಇದನ್ನು Apple ಕ್ವಿಕ್‌ಟೈಮ್‌ನಲ್ಲಿ ಪ್ಲೆ ಮಾಡಬಹುದು. ಈ ಫಾರ್ಮ್ಯಾಟ್‌ನ ಮುಖ್ಯ ಅನುಕೂಲವೆಂದರೆ ಬೇಕಾದ ಅಧ್ಯಾಯಕ್ಕೆ ಮುಂದೆ-ಹಿಂದೆ ಜಂಪ್ ಮಾಡಬಹುದು.
"ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ" ಕೇಳು-ಪುಸ್ತಕದ ಒಂದು ಹೆಚ್ಚುಗಾರಿಕೆ ಏನೆಂದರೆ, ಅಧ್ಯಾಯ 1 ರಿಂದ ಅಧ್ಯಾಯ 11 ರವರೆಗಿನ ಅಧ್ಯಾಯಗಳು ಒಂದು ರೀತಿಯಲ್ಲಿ ಸ್ವತಂತ್ರ ಅಧ್ಯಾಯಗಳು. ಈ ಅಧ್ಯಾಯಗಳ ಕಂಟಿನ್ಯುಟಿ ಇತರೆ ಅಧ್ಯಾಯಗಳ ಮೇಲೆ ಅವಲಂಬಿತವಾಗಿಲ್ಲ. ಹಾಗಾಗಿ, ಈ .m4b ಕೇಳು-ಪುಸ್ತಕ ಕೇಳುಗರು ಹಿಂದೆ ಎಲ್ಲಿ ನಿಲ್ಲಿಸಿದ್ದೆವು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇನ್ನೊಂದು ಸ್ವತಂತ್ರ ಅಧ್ಯಾಯಕ್ಕೆ ಹೋಗಲು ಅನುಕೂಲ ಮಾಡಿಕೊಡುತ್ತದೆ. ಒಂದು ರೀತಿಯಲ್ಲಿ 13 ಅಧ್ಯಾಯಗಳ ಆಲ್ಬಮ್; ಆದರೆ ಒಂದೇ ಫೈಲು. ಈ ಫಾರ್ಮ್ಯಾಟ್‍ನ ಕೇಳು-ಪುಸ್ತಕ ಇಲ್ಲಿ ಡೌನ್‌ಲೋಡ್‌ಗೆ ಲಭ್ಯವಿದೆ.
ಕಳೆದ ವಾರ ಈ ಕೇಳು-ಪುಸ್ತಕವನ್ನು ಆಲಿಸಿದ ಗೆಳೆಯರೊಬ್ಬರು ಬರೆದದ್ದು ಹೀಗೆ: "Downloaded your audio book last week and listened to it while driving to and from work over the last week. It has come out well. It can do without **** ** *** ************* ******. Overall it is has come out very well. Useful book and great work. Good to see you put the technology to good use this way."
ಮೂಲಲೇಖನಕ್ಕೆ ಮತ್ತು ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನಗಳಿಗೆ, ದಯವಿಟ್ಟು ಇಲ್ಲಿಗೆ ಭೇಟಿ ಕೊಡಿ:
http://vicharamantapa.net/Anyway/
ನಮಸ್ಕಾರ,
ರವಿ...