ನನ್ನ ಮೊಬೈಲು

ನನ್ನ ಮೊಬೈಲು

೨ ತಿಂಗಳಿಂದ ನನ್ನ ಮೊಬೈಲ್ (ಸೋನಿ ಎರಿಕ್ಸನ್ ಕೆ೭೫೦ಐ) ತುಂಬ ತೊಂದರೆ ಕೊಡ್ತಾ ಇತ್ತು. ಆ ಮೊಬೈಲ್ ಬರೀ ೧.೫ ವರ್ಷ ಹಳೆಯದು.
ಆಗ ನಾನು ಒಂದು ಹೊಸ ಮೊಬೈಲ್ ಕೊಂಡುಕೊಳ್ಳೊ ಬಗ್ಗೆ ಯೋಚನೆ ಶುರು ಮಾಡ್ದೆ. ಆಗ ನನ್ನ ಕಣ್ನಿಗೆ ಬಿದ್ದಿದ್ದು HTC ಎಂಬ ಹೊಸ ಕಂಪನಿಯ ಮೊಬೈಲು. ನನಗೆ ನನ್ನ ಕಾಲೇಜ್ ಸಮಯದಿಂದಾನು ಒಂದು ಆಸೆ, PDA ಕೊಂಡುಕೊಳ್ಳೋದು. PDA ಗಳ ಬೆಲೆ ೧೩ ಸಾವಿರಕ್ಕೆ ಬಂದಿರೋದ್ರಿಂದ, ಇದೇ ಸರಿಯಾದ ಟೈಮ್ ಅಂತ ತೀರ್ಮಾನ ಮಾಡಿದೆ. ನನ್ನ ಗೆಳತಿ ಜೊತೆ ಫೋರಮ್ ನಲ್ಲಿ ಇರೋ ಒಂದು ಅಂಗಡಿಗೆ ಹೋದೆ. ಅಲ್ಲಿ ಹೋದ ಮೇಲೆ ಮೊಬೈಲ್ ಮಾಯೆಗೆ ಬಲೆಯಾದೆ. ನಾನು ಕೊಂಡುಕೊಳ್ಳಬೇಕು ಅಂತ ಇದ್ದ P3400 ಮಾಡೆಲ್ ಬದಲು ಬೇರೆ ಮಾಡೆಲ್ ನೋಡೋಕೆ ಶುರು ಮಾಡ್ದೆ. ಎಚ್.ಟಿ.ಸಿ ಯ ಒಂದು ಹೊಸ ಮಾಡೆಲ್ ಇಷ್ಟ ಆಯ್ತು. ಎಚ್.ಟಿ.ಸಿ ಟಚ್ ಅಂತ ವಿಚಿತ್ರ ಹೆಸರಿದ್ದ ಆ ಮಾಡೆಲ್, ಈಗ ಮಾರುಕಟ್ಟೆಯಲ್ಲಿ ಇರೋ ಪಿ.ಡಿ.ಎ ಗಳಲ್ಲೆ ಸ್ವಲ್ಪ ತೆಳ್ಳ್ಗಗಿದೆ ಅಂತ ಅನ್ನಿಸ್ತು ನಂಗೆ. ಎಚ್.ಟಿ.ಸಿ ಟಚ್ ಮೊಬೈಲನ್ನು ಖರೀದಿಸಿದೆ. ನನ್ನ ಬಜೆಟ್ ಗೆ ಸ್ವಲ್ಪ ದುಬಾರಿ ಆದ್ರು ಕೂಡ ಒಂದು ಒಳ್ಳೆ ಮೊಬೈಲ್ ತಗೊಂಡ ಖುಶಿ ಇದೆ.
ಇದನ್ನು ಖರೀದಿಸುವ ಮುನ್ನ ನಂಗೆ ಪಿ.ಡಿ.ಎ ಗಳ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಕಳೆದ ಎರಡು ತಿಂಗಳಿಂದ ಇದನ್ನು ಉಪಯೋಗಿಸಿದ ಮೇಲೆ, ಪಿ.ಡಿ.ಎ ನಿಜಕ್ಕೂ ಉಪಯುಕ್ತ ಅಂತ ಅನಿಸ್ತಾ ಇದೆ. ಯಾರಾದರು ಪಿ.ಡಿ.ಎ ಕೊಂಡುಕೊಳ್ಳಬೇಕು ಎಂದಿದ್ದಲ್ಲಿ, ಎಚ್.ಟಿ.ಸಿ ಟಚ್ ಮಾಡೆಲ್ಲನ್ನೆ ಕೊಂಡುಕೊಳ್ಳಿ.

Rating
No votes yet

Comments