ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಡಭರತನ ಕನಸುಗಳು- ಜಿ.ಬಿ.ಜೋಷಿಯವರ ಪುಸ್ತಕ.-- ನಮ್ಮ ಕನಸುಗಳಿಗೆ ಏನು ಅರ್ಥ ?

ನಮ್ಮ ಕನಸುಗಳಿಗೆ ಏನು ಅರ್ಥ ?
ಜಿ.ಬಿ.ಜೋಶಿಯವರಿಗೆ ೧೯೨೭ ಮತ್ತು ೧೯೩೧ ರ ನಡುವಿನ ಅವಧಿಯಲ್ಲಿ ಅನೇಕ ಕನಸುಗಳು ಬಿದ್ದವು . ಅವುಗಳನ್ನು ಒಂದು ಕ್ರಮದಲ್ಲಿ ( ಬಿದ್ದ ಅನುಕ್ರಮದಲ್ಲಿ ಅಲ್ಲ )ಜೋಡಿಸಿ ಈ ಪುಸ್ತಕ ಸಿದ್ಧಪಡಿಸಿರುವರು.

ಇಂಗ್‌ಮಾರ್‌ ಎಂಬ ಕುನ್ನಿಯ ಬದುಕು

ನಾಯಿಮರಿಯಾಗಿ ನನ್ನ ಬದುಕು (my life as a dog --1985) ಸ್ವೀಡಿಶ್ ನಿರ್ದೇಶಕ ಲಾಸ್ ಹಾಲ್‌ಸ್ಟ್ರಾಮ್ ಎಂಬವನ ಚಿತ್ರವನ್ನು ಈವತ್ತು ನೋಡಿದೆ. ಮನಸ್ಸಿಗೆ ತುಂಬಾ ಹತ್ತಿಕೊಂಡಿತು.

ಪದ್ಮಭೂಷಣ ಶ್ರೀ ಡಿ.ವಿ.ಜಿ ಯವರ ಜಯಂತಿ .. ನಾಳೆಯ ದಿನ....

Programs all round the day: 

1. Gokhale institute, DVG road

2. ADA, opp. Ravindra Kalakshetra, JC road

ಕ್ಷಮಿಸಿ.. ಸಮಯದ ಮಾಹಿತಿ ನನಗೂ ತಿಳಿದಿಲ್ಲ. ಗೊತ್ತಾದಲ್ಲಿ ದಯೆ ಇಟ್ಟು ತಿಳಿಸಿ.

ಕಾಡುತ್ತಿರುವ ಒ೦ದು ವಚನ

ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ.
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.

ಈ ಸು೦ದರವಾದ ವಚನದ ಕವಿ ನೀಲಾಂಬಿಕೆ. ನೀಲಾಂಬಿಕೆ ಸಾವಿರಾರು ವಚನಗಳನ್ನು ಬರೆದಂತೆ ಕಾಣುವುದಿಲ್ಲ. ಅಥವಾ ಬರೆದಿರುವುದೂ ತು೦ಬಾ ಜನಪ್ರಿಯವಾದ೦ತೆ ಕಾಣುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನನಗೆ ತು೦ಬಾ ಕುತೂಹಲ ಕೆರಳಿಸಿದ್ದು ಈ ಪದ್ಯದೊಳಗೆ ನೇತ್ಯಾತ್ಮಕ ಅಂದರೆ ನೆಗೆಟಿವ್ ಅನ್ನಿಸಬಹುದಾದ ಭಾವಗಳ ಮೂಲಕ ಮತ್ತೊ೦ದು ನೆಲೆಗೆ ಜಿಗಿಯುವ ಶಕ್ತಿ ಕಾಣುವುದರಿ೦ದ. ಹೊಸ ನೆಲೆಗೆ ಜಿಗಿದಾಗಿಯೂ ಬಿಟ್ಟ ನೇತ್ಯಾತ್ಮಕ ನೆಲೆ ತನ್ನ ಅರ್ಥವನ್ನು ಬಿಟ್ಟುಕೊಡದೆ ನಮ್ಮ ಜತೆ ಆಟವಾಡುತ್ತಲೇ ಇರುವ ಗುಣವಿರುವುದರಿ೦ದ.

ಈ ಕೊಂಡಿಗೆ ಮತ್ತೆ ಮತ್ತೆ ಭೇಟಿ ಕೊಡಿ

ಈ ತಾಣಕ್ಕೆ ಮತ್ತೆ ಮತ್ತೆ ಭೇಟಿ ಕೊಡಿ: http://www.google.com/intl/kn/

ಇದು google ಕನ್ನಡ. ಈ ತಾಣದ ಬಳಕೆ ಹೆಚ್ಚಾದರೆ ಇದರ ಕೊಂಡಿಯನ್ನು http://www.google.co.in ಅಲ್ಲಿ ಸೇರಿಸಲಾಗುವುದಂತೆ. ಈಗಾಗಲೇ ಹಿಂದಿ, ಬಂಗ್ಲಾ, ಮರಾಠಿ, ತಮಿಳು ಹಾಗೂ ತೆಲುಗು ನುಡಿಗಳ ಕೊಂಡಿಗಳ ಸೇರ್ಪಡೆಯಾಗಿದೆ.

ರೈಲು ಪಯಣದ ಮಧುರಾನುಭವ

ನಾನು ನನ್ನ ಯಜಮಾನರೂ ಒಂದು ದಿನ ಪಕ್ಕದೂರಿಗೆ ಪ್ರಯಾಣಿಸಬೇಕಾಗಿತ್ತು. ಬಸ್ಸು, ರೈಲು ಅಥವಾ ಬೈಕೋ ಅಂತ ವಾದ ವಿವಾದಗಳಾಗಿ ಕೊನೆಗೆ ರೈಲೇ ಅಂತ ತೀರ್ಮಾನಮಾಡಿ, ಸ್ಟೇಷನ್ಗೆ ಹೋಗಿ ಟಿಕೆ‌ಟ್ ತೆಗೆದುಕೊಂದು ಒಳಗೆ ಹೋದ್ವಿ. ರೈಲೇನೋ ಬಂತು ಆದ್ರೆ ಆಸನಗಳಂತೂ ಖಾಲಿ ಇರಲಿಲ್ಲ. ಎಲ್ಲೂ ಸೀಟು ಸಿಗದೆ ಕೊನೆಗೆ ರೈಲು ಹೊರಡುವ ಸಮವಾಯಿತು, ನಾವು ಸೀಟು ಹುಡುಕುತ್ತಾ ಹುಡುಕುತ್ತಾ ಹೆಂಗಸರ ಬೋಗಿ ಹತ್ರ ಬಂದಿದ್ವಿ. ಅಲ್ಲಿ ಒಂದು ಗಂಡಸಿನ ತಲೆ ಕಾಣಿಸಿತು, ರೈಲು ಹೋರಡುವ ಸಮಯವೂ ಆಗಿತ್ತು ಬೇರೆ ಬೋಗಿಗೆ ಹತ್ತುವಷ್ಟು ಸಮಯಾವಕಾಶವೂ ಇರದ ಕಾರಣ ನಾನು ಬನ್ನಿ ಇಲ್ಲೇ ಹತ್ತುವ ಮತ್ತೆ ಬೇಕಾದ್ರೆ ಬೇರೆ ಬೋಗಿಗೆ ಹೋಗುವಾ ಅಂತ ಹೆಂಗಸರ ಬೋಗಿಗೇ ಹತ್ತಿಸಿಬಿಟ್ಟೆ. ಅಲ್ಲಿ ಆರೆಂಟು ಮಾರ್ವಾಡಾ ಹೆಂಗಸರ ಮಾತನ್ನು ಅರ್ಥೈಸುತ್ತಾ, ಕಡಲೇಕಾಯಿ ತಿನ್ನು‌ತ್ತಾ ಕಾಲಾಡಿಸುತ್ತಾ ಪಯಣ ಮುಂದುವರೆಸಿದೆವು. ಯಾವ ಟಿ.ಸಿ.ಯೂ ಬರದ ಕಾರಣ ನಾವು ಬೋಗಿಯನ್ನು ಬದಲಾಯಿಸಲೇ ಇಲ್ಲ. ನಾವು ಇಳಿಯುವ ಸ್ಟೇಷನ್ ಬಂತು ಹೆಂಗಸರ ಬೋಗಿಯಲ್ಲಿದ್ದ ಕಾರಣ ಊರ ಸ್ಟೇಷನ್ ಬಂದ ಕೂಡಲೇ ಧುಮುಕಿ ನಡೆದೆವು, ತಮಾಷೆಯೆಂದರೆ ನಾವು ಹೆಂಗಸರ ಬೋಗಿಯಲ್ಲಿ ನೋಡಿದ ಗಂದಸೂ ಅಲ್ಲೇ ಇಳಿದರು ಆದರೆ ಅವರು ಹೆಂಗಸೇ. ಅವರ ವೇಷ, ಭೂಷಣ(ಬಾಯ್ ಕಟ್) ನಮನ್ನು ಏಮಾರಿಸಿತ್ತು. ಆ ದಿನದ ಪಯಣ, ನಮಗಾದ ತಬ್ಬಿಬ್ಬಿನ ರಸನಿಮಿಷ ಯಾವುದನ್ನೂ ಮರೆಯಲು ಸಾದ್ಯವೇ ಇಲ್ಲ.

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)

ಭಾಗ ಒಂದರಲ್ಲಿ,

ಸರಸದ ಈ ರಸನಿಮಿಷ ಸ್ವರಸ್ವರವೂ ನವ ಮೋಹನ ರಾಗ

ಎಂಬ ಒಂದು ಚಿತ್ರಗೀತೆಯನ್ನು ಹೆಸರಿಸಿ, ಅದು ಯಾವ ಚಿತ್ರದ್ದು ಎಂದು ಕೇಳಿದ್ದೆ. ಯಾಕೋ ಯಾರಿಂದಲೂ ಮಾರುತ್ತರ ಬರಲಿಲ್ಲ. ಯಾವ ಚಿತ್ರ ಎಂದು ತಿಳಿದರೆ, ಅಂತರ್ಜಾಲದಲ್ಲಿ ಆ ಗೀತೆ ದೊರಕಿದರೆ, ಆ ಗೀತೆಯನ್ನು ಉದಾಹರಣೆಯಾಗಿ ಕೊಂಡಿ ಹಾಕಬೇಕೆಂದು ಬಯಸಿದ್ದೆ.. ಅದು ಆಗುವಂತೆ ಕಾಣುತ್ತಿಲ್ಲ. ಇರಲಿ. ಈ ಗೀತೆಯನ್ನು ಹೇಳಲು ಒಂದು ಕಾರಣವಿತ್ತು. ನೀವೆಲ್ಲರೂ ಊಹಿಸಿಯೇ ಇರುತ್ತೀರಿ. ಇದು ಮೋಹನ ರಾಗದಲ್ಲಿ ಸಂಯೋಜಿತವಾಗಿರುವ ಗೀತೆ. ಅಷ್ಬ್ಟೇ ಅಲ್ಲದೆ. ಹಾಡಿನ ಸಾಹಿತ್ಯದಲ್ಲಿ ರಾಗದ ಹೆಸರನ್ನು ಚಮತ್ಕಾರಿಕವಾಗಿ ಹೊಸೆಯುವುದು ಕರ್ನಾಟಕ ಸಂಗೀತದ ಒಂದು ವಿಶೇಷ. ಹೀಗೆ ಬರುವುದಕ್ಕೆ ರಾಗ ಮುದ್ರೆ ಎನ್ನುತ್ತೇವೆ. ಇದನ್ನೇ ನೋಡಿ, ನಾನು ಮೊದಲು ಹೇಳಿದ್ದು. ಪಾರಿಭಾಷಿಕ ಪದಗಳ ಪಟ್ಟಿ ಕೊಡುವುದಕ್ಕಿಂತ, ಹೀಗೆ ಸಮಯ ಬಂದಾಗ ಹೇಳಿದರೆ, ಓದಿದವರ ನೆನಪಿನಲ್ಲೂ ಉಳಿಯುತ್ತದೆ. ಹಲವು ವಾಗ್ಗೇಯಕಾರರು ರಾಗಮುದ್ರೆಯನ್ನು ಸಾದ್ಯವಾದಾಗ. ಅರ್ಥಕ್ಕೆ ಪೋಷಣೆ ಬರುವಂತಿದ್ದಾಗ ಪ್ರಯೋಗಿಸುತ್ತಾರೆ. ಓ, ಮತ್ತೊಂದು ಪಾರಿಭಾಷಿಕ ಪದ ಬಂದು ಬಿಟ್ಟಿತಲ್ಲ! ಚಲನಚಿತ್ರ ಸಂಗೀತದಲ್ಲಾದರೆ. ಸಾಹಿತ್ಯ (ಹಾಡು) ಬರೆಯುವವರು ಒಬ್ಬರಾದರೆ, ಅದಕ್ಕೆ ಸಂಗೀತ ಸಂಯೀಜಿಸುವರು ಇನ್ನೊಬ್ಬರು. ಕರ್ನಾಟಕ ಶಾಸ್ತ್ರೀಯ ಸಂಗೀತದ ಹೆಚ್ಚಿನಂಶ ರಚನೆಗಳಿಗೆ. ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಒಬ್ಬರೇ ವ್ಯಕ್ತಿ ಮಾಡಿರುತ್ತಾರೆ. ಅಂಥವರನ್ನು ವಾಗ್ಗೇಯಕಾರ (ವಾಕ್= ಮಾತು, ಗೇಯ = ಸಂಗೀತ) ಎನ್ನುತ್ತೇವೆ.