ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಿರುವೈಯ್ಯಾರು ಮತ್ತು ಮಿಶನ್ ಸ್ಯಾನ್ ಹೊಸೆ

ಕನ್ನಡ ನಾಡಿನ ಜೀವನದಿ ಕಾವೇರಿ. ಹಾಗೇ ಮುಂದೆ ಹೋಗಿ, ಅದು ತಮಿಳುನಾಡಿಗೂ ಜೀವನದಿಯಾಗಿ ಹರಿಯುತ್ತಾಳೆ. ನಮಗಾದರೂ, ಕಾವೇರಿ ಅಲ್ಲದೆ, ತುಂಗೆ, ಭದ್ರೆ, ಕೃಷ್ಣೆ, ಕಾಳಿಯರ ಕೃಪೆ ತಕ್ಕಮಟ್ಟಿಗಿದೆ. ಆದರೆ, ತಮಿಳುನಾಡಿನಲ್ಲಿ, ಕಾವೇರಿ(ಮತ್ತು ಅದಕ್ಕೆ ಸೇರುವ ಹೊಳೆಗಳನ್ನು ಬಿಟ್ಟು) ಬೇರೆ ಪ್ರಮುಖವಾದ ನದೀಜಾಲವಿಲ್ಲ. ಹಾಗಾಗಿ, ತಮಿಳರು ನಮ್ಮಂತೆಯೇ ಕಾವೇರಿಯನ್ನು ಬಹಳ ಗೌರವದಿಂದ ಕಾಣುತ್ತಾರೆ.

 

"#73, ಶಾಂತಿನಿವಾಸ" ಸಿನೆಮಾ ಹೇಗಿದೆ?

ಟಿವಿ9 ನಲ್ಲಿ ಹೇಳಿದ್ರೂ 'ಶಾಂತಿನಿವಾಸ' ದ 'ಹಾಲು ಉಕ್ಕುಸೋದು' ಚೆನ್ನಾಗಿ ಆಯ್ತು ಅಂತ.... ಯಾರದರೂ ನೋಡಿದ್ರೆ ಸಿನೆಮಾ ಬಗ್ಗೆ ಅನಿಸಿಕೆಗಳನ್ನ ಹಂಚಿಕೊಳ್ಳಿ.

ಸ್ಪೂರ್ತಿ

ಕಥೆ ಕಾದಂಬರಿಗಳನ್ನು ಅಥವ ಇನ್ಯಾವುದೇ ಪುಸ್ತಕಗಳನ್ನು ಓದುತ್ತ ಓದುತ್ತ ಹೋದಂತೆ ಹೊಸ ಹೊಸ ಕಲ್ಪನೆಗಳು ನಮ್ಮನ್ನಾವರಿಸಿ ಬಿಡುತ್ತವೆ. ಕೆಲವೊಂದು ಭಾಗಗಳು ನಮ್ಮನ್ನು ಆನಂದದ ಅತ್ಯುನ್ನತ ಸ್ಥಿತಿಗೊಯ್ದರೆ ಕೆಲವೊಂದು ಭಾಗಗಳು ತುಂಬಾ ದುಃಖಕ್ಕೆ ಗುರಿಮಾಡಬಹುದು.

'ಕನ್ನಡ ಸಿನಿಮಾಗೆ ಜಾಗತಿಕ ಮಾರುಕಟ್ಟೆ ಬೇಕು'

ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.

http://prajavani.net/Content/Jun152007/cinema2007061432731.asp

ಪ್ರೆಂಚ್ ನವರಿಗೆ ಕನ್ನಡ ಸಿನಿಮಾ ಇರಲಿ ಕನ್ನಡ ನುಡಿಯ ಬಗ್ಗೆ ಗೊತ್ತಿರಲಿಲ್ಲವಂತೆ. ಆದರೆ ಬಂಗಾಲಿ ಮತ್ತು ಮಲೆಯಾಳದ ಬಗ್ಗೆ ಅವರಿಗೆ ಗೊತ್ತಿತ್ತಂತೆ.

ಅನುಕಂಪ...

ನಾವು ಅಂತರ್ಮುಖಿ ಆಗಿರಬೇಕಾದ್ರೆ ಕೆಲವೊಂದು ಸಾರಿ ತಟ್ಟನೆ ಮನಸ್ಸಿಗೆ ನಾಟುತ್ತೆ, ನಾ ಏನು ಮಾಡ್ತಾ ಇದ್ದೀನಿ, ನಾ ಮಾಡ್ತಾ ಇರೋದು ಸರಿನಾ? ನನ್ನಲ್ಲಿರುವ ಲೋಪದೋಷಗಳು ಇವು, ನಾ ಇನ್ಮೇಲೆ ಹೀಗಿರಬೇಕು-ಹಾಗಿರಬೇಕು ಅಂತ ಸಾಕಷ್ಟು ಯೋಚನೆಗಳು ಬರುತ್ವೆ. ಆದರೆ ಹೊರಪ್ರಪಂಚಕ್ಕೆ ಮನ ಅಡಿಯಿಟ್ಟ ಮೇಲೆ ಮತ್ತೆ ಅದೇ ರಾಗ ಅದೇ ಹಾಡು.

ನರಸ, ಅಜ್ಜ ಮತ್ತು ಪುಟ್ಟಿ..

ಮಳೆಗಾಲದ ಶುರುವಿನ ಶನಿವಾರ ಮಧ್ಯಾಹ್ನ ಮನೆಯಲ್ಲೆಲ್ಲ ಮಲಗಿದ್ದರು. ಶಾಲೆಯ ರಜದ ಮಜಕ್ಕೆ ಪುಟ್ಟಿ ಒಬ್ಬಳೆ ಜಗುಲಿಯ ಮೂಲೆಯಲ್ಲಿ ಕೊಡೆ ಬಿಚ್ಚಿಟ್ಟು ಮನೆ ಮಾಡಿಕೊಂಡು ಅಡಿಗೆ ಆಟದ ಸಾಮಾನು ಹರಡಿ ಕೂತಿದ್ದಳು.
ಅಮ್ಮೀ..
ಅರೆ ನರಸಾ..

ಹಿ ಹ್ಹಿ ಹ್ಹಿ.. ಅಜ್ಜಯ್ಯ ಐದಾರಾ..? ನರಸ ಬಂದಾನೆ ಹೇಳ್ಬೇಕಲ್ರ ಅಮೀ.. ಪುಟ್ಟ ಅಮ್ಮಿ ಓಡುತ್ತಾಳೆ, ಒಳಗೆ ನಡುಮನೆಯ ಕತ್ತಲಗವಿಯ ಮೆತ್ತನೆ ತಲ್ಪದಲ್ಲಿ ಮಲಗಿರುವ ಅಜ್ಜನನ್ನ ಏಳಿಸಲಿಕ್ಕೆ.

ಅಜ್ಜ ಮಲಗಿದ್ದಾನೆ, ಮಗ್ಗುಲಲ್ಲಿ ವಾರ್ತೆಗೆ ಹಚ್ಚಿದ್ದ ರೇಡಿಯೋ ಇನ್ನೂ ಹಾಡುತ್ತಲೆ ಇದೆ.ಅವಳೇನು ಅಜ್ಜನನ್ನು ತಟ್ಟಿ ಎಬ್ಬಿಸಿದಳಾ.. ಇಲ್ಲ.
ಮಂಚವೇರಿ, ಅಜ್ಜನ ಸಂದಿಯಲ್ಲಿ ಮಲಗಿದ ಕೂಡಲೆ ಅಜ್ಜನಿಗೆ ಎಚ್ಚರಾಗುತ್ತೆ ಅಂತ ಗೊತ್ತವಳಿಗೆ. ತೂರಿದಳು ಹೊದಿಕೆಯೊಳಗೆ.

ಕನಕದಾಸರು

ಆನೆಗೊಂದಿ ಸಂಸ್ಥಾನಕ್ಕೆ ಸೇರಿದ ಬಾಡಬಂಕಾಪುರ ಕಾಗಿನೆಲೆ ಪ್ರದೇಶ (ಸುತ್ತಲ ಎಪ್ಪತ್ತೆಂಟು ಗ್ರಾಮಗಳು)ಕ್ಕೆ ನಾಡಗೌಡ ಅಥವಾ ದಣ್ಣಾಯಕನಾಗಿದ್ದ ಬೀರಪ್ಪ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿ ಅದರ ವಾಯುವ್ಯ ಗಡಿಯ ರಕ್ಷಣೆ ಮಾಡಿಕೊಂಡಿದ್ದ. ರಾಜನ ಧರ್ಮವೇ ಪ್ರಜೆಗಳ ಧರ್ಮವೆಂಬಂತೆ ತಾನೂ ವೈಷ್ಣವ ಧರ್ಮವನ್ನು ಆಚರಿಸುತ್ತಾ ತನ್ನ ಪತ್ನಿ ಬತ್ಯಮ್ಮನಿಗೆ ಜನಿಸಿದ ಮಗನಿಗೆ ತಿಮ್ಮಪ್ಪನೆಂದು ಹೆಸರಿಟ್ಟ.

ಬೀರಪ್ಪನ ನಂತರ ಅವನ ಮಗ ತಿಮ್ಮಪ್ಪ ದಣ್ಣಾಯಕನಾದ. ಸಿಕ್ಕಿದ ನಿಧಿಯನ್ನು ಜನೋಪಯೋಗಕ್ಕೆ ಬಳಸಿದ್ದರಿಂದ ಕನಕನಾಯಕ ಎನಿಸಿಕೊಂಡ. ಯುದ್ಧವೊಂದರಲ್ಲಿ ತೀವ್ರ ಗಾಯಗೊಂಡು ನರಳುವಾಗ್ಗೆ ವಿರಕ್ತ ಭಾವನೆ ಹುಟ್ಟಿ ಹರಿದಾಸನಾದ.

ಕೀರ್ತನಕಾರನೂ ಕಥನಕಾರನೂ ಆದ ಕನಕದಾಸನು ರಚಿಸಿದ ಕಾವ್ಯಗಳು ಐದು. ಅವು ಮೋಹನತರಂಗಿಣಿ, ನೃಸಿಂಹಸ್ತವ, ನಳಚರಿತ್ರೆ, ಹರಿಭಕ್ತಿಸಾರ ಮತ್ತು ರಾಮಧಾನ್ಯಚರಿತ್ರೆ. (ಇವುಗಳಲ್ಲಿ ನೃಸಿಂಹಸ್ತವ ಇಂದು ಉಪಲಬ್ಧವಿಲ್ಲ) ಈ ಕಾವ್ಯಗಳಲ್ಲದೇ ಅವರ ಸುಮಾರು ೪೦೦ ಕೀರ್ತನೆಗಳು ಭಗವನ್ನಾಮಸ್ತುತಿ ಮುಕ್ತಿಮಾರ್ಗಗಳನ್ನು ಬಣ್ಣಿಸುವುದಲ್ಲದೆ ಹಲವು ಸಂದರ್ಭಗಳಲ್ಲಿ ನಿಂದಕರಿಗೆ ಚಾಟಿ ಪೆಟ್ಟುಗಳಾಗಿಯೂ ಕಾಣಸಿಗುತ್ತವೆ.

ನಾನು ಜಕ್ಕಾಯ

ನಾನು ಜಕ್ಕಾಯ. ಇದು ನನಗೆ ನನ್ನ ಅಪ್ಪ ಅಮ್ಮ ಇಟ್ಟ ಹೆಸರು. ಅಂದಹಾಗೇ ಗಜಕಾಯ, ದೃಢಕಾಯ, ವಜ್ರಕಾಯ ಮುಂತಾದ ಹೆಸರುಗಳನ್ನು ಕೇಳಿ ಕೇಳಿ ನೀವು ನನ್ನ "ಜಕ್ಕಾಯ" ಎಂಬ ಹೆಸರನ್ನು ಕೇಳಿದಾಗ ಹುಬ್ಬೇರಿಸುವುದು ಸಹಜ. ಜಕ್ಕಾಯ ಎಂಬುದು ಯೆಹೂದಿ ಭಾಷೆಯ ಪದ.

ಯೂನಿಕೋಡ್

ಕಂಪ್ಯೂಟರಿನಲ್ಲಿರುವ ಇಂಗ್ಲಿಷ್ ಅಕ್ಷರಗಳಿಗೆ ASCII (American Standard Code for Infromation Interchange=ಮಾಹಿತಿ ವಿನಿಮಯಕ್ಕೆ ಅಮೆರಿಕದ ಮಾನಕ) ಅಳವಡಿಸಿರುವುದರಿಂದ ಒಂದು ಕಂಪ್ಯೂಟರಿನಲ್ಲಿ ಟೈಪಿಸಿದ ಮಾಹಿತಿಯನ್ನು ತೆಗೆದುಕೊಂಡು ಮತ್ತೊಂದು ಕಂಪ್ಯೂಟರಿನಲ್ಲಿ ತೆರೆದು ನೋಡಿದಾಗಲೂ ಅದೇ ಅಕ್ಷರಗಳನ್ನು ಕಾಣಬಹುದಾಗಿದೆ.