ಕತ್ತಲೆಯೆಡೆಗೆ By shekarsss on Wed, 12/05/2007 - 12:22 ಬರಹ ಸಕಲ ಬಲ್ಲವನೆಂಬವರ ಅರಿವಿಲ್ಲದೆ ನುಡಿವವರ ಎಲ್ಲರ ನಡಿಗೆ ಕತ್ತಲೆಯೆಡೆಗೆ ಭಾವಗಳ ಬೆಸೆಯದವ ಕನಸುಗಳ ಬೆನ್ನತ್ತದವ ಆಸೆಯ ಕುದುರೆಯನೇರಿ ಮದ, ಮತ್ಸರಗಳ ತೋರಿ ನೆರೆಹೊರೆಯ ಪರಿವಿರದೆ ಜೊತೆಗಾಗಿ ಯಾರಿರದೆ ಸಾಗುವ ನಡಿಗೆ ಕತ್ತಲೆಯೆಡೆಗೆ