ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯುದ್ಧನಿರತ ದೇಶದಲ್ಲಿ ತೇಲುವ ಅಮರಾವತಿಗಳು

ಇರಾಕಿನ ಮಾರಣ ಹೋಮದಲ್ಲಿ ಪಾಲಿರುವ ಆಸ್ಟ್ರೆಲಿಯಾದಲ್ಲಿ ಕ್ವೀನ್ ಏಲಿಸಬೇತ್ ಮತ್ತು ಕ್ವೀನ್ ಮೇರಿ ಎಂಬ ವಿಲಾಸೀ ಹಡಗುಗಳು ಬಂದಾಗ ಸಿಡ್ನಿಯ ಜನ ಹೀಗೆಲ್ಲಾ ಹುಚ್ಚಾಗುತ್ತಾರೆ.
ಅದೆ ದಿನ ನನ್ನ ಕೆಲಸದ ಕಿಟಕಿಯ ಹೊರಗೇ ಅಭ್ಯಾಸೀ ಯುದ್ಧ ಹೆಲಿಕಾಪ್ಟರುಗಳು ಗುಡುಗಿ ಎದೆ ನಡುಗಿಸಿದಾಗ ಹಡಗುಗಳನ್ನು ನೋಡಿ ಬೆರಗಾಗುವ ಕಣ್ಣುಗಳೇ, ಚಪ್ಪರಿಸುವ ನಾಲಿಗೆಗಳೇ, ಯುದ್ಧದ ಹೆಲಿಕಾಪ್ಟರಿನ ಗುಡುಗಿಗೂ ಕಣ್ಣರಳಿಸುತ್ತವೆ, ಓಹೊ ಏನ್ನುತ್ತವೆ.
ಇಲ್ಲೇನೊ ವ್ಯಂಗವಿದೆ ಅಂತ ಅನಿಸುತ್ತದೆ.
ಅಥವಾ ಇದು ನನ್ನ ತಲೆಯಲ್ಲಿ ಮಾತ್ರ ಇರಬೇಕು ಎಂದುಕೊಳ್ಳುತ್ತೇನೆ. ಏಕೆಂದರೆ, ಬರಗಾಲದಲ್ಲೂ ಹಬ್ಬಗಳನ್ನು ಮಾಡುವುದು ನಿಲ್ಲುವುದಿಲ್ಲ ಎಂದು ನನಗೆ ಗೊತ್ತು!

ಕನ್ನಡದಲ್ಲಿ ಇಂಗ್ಲೀಷ್ ಪದಗಳು (ಕಂಗ್ಲೀಷ್)- ಕಸಿವಿಸಿ ಏಕೆ?

ಈ ಬಗ್ಗೆ ಈ ತಿಂಗಳ ಮಯೂರ(http://mayuraezine.com ನಲ್ಲೂ ನೋಡಬಹುದು)ದಲ್ಲಿ - ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ. ನಾರಾಯಣ ಅವರು ಲೇಖನ ಬರೆದಿದ್ದಾರೆ.

0೧. ಢಕಾಯಿತರ ತಂಡ ಕಟ್ಟಿದ ಕತೆ.

೧. ಢಕಾಯಿತರ ತಂಡ ಕಟ್ಟಿದ ಕತೆ.

ನೀವು ನಮ್ಮ ಟಾಮ್ ಸಾಯರ್ ನ ಸಾಹಸಗಳ ಕತೆ ಓದದೇ ಇದ್ದರೆ, ನಾನಾರೆಂದು ನಿಮಗೆ ತಿಳಿದಿರುವುದಿಲ್ಲ. ಹಾಗೆ ತಿಳಿದಿರಬೇಕಾದುದೂ ಏನೂ ಇರಲಿಲ್ಲ ಅಂತಲೇ ಇಟ್ಟುಕೊಳ್ಳಿ. ಆದರೆ, ನನ್ನ ಜೀವನದ ಸಾಹಸಗಳ ಕತೆ ನಿಮಗೆ ಹೇಳುವ ಮುಂಚೆ ನಾನಾರೆಂದು ನಿಮಗೆ ತಿಳಿಸಲೇಬೇಕಲ್ಲ. ನನ್ನ ಹೆಸರು ಹಕಲ್ ಬೆರಿ ಫ಼ಿನ್. ನನಗಾರೂ ಅಣ್ಣ-ತಮ್ಮ, ಅಕ್ಕ-ತಂಗಿಯರಿಲ್ಲ. ಅಷ್ಟೇಕೆ ಅಮ್ಮನೂ ಇಲ್ಲ. ನನ್ನಪ್ಪ ಇದ್ದರೂ, ಅವನು ನನ್ನ ಕಣ್ಣಿಗೆ ಬಿದ್ದು, ಸುಮಾರು ತಿಂಗಳುಗಳೇ ಆಗಿವೆ. ಸದ್ಯಕ್ಕೆ ಅವನು ಕಾಣೆಯಾದಾಗಿನಿಂದ ಇದುವರೆಗೂ ಅವನ ಕಾಟ ನನಗಿಲ್ಲ. ಏಕೆಂದರೆ ಅವನೊಬ್ಬ ಕುಡುಕ. ಸದ್ಯಕ್ಕೆ ನಾನು ಡಗ್ಲಾಸ್ ಆಂಟಿಯ ಮನೆಯಲ್ಲೇ ಇರುವುದು. ಆವಳೊಬ್ಬ ಗಂಡ ಇಲ್ಲದ ಮುದುಕಿ. ಸಾಧು, ಆದರೆ ತುಂಬಾ ಶಿಸ್ತಿನವಳು. ನನ್ನ ಸ್ನೇಹಿತರೆಲ್ಲ ನನ್ನನ್ನು 'ಹಕ್' ಎಂದು ಕರೆಯುತ್ತಾರೆ.

ಕೆಟ್ಟ ಸುದ್ದಿ

ಊಹಿಸಿದಂತೆಯೇ ಆಗಿದೆ. ತುಂಬಿ ಹರಿವ ಹಳ್ಳಕ್ಕೆ ಬಿದ್ದು ಕೊಚ್ಚಿಹೋಗಿರಬೇಕು ಎಂದು ಅನುಮಾನಿಸಿದಂತೆ ಬೆಂಗಳೂರಿನ ೩ ಯುವ ಚಾರಣಿಗರು ಅನಾವಶ್ಯಕ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇನ್ನಾದರೂ ಪ್ರಕೃತಿಯನ್ನು, ಅದರ ಮುನ್ಸೂಚನೆಗಳನ್ನು ಅರಿತು ಅದಕ್ಕೆ ತಕ್ಕ ಗೌರವವನ್ನು ನೀಡುವುದನ್ನು ಚಾರಣಿಗರು ಮರೆಯದಿರಲಿ. ಹೀಗಾಗಬಾರದಿತ್ತು. ಅನ್-ಫಾರ್ಚುನೇಟ್.