ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

೧೭. ಪಾಲಿ ಆಂಟಿ ಬಿಡಿಸಿದ ರಹಸ್ಯ

ಅಂದು ಬೆಳಿಗ್ಗೆ ತಿಂಡಿಗೂ ಮುಂಚೆ ಒಮ್ಮೆ ಸಿಲಾಸ್ ಚಿಕ್ಕಪ್ಪ ಪೇಟೆಗೆ ಹೋಗಿ ನೋಡಿ ಬಂದರು. ಆದರೆ ಸಮಾಚಾರವೇನೂ ಸಿಕ್ಕಿರಲಿಲ್ಲ. ತಿಂಡಿ ತಿನ್ನುವ ಮುಂಚೆ ಚಿಕ್ಕಪ್ಪ ಚಿಕ್ಕಮ್ಮನಿಗೆ "ನಾನು ನಿನಗೆ ಬಂದ ಪತ್ರ ಕೊಟ್ಟೆನಾ?" ಎಂದು ಕೇಳಿದರು

೧೬. ಜಿಮ್‍ನ ಜೀತವಿಮುಕ್ತಿ.

ಮರುದಿನ ಬೆಳಿಗ್ಗೆ ತಿಂಡಿ ತಿಂದು ನಮ್ಮ ಚಿಟ್ಟುದೋಣಿಯ ಬಳಿ ಹೋದೆವು. ಮಧ್ಯಾಹ್ನದ ಊಟವನ್ನೂ ಜೊತೆಯಲ್ಲಿ ಕೊಂಡೊಯ್ದದ್ದರಿಂದ ಸಂಜೆಯಾಗುವವರೆಗೂ ಮೀನು ಹಿಡಿಯುತ್ತಾ ಇಲ್ಲವೇ ಸುಮ್ಮನೇ ಹೊಳೆಯಲ್ಲಿ ಸುತ್ತುತ್ತಾ ಕಾಲ ಹಾಕಿದೆವು. ಮಧ್ಯೆ ಒಮ್ಮೆ ಹೋಗಿ ನಮ್ಮ ತೆಪ್ಪದ ಕ್ಷಮತೆಯನ್ನೂ ಪರೀಕ್ಷಿಸಿದೆವು. ಸಂಜೆ ಮನೆಗೆ ಹಿಂತಿರುಗಿದಾಗ ಅಲ್ಲಿ ನಮ್ಮನ್ನು ಸೀದಾ ಮಲಗುವ ಕೋಣೆಗೆ ಕಳಿಸಲಾಯಿತು. ಏಕೆ ಎಂದು ಕೇಳಿದ ಪ್ರಶ್ನೆಗೆ ಯಾರೂ ಉತ್ತರ ಕೊಡಲಿಲ್ಲ. ಆದರೆ ಅವರೆಲ್ಲಾ ತುಂಬಾ ಹೆದರಿದ್ದರೆನ್ನುವುದು ನಮಗೆ ಗೊತ್ತಾಗುತ್ತಿತ್ತು. ಸ್ವಲ್ಪ ಸಮಯಯದ ನಂತರ ಮೆಲ್ಲನೆ ಕೆಳಗಿಲಿದು ಬಂದು ಅಡಿಗೆ ಕೋಣೆಗೆ ಹೋಗಿ ನಮ್ಮ ಮಧ್ಯರಾತ್ರಿಯ ಅಲ್ಪಾಹಾರವಾಗಿ ಸ್ವಲ್ಪವನ್ನು ತೆಗೆದುಕೊಮ್ದು ಮತ್ತೆ ಮೇಲಿನ ನಮ್ಮ ಮಲಗುವ ಕೋಣೆಗೆ ಹೋಗಿ ಮಲಗಿಬಿಟ್ಟೆವು. ಮತ್ತೆ ನಾವೆದ್ದಾಗ ರಾತ್ರಿ ಹನ್ನೊಂದೂವರೆಯಾಗಿತ್ತು. ನಮ್ಮ ಸಾಹಸಕ್ಕೆ ಬೇಕಾದ ಸಿದ್ದತೆಗಳೊಂದಿಗೆ ಹೊರಡುವಾಗ ಟಾಮ್ ಕೇಳಿದ "ಬೆಣ್ಣೆ ಎಲ್ಲಿ" ನಾನು ಅಡಿಗೆಮನೆಯಲ್ಲಿ ಬೆಣ್ಣೆ ತೆಗೆದಿಟ್ಟದ್ದು ನೆನಪಿನಲ್ಲಿತ್ತು. ಅಂದರೆ ಅಲ್ಲೇ ಬಿಟ್ಟು ಬಮ್ದಿರಬೇಕು. ಅದನ್ನೇ ಟಾಮ್‍ಗೆ ಹೇಲಿದೆ.

೧೫. ಸಂಚಿನ ಸುಳಿ.

ಇಲ್ಲಿವರೆಗೂ ನಾವು ಜಿಮ್‍ನನ್ನು ಕಂಡಿರಲಿಲ್ಲ. ಅಲ್ಲದೇ ನಮಗೆ ಜಿಮ್ ಗೊತ್ತೆಂದೂ ಸಿಲಾಸ್‍ನಿಗೂ ತೋರಿಸಿಕೊಂಡಿರಲಿಲ್ಲ. ಈ ಕಾರಣದಿಂದ ನಮ್ಮ್ ಮಾತುಕತೆ ಸುತ್ತಾಟ ಎಲ್ಲಾ ಜಿಮ್ ಎಲ್ಲಿದ್ದಾನೆಂದು ಹುಡುಕುವುದರಲ್ಲಿಯೇ ಕಲೆಯಿತು. ಕಡೆಗೂ ಬೇಲಿಗೆ ಹೊಂದಿಕೊಂಡ ಮರದ ಕ್ಯಾಬಿನ್ನಿನಲ್ಲಿ ಜಿಮ್ ಇದ್ದಾನೆಂದು ತಿಳಿದಾಗ ಅವನ ಬಿಡುಗಡೆಯ ಯೋಜನೆಯ ತಯ್ಯಾರಿ ನಡೆಯಿತು. ಜಿಮ್ ಇದ್ದಾನೆಂದು ನಮಗೆ ತಿಳಿದದ್ದು, ಆ ಕ್ಯಾಬಿನ್ನಿಗೆ ಸಮಯಕ್ಕೆ ಸರಿಯಾಗಿ ಸೇವಕರು ಊಟ ತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದುದರಿಂದ. ಜಿಮ್‍ನನ್ನು ನಾವಿನ್ನೂ ಕಂಡಿರಲಿಲ್ಲ. ನಾನು "ಅಡಗಿಸಿಟ್ಟಿರುವ ತೆಪ್ಪವನ್ನು ಹತ್ತಿರಕ್ಕೆ ತಂದು ಸಿದ್ದವಾದರೆ, ಚಿಕ್ಕಪ್ಪನ ಜೇಬಿನಿಂದ ಕ್ಯಾಬಿನ್ನಿನ ಬೀಗ ಕದ್ದು, ಜಿಮ್‍ನನ್ನು ಬಿಡಿಸಿ ಕರೆದುಕೊಂಡು ಓಡಿ ಬಿಡುವುದು. ಹಗಲೆಲ್ಲಾ ಅಡಗಿ ಕುಳಿತು, ರಾತ್ರಿ ಪ್ರಯಾಣ ಮಾಡಿದರೆ ಸಾಕಲ್ಲವಾ?" ಎಂದೆ.

೧೪. ಟಾಮ್ ಮತ್ತು ಸಿದ್ ಸಾಯರ್.

ಸಿಲಾಸ್ ಫ಼ೆಲ್ಪ್‍ನ ತೋಟದೆಡೆಗೆ ನಡೆದ ನನಗೆ, ದೊಡ್ಡದೊಂದು ಗೇಟು ಕಾಣಿಸಿತು. ಆ ತೋಪು ಸಿಲಾಸನಿಗೆ ಸೇರಿದ್ದಿರಬಹುದೆಂದು ಅನಿಸಿತು. ಹಾಗಾಗಿ ರಸ್ತೆಯನ್ನು ಬಿಟ್ಟು, ಗೇಟಿನ ಒಳಹೊಕ್ಕು ನಡೆದೆ. ಅಲ್ಲಿ ತೋಟದ ನಡುವೆ ವಿಶಾಲವಾದ ಒಂದು ಮನೆ ಕಾಣಿಸಿತು. ಆ ವಿಶಾಲವಾದ ಮನೆಯ ಹಿಂಭಾಗದ ಕಡೆಯಲ್ಲೊಂದು ಹೊಗೆಯ ಗೂಡು. ಅದೇ ಅಡಿಗೆ ಮನೆ ಇರಬೇಕೆಂದು ಊಹಿಸಿದೆ. ಅದರ ಹಿಂದಕ್ಕೆ ಮನೆಗೆ ಹೊಂದಿಕೊಂಡಂತೆಯೇ ಪ್ರತ್ಯೇಕವಾದ ಮರದಿಂದ ಮಾಡಿದ ಗೂಡುಗಳಂತಹ ಮನೆಗಳು. ಅವು ಗುಲಾಮರ ಕೊಠಡಿಗಳಿರಬೇಕೆಂದು ಊಹಿಸಿದೆ. ಒಟ್ಟಿನಲ್ಲಿ ಮನೆ ಚೊಕ್ಕಟವಾಗಿಯೂ, ಸುಂದರವಾಗಿಯೂ ಇತ್ತು. ಮನೆಯ ಬೇಲಿದಾರಿ ಹಿಡಿದು ಅಡುಗೆ ಮನೆಯ ಕಡೆ ನಡೆದೆ. ಯಾರಾದರೂ ನನ್ನನ್ನು ವಿಚಾರಿಸಿದರೆ ನಾನು ಏನು ಹೇಳಬೇಕೆಂದು ಇನ್ನೂ ನಿರ್ಧರಿಸಿರಲಿಲ್ಲ. ಈ ಬಗ್ಗೆ ನಾನು ತಲೆ ಕೆಡಿಸಿಕೊಂಡಿರಲೇ ಇಲ್ಲ.

೧೩. ಜಿಮ್ ಮತ್ತೆ ಬಂಧಿ.

ಅವರಿಬ್ಬರೂ ದೋಣಿ ಹತ್ತಿದಾಗ, ರಾಜ ನನ್ನ ಬಳಿಗೆ ಬಂದು ಕೊರಳ ಪಟ್ಟಿಯನ್ನು ಹಿಡಿದು "ತಪ್ಪಿಸಿಕೊಂಡು ಹೋಗಬೇಕಂತಿದ್ದೀಯಾ, ನಾಯಿ. ನಾವೆಂದರೆ ಬೇಜಾರಾಯಿತೇನು?" ಎಂದ.

೧೨. ಶವಪೆಟ್ಟಿಗೆಯಲ್ಲಿ ಹಣ.

ರಾಜನೂ-ಪಾಳೇಗಾರನೂ ಅತಿಥಿಗಳೊಂದಿಗೆ ಮಾತನ್ನಾಡುತ್ತಲೇ ಇದ್ದರು. ಜೇನಳಿಗೂ ಇತರರಿಗೂ ಬೀಳ್ಕೊಂಡು, ನಾನು ನನ್ನ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಆದರೆ ಹೊರಗಿನ ಗಲಾಟೆಯೆಲ್ಲಾ ನಿರಭ್ರವಾಗಿ ಕೇಳುತ್ತಿತ್ತು. ನಿಧಾನವಾಗಿ ನಡೆಯುತ್ತಾ, ರಾಜನಿಗೂ, ಪಾಳೇಗಾರನಿಗೂ ಗೊತ್ತುಪಡಿಸಲಾಗಿದ್ದ ಕೊಠಡಿಯ ಬಳಿಗೆ ಬಂದೆ. ಒಳಹೋಗಿ ಬಾಗಿಲು ಮುಚ್ಚಿಕೊಂಡೆ. ಆ ಖದೀಮರು ಅಲ್ಲಿ ಬಚ್ಚಿಟ್ಟಿರುವ ಹಣವನ್ನು ಮತ್ತೆ ಮಾಡಬೇಕೆಂಬುದು ನನ್ನ ಯೋಜನೆಯಾಗಿತ್ತು. ಆದರೆ ಒಳಹೋಗಿ ಬಾಗಿಲು ಮುಚ್ಚಿಕೊಳ್ಳುತ್ತಲೇ, ಯಾರೋ ಮೆಟ್ಟಿಲನ್ನು ಹತ್ತಿ ಬರುವ ಸದ್ದು ಕೇಳಿ ಬರತೊಡಗಿತು. ಆ ಸದ್ದು ನಿಧಾನವಾಗಿ ಜೋರಾಗಿ ನಾನಿದ್ದ ಕೊಠಡಿಯ ಕಡೆಗೇ ಬರುತ್ತಿರುವ ಹಾಗೆ ಕೇಳಲಾರಂಭಿಸಿತು. ಎಚ್ಚರಿಕೆಯ ಅಂಗವಾಗಿ ನಾನು ಅಲ್ಲೇ ಇದ್ದ ಪರದೆಯ ಹಿಂದೆ ಸರಿದು ಅಡಗಿಕೊಂಡೆ.

೧೧. ವಿಲಿಯಂ ಮತ್ತು ಹಾರ್ವೇ ಸೋದರರು.

ಕೆಲವು ದಿನಗಳ ಪ್ರಯಾಣದ ನಂತರ, ಒಂದು ಸುಂದರ ಮುಂಜಾವಿನ ಬೆಳಗಿನಲ್ಲಿ ನೀಟಾದ ಬಟ್ಟೆ ತೊಟ್ಟು ನಾನೂ, ರಾಜನೂ ಚಿಟ್ಟು ದೋನಿಯನ್ನೇರಿ ಸನಿಹದ ನಗರದೆಡೆಗೆ ಹೊರಟೆವು. ಪಾಳೇಗಾರನೇಕೋ ಒಲ್ಲೆ ಎಂದು ತೆಪ್ಪದಲ್ಲಿ ಉಳಿದಿದ್ದ. ಜಿಮ್ ಹೇಗೂ ಬರುವಂತಿರಲಿಲ್ಲ. ನಾನು ಹಾಕುತ್ತಿದ್ದ ಹುಟ್ಟಿನ ತಾಳಕ್ಕೆ ಸಿಳ್ಳೆ ಹಾಕುತ್ತಾ ಕುಳಿತಿದ್ದ ರಾಜ. ಅದಂತೂ ತುಂಬಾ ಮನೋಹರವಾಗಿತ್ತು. ಆದರೂ ನನ್ನ ಮನದಲ್ಲಿ ಏನೋ ಒಂದು ರೀತಿಯ ಉದ್ವಿಗ್ನತೆಯೂ, ಭಯವೂ ಸೇರಿದ ಮಿಶ್ರಭಾವ ಉಯ್ಯಾಲೆಯಾಡುತ್ತಿತ್ತು. ಅವನೇನು ಮಾಡಲಿದ್ದಾನೆ ಎಂದು ನನಗೂ ತಿಳಿದಿರಲಿಲ್ಲ. ಸ್ವಲ್ಪ ದೂರ ಹೋಗುವಷ್ಟರಲ್ಲೇ ನದಿಗುಂಟ ಹಾಯ್ದಿದ್ದ ದಾರಿಯೊಂದು ಕಂಡಿತು. ಆ ದಾರಿ ನದಿಯನ್ನು ಸಂಧಿಸುವೆಡೆಯಲ್ಲಿ, ಮರದ ದಿಮ್ಮಿಯ ಮೇಲೆ ಕೆಂಪಾದ ಮನುಷ್ಯನೊಬ ಕುಳಿತಿದ್ದ.

೧೦. ಶೇಕ್‍ಸ್ಪಿಯರ್ ‌ನ ಪುನರುಥ್ಥಾನ.

ಸಂತೆಯಲ್ಲಿ ಜನಗಳಿಗೆ ಟೋಪಿ ಹಾಕಿದ ಮಾರನೇ ದಿನ ರಾಜನೂ, ಪಾಳೇಗಾರನೂ ಎದ್ದಿದ್ದು, ಹೊತ್ತು ಮೂರು ಮಾರು ಏರಿದ ಮೇಲೆಯೇ. ಏಕೆಂದರೆ ಹಿಂದಿನ ರಾತ್ರಿ ಅವರು ಹೊಟ್ಟೆ ತುಂಬಾ ಗುಂಡು ತುಂಬಿಕೊಂಡು ತಮ್ಮ ಚೋರವಿಜಯವನ್ನಾಚರಿಸಿದ್ದರು. ನದಿಯಲ್ಲಿ ಒಂದೆರಡು ಸುತ್ತು ಈಜಿದ ನಂತರವೇ ಅವರ ಪ್ರಙ್ಞೆ ಮರಳಿ ಬಂದಿದ್ದು. ತಿಂಡಿ ತಿಂದು ಹೊಳೆಯಲ್ಲಿ ಕಾಲಾಡಿಸುತ್ತಾ ತೆಪ್ಪದಲ್ಲಿ ಹೊರಟ ಅವರ ತಲೆಗಳಲ್ಲಿ ಹೊಸ ಹೊಸ ಹಣ ಸಂಪಾದಿಸುವ ಯೋಚನೆಗಳೊ-ಯೋಜನೆಗಳೂ ಮೂಡಲಾರಂಭಿಸಿದವು. ಮುಂದಿನ ಪಟ್ಟಣದಲ್ಲಿ ಏನು ಮಾಡಬೇಕೆಂಬ ನಿಸಿತ ಆಲೋಚನೆಯಲ್ಲಿ ಅವರಿಗೆ ಹೊಳೆದದ್ದು "ನಾಟಕ ಪ್ರದರ್ಶನ" ಏರ್ಪಡಿಸಬೇಕೆಂದು......!