ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬದುಕು ಜಟಕಾಬಂಡಿಯ ನಾಲ್ಕು ಗಾಲಿಗಳು

ಜಿ ಟಿ ನಾರಾಯಣ ರಾವ್ ಅವರು ವೈಜ್ಞಾನಿಕ ಮನೋಭಾವನೆ ಬಗ್ಗೆ, ನಾಸ್ತಿಕತೆ- ಅಸ್ತಿಕತೆ ಬಗ್ಗೆ ಬರೆದ ಲೇಖನ ಇಲ್ಲಿದೆ: ಲೇಖನ ಉದಯವಾಣಿಯದ್ದು.

http://68.178.224.54/udayavani/special.asp?contentid=423256&lang=2

ಯಕ್ಷಗಾನವಾಗಿ "ಮುಂಗಾರುಮಳೆ"

"ಮುಂಗಾರುಮಳೆ" ಚಲನಚಿತ್ರವನ್ನು ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಪ್ರಯೋಗ ಇಂದು ಉಡುಪಿಯಲ್ಲಿ ನಡೆಯಲಿದೆ. ಚಲನಚಿತ್ರದ ಪದ್ಯಗಳ ಜತೆ ಬೇಂದ್ರೆಯವರ ಕವನವೂ ಬಳಕೆಯಗಲಿದೆ.
ವಿವರಗಳಿಗೆ ವಿಕಾಸ ನೇಗಿಲೋಣಿಯವರ ಲೇಖನ "ಉದಯವಾಣಿ"ಯಲ್ಲಿ:
http://68.178.224.54/udayavani/special.asp?first=y&contentid=423246&lang=2

ಮದ್ದು

ನಿನ್ನ ಕುರುಡಿಗೆ
ನನ್ನ ಸೊಂಟ, ಎದೆ, ತುಟಿ, ಕಣ್ಣು, ಹುಬ್ಬು, ಹೆರಳು
ಇವುಗಳದೇ ಸಂಭ್ರಮ

ನನ್ನ ದಿಟ್ಟ ಹೆಜ್ಜೆ ನಡುವಿನ ಅನುಮಾನ
ಮತ್ತು ಗಟ್ಟಿ ದನಿಯಾಳದ ನಡುಕ
ನಿನ್ನ ಸಂಭ್ರಮಕ್ಕೆ ಮದ್ದರೆಯುತ್ತವೆ
ಮೌನವಾಗಿ.

ಪ್ರೆಸೆಂಟ್ ಸಾರ್ ಎನ್ನೋ ಬದಲು ಪ್ರೆಸಿಡೆಂಟ್ ಸಾರ್ ಅಂದ ಹುಡುಗ ಈಗ ಏನಾಗಿದ್ದಾನೆ?

ತಿರುಮಲೇಶ್ವರ ಭಟ್ ಅವರು ವಿಕದಲ್ಲಿ ಒಬ್ಬ ಹುಡುಗನ ಬಗ್ಗೆ ಬರೆದಿದ್ದಾರೆ. ಹಳ್ಳಿಯ ಆ ಹುಡುಗ ತರಗತಿಯಲ್ಲಿ ಹಾಜರಿ ಹೇಳುವಾಗ "ಪ್ರೆಸೆಂಟ್ ಸಾರ್" ಅನ್ನದೆ ತಪ್ಪಿ "ಪ್ರೆಸಿಡೆಂಟ್ ಸಾರ್" ಅಂದು ಸಹಪಾಠಿಗಳಿಂದ ಗೇಲಿಗೀಡಾದ. ಅವಮಾನದಿಂದ ಉಗ್ಗುವಿಕೆ ಶುರುವಾಯಿತು. ಯಾರು ಆ ಹುಡುಗ? ಈಗ ಏನಾಗಿದ್ದಾನೆ?
http://vijaykarnatakaepaper.com/pdf/2007/06/08/20070608a_006101002.jpg

ಎಲ್ಲಿದೆ ಮುಕ್ತಿ

ಎಲ್ಲಿದೆ ಮುಕ್ತಿ
ಬೆಟ್ಟದ ತಪ್ಪಲಲ್ಲೋ,
ಹೆಣ್ಣಿನ ನಿತಂಬಗಳಲ್ಲೋ?
ಯವ್ವನ ಪೂರ್ತಿ ಇದನ್ನೇ ಕೇಳುತ್ತದೆ!
(ಮುಪ್ಪಿಗೆ ಉತ್ತರಿಸುವ ಶಕ್ತಿಯೇ ಇಲ್ಲ!!)

ಬೆಟ್ಟವಲೆದರೂ, ಕಾಡು-ಮೇಡು
ಸುತ್ತಿದರೂ ಭಗವಂತನ ಪತ್ತೆಯಿಲ್ಲ.

ಜೀವ ಕೇಳುವುದಿಲ್ಲ,
ಹುಲ್ಲುಕಡ್ಡಿ ಜೀವ ತಳೆದು ಹೆಣ್ಣಾಗುವುದಾದರೆ
ಈ ಹುಲ್ಲು ಕಡ್ಡಿಯ ಮೇಲಿನ ಪ್ರೇಮ
ಅದೆಂತು ಆಗಸಕ್ಕೇರಬಹುದು!

ಪತ್ತನಾಜೆ ಪದದ ಅರ್ಥ ಹೇಳಿ!

ಪತ್ತನಾಜೆ ಶಬ್ದವನ್ನು ಕೇಳಿದ್ದೀರಾ?
ಯಕ್ಷಗಾನಕ್ಕೆ ಸಂಬಂಧಿಸಿದ ಈ ಶಬ್ದ ಒಂದು ಸಂದರ್ಭಕ್ಕೆ ಸಂಬಂಧಿಸಿದೆ.
ಈ ವರ್ಷದ ಪತ್ತನಾಜೆ ಕಳೆದು ಹೋಯಿತು.

ಪ್ರಾಣಾಯಾಮ ಪ್ರಯೋಜನಕಾರಿಯೇ?

ಉಸಿರಾಟವನ್ನು ನಿಯಂತ್ರಿಸಿ, ನಮ್ಮ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಬಹುದು ಎನ್ನುವ ತತ್ತ್ವ"ಪ್ರಾಣಾಯಾಮ"ವೇ? ಅಲ್ಲ ಅದಕ್ಕಿಂತ ಹೆಚ್ಚಿನದೇ? ನಿಮ್ಮ ಅನುಭವ ಹಂಚಿಕೊಳ್ಳಿ.
"ಪ್ರಜಾವಾಣಿ" ಲೇಖನ ಇಲ್ಲಿದೆ:
http://prajavani.net/Content/Jun92007/health2007060831916.asp

ನನ್ನಮ್ಮ

ನಿನ್ನೆ ನನ್ನಣ್ಣನ ಗೂಗಲ್ ಸ್ಟೇಟಸ್ ನಲ್ಲಿ shootout at lokhandwala ಎಂದು ಬರೆದಿತ್ತು; ಅಂದರೆ ಅವನು ಆ ಚಿತ್ರವನ್ನು ನೋಡುತ್ತಿದ್ದಾನೆ ಎಂದರ್ಥ. ೨-೩ ಶಬ್ದಗಳಲ್ಲಿ, ಒಂದು ಗೂಗಲ್ ಐಕಾನ್ ನಲ್ಲಿ ಎಷ್ಟೆಲ್ಲ ವಿಷಯಗಳನ್ನು ಕನ್ವೇ ಮಾಡಬಹುದಲ್ಲ ಎಂದು ನನಗೆ ಆಶ್ಚರ್ಯವಾಯಿತು.

ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ

ಈ ಬಗ್ಗೆ ಇಂದು ಚರ್ಚೆ ಆಗಿಯೇ ಆಗುತ್ತದೆ ಅಂತ ಗೊತ್ತಿತ್ತು. ಹಾಗಾಗಿ ಅದನ್ನು ನಾನೇ ಆರಂಭಿಸುವ ಅಂದುಕೊಂಡೆ. ಇಂದಿನ ವಿಜಯಕರ್ನಾಟಕದಲ್ಲಿ ಅನಂತಮೂರ್ತಿಯವರನ್ನು ತೆಗಳಿ ಪ್ರತಾಪ್ ಸಿಂಹರ ಲೇಖನ ಬಂದಿದೆ. ಇಷ್ಟೊಂದು ಬರೆಯಬಾರದಿತ್ತು, ಜಾಸ್ತಿಯಾಯಿತು ಎಂದು ಅನಿಸಿದರೂ ಬರೆದದ್ದು ಸರಿಯಾಗಿಯೇ ಇದೇ ಎಂದೂ ಕಾಣುತ್ತದೆ. ನೀವೇನಂತೀರ?