ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )

ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )

ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು . ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ ! ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂಡೋಸ್ ಬಳಸುವ ಬದಲು ಇದನ್ನು ಬಳಸಬಹುದು . ಈಗ ಸಾಮಾನ್ಯ ಕಂಪ್ಯೂಟರ್ ನಲ್ಲಿ ಬಳಸುವ ಹಾಗೆ ಸಿಗುತ್ತದೆ . ಈ ಲೀನಕ್ಸ್ ಬಗೆಗಳಲ್ಲಿ ಉಬುಂಟುವೂ ಒಂದು. www.ubuntu.com ನಲ್ಲಿ ರಜಿಸ್ಟರ್ ಮಾಡಿದರೆ ನಿಮಗೆ ಪುಕ್ಕಟೆಯಾಗಿ ಬಂದು ತಲಪುತ್ತದೆ . ಹೀಗೆ ನಾನು ಹಿಂದೊಮ್ಮೆ ತರಿಸಿದ್ದೆ - ಅದರ ಆವೃತ್ತಿ 6.06 . ಅದು ಲೈವ್ ಸೀಡಿ ಆಗಿತ್ತು . ಲೈವ್ ಸೀಡಿ ಅಂದರೇನು ? ಅದನ್ನು ನಿಮ್ಮ ಸೀಡೀ ಡ್ರೈವ್ ನಲ್ಲಿ ಹಾಕಿ ಅದರಿಂದ ನಿಮ್ಮ ಕಂಪ್ಯೂಟರ್ ಶುರು ಆಗೋ ಹಾಗೆ ಮಾಡಿದರೆ ( ಹೀಗೆ ಶುರು ಮಾಡೋದನ್ನೇ ಬೂಟಿಂಗ್ ಅಂತಾರೆ - ಕನ್ನಡದಲ್ಲಿ ಬೂಟ್ ಮಾಡು ಅಂತಾರೆ :) ಲೀನಕ್ಸ್ ಲೋಡ್ ಆಗುತ್ತದೆ . ಇದನ್ನು ನಿಮ್ಮ ಕಂಪ್ಯೂಟರಿನಲ್ಲಿ ನೆಲೆಗೊಳಿಸದೇ ( ಇನ್‌ಸ್ಟಾಲ್ ಮಾಡದೇನೇ) ಬಳಸಬಹುದು . ಹೀಗೆ ಲೀನಕ್ಸ್ ಲೋಡ್ ಆದಾಗ ನಿಮ್ಮ ತೆರೆಯ ಮೇಲೆ ಎಂಬ - ಇನ್‌ಸ್ಟಾಲ್ ಐಕಾನು( ಐಕಾನ್ - ಸಾಂಕೇತಿಕ ಸಣ್ಣ ಚಿತ್ರ ) ಕಾಣುವದು . ಅದನ್ನು ಕ್ಲಿಕ್ಕಿಸಿದರೆ ... ನಿಮ್ಮ ಕಂಪ್ಯೂಟರಿನಲ್ಲಿ ಅದನ್ನು ನೆಲೆಗೊಳಿಸುವಿಕೆ ಆರಂಭವಾಗುವದು . ಹೀಗೆ ನಾನು ಪಡೆದ ಸೀಡಿಯನ್ನು ನಾನು ಪ್ರಯತ್ನಿಸಿದರೆ . ... ನನ್ನ ಕಂಪ್ಯುಟರ್ ನಲ್ಲಿ ಆಗುತ್ತಿರಲಿಲ್ಲ . ಅದೇನೋ xconfig ಅಂತೆ , ಅದರಲ್ಲೇನೂ ತೊಂದರೆ .. ಹಾಗಾಗಿ ಗ್ರಾಫಿಕಲ್ ಮೋಡ್ -( ಚಿತ್ರ , ಬಣ್ಣ ಕಾಣುವ ಬಗೆ) ಗೆ ಹೋಗುತ್ತಿರಲೇ ಇಲ್ಲ ; ಹಾಗಾಗಿ ಇನ್‍ಸ್ಟಾಲ್ ಐಕಾನ್ ಬರ್ತಲೇ ಇರ್ಲಿಲ್ಲ ; ಇನ್ನು ಇನ್‌‍‍‍ಸ್ಟಾಲ್ ಮಾಡೋದೇನು ? ಆದರೆ ನನ್ನಂತಹದೇ ಬೇರೆ ಕಂಪ್ಯೂಟರ್ ನಲ್ಲಿ ಈ ತೊಂದರೆ ಇರಲಿಲ್ಲ . ಅಲ್ಲಿ ಲೈನಕ್ಸ್ ಶುರುವಾಗಿ ತೆರೆಯ ಮೇಲೆ ಎಂಬ - ಇನ್‌ಸ್ಟಾಲ್ ಐಕಾನು ಕಾನುತ್ತಿತ್ತು ... ಅದು ಬೇರೆಯವರ ಕಂಪ್ಯೂಟರ್ ಆದ್ದರಿಂದ ನಾನು ಮುಂದುವರೆವ ಹಾಗಿರಲಿಲ್ಲ . ಹಾಗಾಗಿ ಅಷ್ಟಕ್ಕೆ ಬಿಟ್ಟಿದ್ದೆ . ನಾವು ಕಛೇರಿಯಲ್ಲಿ ಬಳಸೋದು ವಿಂಡೋಸ್ . ಹೇಗೂ ಅದು ಇತ್ತಲ್ಲಾ ? ಇತ್ತೀಚೆಗೆ ಹೊಸ ಆವೃತ್ತಿ - ೭.೧ ಬಿಡುಗಡೆಯಾದ ಬಗ್ಗೆ ಸಂಪದದಲ್ಲಿ ಓದಿ ನಾನೂ ತರಿಸಿಕೊಂಡೆ . ಬೇರೆ ಬೇರೆ ಆವೃತ್ತಿಗಳಿಗೆ ಬೇರೆ ಬೇರೆ ಹೆಸರನ್ನು ಇಡುತ್ತಾರೆ . ಇದರ ಹೆಸರು ಗಟ್ಸಿ ಗಿಬ್ಬನ್ ಅಂತೆ . ಇದೂನೂ ಲೈವ್ ಸೀಡೀನೇ . ಕನ್ನಡವು out-of-the-box ಬರುತ್ತದೆ ಅಂತಾನೂ ಓದಿದೆ . ( out-of-the-box ಅಂದ್ರೆ ಏನೋ ? ಹುಡುಕಬೇಕು !) ನೋಡೋಣ ಅಂತ ಪ್ರಯತ್ನಿಸಿದೆ . ನಾಳೆ ನನ್ನ ಇನ್ಸ್ಟಾಲ್ಲೇಶನ್ ಅನುಭವ ಬರೆವೆ . ಆಮೇಲೆ ಅದರಲ್ಲಿ ಇಂಟರ್ನೆಟ್ ಬರಲು ನಾನು ಮಾಡಿದ್ದೇನು ? ಅದನ್ನು ಬರೆಯುವೆ .. ಆಮೇಲೆ ... ಅಲ್ಲಿ ಕನ್ನಡ ಕಾಣ್ತಿರಲಿಲ್ಲ ....ಅದಕ್ಕೆ ನಾನು ಮಾಡಿದ್ದೇನು ? ಬರೆಯುವೆ . ನೆಟ್ಟಿನಲ್ಲಿ ಈಗಾಗಲೇ ಇದ್ದ ಮಾಹಿತಿ ಎಷ್ಟು ನೆರವಾಯಿತು ಅನ್ನೋದನ್ನೂ ಬರೆಯುವೆ. ಸ್ವಲ್ಪ ವ್ಯತ್ಯಾಸಗಳೂ ಇದ್ದವೆನ್ನಿ . ... ದಾರಿ ನೋಡಿ .. (’ನಿರೀಕ್ಷಿಸಿ, ಪ್ರತಿಷ್ಠಾಪನೆ’ ಇತ್ಯಾದಿ ಬರೆದಿಲ್ಲ .. ಗಮನಿಸಿದಿರಾ?)

Rating
No votes yet