ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾರು ಹಿತವರು?

ಯಾರು ಹಿತವರು
ನಮಗೆ ಈ ಮೂವರೊಳಗೆ
ಜೆ ಡಿ ಎಸ್ಸಾ, ಬಾ ಜ ಪಾ,
ಇಲ್ಲಾ ಕಾಂಗ್ರೆಸ್ಸಾ

ಒಬ್ಬರು ಸಂಸಾರಕ್ಕಾಗಿ
ಇನ್ನೊಬ್ಬರು ಧರ್ಮಕ್ಕಾಗಿ
ಮತ್ತೊಬ್ಬರು ಅಲ್ಪರಿಗಾಗಿ
ಯಾರಿಹರು ನಮಗಾಗಿ

ಇವರ ಸಿದ್ಧಾಂತ
ರಗಡ ರಾದ್ದಾಂತ
ಎಂದು ಆದೇವು ನಾವು
ಮುಕ್ತ ಮುಕ್ತ ಮುಕ್ತಾ

ಇವರ ನಂಬಿ ಕೆಡದವರಿಲ್ಲ
ಎಮಗೆ ಬೇರೆ ವಿಧಿ ಇಲ್ಲ
ಏನು ಮಾಡಲಿ ಎನ್ನ
ಶ್ರೀಚನ್ನಮಲ್ಲಿಕಾರ್ಜುನ

ನಗುತಿಹುದು ಆ ನಕ್ಷತ್ರ

ಹಿತ್ತಲ ಬಾನಿನಲ್ಲಿ ನಗುವ ಚಂದ್ರ,
ನಕ್ಷತ್ರ ಒಂದು ನನ್ನ ನೋಡಿ ನಗುವುದು,
ಆ ನೋಟ ನನ್ನ ನಲ್ಲನ ನೋಟದಂತಿಹುದು,
ನಾ ನೋಡಿದಾಗಲೆಲ್ಲ ಕಣ್ಣ ಮಿಟಿಕಿಸುವುದು,
ಆ ನಕ್ಷತ್ರ ನನ್ನ ನೋಡಿ ಮುಸು ಮುಸು ನಗುವುದು

ಮರೆಯಲಾರದ ಸಣ್ಣಕಥೆಗಳು -೨

ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದೆ ಅಶ್ವತ್ಥರ ನಾಸೀಂ ಬೇಗಂ ಅನ್ನುವ ಒಂದು ಸಣ್ಣಕತೆಯ ಬಗ್ಗೆ ಬರೆದಿದ್ದೆ. ಇವತ್ತೂ ಅವತ್ತಿನ ತರಹವೇ ಇನ್ನೊಂದು ಸರಳವಾದ ಕಥೆಯಮೇಲೆ ಬರೆಯುತ್ತೇನೆ.

"ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ
(ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ, ಪದ್ಯ ೧೭.)

ನೀ ಯಾರಂತ?

ಹನಿ ಹನಿ ಮಳೆಯಲಿ
ತೋಯುತ ನಡೆಯಲಿ
ಕೊಚ್ಚೆ ಕೊಸರಿನಲಿ
ಹೆಜ್ಜೆ ಬಿರುಸಿನಲಿ

ಡವ ಡವ ಬಡಿದಿದೆ
ಎದೆ ಮಿಡಿತ
ಸರ ಸರ ನಡೆದಿದೆ
ಕಾಲ್ನಡೆತ

ಅಲ್ಲಿಂದ್ದಿತ್ತ ಇಲ್ಲಿಂದ್ದತ್ತ
ಜಿಗಿಯುತ ಹಾರುತ
ಹೊರಟಿರುವೆ ನೀ
ಯಾರ ಮನೆಯತ್ತ

ಎನ್ನ ಮನಸಿನಲಿ
ಎದ್ದ ಬಿರುಗಾಳಿ
ಹೇಗೆ ಬನ್ನಿಸಲಿ
ಹೇಳು ನವಿಲೇ

ಭಾವನೆ

ಅವಳ ಕಣ್ಣಲ್ಲಿ ಕಣ್ಣಿಟ್ಟು
ನೋಡುತಿರೆ
ಹರಿಯುತಿವೆ
ಭಾವನೆಗಳ ಮಹಾಪೂರ
ಬಿದಿಗೆ ಚಂದ್ರನ ನೋಡಿ
ಹುಟ್ಟಿದಂತೆ
ಕಡಲಲಿ
ಉಬ್ಬರ

ಉಕ್ಕಿ ಬರುತಿಹ
ಭಾವನೆಗಳ
ಕಟ್ಟಿ ಹಾಕುವ ಆತುರ
ನಿಲ್ಲುವುದೆಂತು?
ಕಟ್ಟೆಯೊಡೆದು ನುಗ್ಗುತಿವೆ
ಅವಳೆಡೆಗೆ
ನದಿಯು ಹುಡುಕುವಂತೆ
ಸಾಗರ

ನೆನಪು

ಕೂತಿಹೆನು ನಾನಿಲ್ಲಿ,
ಬೆಳಕು ಬರಲಂಜುವ ಕತ್ತಲಲಿ
ನೆನಪುಗಳು ಲಗ್ಗೆಯಿಡುತಿವೆ
ಎದೆಯಾಳದಲಿ
ಕೂಗುತಿದೆ
ಕತ್ತಲ ಭಯವಿಲ್ಲ
ನನಗೆ

ಮೌನವ ಹೆದೆಯೇರಿಸಿಯೂ
ನಿರಾಯುಧ ನಾನಿಲ್ಲಿ
ಒಂಟಿ ಯೋಧನ ಮೇಲೆ
ಬೇಡವೊ ಸಮರ!
ಕೇಳುವುವರಾರು?
ನಡೆಯುತಲಿದೆ
ನೆನಪುಗಳ ಪ್ರಹಾರ