ನೆನಪು By girish.shetty on Tue, 11/27/2007 - 15:47 ಬರಹ ಕೂತಿಹೆನು ನಾನಿಲ್ಲಿ, ಬೆಳಕು ಬರಲಂಜುವ ಕತ್ತಲಲಿ ನೆನಪುಗಳು ಲಗ್ಗೆಯಿಡುತಿವೆ ಎದೆಯಾಳದಲಿ ಕೂಗುತಿದೆ ಕತ್ತಲ ಭಯವಿಲ್ಲ ನನಗೆ ಮೌನವ ಹೆದೆಯೇರಿಸಿಯೂ ನಿರಾಯುಧ ನಾನಿಲ್ಲಿ ಒಂಟಿ ಯೋಧನ ಮೇಲೆ ಬೇಡವೊ ಸಮರ! ಕೇಳುವುವರಾರು? ನಡೆಯುತಲಿದೆ ನೆನಪುಗಳ ಪ್ರಹಾರ