ಸುಭಾಷಿತ
ಕೋಣನೆರಡುಂ ಹೋರೆ ಗಿಡವಿಂಗೆ ಮಿತ್ತು (ಎರಡು ಕೋಣಗಳ ಗುದ್ದಾಟದಲ್ಲಿ ಸಾಯುವುದು ಗಿಡಮರಗಳೇ)
ಕೋಣನೆರಡುಂ ಹೋರೆ ಗಿಡವಿಂಗೆ ಮಿತ್ತು (ಎರಡು ಕೋಣಗಳ ಗುದ್ದಾಟದಲ್ಲಿ ಸಾಯುವುದು ಗಿಡಮರಗಳೇ)
ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
ಕನ್ನಿಂಗ್ಹ್ಯಾಂ ರೋಡ್ ಜಂಕ್ಷನ್ನ ಎದುರಿನಲ್ಲಿ 'ನಿಟಾನ್ 'ಎಂಬ ಬಂಗ್ಲೆಯಿದೆ. ಅದರಲ್ಲೇನೂ ವಿಶೇಷ ಕಾಣದಿದ್ದರೂ ಅದರ ಹೆಸರೇ ವಿಶಿಷ್ಟವಾಗಿದೆ. 'ನಿಟಾನ್'ಎಂಬ ಹೊಸ ಮೂಲಧಾತು (Element) ಅನ್ನು ಕಂಡುಹಿಡಿದ ವಿಲಿಯಂ ರಾಮ್ಸೆಗೆ ೧೯೦೪ ರಲ್ಲಿ ನೊಬೆಲ್ ಪುರಸ್ಕಾರ ಸಿಕ್ಕಿತ್ತು.
ನಾವಿಂದು ಬದುಕುತ್ತಿರುವ ಕಾಲಘಟ್ಟದಲ್ಲಿ ಮಾಹಿತಿಯ ಮಹಾಪೂರವೇ ಹರಿದಿದೆ. ಹೌದು, ಇದು ಮಾಹಿತಿ ಯುಗ. ಇದೀಗ ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಷ್ಟೇ ಅಲ್ಲ; ಈ ಯುಗದ ಪ್ರವರ್ತಕ ಭಾಷೆಯಾಗಿರುವುದೂ ನಮ್ಮೆಲ್ಲರ ಅರಿವಿಗೆ ಬಂದಿದೆ.
“ನಿಮಗೆ ವಿಚಿತ್ರ ಅನ್ನಿಸಬಹುದು. ನನ್ನ ರೂಮಿನಿಂದ ಹೊರಟು, ಪರಿಚಿತವಾದ ರೂಮುಗಳನ್ನೆಲ್ಲ ಹಾದು ಹೋಗುತ್ತಿರುವಾಗ ‘ಏನೂ ಆಗಿಲ್ಲವೋ ಏನೋ’ ಅನ್ನುವ ಭಾವನೆ ಮತ್ತೆ ಹುಟ್ಟಿತು. ಔಷಧಿಗಳ ವಾಸನೆ ಮೂಗು ತುಂಬಿತು. ‘ಇಲ್ಲ, ಕೊಲೆ ಆಗಿದೆ’ ಅಂದುಕೊಂಡೆ. ಪ್ಯಾಸೇಜು ದಾಟಿ ಮಕ್ಕಳ ರೂಮಿನ ಮುಂದೆ ಹೋಗುವಾಗ ಪುಟ್ಟ ಲೀಸಾ ಕಾಣಿಸಿದಳು. ಅವಳಿಗೆ ಭಯ ಆಗಿತ್ತು. ನನ್ನ ಐದೂ ಜನ ಮಕ್ಕಳು ಅಲ್ಲೇ ಇದ್ದಾರೆ, ನನ್ನೇ ನೋಡುತ್ತಿದ್ದಾರೆ ಅನ್ನಿಸಿತು. ಬೆಡ್ ರೂಮಿನ ಹತ್ತಿರ ಬಂದೆ. ನರ್ಸು ಬಾಗಿಲು ತೆರೆದು, ನಾನು ಒಳಗೆ ಕಾಲಿಟ್ಟಕೂಡಲೆ ಹೊರಟು ಹೋದಳು. ಮೊದಲು ನನ್ನ ಕಣ್ಣಿಗೆ ಬಿದ್ದದ್ದು ಕುರ್ಚಿಯ ಮೇಲೆ ಹಾಕಿದ್ದ ಅವಳ ಲೈಟ್ ಕಲರಿನ ಡ್ರೆಸ್ಸು. ರಕ್ತಮೆತ್ತಿಕೊಂಡಿತ್ತು. ಯಾವಾಗಲೂ ಗೋಡೆಯ ಕಡೆ ಮಲಗುತ್ತಿದ್ದವಳು ಈಗ ನಮ್ಮ ಡಬಲ್ ಬೆಡ್ಡಿನ ನನ್ನ ಬದಿಯಲ್ಲಿ ಮೊಳಕಾಲು ಮೇಲೆತ್ತಿ ಮಡಿಸಿಕೊಂಡು ಮಲಗಿದ್ದಳು. ನಾಲ್ಕೈದು ದಿಂಬುಗಳನ್ನಿಟ್ಟು ಅದಕ್ಕೆ ಅವಳ ಬೆನ್ನು ಒರಗಿಸಿದ್ದರು. ಡ್ರೆಸಿಂಗ್ ಜಾಕೆಟ್ಟು ಸಡಿಲ ಮಾಡಿದ್ದರು. ಗಾಯಕ್ಕೆ ಏನೋ ಹಾಕಿ ಸುತ್ತಿದ್ದರು. ಅಯೋಡೀನ್ ವಾಸನೆ ರೂಮಿನ ತುಂಬ ಇತ್ತು. ಅವಳ ಕೆನ್ನೆ, ಮೂಗಿನ ಒಂದು ಭಾಗ, ಮತ್ತೆ ಒಂದು ಕಣ್ಣು ಊದಿಕೊಂಡಿತ್ತು. ಅವಳು ನನ್ನನ್ನು ಹಿಂದಕ್ಕೆ ಎಳೆದಾಗ ನನ್ನ ಮೊಳಕೈ ತಗುಲಿ ಆದ ಪೆಟ್ಟು ಅದು. ಅವಳ ಮುಖ ಚೆನ್ನಾಗಿರಲಿಲ್ಲ. ಅಸಹ್ಯ ಆಗುವ ಹಾಗೆ ಇತ್ತು. ಹೊಸ್ತಿಲ ಮೇಲೆ ನಿಂತುಕೊಂಡೆ.
“ಅವಳ ಅಕ್ಕ ‘ಹತ್ತಿರ ಹೋಗಿ’ ಅಂದಳು. ‘ಕ್ಷಮಿಸಿ ಅಂತ ಕೇಳುತ್ತಾಳೋ ಏನೋ. ಕ್ಷಮಿಸಲಾ? ಸಾಯುತ್ತಿದ್ದಾಳೆ, ಕ್ಷಮಿಸಿಬಿಡುತ್ತೇನೆ’ ಅಂದುಕೊಂಡೆ. ಉದಾರವಾಗಿರಬೇಕು ಅಂತ ತೀರ್ಮಾನ ಮಾಡಿದ್ದೆ. ಹತ್ತಿರಕ್ಕೆ ಹೋದೆ. ಕಷ್ಟಪಟ್ಟು ಕಣ್ಣು ತೆರೆದಳು. ಒಂದು ಕಣ್ಣು ಊದಿತ್ತು. ಕಷ್ಟಪಡುತ್ತಾ, ತಡವರಿಸುತ್ತಾ ಮಾತಾಡಿದಳು. ‘ನಿಮ್ಮ ಹಟ ಸಾಧಿಸಿಬಿಟ್ಟಿರಿ. ಕೊಂದುಬಿಟ್ಟಿರಿ ನನ್ನ.’ ಸಾವಿಗೆ ಅಷ್ಟು ಹತ್ತಿರ ಇದ್ದರೂ, ನೋವನ್ನೂ ಮೀರಿ ನನಗೆ ಚಿರಪರಿಚಿತವಾದ ಅವಳ ಮೃಗೀಯ ದ್ವೇಷ ಕಾಣಿಸಿಕೊಂಡಿತು. ‘ಮಕ್ಕಳು...ನಿಮ್ಮ ಹತ್ತಿರ ಬಿಡಲ್ಲ...’ ಅಕ್ಕನತ್ತ ನೋಡಿದಳು, ‘ಅವಳು...ಕರಕೊಂಡು ಹೋಗುತ್ತಾಳೆ’ ಅಂದಳು. ನನಗೆ ಬಹಳ ಮುಖ್ಯ ಅನ್ನಿಸಿದ್ದ ಅವಳ ಮೋಸ, ಅಪರಾಧ-ಅವು ಮಾತಾಡುವುದಕ್ಕೇ ಯೋಗ್ಯವಲ್ಲ ಅನ್ನಿಸಿತ್ತು ಅವಳಿಗೆ.
‘ನನಗೆ ಇಂಥಾ ಗತಿ ಬಂತಲ್ಲಾ ಅಂತ ಖುಷಿ ಪಡಿ’ ಅನ್ನುತ್ತಾ ಬಾಗಿಲ ಕಡೆಗೆ ನೋಡಿದಳು. ಬಿಕ್ಕಳಿಸಿದಳು. ಬಾಗಿಲ್ಲಿ ಅವಳ ಅಕ್ಕ ಮಕ್ಕಳನ್ನು ನಿಲ್ಲಿಸಿಕೊಂಡಿದ್ದಳು. ‘ಎಂಥಾ ಕೆಲಸ ಮಾಡಿದ್ದೀರಿ ನೋಡಿ’ ಅಂದಳು.
“ಮೊದಲು ನನ್ನ ಬೂಟು ಕಳಚಿದೆ. ಬರೀ ಕಾಲುಚೀಲ ಉಳಿಸಿಕೊಂಡೆ. ಸೋಫಾ ಹತ್ತಿರ ಹೋದೆ. ಗೋಡೆಯ ಮೇಲೆ ಗನ್ನುಗಳು, ಚಾಕು ಚೂರಿಗಳು ಇದ್ದವು. ವಕ್ರವಾದ ಡಮಾಸ್ಕಸ್ ಕಠಾರಿ ತೆಗೆದುಕೊಂಡೆ. ಯಾವತ್ತೂ ನಾವು ಅದನ್ನು ಬಳಸಿರಲಿಲ್ಲ. ತುಂಬ ಚೂಪಾಗಿತ್ತು. ಒರೆಯಿಂದ ಹೊರಕ್ಕೆ ಎಳೆದೆ. ಚರ್ಮದ ಒರೆ ಸೋಫಾದ ಹಿಂದೆ ಬಿತ್ತು.
“ಇನ್ನೊಂದು ಸ್ಟೇಷನ್ನು ಆದಮೇಲೆ ಕೊನೆಯ ಸ್ಟೇಷನ್ನು ಬರುತ್ತದೆ ಅನ್ನುವಾಗ ಟಿಕೆಟ್ ಕಲೆಕ್ಟರು ಬಂದ. ನನ್ನ ವಸ್ತುಗಳನ್ನು ಎತ್ತಿಕೊಂಡು ಬಾಗಿಲ ಹತ್ತಿರ ಹೋಗಿ ನಿಂತುಕೊಂಡೆ. ಇನ್ನೇನು ಕ್ಲೈಮ್ಯಾಕ್ಸು ಅನ್ನಿಸಿ ಕಳವಳ ಜಾಸ್ತಿಯಾಯಿತು. ಚಳಿ ಹೆಚ್ಚಾಗಿತ್ತು. ಹಲ್ಲು ಕಟಕಟ ಸದ್ದುಮಾಡುತ್ತಿದ್ದವು. ರೈಲಿಳಿದೆ.
ಅಧ್ಯಾಯ ಇಪ್ಪತ್ತೈದು
“ಎರಡು ದಿನಗಳ ನಂತರ ಮೀಟಿಂಗಿಗೆ ಹೊರಟೆ. ಹೋಗಿಬರುತ್ತೇನೆಂದು ಹೆಂಡತಿಗೆ ಹೇಳಿದಾಗ ಮನಸ್ಸು ಲಘವಾಗಿತ್ತು, ಸಮಾಧಾನವಾಗಿತ್ತು.