ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತಮೂರು

“ನನಗೆ ಒಣ ಜಂಬ. ಹಾಗೆ ಜಂಬ ಇಲ್ಲದಿದ್ದರೆ ನಮ್ಮ ಸಮಾಜದಲ್ಲಿ ಮಾಮೂಲಾಗಿ ಬದುಕುವುದಕ್ಕೆ ಕಾರಣ ಏನೇನೂ ಇಲ್ಲ. ಭಾನುವಾರ ಬಂತು. ಡಿನ್ನರಿಗೆ, ಸಂಗೀತ ಸಂಜೆಗೆ ಎಲ್ಲ ಏರ್ಪಾಡು ನಾನೇ ಮಾಡಿದೆ. ಗೆಸ್ಟುಗಳನ್ನು ನಾನೇ ಸ್ವಾಗತಿಸಿದೆ.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತೆರಡು

“ಅವತ್ತೆಲ್ಲ ಅವಳ ಜೊತೆ ಮಾತಾಡಲಿಲ್ಲ. ಮಾತಾಡಬೇಕು ಅನ್ನಿಸಲಿಲ್ಲ. ಮುಖ ಕಂಡರೆ ಸಾಕು, ಮನಸ್ಸಿನಲ್ಲಿ ದ್ವೇಷ ಭುಗಿಲ್ ಅಂತ ಎದ್ದು ಏನು ಮಾಡಿಬಿಡುತ್ತೋ ಏನೋ ಅಂತ ಭಯವಾಗುತ್ತಿತ್ತು. ರಾತ್ರಿ ಊಟಕ್ಕೆ ಕೂತಿದ್ದಾಗ ಮಕ್ಕಳ ಎದುರಿಗೇನೆ ‘ನೀವು ಯಾವತ್ತು ಹೋಗುವುದು ಊರಿಗೆ?’ ಅಂತ ಕೇಳಿದಳು. ಝೆಮಸ್ಟ್‌ವೊದಲ್ಲಿ ಜಿಲ್ಲಾ ಸಭೆಗೆ ಹೋಗಬೇಕಾಗಿತ್ತು.

ಕ್ರೂಟ್ಸರ್ ಸೊನಾಟಾ: ಅಧ್ಯಾಯ ಇಪ್ಪತ್ತೊಂದು

“ನನ್ನ ಅವಳ ಸಂಬಂಧ ಹೀಗಿತ್ತು--ಅವನು ನಮ್ಮ ಮನೆಗೆ ಬಂದಾಗ. ಅವನು-ಅವನ ಹೆಸರು ತ್ರುಖಾಶೆವ್ಸ್‌ಕಿ-ಮಾಸ್ಕೊಗೆ ಬಂದವನೇ ನಮ್ಮ ಮನೆಗೆ ಬಂದ. ಬೆಳಗ್ಗೆ. ಗೌರವದಿಂದಲೇ ಬನ್ನಿ ಅಂದೆ. ಒಂದು ಕಾಲದಲ್ಲಿ ಬಹಳ ಪರಿಚಯ ಇದ್ದವನು. ಆ ಹಳೆಯ ಸ್ನೇಹ ಮಾತಿನಲ್ಲೂ ತೋರಿಸಲು ಬಂದ. ನನಗೆ ಇಷ್ಟವಾಗಲಿಲ್ಲ. ಹೊಸಬರನ್ನು ಮಾತಾಡಿಸುವ ಹಾಗೆ ಮಾತಿನಲ್ಲಿ ಸ್ವಲ್ಪ ದೂರ ಇಟ್ಟುಕೊಂಡೇ ಆಡಿದೆ.

ಮದುವೆ

ಮಳೆಗೆ ಹಿಡಿದ ಕೊಡೆಯ ನೆರಳು
ಶಲ್ಯವಿಳಿದ ನರಿಯ ಹೆಗಲು
ಗೆಜ್ಜೆತೊಟ್ಟ ಕಾಗೆ ಕಾಲು
ಹೊಳೆವ ಹನಿಯ ತೋರಣ
ದುಗುಡ ಕೇಕೆ ದಿಬ್ಬಣ

ಬಿನ್ನಹ

ಬೆಳದಿಂಗಳ ಹಂಬಲದ ನಾನು,
ಕತ್ತಲು ಕವಿದ ಮನದಂಗಳದ ಮೂಲೆಯಲ್ಲಿ ಹಣತೆ ಹಚ್ಚಿಟ್ಟರೆ
ಬಿರುಗಾಳಿ ಎಬ್ಬಿಸಿ ನಂದಿಸುತ್ತೀ ಯಾಕೆ ಬದುಕೇ?

 

ಎದೆಯ ಬಟ್ಟಲಲ್ಲಿ ಕಂಬನಿಗಳ ತುಂಬಿ ಬಾನ ಚಂದಿರನ
ಹಿಡಿದಿಟ್ಟು ಕಣ್ಣು ತಂಪಾಗಿಸುತ್ತಿದ್ದೇನೆ,
ಬಟ್ಟಲನ್ನ ಕಾಲಲ್ಲಿ ಒದ್ದುಕೊಂಡು ಹೋಗುತ್ತೀ ಯಾಕೆ ಬದುಕೇ?

 

ಕಾಟು ಎಂದರೇನು?

ಮಂಗಳೂರಲ್ಲಿ ಕಾಟು ಎನ್ನುವ ಪದ ಬಳಕೆಯಲ್ಲಿದೆ.
ಗಿಡಗಳಿಗೆ, ಪ್ರಾಣಿಗಳಿಗೆ ಅನ್ವಯಿಸಿ ಕಾಟು ಎಂದರೆ ಕಸಿಯಲ್ಲದ ತಳಿ ಎಂದರ್ಥ.
ಉಪ್ಪಿನಕಾಯಿಗೆ ಉಪಯೋಗಿಸುವ ಮಾವು ಕಾಟು ಮಾವಿನ ಮರದ್ದೇ ಆಗಬೇಕು.
ನಾಯಿಗಳು, ದನಗಳ ಊರ ತಳಿಗಳು ಕಾಟು ತಳಿ.
ಸಾಮಾನ್ಯವಾಗಿ ಈ ಶಬ್ದ ಬಯ್ಗಳ ಪದವಾಗಿ ಬಳಕೆಯಲ್ಲಿದೆ.
ಶಬ್ದವನ್ನು ನಿಕೃಷ್ಟ ಭಾವನೆಯಿಂದ ಬಳಸುವುದು ರೂಢಿ.

ಗೌಡರು ಮತ್ತು ಕರಾವಳಿ

ದೇವೇಗೌಡರು ಮತ್ತು ಕುಮಾರಸ್ವಾಮಿಗಳಿಗೆ ಕರಾವಳಿ ಅದೃಷ್ಟ ತಂದಿದೆಯೇ ಅಲ್ಲ ದುರದೃಷ್ಟವನ್ನೇ? ಪಿ.ಮಹಮ್ಮದ್ "ಪ್ರಜಾವಾಣಿ"ಯಲ್ಲಿ ಕಾರ್ಟೂನ್ ಮೂಲಕ ತೋರಿಸಿದ್ದಾರೆ. ನೋಡಿಬಿಡಿ:
http://prajavani.net/UserFiles/Image/Jun72007/CartoonLarge.jpg

ಮಾಧವ ನೆಲೆ...

ಮಾಧವ ನೆಲೆ. ಇದು ಮಾಧವನ ನೆಲೆಯೇ. ಶಿವಮೊಗ್ಗದ ಸೋಮಯ್ಯ ಬಂಗ್ಲೆಯಲ್ಲಿರುವ ಈ ‘ನೆಲೆ’ ಚಿಂದಿ ಆಯುವ ಮಕ್ಕಳ ಆಶ್ರಯ ತಾಣ. ಈಗ ಇದಕ್ಕೆ ಒಂದು ವರ್ಷದ ಸಂಭ್ರಮ.

ಸವಾಲು

ಹೇಳೊ ಹುಡುಗಾ-
ಒಣಗನಸಿನ ಬಣವೆಯಲ್ಲಿ
ಹುಡುಕುವೆಯಾ ಕಳೆದ ಹಸಿರು?

ಇಲ್ಲಿ ಉತ್ತರಕ್ಕೆ ತಿರುಗಿ
ಕಾದ ಸೂಜಿ
ಗಲ್ಲು ಮನಸು!