ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಾರಿಗಾಗಿ ಬರೆಯಬೇಕು?

ನಮಗಾಗಿ ನಾವು ಬರೆದುಕೊಳ್ಳಬೇಕಲ್ವೆ? ಎಷ್ಟೋ ಸಾರಿ ನಾವು ಆಲೋಚಿಸಿದ ವಿಷಯಗಳು, ನಾವು ಕಂಡುಕೊಂಡ ವಿಷಯಗಳು, ನಮ್ಮ ತಲೆಯಲ್ಲಿ ಸುಳಿದ ಜ್ಞಾಪಕವಿಟ್ಟುಕೊಳ್ಳಬೇಕಾದಂತ ವಿಷಯಗಳು - ಇವೆಲ್ಲವುಗಳನ್ನು ಬರವಣಿಗೆ ರೂಪದಲ್ಲಿ ಸಂರಕ್ಷಿಸಿಡಬೇಕಾಗಿ ಬರುತ್ತದಲ್ಲವೆ?

ನಾಲ್ಕನೆಯ ದೀಪಾವಳಿ

ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಬಗ್ಗೆ ನೀವೆಲ್ಲ ಕೇಳಿರುವುದು ಸಾಮಾನ್ಯ. ಇಲ್ಲವೇ ನೀರು ತುಂಬುವ ಹಬ್ಬದ ದಿನ ಹಂಡೆ ಕದೆಯಲು ಹೋಗಿ 'ಮಾವನ' ಮನೆಯಲ್ಲಿ ದೀಪಾವಳಿ ಕಳೆಯುವವರ ಬಗ್ಗೆಯೂ ಪತ್ರಿಕೆಯಲ್ಲಿ ಓದಿರಬಹುದು. ಆದರೆ ನಾಲ್ಕನೆಯ ದೀಪಾವಳಿ ! ಹೌದು ಸ್ವಾಮಿ ನಾನು ಬರೆಯುತ್ತಿರುವುದು ಅಳಿಯನಾದ ಮೇಲಿನ ನನ್ನ ನಾಲ್ಕನೆಯ ದೀಪಾವಳಿಯ ಬಗ್ಗೆ.

ಪತ್ರಿಕೆಯೊಂದರಲ್ಲಿ ಪ್ರಸಿದ್ಧ ದಂಪತಿಗಳ ಮೊದಲ ದೀಪಾವಳಿಯ ಅನುಭವಗಳನ್ನು ಓದುತ್ತಾ, ನಮ್ಮ ಮೊದಲನೆಯ ದೀಪಾವಳಿಯ ಮೆಲುಕು ಹಾಕುತ್ತಿರುವಾಗ, ಮುಕ್ತ ನೋಡುವಾಗ, ಕ್ರೈಮ್ ಡೈರಿ ಜಾಹೀರಾತು ಬಂದಹಾಗೆ, ನನ್ನ ಉತ್ತಮಾರ್ಧ 'ರೀ' ಎಂದಳು. ಬಂದಿತಲ್ಲಪ್ಪಾ ಹಬ್ಬದ ಡಿಮ್ಯಾಂಡು ಎಂದು ವಿಚಲಿತನಾಗಿ ನಾನು ಅನಾಸಕ್ತಿಯಿಂದ ಹೂಗುಟ್ಟಿದೆ. 'ರೀ, ಈ ದೀಪಾವಳಿಗೆ ಮಧು ಮಾವನ ಮನೆಗೆ ಕರೆದಿದ್ದಾರೆ' ಎಂದಳು. ಹಾ! ಎಂದು ಕಿವಿ ನಿಮಿರಿಸಿದೆ.ಮಧು ನನ್ನವಳ ಅಣ್ಣ. ಈ ವರ್ಷವೇ ಮಹಿಮಾಳೊಂದಿಗೆ ಅವನ ಮದುವೆಯಾಗಿತ್ತು. ಮದುವೆಯಾದ ತಕ್ಷಣವೇ ಅವರಿಬ್ಬರೂ ಅಮೇರಿಕಾಕ್ಕೆ ಹಾರಿದ್ದರು.

'ಹೌದೂರಿ, ನಾವೂ ಅಲ್ಲಿಗೆ ಹೋಗಬೇಕಂತೆ' ಎಂದಳು. ಹೊಡೆದೆಯಲ್ಲೋ ಛಾನ್ಸು ಎಂದು ಮನಸ್ಸಿನಲ್ಲೇ ಅಂದುಕೊಂಡು, ಅದನ್ನು ಹೊರಗೆ ತೋರಿಸಿಕೊಳ್ಳದೆ, 'ನಿಮ್ಮ ಅಪ್ಪ, ಅಮ್ಮ ಹೋಗುವುದೇನೊ ಸರಿ, ನಾವ್ಯಾಕೆ ಹೋಗಬೇಕಂತೆ?' ಎಂದೆ. 'ಇಲ್ಲಾರೀ ಮಧು ಮಹಿಮಾ ಬೇರೆ ಇಲ್ಲಿ ಇಲ್ಲ. ಅದಕ್ಕೆ ನಾವು ಖಂಡಿತ ಬರಬೇಕು ಎನ್ನುತ್ತಿದ್ದಾರೆ. ನಾಳೆ ಅವರು ನಮ್ಮನ್ನು ಕರೆಯುವುದಕ್ಕೆ ಇಲ್ಲಿಗೇ ಬರ್ತಿದ್ದಾರೆ' ಎಂದಳು. ಪ್ರಾಕ್ಸಿ ಅಳಿಯನಾಗಲು ಮನದಲ್ಲೇ ತಯಾರಿ ನಡೆಸಿದೆ.

ಹತ್ತಿ ಭಾರತದ ಬೆಳೆ; ಯೂರೋಪಿಯನ್ನರು ಏನಂದುಕೊಂಡಿದ್ದರು ಗೊತ್ತೆ?

[:http://www.sepiamutiny.com/sepia/archives/004138.html|ಸೆಪಿಯಾ ಮ್ಯೂಟಿನಿಯಲ್ಲಿ] ಹತ್ತಿ ಬೆಳೆಯ ಬಗ್ಗೆ ಒಂದು ಬಹಳ ಚೆಂದವಾದ ಬ್ಲಾಗ್ ರೌಂಡ್ ಅಪ್ ಸೇರಿಸಿದ್ದಾರೆ. ಓದಿ.

ತಮಾಷೆಯ ಸಂಗತಿಯೆಂದರೆ ಯೂರೋಪಿಯನ್ನರಿಗೆ ಹತ್ತಿ ಗಿಡಗಳ ನಿಜವಾದ ಪರಿಚಯ ಆಗುವ ತನಕ "ಹತ್ತಿ ಗಿಡದಲ್ಲಿ ಚಿಕ್ಕ ಕುರಿಗಳು ಬಿಡುತ್ವೆ" ಅಂದುಕೊಂಡಿದ್ರಂತೆ. ಚಿತ್ರ ನೋಡಿ ;)

cotton-europeans

೫೮ ನೆಯ 'ಗಣರಾಜ್ಯದಿನೋತ್ಸವ'ದ ಶುಭದಿನದ ಹಾರ್ದಿಕ ಶುಭಾಷಯಗಳು !

ನಮ್ಮ ದೇಶಕ್ಕೆ ಸ್ವತಂತ್ರ್ಯ ಬರುವ ಮೊದಲೇ ಮಲ್ಲಾಡಿಹಳ್ಳಿ ಶ್ರೀ.ರಾಘವೇಂದ್ರಸ್ವಾಮೀಜಿಯವರು ತಮ್ಮ 'ವ್ಯಾಯಾಮ ಶಿಬಿರ'ಗಳಲ್ಲಿ ಯುವಕರಿಗೆ ಹೇಳಿಕೊಡುತ್ತಿದ್ದ, 'ಕಾಲ್ದಳದ ವೀರ ಗೀತೆ.' ಇಂದಿನ ಗಣರಾಜ್ಯದಿನೊತ್ಸವಕ್ಕೆ, ಶೋಭೆತರುವ ಈ ಮಂಗಳಗೀತೆಯನ್ನು ರಾಘವೇಂದ್ರರು ಸ್ವಾತಂತ್ರ್ಯ ಪೂರ್ವದಲ್ಲೇ ಬರೆದು ತಮ್ಮ ಶಿಬಿರದ ಯುವಕರಿಗೆ ಕೆಳಗೆ ಬರೆದಿರುವ ದಿವ್ಯ ಸಂದೇಶವನ್ನು ನೀಡಿದ್ದರು.

"ಟಾಯ್ಲೆಟ್ಟಿನಲ್ಲೂ ಟೆಸ್ಟಿಂಗ್ ಮಾಡಿ"

ಜಪಾನೀಸ್ ಟಾಯ್ಲೆಟ್ಟುಗಳ ಬಗ್ಗೆ [:http://sampada.net/article/612|ಈ ಹಿಂದೆ ಬರೆದಿದ್ದೆ], ಗೂಗಲ್ work cultureಹೇಗಿದೆ ಎಂದು [:http://www.washingtonpost.com/wp-dyn/content/article/2006/10/20/AR2006102001461.html|ವಾಷಿಂಗ್ಟನ್ ಪೋಸ್ಟ್ ನಲ್ಲಿ ಈ ಲೇಖನ ಮೂಡಿದ] ಕೆಲವು ತಿಂಗಳಲ್ಲಿಯೇ ತನ್ನ ಕಾರ್ಯ ವೈಖರಿಯ ಒಂದು ರಹಸ್ಯ ಹಂಚಿಕೊಳ್ಳಲು ಗೂಗಲ್ [:http://googletesting.blogspot.com/2007/01/introducing-testing-on-toilet.html|"Testing on the Toilet"] ಎನ್ನುವ ಹೊಸ ಬ್ಲಾಗು ತೆರೆದಿದೆ.

ಭಾರತದ ಕ್ರಿಕೆಟ್ ತಂಡದಲ್ಲಿ ಪ್ರಯೋಗಗಳು

ಭಾರತದ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿರುವುದರ ಬಗ್ಗೆ ಅಲ್ಲಿಲ್ಲಿ ಚರ್ಚೆ ನಡೆಯುತ್ತಿರುವುದನ್ನು ನೀವುಗಳು ಓದಿಯೇ ಇರುತ್ತೀರಿ.

ಒಂದೆರಡು ರೇಖಾಚಿತ್ರಗಳು

ಗೆಳೆಯರೇ, ಆಗಾಗ ಪೆನ್ಸಿಲ್ಲಿನಲ್ಲಿ ಚಿತ್ರಗಳನ್ನು ಬಿಡಿಸುವ (ಸ್ಕೆಚ್ಚಿಸುವ) ಹವ್ಯಾಸ ನನಗಿದೆ. ಚಿತ್ರಗಳನ್ನು ಬಿಡಿಸುವಾಗ, ಗಣಪತಿ ನನ್ನ ಅಚ್ಚು ಮೆಚ್ಚಿನ "ಥೀಮ್"! ಹಾಗೆ ಬಿಡಿಸಿದ ಒಂದೆರಡು ರೇಖಾಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಒಮ್ಮೆ ನೋಡಿ, ಹೇಗಿದೆ ತಿಳಿಸುತ್ತೀರಾ?

ಇ-ಲೋಕ-೭ (೨೫/೧/೨೦೦೭)

ಬಸ್‌ನಲ್ಲಿ ಮೀಟಿಂಗ್ ನಡೆಸಿ!
ಯಾವುದಾದರೂ ಸ್ಥಳ ಪರಿಶೀಲನೆ ನಡೆಸಿ,ನಂತರ ಸಭೆಗಳನ್ನು ನಡೆಸಲಿದೆಯೇ? ಸಭೆ ನಡೆಸಲು ಅನುವು ಮಾಡುವ ವ್ಯವಸ್ಥೆಯನ್ನು ಹೊಂದಿರುವ ಬಸ್‌ಗಳನ್ನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದೆ. ಇದರಲ್ಲಿ ಸಭೆ ನಡೆಸಲು ಅನುವು ಮಾಡುವ ಮೇಜು,ಸದಸ್ಯರಿಗೆ ಸುಖಾಸೀನಗಳು,ಸಭೆ ನಡೆಸಲು ಮುಖ್ಯಸ್ಥನಿಗೆ ಪ್ರತ್ಯೇಕ ಆಸನ, ಮೇಜವಾನಿಗೆ ಬೇಕಾಗುವ ಪೇಯಗಳನ್ನಿಡಲು ಫ್ರಿಜ್,ಸಭೆಯು ಚರ್ಚಿಸಲಿರುವ ಅಂಶಗಳನ್ನು ಪ್ರದರ್ಶಿಸಲು ಎಲ್‌ಸಿಡಿ ಪ್ರೊಜೆಕ್ಟರ್‍, ಟಿವಿ, ದೃಶ್ಯ-ಶ್ರಾವ್ಯ ವ್ಯವಸ್ಥೆ,ವಿದ್ಯುಜ್ಜನಕ ಇವೆಲ್ಲಾ ಸೌಲಭ್ಯಗಳನ್ನೂ ಹೊಂದಿದೆ. ಇದಕ್ಕೂ ಮೀರುವ ವ್ಯವಸ್ಥೆ ಇರುವ ವೊಲ್ವೋ ಬಸ್ ಕೂಡಾ ಲಭ್ಯವಂತೆ.

ಕ್ರಿಮಿನಲ್‌ಗಳಿಗೆ ದುಸ್ವಪ್ನವಾಗಲಿರುವ ಸೆಲ್‌ಫೋನ್
ಸದ್ಯ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುವವರಿಗೆ ಸೆಲ್‌ಫೋನ್ ವರದಾನವಾಗಿರುವುದು ತಿಳಿದ ವಿಷಯ.ಇಂದಿನ ಫೋನ್‌ಗಳು ಕ್ಯಾಮರಾ,ವಿಡಿಯೋ ವ್ಯವಸ್ಥೆಯನ್ನೂ ಹೊಂದಿ ಸರ್ವಸಜ್ಜಿತವಾಗಿರುತ್ತವೆ. ಸದ್ದಾಂಗೆ ಗಲ್ಲು ಶಿಕ್ಷೆ ಜಾರಿಯಾದ ಬಗೆ ಪ್ರಪಂಚದ ಗಮನಕ್ಕೆ ಬಂದುದು ಸೆಲ್‌ಫೋನ್ ಮೂಲಕ.ಈಗ ಅದನ್ನು ಕ್ರಿಮಿನಲ್‌ಗಳನ್ನು ಮಟ್ಟ ಹಾಕಲೂ ಬಳಸುವ ಯೋಚನೆ ನ್ಯೂಯಾರ್ಕ್ ನಗರದ ಮೇಯರ್‌ಗೆ ಬಂದಿದೆಯಂತೆ.ಕ್ರಿಮಿನಲ್‌ ಚಟುವಟಿಕೆಗಳು ನಡೆದಾಗ, ಅಲ್ಲಿದ್ದವರು ತಮ್ಮ ಸೆಲ್‌ಫೋನ್‌ ಕ್ಯಾಮರಾದಲ್ಲಿ ಅದನ್ನು ಸೆರೆ ಹಿಡಿದು, ಕೂಡಲೇ ವಿಶೇಷ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅದನ್ನು ಕಳುಹಿಸಿದರೆ, ಪೊಲೀಸರಿಗೆ ದೂರು ತಲುಪುವುದೇ ಅಲ್ಲದೆ, ನಡೆದದ್ದೇನು ಎನ್ನುವುದೂ ಗೊತ್ತಾಗುತ್ತದೆ. ನಮ್ಮಲ್ಲಿ ರೌಡಿಗಳು ಎಲ್ಲರ ಮುಂದೆ ಹಾಡುಹಗಲೇ ಕೊಲೆಪಾತಕಗಳನ್ನು ನಡೆಸಿ,ಸಾಕ್ಷಿ ಹೇಳುವವರಿಲ್ಲದೆ ತಪ್ಪಿಸಿಕೊಳ್ಳುತ್ತಾರೆ. ಸೆಲ್‌ಫೋನ್ ಮೂಲಕ ಸೆರೆಹಿಡಿದ ವಿಡಿಯೋ,ಚಿತ್ರ ಸಾಕ್ಷಿಯಾಗಿ ಸ್ವೀಕರಿಸಲು ನಮ್ಮ ನ್ಯಾಯಾಲಯಗಳು ಮನ ಮಾಡಿಯಾವೇ?

ಜಿರಳೆ,ಅಳಿಲು ಸ್ವರೂಪಿ ರೊಬೊಟ್‌ಗಳುA technician assembles the Dragon Eye, a four-pound UAV. ರಾಜ ಪರೀಕ್ಷಿತ ಸರ್ಪದಿಂದ ತನಗೆ ಮೃತ್ಯು ಬರದಂತೆ ಭಾರೀ ಬಂದೋಬಸ್ತು ಮಾಡಿಕೊಂಢಿದ್ದರೂ, ಸರ್ಪರಾಜ ತಕ್ಷಕ ಹುಳುವಿನ ರೂಪಧಾರಣೆ ಮಾಡಿ, ಹಣ್ಣೊಳಗೆ ಅವಿತು,ಪರೀಕ್ಷಿತನ ಬಳಿ ಸೇರಿ, ಕಚ್ಚಲು ಸಫಲವಾದ ಕತೆ ನಿಮಗೆ ಗೊತ್ತೇ ಇದೆ.ಈಗ ಇಂತ ಸೂಕ್ಷ್ಮ ರೂಪೀ ರೊಬೊಟ್‌ಗಳ ತಯಾರಿ ನಡೆದಿದೆ.ಇಸ್ರೇಲ್ ಅಂತೂ ಭಯೋತ್ಪಾದಕರ ಮೇಲೆ ದಾಳಿ ಮಾಡಲು ಕಣಜಹುಳುವಿನ ಗಾತ್ರದ ರೊಬೋಟ್‌ಗಳ ತಯಾರಿಗಿಳಿದಿದೆ.ಬ್ರಿಟನ್‌ ಬಳಿ ಆರಿಂಚು ಉದ್ದ ಹಕ್ಕಿಯಂತಹ ವಿಮಾನಗಳಿವೆ. ಅಫ್ಘಾನಿಸ್ತಾನದಲ್ಲಿ ಇವುಗಳನ್ನು ಬಳಸಿ ಕಿರುಸ್ಫೋಟಗಳನ್ನು ನಡೆಸಲಾಗುತ್ತಿದೆ.ಕಟ್ಟಡವೊಂದರ ವಿದ್ಯುತ್‌ ವ್ಯವಸ್ಥೆಯನ್ನು ಹಾಳುಗೆಡಹಲು, ಟ್ರಕ್‌ನ್ನು ಚಲಿಸಲಾಗದಂತೆ ಮಾಡಲು,ಅದರ ಚಕ್ರಕ್ಕೆ ರಂಧ್ರ ಕೊರಯುವ ಸೀಮಿತ ಉದ್ದೇಶಗಳಿಗೆ ಇವನ್ನು ಬಳಸುವುದು ಸಂಶೋಧಕರ ಆಲೋಚನೆ.
ಆದರೆ ಇವು ಭಯೋತ್ಪಾದಕರ ಕೈ ಸೇರಿದರೆ ಅನಾಹುತವಾಗದೇ ಎನ್ನುವ ಪ್ರಶ್ನೆಯೂ ಇದೆ. ಅವರು ಯಾವುದೋ ವ್ಯಕ್ತಿಯನ್ನು ಮುಗಿಸಲು, ಸಣ್ಣ ಆಸ್ಫೋಟ ಉಂಟು ಮಾಡಬಲ್ಲ ಮದ್ದನ್ನು ಹೊಂದಿದ ಜಿರಲೆಯಂತಹ ರೊಬೋಟ್ ವ್ಯಕ್ತಿಯ ಬಳಿಸಾರಿ,ಅವನ ಹೃದಯದಂತಹ ಜೀವನಾಡಿ ಅಂಗದ ಬಳಿ ಸ್ಫೋಟವುಂಟು ಮಾಡಿದರೆ, ಅತಿ ಸುರಕ್ಷಿತ ಭದ್ರತಾ ವ್ಯವಸ್ಥೆಯೂ ವಿಫಲವಾದೀತು.

ದೊಡ್ಡವರಿಗಾಗಿ ಮಕ್ಕಳ ಹಾಡು "ನಾಯಿಮರಿ, ನಾಯಿಮರಿ, ತಿಂಡಿಬೇಕೆ?"

(ಒಂದ್ನಿಮಿಷ: ಇದೊಂದು ಹಾಸ್ಯಕ್ಕೆಂದು ಬರೆದ ಅಣಕವಾಡು. ರಾಜಕಾರಣಿಗಳಲ್ಲೂ ಪ್ರಾಮಾಣಿಕರು, ಧೀಮಂತರು, ಉತ್ತಮ ನಾಯಕರು, ದೇಶಭಕ್ತರು ಇರುತ್ತಾರೆ. ಇದು ಅಂಥವರನ್ನು ಉದ್ದೇಶಿಸಿ ಬರೆದಿದ್ದಲ್ಲ. ಬರಿದೇ ತಿಂದು-ತೇಗುವ ಪುಢಾರಿಗಳು ಇದರ ಗುರಿ. ಎಲ್ಲ ರಾಜಕಾರಣಿಗಳೂ ಪ್ರಾಮಾಣಿಕರೇ ಅನ್ನುವುದು ನಿಮ್ಮ ಅನಿಸಿಕೆಯಾದಲ್ಲಿ, ಇದು ಯಾರನ್ನೂ ಉದ್ದೇಶಿಸಿದ್ದಲ್ಲ, ಕೇವಲ ಕಾಲ್ಪನಿಕ ಅಂತಂದುಕೊಂಡು ಓದಿ!):