ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರೆಸ್ಟೋರೆಂಟು

ಅದೇ ಹಳೆಯ ರೆಸ್ಟೋರೆಂಟು..
ನನಗೂ ಅದಕ್ಕೂ,
ಅದೇನೋ ಬಿಡಿಸಲಾಗದ ನಂಟು..
ಅದೇ ಮೂಲೆಯ ಮೇಜು..
ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು..

ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ..
ಮುಗುಳ್ನಗುತ್ತಾ.. ಎರಡು ಕಾಫಿ..
ಕೇಳಲೋ ಬೇಡವೋ ಎಂಬಂತೆ ಕೇಳಿದ "ಲೇಟೇನೋ ಅಮ್ಮಾವ್ರು"..
ಒಂದು ಕ್ಷಣ ಸಿಡಿಮಿಡಿ..
ಉತ್ತರಗಳಿಗೆಲ್ಲಾ ತಡಕಾಡಿ,
"ಹಾ" ಎಂಬೊಂದು ಕ್ಷೀಣ ಉತ್ತರ..

ಕರ್ನಾಟಕದ ಹಣೆಬರಹ!

ಕರ್ನಾಟಕದ ಹಣೆಬರಹ!

ಅಂತೂ ಇಂತೂ ಕರ್ನಾಟಕದ ರಾಜ ಭವನದಲ್ಲಿ ಮತ್ತೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಯಡ್ಯೂರಪ್ಪನವರ ತಂಡ ಮತ್ತೆ ಬಣ್ಣಹಚ್ಚಿಕೊಂಡಿದೆ, ಗೆಜ್ಜೆ ಗಿಜ್ಜೆ ಎಲ್ಲಾ ಕಟ್ಟಿಯಾಯಿತು. ಹೊಸ ಪ್ರಸಂಗ! ಇನ್ನೇನೂ ಠಾಕೂರರ ಮತ್ತು ದೆಹಲಿಯಿಂದ ಒಪ್ಪಿಗೆ ಮಾತ್ರ ಬರುವುದು ಬಾಕಿ! ದೆಹಲಿ ಒಡೆಯರು ಒಪ್ಪಿಗೆ ಕೊಡುವುದು ಮಾತ್ರ ಸಂಶಯ.

ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ

ಅತಿ ಹೆಚ್ಚು ಮಾರಾಟವಿರುವ ಪತ್ರಿಕೆಯಾದ ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ ಕೆಲವು ದಿನಗಳಿಂದ ಕಾಣುತ್ತಿಲ್ಲ. ಇವತ್ತು ಅನೇಕ ದಿನಗಳ ನಂತರ ಆ ಕೊಂಡಿ ಸರಿಯಾಗಿ ಕೆಲಸ ಮಾಡಿ ಅಂತರ್ಜಾಲ ಪುಟ ಸರಿಯಾಗಿ ಕಾಣಿಸಿತು, ಆದರೆ ಪುಟಗಳ ಮೇಲೆ ಕ್ಲಿಕ್ಕಿಸಿದರೆ ಮೇಲೆ ಬರುವ ಪುಟಗಳಲ್ಲಿ ಏನು ಕಾಣ್ತಾ ಇಲ್ಲ. ಹಿಂದಿನ ಕೆಲವು ದಿನಗಳ ಪತ್ರಿಕೆಗಳು ಸಹ ಇಲ್ಲ.

ದಿಕ್ಕು

 

ತಲೆಯಲ್ಲೇಳುವ ಅನುಮಾನ
ಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು
ಕಗ್ಗಂಟಾಗಿ ಎದೆಗಿಳಿದು
ಗಪ್ಪಾಗಿ ಬಿಗಿಯುವವರೆಗೂ
ಪದ್ಯ
ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ...!

 

 

ಚಾರ್ವಾಕ ದರ್ಶನ-ಒಂದು ಚಿಂತನೆ

ನಾನಾರೆಂಬುದಕ್ಕೆ ಉತ್ತರವನ್ನು ಹುಡುಕಲೆತ್ನಿಸಿದವರು ಅನೇಕ. ಭೌತವಾದದ ಹಿನ್ನಲೆಯಲ್ಲಿ ಚಾರ್ವಾಕರ ದರ್ಶನದ ಸ್ವರೂಪವನ್ನು ನೋಡುವುದಾದರೆ, ದೇವರು, ಆತ್ಮದ ಅಸ್ತಿತ್ವ ನಿರಾಕರಿಸಿದ ಇವರು ಭೂಮಿ, ಜಲ, ಅಗ್ನಿ,ವಾಯು ಎಂಬ ನಾಲ್ಕು ಭೌತಿಕ ಅಂಶಗಳೇ ಜಗತ್ತಿನ ಮೂಲದ್ರವ್ಯವೆಂದರು.

ಮೂಲ ಯಕ್ಷ ಪ್ರಶ್ನೆಗಳಾವುವು ೟

ಭರತಖಂಡದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತ ಎಲ್ಲರಿಗೂ ಪೂಜನೀಯ. ಮೂಲ ವ್ಯಾಸಭಾರತದ ನಂತರದಲ್ಲಿ ಕನ್ನಡವೂ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲೂ ಹಲವಾರು ಮಹಾಭಾರತಗಳು ರಚಿತವಾಗಿವೆ. ಆದರೆ ಮೂಲ ಭಾರತಕ್ಕೂ ಮತ್ತು ಇತರೆ ಭಾಷೆಗಳಲ್ಲಿ ನಂತರ ರಚಿತವಾದ ಭಾರತಕ್ಕೂ ಕೆಲವೊಂದು ವ್ಯತ್ಯಾಸಗಳಿರುವುದು ಕಂಡುಬಂದಿದೆ. ಕಾರಣಗಳು ಹಲವಿರಬಹುದು.

ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ

ಅಂತರ್ಜಾಲ ಬಳಸುವ ಬಹುತೇಕ ಎಲ್ಲರಿಗೂ ವಿಕಿಪೀಡಿಯಾ ಬಗ್ಗೆ ತಿಳಿದೇ ಇರುತ್ತದೆ.ಅಂತರ್ಜಾಲದ ಪ್ರಮುಖ ವೆಬ್-ಸೈಟ್‌ಗಳಲ್ಲಿ ಒಂದಾದ ಆಂಗ್ಲ ವಿಕಿಪೀಡಿಯಾದಲ್ಲಿ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಲೇಖನಗಳಿವೆ.ಗೂಗಲ್,ಯಾಹು ಮುಂತಾದ ಸರ್ಚ್-ಇಂಜಿನ್‌ಗಳಲ್ಲಿ ಹುಡುಕಿದಾಗ,ಸಾಮಾನ್ಯವಾಗಿ ವಿಕಿಪೀಡಿಯಾ ಲೇಖನಗಳು ಮೊದಲ ಹತ್ತು ಸರ್ಚ್-ರಿಸಲ್ಟಗಳಲ್ಲಿ ಬಂದೇ ಬರುತ್ತದೆ.ಈ ದೃಷ್ಟಿಯಿಂದ ನೋಡಿದರೆ, ವಿಕಿಪೀಡಿಯಾ ಲೇಖನವು ವಿಷಯಾಸಕ್ತರಿಗೆ ಮಾಹಿತಿಯ ಮೊದಲ ಕೊಂಡಿಯಾಗಿರುತ್ತದೆ. ವಿಕಿಪೀಡಿಯಾದಲ್ಲಿ ಲೇಖನಗಳ ಗುಣಮಟ್ಟವನ್ನಾಧರಿಸಿ ಅವುಗಳನ್ನು ಶ್ರೇಣಿಕರಿಸಲಾಗುತ್ತದೆ. ಈ ರೀತಿ ಉತ್ಕೃಷ್ಟ ಲೇಖನಗಳನ್ನು "Featured Articles" ಎಂದು ಕರೆಯುತ್ತಾರೆ. ಭಾರತದ ಬಗೆಗಿನ ಲೇಖನಗಳ ಪೈಕಿ ಕನ್ನಡ-ಕರ್ನಾಟಕ ಬಗೆಗಿನ ಲೇಖನಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಶ್ರೇಣಿಗೆ ಸೇರುತ್ತವೆ. ಕಳೆದ ಒಂದು ವರ್ಷದಲ್ಲಿ ಕನ್ನಡ-ಕರ್ನಾಟಕದ ಬಗೆಗಿನ ಲೇಖನಗಳು ಇನ್ನುಳಿದ ಭಾರತೀಯ ಲೇಖನಗಳಿಂತ ಹೆಚ್ಚಾಗಿ Featured ಆಗಿವೆ. ವಿಕಿಪೀಡಿಯಾದ ಹಲವಾರು ಕನ್ನಡಿಗ ಲೇಖಕರ ಸಕ್ರಿಯ ಚಟುವಟಿಕೆಯಿಂದ ಕರ್ನಾಟಕದ ಇತಿಹಾಸವನ್ನು ಸಾರುವ ಬಹುತೇಕ ಎಲ್ಲಾ ಲೇಖನಗಳು "Featured" ವರ್ಗಕ್ಕೆ ಸೇರಿದೆ. ಇಂತಹ "Featured" ಲೇಖನಗಳನ್ನು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಪ್ರಕಟಿಸಲಾಗುತ್ತದೆ. ಇದಲ್ಲೆದೆ, ವಿಕಿಪೀಡಿಯಾದ ಮುಖ್ಯಪುಟದಲ್ಲಿ ಬರುವ "Did you know" (ನಿಮಗಿದು ಗೊತ್ತೆ) ಅಂಕಣದಲ್ಲಿ ವಾರಕ್ಕೆ ಕನಿಷ್ಟ ೨-೩ ಬಾರಿಯಾದರೂ ಕನ್ನಡ-ಕರ್ನಾಟಕದ ಲೇಖನಗಳು ಪ್ರಕಟಗೊಳ್ಳುತಿರುತ್ತವೆ.

‘ಥಟ್ ಅಂತ ಹೇಳ“ ಯಲ್ಲಿ ಮಾಸ್ಟರ್ ಹಿರಣ್ಣಯ್ಯ

ದೇವದಾಸಿಯ ನಾಜೂಕಯ್ಯ, ಸದಾರಮೆಯ ಕಳ್ಳ, ಮಕ್ಮಲ್ ಟೋಪಿಯ ನಾಣಿ, ಭ್ರಷ್ಟಾಚಾರದ ದಫೇದಾರ್, ನಡುಬೀದಿಯ ನಾರಾಯಣ - ಇವರೆಲ್ಲರ ಜೊತೆ ಒಮ್ಮೆ ಮಾತನಾಡಬೇಕೆನಿಸಿತು. ಕೂಡಲೇ ಮಾಸ್ಟರ್ ಹಿರಣ್ಣಯ್ಯ ಅವರನ್ನು ಕರೆಸಿದೆವು. ಕರ್ನಾಟಕ ರಾಜ್ಯೋತ್ಸವ ಸಮಯಕ್ಕೆ ಇವರಿಗಿಂತ ಸೂಕ್ತ ವ್ಯಕ್ತಿ ಮತ್ತೊಬ್ಬರು ಬೇಕೆ?

ಸಂಪದ ಸದಸ್ಯರ ಕೂಟ ಮತ್ತು "ಮುಖಾಮುಖಿ" ಚಿತ್ರದ ಪ್ರದರ್ಶನ

ಸಂಪದಿಗರೆ,

ಇದೇ ಶನಿವಾರ ಸುಚಿತ್ರದಲ್ಲಿ 'ಮುಖಾಮುಖಿ' ಚಲನಚಿತ್ರದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಂಪದದ ಸದಸ್ಯರೇ ಆದ ಅನಿವಾಸಿ ಚಿತ್ರಕತೆ ಬರೆದು, ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. 'ಮುಖಾಮುಖಿ' ಚಿತ್ರಕ್ಕೆ ೨೦೦೬ನೇ ಸಾಲಿನ 'ಅತ್ಯುತ್ತಮ ಸಂಭಾಷಣೆ' ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಹೆಸರಾಂತ ನಟ ದತ್ತಣ್ಣ, ಕಿರುತೆರೆಯಲ್ಲಿ ಹೆಸರುವಾಸಿಯಾದ ದಿಲೀಪ್ ರಾಜ್, ಶ್ವೇತಾ ಶ್ರೀವಾತ್ಸವ್ ಇನ್ನಿತರರು ನಟಿಸಿದ್ದಾರೆ. ಕನ್ನಡದಲ್ಲಿ ಅತ್ಯಂತ ಕಲಾತ್ಮಕ ಛಾಯಾಗ್ರಾಹಕರು ಎಂದೇ ಹೆಸರು ಪಡೆದ ರಾಮಚಂದ್ರ ಐತಾಳರು ಈ ಚಿತ್ರದ ನಿರ್ಮಾಣದಲ್ಲಿ ಕೈಗೂಡಿಸಿದ್ದಾರೆ.

ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು http://mukhamukhi.anivaasi.net ತಾಣದಲ್ಲಿ ನೋಡಬಹುದು. ಚಿತ್ರದ ಡ್ಯೂರೇಷನ್ - ೨ ಗಂಟೆ.

ಈ ಪ್ರದರ್ಶನಕ್ಕೆ ನೀವು ನಿಮ್ಮ ಜತೆಯವರೊಂದಿಗೆ ಬಂದು ಚಿತ್ರವನ್ನು ನೋಡಿ, ತನ್ಮೂಲಕ ಸಂಪದವನ್ನು ಬೆಂಬಲಿಸಬೇಕೆಂದು ಕೋರುತ್ತೇವೆ. ಸಂಪದ ನಡೆಸಲು ಹಾಗು ಬೆಳೆಸಲು ಸಂಪದ ಫೌಂಡೇಶನ್ನಿಗೆ ಕಾಣಿಕೆಯನ್ನು ಇದೇ ಪ್ರದರ್ಶನದ ಹೊತ್ತಿನಲ್ಲಿ ಸದಸ್ಯರು ನೀಡಬಹುದು.

ಇದೇ ದಿನ, ಸಿನೆಮಾ ಪ್ರದರ್ಶನದ ನಂತರ ಸಂಪದದ ಸದಸ್ಯರಿಗಾಗಿ ಒಂದು ಪುಟ್ಟ ಕೂಟವೂ ಏರ್ಪಡಿಸಲಾಗಿದೆ. ಇದರಲ್ಲಿ ನೀವೂ ಭಾಗವಹಿಸಲು ಕೋರುತ್ತೇವೆ.