ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಿಷ್ಟ: ಇಂಧನ?

ಪಿಷ್ಟವನ್ನು ಬಳಸಿ ವಾಹನ ಓಡಿಸಬಹುದೇ? ನೆಟ್‍ನೋಟ ಅಂಕಣ ಓದಿ:
http://vijaykarnatakaepaper.com/svww_zoomart.php?Artname=20070528a_008101002&ileft=369&itop=33&zoomRatio=130&AN=20070528a_008101002
ಮುಂದಿನ ದಿನಗಳು ಹೇಗಿರಬಹುದು ಎಂದು ನಿಮಗನಿಸುತ್ತದೆ. ಬರೆಯಿರಿ.

ಅನಂತಮೂರ್ತಿಯವರ ಉಪದ್ವ್ಯಾಪ ಅತಿಯಾಯಿತು !

ಇವತ್ತಿನ ಪತ್ರಿಕೆಗಳಲ್ಲಿಯ ವರದಿಯನ್ನು ನೋಡಿದರೆ ಯಾಕೋ ಅನಂತಮೂರ್ತಿ ಮತ್ತವರ ಪಟಾಲಂನ ಉಪದ್ವ್ಯಾಪತನ ಅತಿಯಾಯಿತು ಅನಸತದ. ಅಲ್ಲಿಯ ಭಾಷೆಯನ್ನು ನೋಡಿದರ (ಉದಾ : "ಬಾಡಿಗೆ ಹಂತಕ", "ಹಾಸಿಗೆ ವಿಷಯ", "’ಆವರಣ’ದ ಮಾರಾಟ ಮತ್ತು ಜನಪ್ರಿಯತೆ ಕಂಡು ದಿಗಿಲು!" ಇತ್ಯಾದಿ) ಯಾಕೋ ಎಂದಿನದೋ ಸಿಟ್ಟನ್ನ ಇಂದ ಕಾರಕೊಂಡಾರ ಅನಸಲಿಕ್ಕತ್ತೇದ.

ಮರ ನೆಡುವುದು!

ಗಿಡ ನೆಡುವುದು ಬಿಟ್ಟು ಇದೇನು ಮರ ನೇಡುವುದು ಅಂದಿರಾ? ರಸ್ತೆ ಅಭಿವೃದ್ಧಿ ಯೋಜನೆಗಳಿಗಾಗಿ ಮರ ಕಡಿಯಬೇಕಾದಾಗ ಅದನ್ನು ಬೇರೆಡೆ ನೆಟ್ಟು ಅದಕ್ಕೆ ಪುನರುಜ್ಜೀವನ ನೀಡಬಹುದೇ? ಅಂಥ ಪ್ರಯೋಗಗಳು ಅಲ್ಲಲ್ಲಿ ಆಗುವುದನ್ನು ಕೇಳಿದ್ದೇವೆ. ಮೆಟ್ರೋ ರೈಲ್ ಕಾಮಗಾರಿಯಿಂದ ತೆಗೆವ ಮರಗಳಿಗೆ ಮರುಜೀವ ನೀಡಲಾಗುತ್ತಿದೆಯಂತೆ. ವರದಿ ಪ್ರಜಾವಾಣಿಯದ್ದು:

ತುದಿಗಳೆರಡು - ಚೂಪು, ಬಡ್ಡು

ನನ್ನ ಹತ್ತಿರ ಎರಡು ತುದಿಗಳು ಇವೆ. ಯಾವಾಗಿಂದ ಇದೆ, ಎಲ್ಲಿ ಸಿಕ್ಕಿತು ಅನ್ನೋದೆಲ್ಲ ಮರೆತುಹೋಗಿದೆ. ನಾನು ಹೇಳಬೇಕಂತಿರೋದಕ್ಕೆ ಅದು ಮುಖ್ಯಾನೂ ಅಲ್ಲ ಬಿಡಿ. ಯಾಕೆಂದರೆ ಎಲ್ಲರಿಗೂ ಅಂಥವು ಎಲ್ಲೆಲ್ಲೋ ಯಾವಾವಾಗಲೋ ಸಿಕ್ತವೆ. ಆದರೆ ನನಗಂತೂ ಈ ತುದಿಗಳು ತುಂಬಾ ಕಷ್ಟಕೊಡ್ತಾವೆ. ಅವು ಇಲ್ಲದೆ ಇದ್ದರೆ ಆಗಲ್ಲ. ಇದ್ದಾಗ ಏನು ಮಾಡಬೇಕು ಅಂತ ಹೊಳೆಯೋದಿಲ್ಲ.

ಬೆಂಗಳೂರಿನ ರಂಗಶಂಕರದಲ್ಲಿ ನಮ್ ಟೀಮ್ ತಂಡದ ‘ಗುಣಮುಖ’


ಗುಣಮುಖ

ಬೆಂಗಳೂರಿನ ರಂಗಶಂಕರದಲ್ಲಿ ನಮ್ ಟೀಮ್ ತಂಡದ ‘ಗುಣಮುಖ’ ನಾಟಕವು ಮೇ ೩೧, ೨೦೦೭ರಂದು ಸಂಜೆ ೭.೩೦ಕ್ಕೆ ಪ್ರದರ್ಶನಗೊಳ್ಳಲಿದೆ.

ಇದರ ಒಳ ಅರ್‍ಥ?

ಗಾಳಿ ಮಣ್ಣುಂಡೇಯೊಳಹೊಕ್ಕು ಹೊರಹರಳಲದು|
ಆಳನಿಪುದಂತಾಗದರೆ ಬರಿಯ ಹೆಂಟೆ||
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ|
ಕ್ಷ್ವೇಳವೇನಮೃತವೇಂ? - ಮಂಕುತಿಮ್ಮ|| ೧೯

ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು |
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕಚ್ಚೇವು
ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ-ಹಿರಿ ನೆನಪ