ಮಂಜಣ್ಣ, ನಾವಿರೋದೆ ಹಿಂಗೆ!

ಮಂಜಣ್ಣ, ನಾವಿರೋದೆ ಹಿಂಗೆ!

ಮೊನ್ನೆ ಕಾಕಾ(ಚಿಕ್ಕಪ್ಪ) ಊರಿಂದ ಬಂದಿದ್ದ. ಮೊದಲ ಬಾರಿಯೇನಲ್ಲ. Promotion ಫೈಲನ್ನು ಒಂದೇ ಆಫೀಸಿನ ಮತ್ತೊಂದು ಕೋಣೆಗೆ ಸಾಗಿಸಲು ಬೆಂಗಳೂರಿಗೆ ಮೂರು ಬಾರಿ ಬಂದಿದ್ದ.
"ಯಾಕಪ್ಪ ಹಿಂಗೆ?" ಅಂದೆ.
"Head ಆಫೀಸಲ್ಲಿರೋ IAS officer ಗೆ ಮೂಡ್ ಬರ್ಬೇಕು, ಬಂದ್ ಮೇಲೆ documents ಗೆ ಸಹಿ ಹಾಕ್ಬೇಕು, ಆಮೇಲೆ ಅವನ PA ಗೆ ಮೂಡ್ ಬಂದು, promotion ಪತ್ರ ನಮ್ಮ Director ಗೆ ಕಳಿಸಿದ ಮೇಲೆ ನನ್ನ promotion!"

ಅದರ ಬಗ್ಗೆ ಅವನಿಗೆ ಕಿಂಚಿತ್ತೂ ಬೇಸರವಿರಲಿಲ್ಲ. "ಆದಾಗ ಆಯಿತು" ಅನ್ನೋ ಸ್ವಭಾವ. Times Now 9 O'clock show ನೋಡ್ತಾ ಇದ್ವಿ. ಬಿಹಾರ್ ಬಾಬು, ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಮಗ ಚಿರಾಗ್ ನೇರ ಪ್ರಸಾರದ ಚರ್ಚೆಯಲ್ಲಿ ಪಲ್ಗೊಂಡಿದ್ದರು. "My son, the actor" ಅಂದ ಪಾಸ್ವಾನ್!

"ಮಂಜಣ್ಣಾ, ರಾಜಕೀಯ ಅಂದ್ರೆ ಹಿಂಗೆ ನೋಡಪಾ, ಅಪ್ಪ ಮಾಡಿದ ಹೆಸರಿನಲ್ಲಿ ಮಗ Bollywood ಗೆ!"

"ಅಪ್ಪ ಬೀಹಾರ್ ನುಂಗ್ತಾ ಇದಾನೆ, ಮಗನ್ನ ಬಾಲಿವುಡ್ ನುಂಗ್ತಾ ಇದೆ ನೋಡು" ಅಂದೆ.

"ಅವರಿಗೇನಪಾ, ಬಿಟ್ಟಿ ರೊಕ್ಕ ಸಿಗುತ್ತೆ, ಯೇನ್ ಬೇಕಾದ್ರು ಮಾಡ್ತಾರೆ, ನಮ್ಮಂಥವರು ಹಿಂಗೆ, ಮುಂದೆ ನಾವಿರೋದು ಹಿಂಗೆ!"

"ಹೂಂ, ನೀನು ಪಾಸ್ವಾನ್ ಆಗು, ನಿನ್ನ ಮಗ ನಾನೂ, Hollywoodಗೆ ಹಾರ್ತೀನಿ!"

"ನಾನ್ ಪಾಸ್ವಾನ್ ಆಗೋದ? ರಾಜಕೀಯ ಸುದ್ದೀನೆ ಬೇಡ ಮಹರಾಯ. ರಾಜಕಾರಣಿಗಳಿಗಿರೋದು ಒಂದೇ ಕೆಲಸ, ದುಡ್ಡು ಹೀರೋದು. ಅವರು ಶ್ರೀಮಂತರಾಗ್ತ ಇರ್ತಾರೆ, ಬಡವರು ಬಡತನದಿಂದ ಸಾಯ್ತಾನೆ ಇರ್ತಾರೆ" ಅಂದ.

"ಯೇನಾದ್ರು ಹೊಸಾದ್ ಹೇಳಪಾ, ಈ topic (politics) ಬಹಳಾ ಹಳೇದು", ಅಂದೆ.

"ಮೊನ್ನೆ ನಮ್ಮ ಕಾಲೇಜಿಗೆ ಒಂದೆರಡು extra class room ಕಟ್ಟಿಸೋಕೆ 15 ಲಕ್ಷ ಬಿಡುಗಡೆ ಆಗಿತ್ತು. PWD ಬಡ್ಡಿ ಮಗ ಬಂದು 15 ಲಕ್ಷದಲ್ಲಿ ಎರಡು classroom ಕಟ್ಟೋಕೆ ಆಗಲ್ಲ ಸಾರ್ ಅಂದ! ಎಲ್ಲ estimates ಮಾಡ್ಕೊಂಡ್ ಬಂದು, ಆ ದುಡ್ಡಿನಲ್ಲಿ ಅವನು ಸ್ವಲ್ಪ ತಿಂದು, ಮೇಲಿನ ಆಫೀಸರ್ಸ್ ಗೆ ಸ್ವಲ್ಪ ತಿನಿಸಿ, ಉಳಿಯೋ ದುಡ್ಡಿನಲ್ಲಿ classroom ಕಟ್ಟಿಸ್ತಾನೋ ಕೋಳಿ ಗೂಡನ್ನ ಕಟ್ಟಿಸ್ತಾನೋ ನೋಡ್ಬೇಕು. ನಮ್ಮ ಮತಕ್ಷೇತ್ರದ MLAನೋ, MPನೋ ಸ್ವಲ್ಪ interest ತೊಗೊಂಡು ಒತ್ತಾಯ ಮಾಡಿದ್ದಿದ್ರೆ ಯಾವತ್ತೋ ಆಗೊ ಕೆಲಸ ಇನ್ನೊ ಹಂಗೆ ಇದೆ. ಈ politicians, ಸರ್ಕಾರಿ ಕಾಲೇಜುಗಳನ್ನು ಉದ್ಧಾರ ಮಾಡೋ ಗೋಜಿಗೆ ಹೋಗೊದಿಲ್ಲ. ಯಾಕೆ ಅಂದ್ರೆ ಅನ್ಯಾಯದ ದುಡ್ಡಿನಲ್ಲಿ ಅವರು ಕಟ್ಟಿಸಿದ ಕಾಲೇಜುಗಳು ನಡೀಬೇಕಲ್ಲ? ಸರ್ಕಾರಿ ಕಾಲೇಜುಗಳು ಉದ್ಧಾರ ಆದ್ರೆ ಅವರ ಕಾಲೇಜಿಗೆ ಹೋಗೊವ್ರು ಯಾರು? ಇನ್ನು ಸರ್ಕಾರಿ ಕಾಲೇಜಿನ lecturers ಕಾಲೇಜಿಗೆ ಬರೋದು ಕಲ್ಸೋಕ್ ಅಲ್ಲ. ಸಂಬಳಕ್ಕಾಗಿ. ಸರ್ಕಾರಿ ಕಾಲೇಜುಗಳು ಇರ್ಬೇಕಾದ್ರು ಯಾಕೆ? ಎಲ್ಲಾನೂ privatize (ಖಾಸಗೀಕರಣ) ಮಾಡಿದ್ರೆ ಆಗಲ್ವ?"

ಅವನನ್ನು ಮತ್ತಷ್ಟು ಪ್ರಚೋದಿಸಲು, "IIT, IIM ಅಂತಹ ಕಾಲೇಜುಗಳು ಸರ್ಕಾರಿ ಕಾಲೇಜುಗಳಪ್ಪ. ಅಲ್ಲಿ admission ಸಿಗ್ಬೇಕಾದ್ರೆ ಸಿಕ್ಕಾಪಟ್ಟೆ ಓದ್ಬೇಕು, ಇಲ್ಲಾಂದ್ರೆ at least ಯಾವುದಾದ್ರು reservation ಇರ್ಬೇಕು, ಸರ್ಕಾರಿ ಕಾಲೇಜುಗಳು ಅಂತ under estimate ಮಾಡ್ಬೇಡ" ಎಂದೆ.
"ಅಂತಹ ಕಾಲೇಜುಗಳು ಇರೋದು ಮೂಲೆಗೊಂದು ಮಾತ್ರ. ಎಲ್ಲರಿಗೂ ಅಂತಹದೇ ಶಿಕ್ಷಣ ದಕ್ಕಬೇಕಲ್ಲ?".

ಹೀಗೆ ಮಾತಾಡ್ತಾ ಮಾತಾಡ್ತ, ಮೂರ್ನಾಲ್ಕು ಗಂಟೆಗಳೇ ಕಳೆದವು. ರಾಜಕೀಯ, ಬಡತನ, ಜಾತೀಯತೆ, ಮೀಸಲಾತಿ, ಶಿಕ್ಷಣ, ಸರ್ಕಾರ, ಲಂಚ, ಹೀಗೆ ಹಲವಾರು ವಿಷಯಗಳು ನಮ್ಮನ್ನಾವರಿಸಿಕೊಂಡವು. ಜೀವನದಲ್ಲಿ ಅವನು ಕಂಡಷ್ಟು Red Tapism, ಲಂಚದ ಪ್ರಪಂಚ, ಸಮಾಜದ ನೈಜ ಕ್ರೂರತೆ ನಾನು ಕಂಡಿಲ್ಲ. ಆದರೆ ಅದೆಲ್ಲದರ ಬಗ್ಗೆ ಓದಿದ ನೆನಪು ಮಾತ್ರ. ಅವನ ವಿಚಾರಗಳು ಗಾಢವಾದ ಅಧ್ಯಯನದ ಅಭಿಪ್ರಾಯಗಳೇನು ಅಲ್ಲ. ಒಬ್ಬ ಸಾಮಾಜಿಕ ಕಳಾಕಳಿ ಇರುವ ವ್ಯಕ್ತಿಯ ನೈಜ ಪ್ರತಿಕ್ರಿಯೆಗಳಾಗಿದ್ದವು. ನಮ್ಮಿಬ್ಬರ ಈ ಚರ್ಚೆ ಹೊಸದೇನಲ್ಲ, ಎಷ್ಟೊ ಜನ ನಮ್ಮಂತೆ ದಿನಬೆಳಗಾದರೆ ಹಲವಾರು ವಿಷಯಗಳ ಬಗ್ಗೆ ಮಾತಾಡ್ತಾನೆ ಇರ್ತಾರೆ. "ಕೇವಲ ಮಾತಾಡ್ತಾನೆ ಇರ್ತಾರೆ", ಮತ್ತೇನೂ ಮಾಡೊಲ್ಲ, ಏನಾದರು ಮಾಡಬೇಕೆಂಬ ನಿರ್ಧಾರಕ್ಕೂ ಬರುವುದಿಲ್ಲ, ಬಂದರೂ ಏನನ್ನೂ ಮಾಡೊಲ್ಲ! ಇಂತಹ ಚರ್ಚೆಗಳು ತುಂಬಾ interesting ಆಗಿ ಇರುತ್ತವೆ. ಉದಾಹರಣೆಗೆ ಮೀಸಲಾತಿಯನ್ನೇ ತೆಗೆದುಕೊಳ್ಳಿ....

"ಸ್ವಾತಂತ್ರ್ಯ ಬಂದ ಮೇಲೆ "ಮೀಸಲಾತಿ" 10 ವರ್ಷಗಳಿಗೆ ಮಾತ್ರ ಮೀಸಲಾಗಿತ್ತು, ಅದು ಇನ್ನೂ ಇದೆ. ಇರಬಾರದಾಗಿತ್ತು ಎನ್ನುವುದು ತಪ್ಪು. ಮುಂದುವರಿಯುತ್ತಿರುವ "ಹಿಂದುಳಿದವರು" ಮುಂದೆ ಹೋಗುತ್ತಾನೆ ಇದ್ದಾರೆ. ಆದರೆ ನಿಜವಾದ "ಹಿಂದುಳಿದವರು" ಇನ್ನೂ ಬಹಳ ಹಿಂದೆಯೇ ಇದ್ದಾರೆ. ಸರ್ವೋಚ್ಛ ನ್ಯಾಯಾಲಯದ "Creamy Layer" ವಿಚಾರ ಒಂದು ರೀತಿಯಲ್ಲಿ ಸರಿಯಾಗಿಯೇ ಇರಬಹುದು. ಆದರೆ ಅದು ಅರ್ಜುನ್ ಸಿಂಗ್ ಅವರಿಗೆ ಗೊತ್ತಾಗಬೇಕಲ್ಲ. ಮೀಸಲಾತಿ ಕಡೆಗಾಣಿಸಿದರೆ, ನಿಜವಾದ ಹಿಂದುಳಿದವರಿಗೆ ಕೊಡಲಿಪೆಟ್ಟು, ಮೀಸಲಾತಿ ಇದ್ದರೆ ಮುಂದುವರಿದ "ಹಿಂದುಳಿದವರಿಗೆ" ಸ್ವರ್ಗ! ಜಾತಿಗಾಗಿ ಮೀಸಲಾತಿಯೆ? ರಾಜಕೀಯಕ್ಕಾಗಿ ಮೀಸಲಾತಿಯೆ ಅಥವ (ನಿಜವಾದ) ಹಿಂದುಳಿದವರಿಗಾಗಿ ಮೀಸಲಾತಿಯೆ? ಇದು ಬಿಡಿಸಲಾರದ ಸಮಸ್ಯೆ. ಅಂಬೇಡ್ಕರ್ ಅವರ ಮೀಸಲಾತಿಯ ಕನಸು ನನಸಾಗಿರಬಹುದು, ಆದರೆ ಸಮಾನತೆಯ ಬಗ್ಗೆ ಅವರಿಗಿದ್ದ ಮಹದಾಸೆ ಇನ್ನೂ ಪೂರ್ಣವಾಗಿಲ್ಲ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಜಾತಿಯ ಬಗ್ಗೆ ಮಾತು ಕಮ್ಮಿ. ಆದರೆ ಮಹಾನಗರದಾಚೆ, (ಕಾಕಾನ ಪ್ರಕಾರ) "ಯಾರಾದರು, ಸರಕಾರಿ ಆಫೀಸಿಗೆ ಹೊಸದಾಗಿ ಬಂದರೆ ಸಾಕು. ಅವನು ಯಾರ ಪೈಕಿ (ಯಾವ ಜಾತಿಯವ) ಅನ್ನುವುದನ್ನು ತಿಳಿದುಕೊಂಡೇ ಮುಂದಿನ ಮಾತು. ಹಳ್ಳಿಗಳಲ್ಲಂತೂ ಜಾತೀಯತೆಯ ಬೇರುಗಳು ಇನ್ನೂ ಜೀವಂತವಾಗಿವೆ. ಅಸ್ಪರ್ಷತೆ ಭೌತಿಕವಾಗಿ ದೂರವಾಗಿರಬಹುದು. ಜನರ ಮನದಾಳದಲ್ಲಿ ಇನ್ನೂ ಅದು ಹಾಗೆಯೇ ಇದೆ. ಮೇಲ್ನೋಟಕ್ಕೆ ಎಲ್ಲರೂ ಜಾತಿಹೀನರು. ಅಂತರಂಗದಲ್ಲಿ ಎಲ್ಲರೂ ಜಾತಿಯ ಆರಾಧ್ಯ ಭಕ್ತರು". ಜಾತಿ ಇತಿಹಾಸವಾಗುವುದು ನಮ್ಮ ಮೊಮ್ಮೊಕ್ಕಳ ಮಕ್ಕಳ ಕಾಲದಲ್ಲಿ!"

ಹೀಗೆ, ನೂರಾರು ಜನ ಸಾವಿರಾರು ವಿಷಯಗಳ ಬಗ್ಗೆ ಚರ್ಚಿಸುತ್ತಲೇ ಇರುತ್ತಾರೆ. ಎಲ್ಲರೂ ಮಾತನಾಡುವುದು ಒಂದೆ. "ಈ ದೇಶ ಬದಲಾಗಬೇಕು", "ನಮಗೆ ಒಳ್ಳೆಯ ರಾಜಕಾರಣಿಗಳು ಬೇಕು", "ಸಮಾಜದಲ್ಲಿ ಎಲ್ಲರಿಗೂ ಸಾಮಾಜಿಕ ಕಳಕಳಿಯಿರಬೇಕು", "ಜನ ಬದಲಾಗಬೇಕು", "ಅವರು ಹಂಗಿರಬೇಕು", "ಇವರು ಹಿಂಗಿರಬೇಕು", "ಅದು ಹಾಗಿರಬೇಕು", "ಇದು ಹೀಗಿರಬೇಕು". ಎಲ್ಲರೂ ಹೇಳುವುದು ಮತ್ತೊಬ್ಬರಿಗೆ. ಎಲ್ಲರಿಗೂ ಬೇಕಾಗಿರುವುದು ಜಗತ್ತಿನ ಬದಲಾವಣೆ, ಅದೂ ಸ್ವಲ್ಪವೇ ಸಮಯದಲ್ಲಿ. ಯಾರಿಗೂ "ನಾವು ಬದಲಾಗಬೇಕು" ಎಂಬ ಅರಿವೇ ಇಲ್ಲ! ಏನಾದರು ಹೆಚ್ಚು ಕಮ್ಮಿ "ಮೊದಲು ನಾವು ಬದಲಾಗಬೇಕು" ಎಂದು ಹೇಳಿದರೆ, "ಒಬ್ಬನಿಂದೇನಾಗುತ್ತದೆ? ನಾನೊಬ್ಬ ಬದಲಾದರೆ ಆಯಿತೆ?" ಎನ್ನುತ್ತಾರೆ. ಬದಲಾವಣೆ ಎಂಬುವುದು ಒಂದು ನಿರಂತರ ಪ್ರಕ್ರಿಯೆ. ರಾತೋರಾತ್ರಿ ನಡೆಯುವಂತಹ ವಿಷಯವಲ್ಲ. ಒಬ್ಬನಿಂದ ಮತ್ತೊಬ್ಬ, ಅವನಿಂದ ಇನ್ನಷ್ಟು ಜನ, ಅವರಿಂದ ಮತ್ತಷ್ಟು..... ಹೀಗೆ ಬದಲಾವಣೆಯ ಸರಪಳಿ ಕಾಡ್ಗಿಚ್ಚಿನಂತೆ ಹರಡಿದರೆ ನಾವೆಲ್ಲ ಅಂದು ಕೊಂಡ ಹಾಗೆ ನಮ್ಮ ದೇಶವಿರುತ್ತದೆ. ಈ ವಿಷಯವನ್ನು ಕಾಕಾನಿಗೆ ಮನವರಿಕೆ ಮಾಡಿಕೊಡಲು ಸಿಕ್ಕಾಪಟ್ಟೆ ತಿಣುಕಾಡಿದೆ. ಗೆದ್ದೆ ಎಂದುಕೊಂಡಿದ್ದೇನೆ. ಅವನೇನು ಮಾಡುತ್ತಾನೋ ಕಾದು ನೋಡಬೇಕು!

Rating
No votes yet