ರೆಸ್ಟೋರೆಂಟು
ಬರಹ
ಅದೇ ಹಳೆಯ ರೆಸ್ಟೋರೆಂಟು..
ನನಗೂ ಅದಕ್ಕೂ,
ಅದೇನೋ ಬಿಡಿಸಲಾಗದ ನಂಟು..
ಅದೇ ಮೂಲೆಯ ಮೇಜು..
ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು..
ಅಭ್ಯಾಸವಾಗಿದ್ದಂತೆ, ತಂದಿಟ್ಟ ಮಾಣಿ..
ಮುಗುಳ್ನಗುತ್ತಾ.. ಎರಡು ಕಾಫಿ..
ಕೇಳಲೋ ಬೇಡವೋ ಎಂಬಂತೆ ಕೇಳಿದ "ಲೇಟೇನೋ ಅಮ್ಮಾವ್ರು"..
ಒಂದು ಕ್ಷಣ ಸಿಡಿಮಿಡಿ..
ಉತ್ತರಗಳಿಗೆಲ್ಲಾ ತಡಕಾಡಿ,
"ಹಾ" ಎಂಬೊಂದು ಕ್ಷೀಣ ಉತ್ತರ..
ಒಂದು ಹನಿ ಹೀರುವಷ್ಟರಲ್ಲಿ,
ತುಂಬಿದ್ದವು ಹನಿಗಳು,
ಕಣ್ಣ ತುಂಬಾ..
ಮಸುಕು ಮಸುಕಾಗತೊಡಗಿತ್ತು..
ಮನದ ಪುಟದಲ್ಲಿದ್ದ,
ಅವಳ ಬಿಂಬ,
ಒಳಗೆಲ್ಲಾ.. ಅದೇನೋ.., ತೋಚದ
ಬರೀ.. ಗೋಜಲು, ಗೋಜಲು..
ಅರೆಕ್ಷಣ ಅಲ್ಲಿರಲಾರದೆ..
ಹೊರನಡೆದೆ, ಬಿಲ್ ಪಾವತಿಸಿ,
ಇಡುತ್ತಾ ದಾಪುಗಾಲು..
ಅದೇ ಹಳೆಯ ರೆಸ್ಟೋರೆಂಟು..
ಅದೇನೋ ಬಿಡಿಸಲಾಗದ ನಂಟು..
ಅದೇ ಮೂಲೆಯ ಮೇಜು..
ಮೇಜಿನ ಮೇಲಿನ, ಅದೇ ಹೊಳಪುರಹಿತ ಗ್ಲಾಸು..