ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?

"ಪರ್ಯಾಯ ಶಕ್ತಿ ಮೂಲ"ಗಳ (ಗಾಳಿಯಿಂದ ಅಥವಾ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸುವ ಕ್ರಮ) ಬಗ್ಗೆ ಇತ್ತೀಚಿಗೆ ಹಲವಾರು ಕಡೆ ಕೇಳಿರುತ್ತೀವಿ, ಓದಿರುತ್ತೀವಿ. ವಿದ್ಯುತ್ ಅಭಾವದ ಈ ದಿನಗಳಲ್ಲಿ, ಪರ್ಯಾಯ ಶಕ್ತಿ ಮೂಲಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಈ ನಿಟ್ಟಿನಲ್ಲಿ ಬರಿದೆ ಮಾತನಾಡದೇ, "ಮಾಡಿ ತೋರಿಸುವ" ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಖಾಸಗಿ ಸಂಸ್ಥೆಯೊಂದರ ಬಗ್ಗೆ ನಿಮಗೆ ಗೊತ್ತಾ? "ಗೂಗಲ್" ಸಂಸ್ಥೆ ಈ ವಿಷಯದಲ್ಲಿ ಹೊಸ ಹೆಜ್ಜೆಯಿಟ್ಟು, ತನ್ನ "ಹಲವು ಪ್ರಥಮ"ಗಳ ಕಿರೀಟಕ್ಕೆ ಇನ್ನೊಂದು ಗರಿ ಸಿಕ್ಕಿಸಿಕೊಂಡಿದೆ.

ಕ್ಯಾಲಿಫೋರ್ನಿಯಾದ "ಮೌಂಟನ್ ವ್ಯೂ" ಕಚೇರಿ ಆವರಣದಲ್ಲಿ (ಆಫೀಸ್ ಕ್ಯಾಂಪಸ್) ಸುಮಾರು 1.6 MW(ಮೆಗಾ ವ್ಯಾಟ್) ವಿದ್ಯುತ್ತನ್ನು ಸೂರ್ಯನ ಬೆಳಕನ್ನು ಬಳಸಿ ಉತ್ಪಾದಿಸುವುದರ ಮೂಲಕ ಗೂಗಲ್, ಈ ರೀತಿಯ ಸಾಧನೆಗೈಯುತ್ತಿರುವ ಜಗತ್ತಿನ ಪ್ರಥಮ ಖಾಸಗಿ ಸಂಸ್ಥೆಯೆನಿಸಿದೆ. ಇದಕ್ಕಾಗಿ ಗೂಗಲ್ ಅನುಸರಿಸಿದ ವಿಧಾನ ಬಹಳ ಸರಳ. "ಮೌಂಟನ್ ವ್ಯೂ" ಆವರಣದಲ್ಲಿರುವ ನಾಲ್ಕು ಕಚೇರಿಗಳ ಮಾಳಿಗೆಗಳ ಮೇಲೆ ಮತ್ತು ವಾಹನ ನಿಲುಗಡೆಗೆಂದು ಇರುವ ಜಾಗಗಳಲ್ಲಿ, ಸುಮಾರು 9000 "ಸೌರಶಕ್ತಿ ಫಲಕ"ಗಳನ್ನು (ಸೋಲಾರ್ ಪ್ಯಾನಲ್) ಅಳವಡಿಸಿ, ಆ ಮೂಲಕ ಮಾಲಿನ್ಯ ರಹಿತ ರೀತಿಯಲ್ಲಿ ವಿದ್ಯುತ್ತನ್ನು ಉತ್ಪಾದಿಸುತ್ತಿದ್ದಾರೆ. ಇದರಿಂದ ಉತ್ಪತ್ತಿಯಾಗುವ ವಿದ್ಯುತ್, ಅಂದಾಜು 1000-1100 "ಸಾಮಾನ್ಯ" ಕ್ಯಾಲಿಫೋರ್ನಿಯಾ ಮನೆಗಳ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಕಂತೆ! "ಗೂಗಲ್‌ಪ್ಲೆಕ್ಸ್"ನ (ಗೂಗಲ್ ಸಂಸ್ಥೆಯ ಆವರಣಕ್ಕೆ ಅವರಿಟ್ಟಿರುವ ಹೆಸರು) ದಿನನಿತ್ಯದ ವಿದ್ಯುತ್ ಬೇಡಿಕೆಯಲ್ಲಿ ಸುಮಾರು 30%ರಷ್ಟನ್ನು ಹೀಗೆ ಉತ್ಪತ್ತಿಯಾಗುವ ವಿದ್ಯುತ್ತಿನಿಂದಲೇ ಪೂರೈಸಬಹುದು ಎಂದು ಸಂಸ್ಥೆಯ ಅಂಬೋಣ.

30% ಉಳಿತಾಯವಾದರೂ ಆಗಲಿ, ಅಥವಾ ಸ್ವಲ್ಪ ಕಡಿಮೆಯೇ ಆಗಲಿ, ಕಿಂಚಿತ್ತಾದರೂ ವಿದ್ಯುತ್ ಉಳಿಸುವ ಮೂಲಕ, "ಪರಿಸರ ಸಂರಕ್ಷಣೆ"ಗೆ ತನ್ನ ಕೈಲಾದಷ್ಟು "ಅಳಿಲು ಸೇವೆ" ಮಾಡುತ್ತಿದೆಯಲ್ಲ, ಆ ವಿಷಯವೇ ನಿಜಕ್ಕೂ ಅಭಿನಂದನೀಯ ಅಂತ ನನ್ನ ಅನಿಸಿಕೆ. ನೀವೇನು ಹೇಳುತ್ತೀರಾ?

ಕರ್ನಾಟಕ ಕ್ರಿಕೆಟ್ - ೬

ರೋಲಂಡ್ ಬ್ಯಾರಿಂಗ್ಟನ್: ತನ್ನ ೧೯ನೇ ವಯಸ್ಸಿನಲ್ಲಿ ೧೯೯೯-೨೦೦೦ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು ೧೦೬ ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ಓಟಗಳನ್ನು ಸೂರೆಗೈದ ಬ್ಯಾರಿಂಗ್ಟನ್, ರಣಜಿ ಪಂದ್ಯಗಳಲ್ಲೂ ತನ್ನ ಉತ್ತಮ ಆಟವನ್ನು ಮುಂದುವರಿಸಿದರು. ಪ್ರಥಮ ಋತುವಿನ ೬ ಪಂದ್ಯಗಳಲ್ಲಿ ೪೬.೨೫ ಸರಾಸರಿಯಲ್ಲಿ ೩೭೦ ಓಟಗಳನ್ನು ಗಳಿಸಿದರು. ೧೯ರ ಹುಡುಗನಿಗೆ ಭರವಸೆಯ ಆರಂಭ ಎನ್ನಬಹುದು. ಬ್ಯಾರಿಂಗ್ಟನ್ ನ ತಂದೆಯವರು, ೧೯೬೦ರ ದಶಕದಲ್ಲಿ ಇಂಗ್ಲಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಕೆನೆತ್ ಫ್ರಾಂಕ್ ಬ್ಯಾರಿಂಗ್ಟನ್ ಇವರ ದೊಡ್ಡ ಅಭಿಮಾನಿಯಾಗಿದ್ದರಿಂದ ತಮ್ಮ ಮಗನಿಗೂ ಅದೇ ಹೆಸರನ್ನಿಟ್ಟರು.

'ಬ್ಯಾರಿ' ಎಂದು ಸಹ ಆಟಗಾರರಿಂದ ಕರೆಯಲ್ಪಡುವ ಬ್ಯಾರಿಂಗ್ಟನ್, ಮೊದಲೆರಡು ಋತುಗಳಲ್ಲಿ ೩ನೇ ಕ್ರಮಾಂಕದಲ್ಲಿ ಆಡಿದರು. ೨೦೦೨-೦೩ ಋತುವಿನಿಂದ ಪ್ರಸಕ್ತ ಋತುವಿನವರೆಗೆ ಆರಂಭಕಾರನಾಗಿ ಆಡಿರುವ ಬ್ಯಾರಿ, ರಾಹುಲ್ ದ್ರಾವಿಡ್ ನ ಮಹಾಭಕ್ತ. ಎಡೆಬಿಡದೆ ದ್ರಾವಿಡ್ ರನ್ನು ಕಾಡಿ, ಬೇಡಿ ಬ್ಯಾಟಿಂಗ್ ಸಲಹೆಗಳನ್ನು ಪಡೆದುಕೊಂಡು ತನ್ನ ಬ್ಯಾಟಿಂಗ್ ಸುಧಾರಿಸಿಕೊಂಡರು. ದ್ರಾವಿಡ್ ಭಾರತದಿಂದ ಹೊರಗೆ ಆಡುವಾಗಲೂ ಅವರನ್ನು ಬೆನ್ನು ಬಿಡದೆ ವಿ-ಅಂಚೆ ಮೂಲಕ ಸಂಪರ್ಕಿಸಿ ತನ್ನ ಆಟವನ್ನು ಬಹಳ ಸುಧಾರಿಸಿ ಭರವಸೆ ಮೂಡಿಸಿದವರು ಬ್ಯಾರಿ.

ಇ-ಲೋಕ-‍೬(೧೯/೧/೨೦೦೭)

ಬ್ಲಾಗ್‌ ಮೂಲಕ ಆದಾಯ
 ಬ್ಲಾಗ್ ಬರೆದು ಅಂತರ್ಜಾಲದಲ್ಲಿ ಹಾಕುವುದು ಈಗ ಹಲವರ ಹವ್ಯಾಸ. ಆದರೆ ಅವನ್ನು ಜನಪ್ರಿಯಗೊಳಿಸುವುದು ಸುಲಭದ ಮಾತಲ್ಲ. ತಿಂಗಳಿಗೆ ದಶಲಕ್ಷ ಓದುಗರನ್ನು ಆಕರ್ಷಿಸುವ ಭಾರತೀಯ ಬ್ಲಾಗ್‌ಗಳೂ ಇವೆ. ಅಮಿತ್ ಅಗರ್‌ವಾಲ್ ಎಂಬವರ ತಂತ್ರಜ್ಞಾನದ ಬಗೆಗಿನ ಬ್ಲಾಗ್ "ಡಿಜಿಟಲ್ ಇನ್ಸ್ಪಿರೇಶನ್" ಇವುಗಳ ಪೈಕಿ ಒಂದು."ಗಾರ್ಡಿಯನ್","ವಾಲ್‌ಸ್ಟ್ರೀಟ್ ಜರ್ನಲ್' ಅಂತಹ ಪತ್ರಿಕೆಯ ಅಂಕಣಕಾರ ಅಮಿತ್ ವರ್ಮಾ ಅವರ "ಇಂಡಿಯಾ ಅನ್‌ಕಟ್" ಕೂಡಾ ಎರಡು ಲಕ್ಷ ಓದುಗರನ್ನು ಆಕರ್ಷಿಸುತ್ತದಂತೆ. ಹೀಗಾಗಿ ಇವರ ಬ್ಲಾಗ್‌ಗಳು ಜಾಹೀರಾತುದಾರರನ್ನೂ ಆಕರ್ಷಿಸಿ,ಇವರು ಕೈತುಂಬಾ ಹಣ ಸಂಪಾದಿಸಲು ಸಾಧ್ಯವಾಗಿದೆ.ಗೂಗಲ್ ಕಂಪೆನಿಯ ಆಡ್‌ಸೆನ್ಸ್ ಎಂಬ ಸೇವೆಗೆ ನೋಂದಾಯಿಸಿಕೊಂಡರೆ,ಬ್ಲಾಗ್‌ನ ವಿಷಯಕ್ಕೆ ಸಂಬಂಧಿಸಿದ ಜಾಹೀರಾತುಗಳು ಬ್ಲಾಗ್‌ ತಾಣದಲ್ಲಿ ಸೇರ್ಪಡೆಯಾಗಿ ಅವರ ತಾಣಕ್ಕೆ ಭೇಟಿ ನೀಡಿದ ಅಂತರ್ಜಾಲಿಗರ ಸಂಖ್ಯೆಯ ಆಧಾರದಲ್ಲಿ ಅವರಿಗೆ ಹಣ ಪಾವತಿಸುವ ವ್ಯವಸ್ಥೆಯಿದೆ.ಎಂಐಎಚ್ ಎಂಬ ಕಂಪೆನಿ ಅತ್ಯುತ್ತಮ ಬ್ಲಾಗ್ ಗುರುತಿಸಲು ಮುಂದಿನ ತಿಂಗಳಿನಿಂದ ಸ್ಪರ್ಧೆ ನಡೆಸಲು ಯೋಜಿಸಿದೆ. ವಿವರಗಳಿಗೆ http://blogs.ibibo.com/GIBH/index.aspx  ನೋಡಿ.ಅದೇ ರೀತಿ ಭಾರತೀಯ ಭಾಷೆಯ ಬ್ಲಾಗ್‌ಗಳಿಗೆ ಸಂಬಂಧಿಸಿದ ಸ್ಪರ್ಧೆಯನ್ನು http://bhashaindia.com/contests/iba/Award.aspx ನಡೆಸಲಿದೆ.

ಅಮೃತಾ ಪ್ರೀತಂ ಅವರ ಖ್ಯಾತ ಕಾದಂಬರಿ "ಪಿಂಜರ್" ಬಿಡುಗಡೆ ಸಮಾರಂಭ

ಜ್ಞಾನಪೀಠ ಪುರಸ್ಕೃತ ಲೇಖಕಿ

ಅಮೃತಾ ಪ್ರೀತಂ ಅವರ

ಖ್ಯಾತ ಕಾದಂಬರಿ

ಪಿಂಜರ್

(ಪ್ರಕಟಣೆ: ಅಂಕಿತ ಪುಸ್ತಕ ಬೆಂಗಳೂರು)

ಬಿಡುಗಡೆ ಸಮಾರಂಭ

ಭಾನುವಾರ ೨೧ - ೧ - ೨೦೦೭ರಂದು ಸಂಜೆ ೫.೩೦ಕ್ಕೆ

ಶ್ರೀರಾಮಮಂದಿರ, ತೀರ್ಥಹಳ್ಳಿ

ಇ-ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳು ಸೇರಿಸುವುದನ್ನ ನಾವುಗಳು ನಿಲ್ಲಿಸಬಹುದು (೧)

ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ.
ಅನುವಾದದಲ್ಲಿ ಸಾಧ್ಯವಾದಷ್ಟು ಬಳಕೆಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ ನೀಡಿದಂತೆ.

ಬರುವ ಒಂದೆರಡು ವಾರಗಳಲ್ಲಿ ಪ್ರತಿ ಲೇಖನವನ್ನೂ ಹಲವು ಕಂತುಗಳಲ್ಲಿ ಸೇರಿಸಲಾಗುವುದು. - ಹರಿ ಪ್ರಸಾದ್ ನಾಡಿಗ್

ರಿಚರ್ಡ್ ಎಮ್ ಸ್ಟಾಲ್ಮನ್, ಜನವರಿ ೨೦೦೨
(ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
(ಮೊದಲನೇ ಕಂತು)

GNU
ಇ-ಮೇಯ್ಲುಗಳಲ್ಲಿ M S ವರ್ಡ್ ಡಾಕ್ಯುಮೆಂಟುಗಳು ಬಂದರೆ ನಿಮಗೆ ಸಿಟ್ಟು ಬರೋದಿಲ್ವೆ? ವರ್ಡ್ ಅಟ್ಟಾಚ್ಮೆಂಟುಗಳು ಕಿರುಕುಳ ಕೊಡೋದಷ್ಟೇ ಅಲ್ಲ, ಜನರನ್ನು ಮುಕ್ತ ತಂತ್ರಾಂಶದ ಬಳಕೆಯಿಂದ ದೂರ ತಳ್ಳುತ್ತೆ. ಮೇಯ್ಲುಗಳಲ್ಲಿ ವರ್ಡ್ ಡಾಕ್ಯುಮೆಂಟುಗಳನ್ನು ಕಳುಹಿಸೋ ಈ ಅಭ್ಯಾಸವನ್ನ ನಾವುಗಳು ಬಹುಶಃ ಒಟ್ಟುಗೂಡಿದ ಒಂದು ಅತಿ ಸಾಮಾನ್ಯ ಪ್ರಯತ್ನದಿಂದ ನಿಲ್ಲಿಸಬಹುದು.

ಕಂಪ್ಯೂಟರ್ ಬಳುಸುವ ಸುಮಾರು ಜನ ಮೈಕ್ರೊಸಾಫ್ಟಿನ ವರ್ಡ್ ಬಳಸ್ತಾರೆ. ಅದು ಅವರಿಗೆ ದುರದೃಷ್ಟಕರವಾದುದು, ಏಕಂದ್ರೆ ವರ್ಡ್ ಬೇರೊಬ್ಬರ ಸ್ವಾಮ್ಯದಡಿ ಇರುವ ತಂತ್ರಾಂಶ. ಅದನ್ನು ಬಳಸುವವರಿಗೆ ತಂತ್ರಾಂಶವನ್ನು ಅಧ್ಯಯನ ಮಾಡಲು, ಬದಲಾಯಿಸಲು ಅಥವ ಬೇರೊಬ್ಬರೊಂದಿಗೆ ಹಂಚಿಕೊಳ್ಳಲು ಇರುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಇದಲ್ಲದೆ, ಮೈಕ್ರೊಸಾಫ್ಟ್ ತನ್ನ ಈ ತಂತ್ರಾಂಶದ ಪ್ರತಿ ಆವೃತ್ತಿಯೊಂದಿಗೂ ಈ ವರ್ಡ್ ಫೈಲುಗಳ ಪಾರ್ಮ್ಯಾಟ್ (ವಿನ್ಯಾಸ) ಬದಲಾಯಿಸುತ್ತದಾದ್ದರಿಂದ ಇದನ್ನು ಬಳಸುತ್ತಿರುವವರು ಪ್ರತಿ ಸಾರಿ ಹೊಸ ಆವೃತ್ತಿಯನ್ನು ಕೊಳ್ಳಲೇಬೇಕು - ತಮಗೆ ಬೇಕೋ ಬೇಡವೋ, ಮುರಿಯಲಾಗದ ಬಂಧನ. ಇಷ್ಟೇ ಅಲ್ಲದೆ, ಈ ತಂತ್ರಾಂಶವನ್ನು ಬಳಸುತ್ತಿರುವವರಿಗೆ ಹಲವು ವರ್ಷಗಳ ನಂತರ ಈಗ ಬರೆದಿಟ್ಟಿರುವ ವರ್ಡ್ ಡಾಕ್ಯುಮೆಂಟುಗಳೂ ಮುಂದೆ ಬರುವ ವರ್ಡ್ ಆವೃತ್ತಿಗಳಲ್ಲಿ ಓದಲು ಬರುವುದಿಲ್ಲ ಎಂಬುದು ತಿಳಿದುಬರಬಹುದೇನೊ.

ಆಲ್ಬರ್ಟ್ ಐನ್‍ಸ್ಟೈನ್

ಎರಡು ರೀತಿಯಲ್ಲಿ ನಾವು ಬದುಕಬಹುದು. ಜಗತ್ತಿನಲ್ಲಿರುವ ಯಾವುದರಲ್ಲೂ ಏನೂ ಪವಾಡವಿಲ್ಲ ಎಂದು ತಿಳಿದು ಬದುಕಬಹುದು. ಅಥವಾ ನಮ್ಮ ಸುತ್ತಲಿರುವ ಎಲ್ಲದರಲ್ಲೂ ಪವಾಡಗಳನ್ನು ಕಾಣುತ್ತಾ ಬದುಕಬಹುದು. ಯಾವುದು ಸರಿ ಅನ್ನುವುದು(ಆಯ್ಕೆ) ನಮಗೇ ಸೇರಿದ್ದು!

ಆಲ್ಬರ್ಟ್ ಐನ್‍ಸ್ಟೈನ್

ಅವರು ನನ್ನನ್ನು ನೋಡಲು ಬಂದಲ್ಲಿ ಸ್ವತಃ ನಾನೇ ಇಲ್ಲಿದ್ದೇನೆ. ಅವರು ನನ್ನ ಬಟ್ಟೆಗಳನ್ನು ನೋಡಲು ಬಂದಿದ್ದಲ್ಲಿ ದಯವಿಟ್ಟು ಅವರಿಗೆ ನನ್ನ ಸೂಟ್‌ಗಳನ್ನು ತೋರಿಸು.
- ಆಲ್ಬರ್ಟ್ ಐನ್‍ಸ್ಟೈನ್ (ಐನ್‌ಸ್ಟೈನ್ ವೇಷಭೂಷಣಗಳ ಬಗೆಗಿನ ಅನಾದರಕ್ಕೆ ಪ್ರಸಿದ್ಧಿ ಪಡೆದಿದ್ದ ವ್ಯಕ್ತಿ. ಒಮ್ಮೆ ಜರ್ಮನ್ ರಾಯಭಾರಿಯನ್ನು ಭೇಟಿಯಾಗುವ ಸಲುವಾಗಿ ಒಳ್ಳೆಯ ಬಟ್ಟೆ ಧರಿಸಿರಿ ಎಂದು ಅವರ ಪತ್ನಿ ಹೇಳಿದ್ದಕ್ಕೆ ಪ್ರತಿಕ್ರಯಿಸುತ್ತಾ)