ಪ್ರಸವ ವೇದನೆ?!

ಪ್ರಸವ ವೇದನೆ?!

ಈ ಲೇಖನ ಒಂದು ರೀತಿಯ ಸ್ವಗತ! ಈ ಸಂದರ್ಭವನ್ನು ಒಂದು ಕಡೆ "ದಾಖಲಿಸುವ".. ಅದರಿಂದ ಮುಂದೆ ಯಾವಗಲೋಮ್ಮೆ ಈ struggle ನ ನೆನೆಯುವ ಒಂದು ಪ್ರಯತ್ನ.

ಈ ಒಂದು ತಿಂಗಳು ಪೂರ್ತಿ tensions , pressures...ಹೀಗೆ. ಇವತ್ತು ಸಲ್ಪ ಆರಾಮು ಅನ್ನಿಸುತ್ತ ಇದೆ.
ಕೊನೆಗೂ ನನ್ನ ವೃತ್ತಿ ಜೀವನದ ಮೊದಲ Tapeout ನನ್ನಿಂದ ಸಾಧ್ಯವಾಯಿತು. ಒಂದು ರೀತಿಯಲ್ಲಿ ಖುಷಿ ಅನ್ನಿಸುತ್ತಾ ಇದೆ. ಈ ಕೊನೆಯ ಒಂದು ತಿಂಗಳು ಬೆಳಿಗ್ಗೆ ಸುಮಾರು ಹತ್ತು -ಹತ್ತೂವರೆಯಿಂದ ರಾತ್ರಿ ಹನ್ನೊಂದೂವರೆ.. ಹನ್ನೆರೆಡುವರೆ .. ಹೀಗೆ ಅದೆಷ್ಟು ಗಂಟೆ ಕೆಲಸ ಮಾಡಿದೇನೋ .. ಗೊತ್ತಿಲ್ಲ. ಕೊನೆಯ ತಿಂಗಳು ನಿಜವಾಗಿಯೂ ಪ್ರಸವ ವೇದನೆ!.

ಇದಕ್ಕಿಂತಲೂ ಮುಂಚೆ ನಾನು ಮಾಡಿದ Analog Circuit ಗಳ Layout ಗಳು fabrication ಗೆ ಹೋಗಿವೆ. ಆದರೆ ಅಲ್ಲಿ ನಾನು ಬೇರೆಯವರಿಗಾಗಿ ಕೆಲಸ ಮಾಡುತ್ತಿದ್ದೆ. ನನ್ನದೇ ಆದಂತಹ ಸ್ವಂತಹ ಜವಬ್ದಾರಿ ಇರಲ್ಲಿಲ್ಲ. ಯಾವುದೇ Tapeout ನನ್ನ ಹೆಸರಲ್ಲಿ ಆಗಿರಲಿಲ್ಲ. ಅಲ್ಲದೆ ಮುಂಚೆ ನಾನು ಕೇವಲ Layout ಗಳನ್ನು ಮಾಡುತ್ತಿದ್ದೆ. Circuit Design ಮಾಡಲು ಅವಕಾಶ ಸಿಕ್ಕಿರಲಿಲ್ಲ.

ಒಂದು ಪೂರ್ತಿ block ನ ಜವಬ್ದಾರಿ ನನ್ನ ಹೆಗಲ ಮೇಲೆ ಇತ್ತು. Circuit design ಮತ್ತು ಅದರ layout design . Semiconductors ಕ್ಷೆತ್ರದಲ್ಲಿಯೇ ನಿಜವಾಗಿಯೂ challnging ಆದಂತಹ PLL ( Phase Locked Loop) Design. ಆಗಂತ ಈ Tapeout ನಲ್ಲಿ ನನ್ನದು ಶೇಕಡ ನೂರರಷ್ಟೇನೂ ಇಲ್ಲ. ನನಗೆ ಒಂದು reference ಡಿಸೈನ್ ಕೊಡಲಾಗಿತ್ತು. ಅಲ್ಲದೇ ನನ್ನ PLL ನ Digital ಭಾಗವನ್ನು ನನ್ನ ಇಂಡಿಯಾ ಟೀಂ ನ ಸ್ನೇಹಿತ ಮಾಡಿಕೊಟ್ಟ. ಡಿಜಿಟಲ್ ಪಾರ್ಟ್ ನ Layout ಅನ್ನು ಇಲ್ಲಿಯ ಮಿತ್ಸುಭಿಷಿ ಯವರೇ ಮಾಡಿಕೊಟ್ಟರು. ನನ್ನದು ಏನಿದ್ದರೂ ನನ್ನ PLL ನ Analog ಭಾಗದ circuit ಮತ್ತು ಅದರ Layout ವಿನ್ಯಾಸ. Tapeout ನನ್ನ ಹೆಸರಲ್ಲೇ .. ಏಕೆಂದರೆ ಒಂದು ಪೇಸ್ ಲಾಕೆಡ್ ಲೂಪ್ ನಲ್ಲಿ ಈ ಅನಲಾಗ್ ಭಾಗ (charge-pump, Phase Frequency detector, Voltage Controlled Oscillator , Current Bias, ಮತ್ತು Loop Filter. )ತುಂಬಾ ಸೂಕ್ಷ್ಮ ಭಾಗ. ಸಮಯ ಮತ್ತು skill ಬೇಡುವನ್ತವು. ಡಿಜಿಟಲ್ ಭಾಗದಲ್ಲಿ Reference Divider ಮತ್ತು feedback ( Frequency) divider ಗಳು ಸಹಾ ತುಂಬ PLL ನ ಅತಿ ಮುಖ್ಯ ಭಾಗವಾದರೂ ಅಂತಹ ಅತಿ ಹೆಚ್ಚಿನ ಪ್ರಯತ್ನವನ್ನೇನೂ ( ಅನಲಾಗ್ ಭಾಗಗಳಿಗೆ ಹೋಲಿಸಿದರೆ) ಬೇಡುವುದಿಲ್ಲ.

PLL ಅಂದ್ರೆ ಏನು, ನನ್ನ PLL ನ ವಿಶೇಷ ಏನು, ಅಲ್ಲದೇ ಈ PLL ಕೆಲಸ ಮಾಡುವ ರೀತಿಯಲ್ಲಿ ನಮ್ಮ ಜೀವನದ ಬಗ್ಗೆ ಅತಿ ದೊಡ್ಡ ಪಾಠ ಇದೆ. ಮುಂದೆ ಯಾವಾಗಲಾದರೊಮ್ಮೆ ಆಸಕ್ತಿ ಬಂದಾಗ ಈ ಬಗ್ಗೆ ಬರೆಯುವೆ.

Rating
No votes yet

Comments