ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೊಸ-ಊರು,ರೋಡು

ನೀವು ಬೆಂಗಳೂರಿನವರೇ..?
ಬೆಂಗಳೂರಿಗೆ ಹೋಗಿ ಬಂದಿರೇ?
ಹೊಸೂರು ರೋಡ್ ಗೊತ್ತಲ್ಲವೇ.?
ಐ.ಟಿ,ಬಿ.ಟಿ ಯವರಾದರಂತೂ
ಗೊತ್ತೆ ಇರಬೇಕಲ್ಲವೇ..?

ಇದು ಹೊಸೂರು ರೋಡು.
ಎಲ್ಲಿಂದ ಎಲ್ಲಿ ನೋಡಿದರೂ
ನಿಂತ ಕಾರು,ಬಸ್ಸು,ಲಾರಿ ಲೋಡು.
ಹೀಗಿರಲಿಲ್ಲವಂತೆ...!
ವರುಷಗಳ ಹಿಂದೆ,
ಇಲ್ಲಿ..
ಈ ದಟ್ಟಣೆ,ಸಂಘರ್ಷಣೆ.
ವೇಗವಾಗಿ ಓಡುತ್ತಿದ್ದವಂತೆ
ಹಲ-ಕೆಲ
ಬಸ್ಸು ಲಾರಿಗಳು.

ಉಬಂಟು ಫಿಸ್ಟಿಯಲ್ಲಿ ಕನ್ನಡ (kannada in ubuntu feisty)

ಉಬಂಟು ಫಿಸ್ಟಿಯಲ್ಲಿ  (ubuntu feisty) ಕನ್ನಡ ಉಪಯೊಗಿಸಬೇಕೇ?

Are you trying to view kannada pages in ubuntu feisty (7.0.4)? You will end up seeing lots of junk characters for sure. Here I write a small how to which is a continuation of hpn's other two documentations available in following links :

 http://dev.sampada.net/wiki/Kannada-on-Ubuntu-Edgy

 http://dev.sampada.net/wiki/Kannada-on-Ubuntu-Edgy

 And also the ubuntu documentation on SCIM tool

 https://wiki.ubuntu.com/InputMethods/SCIM/Setup

ಮತ್ಲೆ ಮಳೆ ಹುಯ್ಯುತಿದೆ..

ಮತ್ತೆ ಮಳೆ ಹುಯ್ಯುತಿದೆ..ಎಲ್ಲ ನೆನಪಾಗುತಿದೆ.... ಆಮೇಲೆ ಏನೂಂತ ತಿಳಿದವರು ತಿಳಿಸಿ..ತುಂಬಾ ಕಾಡುತ್ತಿದೆ ಈ ಕವನ...ಮುಂಗಾರು ಆರಂಭವಾಗುತ್ತಿದೆ..ಏನೆಲ್ಲಾ ಹೊಸ ಕನಸುಗಳಿಗೆ ಮುನ್ನುಡಿ ಬರೆಯುತಿದೆ. ಮಳೆಗೆ ಸಿಲುಕಿ ಮುರಿದು ಬಿದ್ದ ಮನೆ, ಅಂಗಳದಲಿ ಆರಳಿದ ಮುಗಿಲ ಮಲ್ಲಿಗೆ..

ಕರ್ನಾಟಕದ ಹಾನಿಮನ್ ಡಾ.ಕೆ. ವಸಂತಕುಮಾರ ರಾವ್,ಕೈಕಂಬ

(ಬಂಟ್ವಾಳ ತಾಲೂಕಿನ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ.ವಿಶ್ವೇಶ್ವರ ವಿ ಕೆ ಅವರ ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಹತ್ತನೇ ಪುಸ್ತಕದಿಂದ ಆಯ್ದ ಭಾಗಗಳು.

"ನಾಡಿಗೆ ನಮಸ್ಕಾರ"ದ ಕೃತಿಗಳ ಅನಾವರಣ

ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯಲ್ಲಿ ಮೊದಲ ಬಾರಿಗೆ ಪ್ರಕಟಿಸಲಿರುವ ಮೊದಲ ಕಂತಿನ ಹತ್ತು ಪುಸ್ತಕಗಳ ಅನಾವರಣ ಮೇ ಆರರಂದು ನಡೆಯಲಿದೆ.
ಸ್ಥಳ: ಉಡುಪಿಯ ಕಿದಿಯೂರು ಹೋಟೆಲ್ ಮಹಾಜನ್ ಹಾಲ್
ಅಧ್ಯಕ್ಷತೆ: ಪ್ರೊ. ಎಸ್ ಜಿ ಸಿದ್ಧಲಿಂಗಯ್ಯ, ಅಧ್ಯಕ್ಷರು, ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರ

ವಿಫಲ ಪ್ರಯತ್ನ

ಕವಿತೆಯೆಂದರೆ ಏಕೆ,

ಯಾವಾಗಲೂ ಹೀಗೆ,

ಅರ್ಥವಾಗದು ಓದಿದರೆ ಒಮ್ಮೆ,

ಓದಲೇಬೇಕೆ ಇನ್ನೊಮ್ಮೆ, ಮತ್ತೊಮ್ಮೆ?

 

ಕವಿತೆಯಲಿ ಏಕೆ, ಕಠಿಣ ಪದಗಳ ಬಳಕೆ,

ಕವಿತೆ ಓದಲು, ಜೊತೆಗೆ ಕನ್ನಡ-ಕನ್ನಡ ನಿಘಂಟು ಬೇಕೆ?

ಕವಿತೆಯಲಿ ಏಕೆ, ಯಾವಾಗಲೂ ಹೀಗೆ,

ಎಂದೂ ಕೇಳದ ಪದಗಳ ಚರಣ,

ಸುತ್ತಿ-ಬಳಸಿ, ಮುಂದೆ-ಹಿಂದೆ ತಿರುಚಿ,

ಬರೆದ ಉದ್ದುದ್ದ ಸಾಲುಗಳ ತೋರಣ?

 

ಕವಿತೆಯಲಿ ಏಕೆ, ಇರಬಾರದೆ ಹೀಗೆ

ಸ್ವಲ್ಪ ನೀತಿ, ಲಘು ಹಾಸ್ಯ,

ಸರಳ ಪದಗಳ ಪ್ರಯೋಗ,

ಇರಲಿ ಬೇಕಾದರೆ ಛಂದಸ್ಸು, ಮಾತ್ರೆ, ಪ್ರಾಸ!

 

ಏಕಿರಬಾರದು ಕವಿತೆಯಲಿ,

ಓದುಗನ ಮನದಾಳದಲಿಳಿದು

move ಗೆ (ಸರಿಯಾದ) ಕನ್ನಡ ಶಬ್ದ ಏನು ?

ಇವತ್ತು 'ಕನ್ನಡಿಗರ ಜನ್ಮ ಸಾರ್ಥಕತೆ' ಎಂಬ ಪುಸ್ತಕವನ್ನು ಮತ್ತೆ ಓದುತ್ತಿದ್ದೆ.

ಅದರಲ್ಲಿ ಇತ್ತು - 'ಪರಭಾಷೆಯ ವಿಚಾರಗಳನ್ನು ಸ್ವಭಾಷೆಯ ಅಜ್ಞಾನವಿದ್ದುದರಿಂದ ಅಚ್ಚಗನ್ನಡದಲಿ ತಿಳಿಸಲಿಕ್ಕೆ ಬರದಿದ್ದರೆ ಅದು ಕನ್ನಡದ ದೋಷವಲ್ಲ. ತಾನು ಕುಣಿಯಲಾರದೆ ನೆಲ ಡೊಂಕೆಂದು ಹೇಳುವದೂ ಕನ್ನಡದಲ್ಲಿ ವಿಚಾರಗಳನ್ನು ಪ್ರಕಟಿಸಲಿಕ್ಕೆ ಬರುವದಿಲ್ಲವೆನ್ನುವದೂ ಒಂದೇ ಸರಿ' .

ದನದಿಂದ ಜನರೇಟರಿಗೆ ಸ್ಪೂರ್ತಿ (ಇ-ಲೋಕ-21)(5/5/2007)

biorefineryಅಮೆರಿಕಾದ ಮಿಲಿಟರಿಗೋಸ್ಕರ ಪುರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ರಚಿಸಿದ, ವಿದ್ಯುಜ್ಜನಕ ಯಂತ್ರಕ್ಕೆ ದನದ ಹೊಟ್ಟೆಯೇ ಸ್ಪೂರ್ತಿ. ದನದ ಜಠರವು ಮಿಥೇನ್ ಅನಿಲವನ್ನು ಉತ್ಪಾದಿಸುತ್ತದಂತೆ.

ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?

ನಾನು ಸಂಪದದ ಹೊಸ ಸದಸ್ಯ. ಬರಹ ಕೂಡ ನನಗೆ ಹೊಸತೇ.

ಕನ್ನಡದಲ್ಲಿ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸಬೇಕಾದರೆ ಏನು ಮಾಡಬೇಕು? ಬರಹದಿಂದ ಹೊರಬರಬೇಕೆ? ಅಥವಾ ಬೇರೆ ಸುಲಭ ದಾರಿ ಇದೆಯೆ? ದಯವಿಟ್ಟು ತಿಳಿಸಿ.