ರಾಮನಿಲ್ಲವೇ?? ಇಲ್ಲ ಬಿಡಿ...

ರಾಮನಿಲ್ಲವೇ?? ಇಲ್ಲ ಬಿಡಿ...

ಬರಹ

ರಾಮನಿಲ್ಲವೇ?? ಇಲ್ಲ ಬಿಡಿ...

ರಾಮನಿಲ್ಲವೇ??
ಇಲ್ಲ, ಬಿಡಿ...

ದೇವರೇ ಇಲ್ಲವೇ??
ಇಲ್ಲ, ಬಿಡಿ...

ಆದರೆ...

ಜಲ ಪ್ರಳಯಕೆ
ಎಡೆ ಮಾಡಬೇಡಿ...

ಮೀನುಗಾರರ
ಹೊಟ್ಟೆಯನು ಹೊಡಿಬೇಡಿ...

ಜನರ ಹಣವನು
ಪೋಲು ಮಾಡಬೇಡಿ...

ದೇಶದ ಭದ್ರತೆಗೆ
ಧಕ್ಕೆ ತರಬೇಡಿ...

ಹವಳಗಳ, ಮೃದ್ವಂಗಿಗಳ
ಮರಣ ಮೃದಂಗ ಬಾರಿಸಬೇಡಿ...

ಥೋರಿಯಂ ನಿಕ್ಷೇಪವನು
ನಾಶ ಮಾಡಬೇಡಿ...

ನೀಚ ರಾಜಕಾರಣಕೆ
ಧರ್ಮ ಬಳಸಬೇಡಿ...

ರಾಮನಿಲ್ಲ ಬಿಡಿ...
ರಾಮನ ಹೆಸರಲ್ಲಿ ದೇಶದ ನಿರ್ನಾಮ ಮಾಡಬೇಡಿ...