ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಿತನುಡಿ

ಕನ್ನಡ ಬಳಸಿ, ಕನ್ನಡ ಬೆಳೆಸಿ, ಕನ್ನಡ ಕಲಿಸಿ, ಕನ್ನಡ ಬರೆಸಿ, ಕನ್ನಡ ಓದಿಸಿ, ಕನ್ನಡಕ್ಕಾಗಿ ದುಡಿಯಿರಿ, ಜೈ ಕನಾ೯ಟಕ ಮಾತೆ.

ಸಮುದ್ರ - ಉಲ್ಲಾಸ...

ಈ ಪುಟ್ಟಿಗೆ ನೀರು ಅಂದ್ರೆ ಬಹಳ ಇಷ್ಟ, ನನ್ನ ಹಾಗೆ...!!!

ಸುರತ್ಕಲ್ ಇಡ್ಯದ ಬೀಚ್ ನಲ್ಲಿ ನೀರೊಳಗೆ ನುಗ್ಗುತ್ತಾ ಅವಳು, ನನ್ನಲ್ಲಿ ಅಲೆಗಳ ಜತೆ ಕೊಚ್ಚಿ ಹೋಗದಂತೆ ಕೈ ಹಿಡಿದುಕೊಳ್ಳಲು ಹೇಳಿದಳು. ಅವಳ ಕೈ ಹಿಡಿದುಕೊಂಡೆ, ಜತೆಗೆ ಆ ಅಪರೂಪದ ಕ್ಷಣವನ್ನೂ ಸೆರೆ ಹಿಡಿದುಕೊಂಡೆ...

ಸಿ.ಇ.ಟಿ. ಸುಲಭವಿರಲಿ.

ಕಾಮೆಡ್ ಕೆ ಪರೀಕ್ಷೆ ಮುಗಿದಿದೆ. ನಾಳೆ(೯-೫-೦೭) ಸಿ.ಇ.ಟಿ. ಪರೀಕ್ಷೆ ನಡೆಯುವುದು.
ಪಿ.ಯು.ಸಿ. ಓದುವ ಮಕ್ಕಳು ಅದಕ್ಕೆ ಸಮನಾಗಿ ಈ ಪರೀಕ್ಷೆಗಳಿಗೂ ತಯಾರಿ ನಡೆಸಬೇಕು.
ಕಾಮೆಡ್ ಕೆ ಪರೀಕ್ಷೆ ಮುಗಿಸಿ ಬಂದ ಮಕ್ಕಳ ಮುಖ ನೋಡಿ ನನಗೆ ಸಂಕಟವಾಯಿತು.
ವರ್ಷ ಪೂರ್ತಿ ಹಗಲೂ ರಾತ್ರಿ ಕ್ಲಾಸ್,ಟ್ಯೂಷನ್,ಹೋಮ್ ವರ್ಕ್ ಎಂದು ನಿದ್ರೆ ಬಿಟ್ಟು

ನನಗೂ ನಿಮಗೂ ಸಮಾನವಾದೊಂದು ಧರ್ಮ

ಉದ್ಧಾಲಕ ಹೇಳಿದ್ದರಲ್ಲಿ ತಪ್ಪೇನಿದೆ? ಅವನೇನು ಮಗನನ್ನು ಅವನ ಮನಸ್ಸಿನ ವಿರುದ್ಧ ನಡೆದುಕೊಳ್ಳಲು ಹೇಳಿದನೆ? ತನಗೆ ತನ್ನ ಧರ್ಮವನ್ನು ಆಚರಿಸಲು ಬಿಡು ಎಂದ, ಅಷ್ಟೇ ಅಲ್ಲವೆ? ಶ್ವೇತಕೇತುವಿಗೂ ಅವನು ಅಂಥ ಸ್ವಾತಂತ್ರ್ಯ ಕೊಟ್ಟಿಲ್ಲವೆ? ಉದ್ಧಾಲಕ ನಮಗೆ ಇಲ್ಲಿ ಒಬ್ಬ ಉದಾರ ಮನಸ್ಸಿನವನಾಗಿ ಕಾಣುವುದಿಲ್ಲವೆ? ಇದರಾಚೆಗೆ ನಾವು ಕಾಣಬೇಕಾದದ್ದೂ ಇದೆ ಇಲ್ಲಿ.

ಸಂಸಾರ ಎಂದರೆ ಏನು? ಅದಕ್ಕೂ ಅದರದ್ದೇ ಆದ ಒಂದು ಧರ್ಮವಿಲ್ಲವೆ? ನಾವೆಲ್ಲ ಒಂದೇ ಕುಲ, ರಕ್ತ, ಏನೋ ಸಂಬಂಧ ಎಂಬ ಭಾವದಲ್ಲಿ ಒಂದೇ ಸೂರಿನಡಿ ಬದುಕುತ್ತಿರುವಾಗಲೂ ಕೆಲವೊಂದು ಕಟ್ಟುಪಾಡುಗಳು ಇದ್ದೇ ಇರುತ್ತವೆ. ಸಂಸಾರದ ಎಲ್ಲ ಸದಸ್ಯರ ಮನಸ್ಸಿನಲ್ಲೂ ಸುಪ್ತವಾಗಿಯೋ ಪರೋಕ್ಷವಾಗಿಯೋ ಅವರ ಚಟುವಟಿಕೆಗಳನ್ನು, ನಿರ್ಧಾರಗಳನ್ನು, ನಡತೆಯನ್ನು ನಿಯಂತ್ರಿಸುವ ಒಂದು ಸಮಷ್ಟಿಪ್ರಜ್ಞೆ ಇದ್ದೇ ಇರುತ್ತದೆ. ನನ್ನಿಂದ ಇತರರಿಗೆ ತೊಂದರೆಯಾಗಬಾರದು ಎಂಬುದೇ ಸ್ಥೂಲವಾಗಿ ಈ ಸಮಷ್ಟಿಪ್ರಜ್ಞೆ ಎನ್ನಬಹುದೇನೋ. ಒಬ್ಬೊಬ್ಬರೂ ಅವರವರ ಇಚ್ಚಾನುಸಾರ ಬದುಕುವುದಕ್ಕೆ ಸಂಸಾರ ವ್ಯವಸ್ಥೆ ಅವಕಾಶ ನೀಡುವುದಿಲ್ಲ. ಒಬ್ಬ ಸದಸ್ಯನ ನಡವಳಿಕೆಗಳಿಗೆ ಇಡೀ ಸಂಸಾರ ಬಾಧ್ಯವಾಗುವುದರಿಂದ ಸಂಸಾರಕ್ಕೆ ತನ್ನದೇ ಆದ ಒಂದು ಧರ್ಮ ಅಗತ್ಯ ಕೂಡ. ಇದು ಸಂಸಾರಕ್ಕೆ ಸಂಬಂಧಿಸಿದಂತೆಯೂ ಸತ್ಯ, ಸಮಾಜಕ್ಕೆ ಸಂಬಂಧಿಸಿದಂತೆಯೂ ಸತ್ಯವೇ. ಇದಿಲ್ಲದೇ ಹೋದರೆ ಇಬ್ಬರು ಕೂಡ ಒಂದೇ ಸೂರಿನಡಿ, ಒಂದೇ ಸಮಾಜದಲ್ಲಿ ಬದುಕುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ವ್ಯಕ್ತಿಯ ನಡವಳಿಕೆಗೆ ಸಮಾಜದ, ಪರಂಪರೆಯ, ಧರ್ಮದ, ನ್ಯಾಯಾನ್ಯಾಯದ ನಿಯಂತ್ರಣಗಳಿರುವಂತೆಯೇ ಒಂದು ಸಂಸಾರಕ್ಕೂ ಅದೆಲ್ಲ ಇರುತ್ತದೆ. ಇಲ್ಲಿ ಒಬ್ಬ ವ್ಯಕ್ತಿಗಿಂತ ಹೆಚ್ಚಿನವರ ಬದ್ಧತೆಯ ಪ್ರಶ್ನೆ ಬರುವಾಗ ಸಂಸಾರದ ಧರ್ಮ ಎಂಬುದು ಹೆಚ್ಚು ಹೆಚ್ಚು ತೊಡಕಿನ ಪ್ರಶ್ನೆಯಾಗುತ್ತದೆ. ಕರ್ತವ್ಯಗಳು ಮತ್ತು ಹಕ್ಕುಗಳ ನಡುವೆ ಸಮತೋಲದ ಹಂಚಿಕೆ ಕೂಡ ಇರುವುದಿಲ್ಲ ಸಂಸಾರದಲ್ಲಿ. ಅದಕ್ಕೆ ಯಾರೋ ಒಬ್ಬ ಅಥವಾ ಒಬ್ಬಳು ಅಧಿಕೃತ ಉತ್ತರದಾಯಿತ್ವವನ್ನು ಹೊತ್ತುಕೊಂಡವರಿರುತ್ತಾರೆ. ಅವರ ಅಧಿಕಾರ ಹೆಚ್ಚು. ಅವರ ಮಾತೇ ನಡೆಯಬೇಕೆಂಬ ಪರಿಪಾಠ ಅನೇಕ ಸಂದಿಗ್ಧಗಳಿಗೆ, ಭಿನ್ನಾಭಿಪ್ರ್‍ಆಯಗಳಿಗೆ ಕಾರಣವಾಗುತ್ತದೆ. ಹೊಂದಾಣಿಕೆ ಎಂಬುದು ಮಹತ್ವದ ಮತ್ತು ಅನಿವಾರ್ಯವಾದ ಒಂದು ಅಂಗ, ಸಂಸಾರಕ್ಕೆ.

ಟಿಪ್ಪು ಸುಲ್ತಾನ್ ಅಲ್ಲ ತಿಪ್ಪು ಸುಲ್ತಾನ್

ನಾನು ಬಹಳ ದಿನಗಳ ಹಿಂದೆ ಚಿತ್ರದುರ್ಗಕ್ಕೆ ಹೋದಾಗ ಹತ್ರದಲ್ಲೆ ಇರುವ 'ನಾಯಕನಹಟ್ಟಿ' ಗೆ ಹೋಗಿದ್ದೆ.

ಅಲ್ಲಿಗೆ ಹೋಗಿದ್ದಾಗ ಒಂದು ಸೋಜಿಗ ತಿಳಿಯಿತು..ಒಂದು ಕತೆಯ ಪ್ರಕಾರ ..

ಯಾವ ಮೋಹನ ಮುರಳಿ ಕರೆಯಿತೋ..

ಶ್ರೀವತ್ಸ ಜೋಷಿಯವರು ಸಂಗೀತ ಕಾರ್ಯಕ್ರಮಕ್ಕೆ ಹೋದ ಗುಂಗಿನಲ್ಲಿ ಬರೆದ ಈ ವಾರದ ವಿಚಿತ್ರಾನ್ನದಲ್ಲಿ ಮುರಳಿಯ ಗಾನದ ರಸಾಯನ ಬಡಿಸಿದ್ದಾರೆ.ನಿಮಗೆ ಬಾನ್ಸುರಿ,ಕೊಳಲು,ತಬಲಾ,ಮೃದಂಗ,ಜುಗಲ್ ಬಂದಿ ಒರೆಗಳ ಪರಿಚಯವಿದ್ದರೂ,ಇಲ್ಲದಿದ್ದರೂ ನೀವು ಸಂಗೀತಕ್ಕಾಗಿ ಪರಿತಪಿಸುವಂತೆ ಮಾಡುವ ವಿವರಣೆ ಇಲ್ಲಿ ಮೂಡಿಬಂದಿದೆ.

ಭೇಲನೆಂಬ ಭಾರತೀಯ ವಿಜ್ಞಾನಿ

'ಮಾನವ ದೇಹದೊಳಗೆ ರಕ್ತ ಪದೇ ಪದೇ ತಿರುಗುವ ಕ್ರಿಯೆಯನ್ನು ಅಂದರೆ Blood Circulation ನ್ನು ಕಂಡುಹಿಡಿದ ವಿಜ್ಞಾನಿ ಯಾರು?' ಎಂದು ಕೇಳಿದರೆ ಆರನೇ ತರಗತಿಯ ಹುಡುಗ ಕೂಡ ’ವಿಲಿಯಮ್ ಹಾರ್ವೇ’ ಎನ್ನುತ್ತಾನೆ. ಎಲ್ಲ ವೈದ್ಯಕೀಯ ವಿಜ್ಞಾನಿಗಳೂ ಅವನನ್ನು ’ ಈ ವರೆಗೆ ವೈದ್ಯ ವಿಜ್ಞಾನ ಕಂಡ ಅತ್ಯದ್ಭುತ ಸಂಶೋಧನೆ ಯ ಕರ್ತೃ’ ಎಂದೇ ಹೊಗಳುತ್ತಾರೆ.