ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮರೆಯಲಾಗದ ಮೂರು ಒಳ್ಳೆಯ ಕಥೆಗಳು.

ನಿನ್ನೆ ಎ.ಎನ್.ಮೂರ್ತಿರಾಯರು ಬರೆದ ಪಾಶ್ಚಾತ್ಯ ಸಣ್ಣ ಕಥೆಗಳು ಎಂಬ ಪುಸ್ತಕ ಓದಿದೆ. ಅದರಲ್ಲಿರುವ ಏಳು ಕಥೆಗಳಲ್ಲಿ ಮೂರು ಬಹಳೇ ಚೆನ್ನಾಗಿವೆ. ಅವುಗಳಲ್ಲೆರಡನ್ನು ಬೇರೆಡೆ ಈಗಾಗಲೇ ಓದಿದ್ದೆ. ಅವು ಬಹಳ ಚೆನ್ನಾಗಿದ್ದವು . ಅವು ಈ ಪುಸ್ತಕದಲ್ಲಿ ಸಿಕ್ಕವು.

ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ

ಇತ್ತೀಚಿನ ಕನ್ನಡ-ಇಂಗ್ಲಿಷ್ ಕಲಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೆ ನನ್ನ ತಲೆಯಲ್ಲಿ ಎರಡು ಭಾಷೆಗಳ ಕಲಿಕೆಯ ಬಗ್ಗೆ ಕೆಲವು ವಿಚಾರಗಳು ಹಾದು ಹೋದವು.
ಹುಟ್ಟಿದ ಕೆಲವು ದಿನಗಳ ನಂತರ ಮಗುವು ತನ್ನಿಂತಾನೆ ಉಚ್ಚಾರ ಮಾಡುವ ಮೊದಲ ಅಕ್ಷರ "ಅ" ಹಾಗು ಕನ್ನಡದ ಅಕ್ಷರಮಾಲೆಯಲ್ಲಿರುವ ಮೊದಲ ಅಕ್ಷರ ಕೂಡ "ಅ" ಮತ್ತು "ಆ". ಇದರಿಂದ ಕನ್ನಡ ಭಾಷೆ ಮಗುವಿಗೆ ತುಂಬ ಸ್ವಾಭಾವಿಕವಾಗಿದೆ. ವಿದ್ಯಾಭ್ಯಾಸ ಪ್ರಾರಂಭವಾದ ಮೇಲೆ ಮಕ್ಕಳು ಮೊದಲು ಸ್ವರಾಕ್ಷರಗಳ ಉಚ್ಚಾರ ಕಲಿಯುವುದರಿಂದ ಹಾಗು ಅವುಗಳ ಉಚ್ಚಾರ ಸರಳ- ಸುಲಭವಾಗಿರುವುದರಿಂದ, ಕನ್ನಡ ಮೊದಲು ಕಲಿಯಲು ಬಹಳ ಅನುಕೂಲಕರ ಹಾಗು ಮಕ್ಕಳ ಕಲಿಕೆಯ ಕ್ರಮಕ್ಕೆ ಪೂರಕ.
* ಮಕ್ಕಳು ಕನ್ನಡದಲ್ಲಿ ಮೊದಲು ಸ್ವರಾಕ್ಷಾರಗಳನ್ನು ಕಲಿಯುವುದು ನಂತರ ವ್ಯಂಜನ ತದನಂತರ ಅವರ್ಗೀಯ ವ್ಯಂಜನ, ಹಾಗಾಗಿ ಕಲಿಯುವ ಅಕ್ಷರಗಳ ಈ ಸರಣಿ ಸರಳ ಹಾಗು ಸುಲಭ ಉಚ್ಚಾರಣೆಯಿಂದ ಮೊದಲ್ಗೊಂಡು ಕಷ್ಟ ಉಚ್ಚಾರವಾಗುತ್ತ ಹೋಗುತ್ತದೆ.
* ಮೊದಲು ಸುಲಭ ಉಚ್ಚಾರ ಮಾಡಬಹುದಾದ ಸ್ವರಗಳು( ಅ, ಆ, ಇ, ಈ, ಉ, ಊ, ಋ, ೠ, ಎ, ಏ, ಐ, ಒ, ಓ, ಔ, ಅಂ, ಅಃ). ನಂತರ ಕಷ್ಟವಾದಂತಹ 'ಕ' ವರ್ಗ, 'ಚ' ವರ್ಗ, 'ಟ' ವರ್ಗ, 'ತ' ವರ್ಗ, 'ಪ' ವರ್ಗ ನಂತರ ಅವರ್ಗೀಯ ವ್ಯಂಜನ( ಯ, ರ, ಲ, ವ, ಶ, ಸ, ಹ, ಳ)
* ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವರ್ಗದ ಅಕ್ಷರಗಳ ಉಚ್ಚಾರದ ಅಂತರ ಬಹಳ ಕಡಿಮೆ ಇದೆ. ಉದಾ: 'ಕ' ಮತ್ತು 'ಖ' ಎರಡು 'ಕ' ವರ್ಗಕ್ಕೆ ಸೇರಿವೆ. ಆದರೆ ಇವುಗಳ ಉಚ್ಚಾರದಲ್ಲಿರುವ ಅಂತರ ಕೇವಲ ಉಸಿರಿಗೆ ಒತ್ತು ಕೊಡುವುದು.
* 'ಕ' ವರ್ಗದ ಅಕ್ಷರಗಳು ಉಚ್ಚಾರಣೆಯ ದೃಷ್ಟಿಯಿಂದ 'ಚ' ವರ್ಗಕ್ಕಿಂತ ಸುಲಭವಾಗಿವೆ.
* ಙ, ಞ - ಈ ಅಕ್ಷರಗಳ ಉಚ್ಚಾರಣೆ ಕಠಿಣವಾಗಿದೆಯಾದರೂ ಇವು ಮೊದಲು ಕಲಿಯುವ ಪದಗಳಲ್ಲಿ ಬರುವುದಿಲ್ಲ( ಉದಾ: ಅರಸ, ಆಡು, ಇಲಿ, ಈಶ)

ಸುಭಾಷಿತ

ಚೇಳಿನ ವಿಷವು ಅದರ ಕೊಂಡಿಯಲ್ಲಿದೆ. ದುಂಬಿಯ ವಿಷವು ಅದರ ಬಾಯಲ್ಲಿದೆ.
ಹಾವಿನ ವಿಷವು ಅದರ ಹಲ್ಲಿನಲ್ಲಿದೆ. ಆದರೆ ದುಷ್ಟನಿಗಾದರೋ ಮೈಯೆಲ್ಲ ವಿಷ!

ಕನ್ನಡಸಾಹಿತ್ಯ.ಕಾಂ ಮನವಿಗೆ ಪ್ರೊ|| ಯು ಆರ್‍ ರಾವ್ ರವರಿಂದ ಬೆಂಬಲ

ಕನ್ನಡಸಾಹಿತ್ಯ.ಕಾಂ ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಸಗತಿ(ಸ್ಥಳೀಯ) ಭಾಷೆಗಳ ಪರಿಸರ ನಿರ್ಮಾಣಕ್ಕಾಗಿ, ಕನ್ನಡನಾಡಿನ ಎಲ್ಲ ಶಾಲೆಗಳಲ್ಲಿನ ಗಣಕಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ ಹಾಗೂ ಎಲ್ಲ ಸೈಬರ್‍ ಕೆಫೆಗಳಲ್ಲಿ, ಕನ್ನಡದ ಉಚಿತ ತಂತ್ರಾಂಶಗಳಾದ 'ಬರಹ' ಹಾಗೂ 'ನುಡಿ' ಗಳನ್ನು ಕಡ್ಡಾಯವಾಗಿ ಅನುಸ್ಥಾಪಿಸಲು ಆದೇಶ ಹೊರಡಿಸುವಂತೆ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲುದ್ದೇಶಿಸಿರುವ ಮನವಿ ಪತ್ರಕ್ಕೆ, ಈಗಾಗಲೇ, ನಾಡಿನ ವಿವಿಧ ಕ್ಷೇತ್ರಗಳ ಖ್ಯಾತನಾಮರು, ವಿದ್ಯಾರ್ಥಿಗಳು, ತಂತ್ರಾಂಶ ತಜ್ಞರು ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರೆತಿದೆ.