ಕನ್ನಡ: ನಮಗಿರುವ ಆಯ್ಕೆಗಳು

ಕನ್ನಡ: ನಮಗಿರುವ ಆಯ್ಕೆಗಳು

ಈ ತಲೆಬರಹದ ಲೇಖನವೊಂದನ್ನು ಈ ತಿಂಗಳ ( ಅಕ್ಟೋಬರ್ ೨೦೦೭) ಮಯೂರದಲ್ಲಿ ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ.ನಾರಾಯಣ ಅವರು ಬರೆದಿದ್ದಾರೆ . ( ಅದೇಕೋ ಸಂಪದದ ಅವರ ಬ್ಲಾಗ್ ನಲ್ಲಿ ಅವರ ಲೇಖನಗಳು ಇತ್ತೀಚೆಗೆ ಕಾಣುತ್ತಿಲ್ಲ )
ಸಾರಾಂಶ ಹೀಗಿದೆ .
ಕನ್ನಡದಲ್ಲಿ ಅನೇಕ ಬಗೆಗಳಿವೆ. ಪ್ರಮಾಣ(Standard) ಕನ್ನಡವನ್ನು ಎಲ್ಲ ಕನ್ನಡಿಗರ ನಡುವಿನ ಸಂವಹನಕ್ಕಾಗಿ ಶಿಕ್ಷಣದಲ್ಲೂ , ಬರಹದಲ್ಲೂ ಅಳವಡಿಸಿಕೊಂಡೆವು. ಆದರೆ ಈ ಪ್ರಮಾಣ ಕನ್ನಡವು ನಮ್ಮಲ್ಲನೇಕರಿಗೆ ನಮ್ಮದಲ್ಲ ಎನಿಸುತ್ತಿದೆ. ಮಾತಾಡುವ ಕನ್ನಡ , ಬರೆಯುವ ಕನ್ನಡ ಬೇರೆ ಬೇರೆ ಆಗಿಬಿಟ್ಟಿದೆ. ಕಲಿತವರೂ ಪ್ರಮಾಣಕನ್ನಡವನ್ನು ಸರಿಯಾಗಿ ಬರೆಯಲಾಗದ ಮತ್ತು ಮಾತನಾಡಲಾಗದ ಪರಿಸ್ಥಿತಿ ಉಂಟಾಗಿದೆ. ಕನ್ನಡದ ಬಹುತ್ವವನ್ನು ನಿಭಾಯಿಸುವದು ಹೇಗೆ ? ಎಂಬುದು ಸಮಸ್ಯೆ ಆಗಿದೆ. ನಮ್ಮ ಪ್ರಭೇದಗಳನ್ನೂ ಉಳಿಸಿಕೊಳ್ಳಬೇಕಿದೆ. ನಾವು ಎಲ್ಲ ಪ್ರಬೇಧಗಳನ್ನು ಬಳಸಲು ಆಗಲಿಕ್ಕಿಲ್ಲ ; ಆದರೆ ಅವುಗಳ ಪರಿಚಯ ನಮಗಿರಬೇಕು . ಅವುಗಳನ್ನು ಸಹಿಸಿಕೊಳ್ಳುವವರು ಆಗಿರಬೇಕು. ಅದಕ್ಕೆ ಅನುಗುಣವಾಗಿ ನಮ್ಮ ಶಿಕ್ಷಣವನ್ನು ಬದಲಿಸಬೇಕು . ಪ್ರಮಾಣ ಕನ್ನಡವನ್ನೂ ಒಳಗೊಂಡು ಎಲ್ಲ ಕನ್ನಡಗಳನ್ನೂ ತಿಳಿಯಬೇಕು. ಶುದ್ಧತೆಯ ಗೀಳನ್ನು ಬಿಟ್ಟುಕೊಡಬೇಕು .

ಇಡೀ ಬರಹವನ್ನು ಮಯೂರದಲ್ಲಿ ಓದಿ

Rating
No votes yet

Comments