ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭ್ರಮ ನಿರಸನ

ಜೀವ ಕೊಟ್ಟೆ ಸಮಯ ಕೊಟ್ಟೆ
ನನ್ನ್ದದಾದ ಆ ಎಲ್ಲ ಕನಸನೂ ಬಿಟ್ಟೆ
ಅ೦ಬರದ ಮೇಲೆ ಕೂರುವ ಆಸೆ ಅಷ್ಟು ಬೇಗ ತೀರದು
ಮುಳ್ಳಿನ ಏಣಿ ಹತ್ತಿ ಕುಳಿತೆ
ಅತ್ತಿತ್ತ ಕಣ್ಣಾಡಿಸಿದೆ
ಅದೆಷ್ಟು ಸು೦ದರ ನೋಟ
ನೋವೇ ಇಲ್ಲದ ನಗರ ಎ೦ದನಿಸುತ್ತದೆ ಹೊರನೋಟಕ್ಕೆ
ಹತ್ತಿಯ ಹಾಸಿಗೆ ಎಲ್ಲೆಡೆ
ಕೆಲಸವಿಲ್ಲ ಕಾರ್ಯವಿಲ್ಲ,ದಣಿವ ಮಾತೇ ಇಲ್ಲ
ಆದರೆ ಮೈಮೇಲೆ ಹೊದೆದ ಚಿನ್ನದ ಉಡುಪಿನ ಭಾರ ಮಾತ್ರ

ರಾಮೇಶ್ವರದಲ್ಲಿ ರಾಮಾಂಜನೇಯ ಸಂವಾದ

ಇಸವಿ ಕ್ರಿಸ್ತ ಶಕ ೨೦೦೭. ಸೆಪ್ಟೆಂಬರ್ ತಿಂಗಳಿನ ಒಂದು ದಿನ. ಶ್ರೀ ರಾಮ ಹನುಮಂತನೊಂದಿಗೆ ರಾಮೇಶ್ವರದ ತಟದಲ್ಲಿ ನಿಂತು ದೂರದಿಂದಲೇ ರಾಮ ಸೇತುವೆಯನ್ನು ನಿರೀಕ್ಷಿಸುತ್ತಿದ್ದ.

“ಪ್ರಿಯ ಹನುಮಾನ್, ನೀನು ಬೇರೆ ಕಪಿಗಳ ಸಹಾಯದಿಂದ ನಿರ್ಮಿಸಿದ ಈ ಸೇತುವೆ ಸಾವಿರಾರು ವರ್ಷಗಳ ಕಾಲ ಅದೆಷ್ಟು ಸುಭದ್ರ ಹಾಗೂ ಸುರಕ್ಷಿತವಾಗಿದೆಯಲ್ಲ! ಅದೇ ನೋಡು ಹೈದರಾಬಾದಿನಲ್ಲಿ ಮೊನ್ನೆ ಮೊನ್ನೆ ತಾನೆ ಗ್ಯಾಮನ್ ಕಂಪನಿಯವರು ಅತ್ಯಾಧುನಿಕ ತಂತ್ರಗಳನ್ನು ಬಳಸಿ ಕಟ್ಟಿದ ಸೇತುವೆ ಹೇಗೆ ಕುಸಿದುಬಿದ್ದಿತು?”

ಹನುಮಾನ್ ಹೇಳಿದ “ಸ್ವಾಮಿಗಳೇ, ನಾವೆಲ್ಲರೂ ನಿಮ್ಮ ಮೇಲಿನ ಭಕ್ತಿಯೊಂದರ ಅಧಾರದ ಮೇಲೆ ಪ್ರತಿಯೊಂದು ಕಲ್ಲಿನ ಮೇಲೆಯೂ ನಿಮ್ಮ ನಾಮ ಮಾತ್ರವೊಂದನ್ನು ಬರೆದು ಸಮುದ್ರದಲ್ಲಿ ಎಸೆದಿದ್ದೆವು. ಅವೆಲ್ಲ ಒಂದಾಗಿ ಈ ಸೇತುವೆಯ ನಿರ್ಮಾಣವಾಯಿತು. ನಮಗೆ ನಿಮ್ಮ ಭಕ್ತಿಯೊಂದು ಬಿಟ್ಟು ಯಾವ ಟಾಟಾ ಸ್ಟೀಲ್ರವರ ಉಕ್ಕು ಅಥವಾ ಅಂಬುಜ ಕಂಪನಿಯ ಸಿಮೆಂಟ್‍ನ ಅವಶ್ಯಕತೆ ಇರಲಿಲ್ಲ. ಅದು ಸರಿ, ಈಗೇಕೆ ಅಷ್ಟು ಹಳೆಯ ವಿಷಯದ ಪ್ರಸ್ತಾಪ?”

ನರಸಿಂಹಾವತಾರದ್ Dilemma! ಆಗಿರೋದು ನಮ್ಮ ವಿಜ್ನಾನಿಗಳಿಗೆ!

To be…. or not to be…. ಇತಿ ಹ್ಯಾಮ್ಲೆಟ್. ಎಲ್ಲರೂ ಕೇಳಿರಬಹುದು ಅಲ್ಲವೆ. ಮೊದ ಮೊದಲು Dalailama ಹೆಸರು ಕೇಳಿದಾಗಲೆಲ್ಲ ಯಾಕೋ ಏನೊ Dilemma ಪದ ಜ್ನಾಪಕಕ್ಕೆ ಬರುತ್ತಿತ್ತು. ಭಾರತವೋ? ಟಿಬೆಟ್ಟೋ? ಎಲ್ಲಿರಲಿ? ಅಂತ ಇರಬಹುದು ಅವರ Dilemma.

ನರಸಿಂಹಾವತಾರದ್ Dilemma! ಆಗಿರೋದು ನಮ್ಮ ವಿಜ್ನಾನಿಗಳಿಗೆ!

To be…. or not to be…. ಇತಿ ಹ್ಯಾಮ್ಲೆಟ್. ಎಲ್ಲರೂ ಕೇಳಿರಬಹುದು ಅಲ್ಲವೆ. ಮೊದ ಮೊದಲು Dalailama ಹೆಸರು ಕೇಳಿದಾಗಲೆಲ್ಲ ಯಾಕೋ ಏನೊ Dilemma ಪದ ಜ್ನಾಪಕಕ್ಕೆ ಬರುತ್ತಿತ್ತು. ಭಾರತವೋ? ಟಿಬೆಟ್ಟೋ? ಎಲ್ಲಿರಲಿ? ಅಂತ ಇರಬಹುದು ಅವರ Dilemma.

ಹನುಮಾನ್ - ಹಿಂದುವೋ? ಮುಸಲ್ಮಾನನೋ?

(ಮೂಲ: ಎಲ್ಲಿಯೋ ಕೇಳಿದ್ದು.)

ನಿನ್ನೆ ಮೊನ್ನೆಯ ಮಾತು. ಪ್ರಧಾನಿ ಮನಮೋಹನ್ ಸಿಂಗ್‍ರವರ ಸರ್ಕಾರ ರಾಮಾಯಣ ನಡಿಯಲೇ ಇಲ್ಲ, ರಾಮ ಸೇತುವೆ ಇಲ್ಲವೇ ಇಲ್ಲ ಎಂದು ಸುಪ್ರೀಮ್ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು ನೀವೆಲ್ಲ ಕೇಳಿದಿರಷ್ಟೆ?

ಮೊದಲೂ ಒಂದು ಬಾರಿ ಶ್ರೀ ಮನಮೋಹನ್ ಸಿಂಗ್ ಇಂತಹುದೇ ಕೆಲಸ ಮಾಡಿದ್ದರಂತೆ. ಮುಂದೆ ಓದಿ ನೋಡಿ. ನಿಮಗೇ ವೇದ್ಯವಾಗುತ್ತೆ.

ಜೀವನವ್ಯಾಪಾರ - ನಾವು ಏಕೆ ಓದುತ್ತಿರಬೇಕು?

ವ್ಯಾಪಾರಿ ಇವತ್ತು ಆದ ವ್ಯಾಪಾರ - ಟರ್ನ್ ಓವರ್ ಎಷ್ಟೆಂದು ನೋಡುತ್ತಾನೆಯೇ ಹೊರತು ಲಾಭ-ಹಾನಿ ಲೆಕ್ಕಾಚಾರ ಮಾಡುವದಿಲ್ಲ ; ಇವತ್ತು ಬಂದ ಹಣವನ್ನು ಎನಿಸಿ ಅದೆಲ್ಲ ಲಾಭವೇ ಎಂಬಂತೆ ಸಂತೋಷಪಡುತ್ತಾನಂತೆ . ಹೀಗೆ ಬಾಳನ್ನು ನೋಡುವ ದೃಷ್ಟಿ ಎರಡಿವೆ . ಒಂದು - ವಿಕ್ರಯದ ಮೊತ್ತ ನೋಡಿ ಸಂತಸಪಡುವ ದೃಷ್ಟಿ . ಆತ ಲಾಭವನ್ನು ಗಣಿಸುವದಿಲ್ಲ . ಅಂಗಡಿಯಲ್ಲಿ ಹಗಲೆಲ್ಲ ಗಿರಾಕಿ ತುಂಬಿರಬೇಕು , ವ್ಯಾಪಾರವಾಗಬೇಕು . ಲೋಕದ ತತ್ವಜ್ನಾನಿಗಳು ಅಕೌಂಟಂಟರಂತೆ . ಎಲ್ಲವನ್ನು ಸಂಶಯದಿಂದ ನೋಡಿ , ವ್ಯವಹಾರಕ್ಕೆಲ್ಲ ಆಧಾರ ಕೇಳಿ ವ್ಯಾಪಾರದಲ್ಲಿ ಲಾಭವಿಲ್ಲೆಂದು ನಿರ್ವಿಕಾರವಾಗಿ ಹೇಳುವರು . ನಿಮ್ಮ ಆನಂದಕ್ಕೆ ಪ್ರಮಾಣ ಬೇಡುವರು . ಸವಕಳಿ ತೆಗೆಯುವರು , ದೋಷಗಳನ್ನು ಎತ್ತಿ ತೋರಿಸುವರು.

ಜೀವನ ರಹಸ್ಯ

( ಯಾರಿಂದಲೋ ಕೇಳಿ ತಿಳಿದದ್ದು. )

ಭಗವಂತ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಮಾಡಿದ ಮೊದಲ ಕೆಲಸ ನಾಲ್ಕು ಚರಾಚರ ಪ್ರಾಣಿಗಳನ್ನು ಸೃಷ್ಟಿಸಿದ್ದಂತೆ. ಅವೆಂದರೆ - ಮನುಷ್ಯ; ಕತ್ತೆ: ನಾಯಿ ಮತ್ತು ಎರೆಹುಳ. ಇವೆಲ್ಲದರಲ್ಲೂ ಮನುಷ್ಯನೊಬ್ಬನಿಗೆ ಮಾತ್ರ ಯೊಚನಾಶಕ್ತಿಯಿರುವ (ವಿಪರೀತ!!) ಮಿದುಳಿತ್ತು.