ರೇಷ್ಮೆ ರುಮಾಲು

ರೇಷ್ಮೆ ರುಮಾಲು

ರೇಷ್ಮೆ ರುಮಾಲು: ರವಿ ಬೆಳಗೆರೆ

(ಮೂಲ: Confessions of a Thug(ಥಗ್ಗನೊಬ್ಬನ ತಪ್ಪೊಪ್ಪಿಗೆ) by Philip Meadows Taylor)

ಫಿಲಿಪ್ ಮೆಡೊವ್ಸ ಟೇಯ್ಲರನ ಕೃತಿಯ ಕನ್ನಡ ಅನುವಾದ. ಇದು ಥಗ್ಗರ ಪಾತಕಿ ಲೋಕದ ಬಗ್ಗೆ ಮತ್ತು ಅವರ ಮೋಸದ ಜಾಲದ ಬಗ್ಗೆ ಒಂದು ವಿಹಂಗಮ ನೋಟವನ್ನು ತೆರೆದಿಡುತ್ತದೆ. ಮೂಲತಃ ಥಗ್ಗನಾಗಿದ್ದ ಸೈಯದ ಅಮೀರ ಅಲಿ ಹೇಳಿದ ಕಥೆಯ ಆಧಾರದ ಮೇಲೆ ಟೇಯ್ಲರ ಈ ಪುಸ್ತಕವನ್ನು ಬರೆದಿದ್ದ. ಥಗ್ಗರು ರುಮಾಲನ್ನು ಬಳಸಿ ಜನರನ್ನು ಕೊಲ್ಲುತ್ತಿದ್ದರು ನಂತರ ಅವರ ಬಳಿಯಿದ್ದ ಹಣ, ಆಭರಣ ಮತ್ತೀತರ ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದರು.

ಥಗ್ಗರು ತಮ್ಮ ಹಳ್ಳಿಗಳಲ್ಲಿ ವಾಸ ಮಾಡುವಾಗ ಸಾಮಾನ್ಯ ಜನರಂತಯೆ ಜೀವನ ನಡೆಸುತ್ತಿದ್ದರು. ಇವರಲ್ಲಿ ಎಲ್ಲ ಜಾತಿಯ ಜನರು ಇರುತ್ತಿದ್ದರು. ಎಲ್ಲರೂ ಮಾತ ಭವಾನಿಯನ್ನು ಆರಾಧಿಸುತ್ತಿದ್ದರು. ಪ್ರತಿ ವರ್ಷ ಕಳುವಿನ ಯಾತ್ರೆಗೆ ಹೊರಡುವ ಮೊದಲು ಮಾತ ಭವಾನಿಯನ್ನು ಪೂಜಿಸಿ ಶಕುನಗಳನ್ನು ಕೇಳುತ್ತಿದ್ದರು. ಶಕುನದ ಆಧಾರದ ಮೇಲೆ ಅವರು ಹೋಗುವ ದಿಕ್ಕು ನಿರ್ಧಾರವಾಗುತ್ತಿತ್ತು. ಫೂಲನ್ ದೇವಿ ಕೂಡ ಈ ಶಕುನಗಳ ಬಗ್ಗೆ ಹೇಳಿದ್ದಾಳೆ. ಥಗ್ಗರು ರಾಮಸಿ ಎಂಬ ತಮ್ಮದೇ ಆದ ಬೇರೆ ಭಾಷೆಯಲ್ಲಿ ಮಾತನಾಡಿತ್ತಿದ್ದರು.

ಥಗ್ಗರ ಸಾಮಾನ್ಯ ಜೀವನ, ಮೋಸ, ವಂಚನೆ, ಕ್ರೂರತನ ಮತ್ತು ಮಾಡಿದ ಕೊಲೆಗಳ ಸಂಪೂರ್ಣ ಮಾಹಿತಿ ಈ ಪುಸ್ತಕದಲ್ಲಿ ಸಿಗುತ್ತದೆ.

ಭಾವನಾ ಪ್ರಕಾಶನ, ಪುಟ: ೩೬೫ ಬೆಲೆ: ೧೫೦

http://en.wikipedia.org/wiki/Confessions_of_a_Thug_(novel)

Rating
Average: 1 (1 vote)