ವ್ಯಕ್ತಿತ್ವಕ್ಕೆ ಸರಿಹೊಂದುವ ಮಿಂಚಂಚೆ ವಿಳಾಸ ಹೊಂದಿರಿ!
(ಇ-ಲೋಕ-42)(01/10/2007)
UDAYAVANI
ಮೈಕ್ರೊಸಾಫ್ಟ್ ಕಂಪೆನಿ ಜನರು ತಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದುವ ಇ-ಮೇಲ್ ವಿಳಾಸವನ್ನು ಹೊಂದುವ ಅವಕಾಶ ನೀಡಿದ್ದಾರೆ.ಈಗ ashok567@yahoo.com ಅಂತಹ ಸಾಮಾನ್ಯ ಅಂಚೆ ವಿಳಾಸ ಹೊಂದುವ ಬದಲು ವ್ಯಕ್ತಿಯ ಆಸಕ್ತಿ,ವಾಸಿಸುವ ಸ್ಥಳ,ಮೆಚ್ಚುವ ವ್ಯಕ್ತಿ,ತಾನು ಯಾರು ಎಂದು ಸೂಚಿಸುವ ಮಿಂಚಂಚೆ ವಿಳಾಸವನ್ನು ಹೊಂದಲು ಸಾಧ್ಯ.ಸುಮಾರು ಇನ್ನೂರ ಐವತ್ತು ವಿವಿಧ ಆಯ್ಕೆಗಳು ಉಚಿತವಾಗಿ ಲಭ್ಯ.coolhotmail.com ಅಂತರ್ಜಾಲ ತಾಣದ ಮೂಲಕ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.ಬೆಂಗಳೂರಿನಲ್ಲಿ ವಾಸಿಸುವವರು aak@bangalorerocks.in,ಗೋವಾದವರು aak@goarocks.in,ಹೈದರಾಬಾದ್‍ನವರು aak@hyderabadrocks.in ಅಂತಹ ವಿಳಾಸ ಪಡೆಯಬಹುದು.ಅಮಿತಾಭ್ ಅಭಿಮಾನಿಯಾದರೆ@dubamitabh.com ಅಥವ @dubamitabh.inನಿಂದ ಅಂತ್ಯವಾಗುವ ಮಿಂಚಂಚೆ ವಿಳಾಸ ಪಡೆಯಬಹುದು.ಐಶ್ವರ್ಯಳ ಅಭಿಮಾನಿಗಳು @dubaishvarya.in.com ಅಥವ @dubaishvarya.comನ್ನು ಕೊನೆಯಲ್ಲಿ ಹೊಂದಬಹುದು.ನೀವು ಎಂತಹ ವ್ಯಕ್ತಿಯೆಂದು ಸೂಚಿಸುವ @iamgood.in ಅಥವ @iamcrazy.in ಅಂತಹ ವಿಳಾಸ ಪಡೆಯಲೂ ಅವಕಾಶ ಇದೆ.ನಿಮ್ಮ ಆಸಕ್ತಿಯನ್ನು ಸೂಚಿಸುವ @iliketennis.in,@ilikeyoga.in ಅಂತಹ ವಿಳಾಸಗಳೂ ಸಾಧ್ಯ.ಇನ್ನು ನೀವೆನಲ್ಲ ಎಂದು ತಿಳಿಯಪಡಿಸುವ yourname@Breaktherules.co.in, yourname@shri420.in ಅಂತಹ ಮಿಂಚಂಚೆ ಬೇಕೆಂದರೆ ನಿಮಗಿಲ್ಲಿ ಸಿಗುತ್ತದೆ.
ಪರಿಸರಕ್ಕೆ ಹೊರೆಯಾಗದ ಬದುಕು
ಪರಿಸರಕ್ಕೆ ಹೊರೆಯಾಗದೆ ಬದುಕುವುದು ನಮ್ಮಲ್ಲಿ ಅಂತಹ ವಿಶೇಷವೇನೂ ಅಲ್ಲ. ಆದರೆ ಅಮೆರಿಕಾದಲ್ಲಿ ಜನರು ಅತ್ಯಧಿಕ ವಿದ್ಯುಚ್ಚಕ್ತಿ,ಸಂಪನ್ಮೂಲಗಳು,ವಸ್ತುಗಳನ್ನು ಬಳಸುತ್ತಾ ವಿಲಾಸಿ ಜೀವನ ಸಾಗಿಸುವುದೇ ಸಾಮಾನ್ಯ.ಹೀಗಾಗಿ ಅಲ್ಲಿಯ ಒಂದು ಕುಟುಂಬ ಪ್ರಾಯೋಗಿಕವಾಗಿ ನಡೆಸುತ್ತಿರುವ ಸರಳ ಜೀವನ ಸುದ್ದಿ ಮಾಡಿದೆ.ಬೆವನ್,ಮಿಚೆಲ್ ಮತ್ತು ಮಗಳು ಇಸಾಬೆಲ್ಲ ಇವರುಗಳು ಒಂದು ವರ್ಷ ಕಾಲ ಸ್ಥಳೀಯವಾಗಿ ಲಭ್ಯವಾಗಿ ಆಹಾರವಸ್ತುಗಳನ್ನು ಬಳಸುತ್ತಾ,ವಿದ್ಯುತ್ ಬಳಸದೆ,ದ್ವಿಚಕ್ರ ವಾಹನದ ಬಳಕೆಯನ್ನು ಮಾಡುತ್ತಾ ಲಿಫ್ಟ್ ಅಂತಹ ಸೌಕರ್ಯಗಳನ್ನು ಬಳಸದೆ ಜೀವನ ಸಾಗಿಸುವ ಪಣ ತೊಟ್ಟಿದೆ.ವಿದ್ಯುತ್ ಬಳಸದೆ,ಸೌರಫಲಕದಿಂದ ಲಭ್ಯವಾದ ಶಕ್ತಿಯಿಂದ ಬೆಳಗುವ ದೀಪಗಳನ್ನು ಮತ್ತು ಕ್ಯಾಂಡಲ್ ಮಾತ್ರ ಉರಿಸುವ ಕಾರಣ ದಿನದ ಹೆಚ್ಚಿನ ಹೊತ್ತು ಮನೆಯ ಹೊರಗಡೆಯೇ ಕಳೆಯುತ್ತಾರೆ.ಮನೆಯಲ್ಲಿ ಟಿವಿಯಿಲ್ಲ.ಪತ್ರಿಕೆ ತರಿಸುವುದಿಲ್ಲ. ಹೀಗಾಗಿ ಆಟ,ಗೆಳೆಯರ ಜತೆ ಕಲೆಯುವುದು ಹೆಚ್ಚಾಗಿದೆಯಂತೆ.ಶೌಚಾಲಯದ ಕಾಗದ ಬಳಸುತ್ತಿಲ್ಲವಂತೆ.ಸ್ಥಳೀಯವಾಗಿ ಕಾಫಿ ಬೆಳೆಯದ ಕಾರಣ ಅವರಿಷ್ಟದ ಕಾಫಿಗೂ ವಿದಾಯ ಹೇಳಿದ್ದಾರೆ.ಹೆಚ್ಚಿನ ಓಡಾಟ,ಆಟದಿಂದ ದೈಹಿಕವಾಗಿ ಅವರುಗಳು ಸುಧಾರಿಸಿದ್ದಾರೆ ಮಾತ್ರವಲ್ಲ ತೂಕ ಇಳಿದಿದೆ.ಬೆವನ್‍ನ ಬ್ಲಾಗ್ ಬರಹಗಳು http://noimpactman.typepad.com/blog/ನಲ್ಲಿ ಲಭ್ಯ.
ಕಂಪ್ಯೂಟರ್‌ನಲ್ಲಿದದ್ದನ್ನು ಟಿವಿಯಲ್ಲಿ ವೀಕ್ಷಿಸಿ!
ಕಂಪ್ಯೂಟರಿನಲ್ಲಿ ಚಲನಚಿತ್ರಗಳು,ಟಿವಿ ಸೀರಿಯಲ್‌ಗಳು ಮತ್ತಿತರ ದೃಶ್ಯಶ್ರಾವ್ಯ ಕಡತಗಳಿವೆಯೇ?ಇವನ್ನು ಟಿವಿಯಲ್ಲಿ ನೋಡಬೇಕೇ?ಕಂಪ್ಯೂಟರ್ ವಿಸ್ಟಾ ಕಾರ್ಯನಿರ್ವಾಹಕ ತಂತ್ರಾಂಶ ಬಳಸುತ್ತಿದ್ದಲ್ಲಿ,ಇದು ಸಾಧ್ಯ.ಮೈಕ್ರೋಸಾಫ್ಟ್ ಕಂಪೆನಿಯು ಯಂತ್ರಾಂಶ ತಯಾರಕರಾದ ಸಿಸ್ಕೋ,ಡಿಲಿಂಕ್ ಮುಂತಾದ ಕಂಪೆನಿಗಳ ಜತೆಗೂಡಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಬಳಸಿ ಇದನ್ನು ಸಾಧ್ಯವಾಗಿಸಿಕೊಳ್ಳಬಹುದು.ಕಂಪ್ಯೂಟರ್ ಮತ್ತು ಟಿವಿ ನಡುವಿನ ಸಂಪರ್ಕ ಟಿವಿಯ ಸೆಟ್‍ಟಾಪ್ ಬಾಕ್ಸ್ ಮೂಲಕ ನಿಸ್ತಂತುವಾಗಿ ನಡೆಯುತ್ತದೆ.ಮುನ್ನೂರು ಡಾಲರು ಬೆಲೆಯಲ್ಲಿ ಸಾಧನ ಲಭ್ಯವಿದೆ.
ಐಸ್‍ಲ್ಯಾಂಡ್ ಮತ್ತು ಜಲಜನಕದ ಕಾರು
ಉತ್ತರಧ್ರುವ ಪ್ರದೇಶದ ಐಸ್‍ಲ್ಯ್ಂಡ್ ದೇಶದಲ್ಲಿ ಜಲಪಾತಗಳು,ಬಿಸಿನೀರಿನ ಬುಗ್ಗೆಗಳು ಮತ್ತು ಜ್ವಾಲಾಮುಖಿಗಳು ಹೇರಳವಾಗಿವೆ.ಹಾಗಾಗಿ ವಿದ್ಯುಚ್ಚಕ್ತಿ ಉತ್ಪಾದನೆಗೆ ಕಲ್ಲಿದ್ದಲು ಮತ್ತಿತರ ಪರಿಸರ ಮಾಲಿನ್ಯ ಉಂಟು ಮಾಡುವ ಇಂಧನಗಳ ಬಳಕೆ ಬೇಕಿಲ್ಲ.ಆದರೆ ವಾಹನಗಳಿಗೆ ಸದ್ಯ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಮಾಲಿನ್ಯಕ್ಕೆ ಕಾರಣವಾಗುವ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ನಿವಾರಿಸಲು ಅಲ್ಲಿನ ಸರಕಾರ ಉತ್ಸುಕವಾಗಿದೆ.ಪೆಟ್ರ್‍ಓಲಿಯಂ ಅನ್ನು ಆಮದು ಮಾಡುವ ವಿಪರೀತ ವೆಚ್ಚವೂ ಇದಕ್ಕೆ ಒಂದು ಕಾರಣ.ಜಲಜನಕ ಮತ್ತು ಆಮ್ಲಜನಕಗಳನ್ನು ಬಳಸಿ ನೀರು ಮತ್ತು ವಿದ್ಯುತ್ ಪಡೆಯುವ ಇಂಧನ ಕೋಶ ತಂತ್ರಜ್ಞಾನದ ಮೂಲಕ ವಾಹನಗಳನ್ನು ನಡೆಸುವ ಪ್ರಯೋಗ ಇಲ್ಲಿ ನಡೆದಿದೆ.ನೀರಾವಿ ಮಾತ್ರಾ ಈ ಇಂಧನಕೋಶ ಇಂಜಿನ್ ಹೊರಸೂಸುವ ಅಂಶ.ಐಸ್‍ಲ್ಯಾಂಡಿನಲ್ಲಿ ಈಗಾಗಲೇ ಒಂದು ಜಲಜನಕವನ್ನು ತುಂಬಿಸುವ ಬಂಕ್ ಅಲ್ಲಿದೆ.ಕೆಲವು ಜಲಜನಕ ಇಂಧನಕೋಶ ಹೊಂದಿರುವ ಬಸ್‍ಗಳನ್ನು ಪ್ರಾಯೋಗಿಕವಾಗಿ ಓಡಿಸಲಾಗುತ್ತಿದೆ.ಇನ್ನು ಹಲವು ಗ್ಯಾಸ್ ಬಂಕಗಳು ಆರಂಭವಾಗಲಿವೆ.ಇಂಧನಕೋಶ ಹೊಂದಿರುವ ನಲ್ವತ್ತಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಓಡಿಸಲು ಸಿದ್ಧತೆ ನಡೆದಿದೆ.ಇವು ಒಮ್ಮೆ ಇಂಧನ ತುಂಬಿಸಿದರೆ ನೂರು ಕಿಲೋಮೀಟರ್ ಓಡುತ್ತವಂತೆ.ಬ್ಯಾಟರಿ ಮೂಲಕ ಮತ್ತೆ ಹದಿನೆಂಟು ಕಿಲೋಮೀಟರ್ ಓಡುವ ಸಾಮರ್ಥ್ಯ ಇವಕ್ಕಿವೆ.ಜನರ ಸ್ವಂತ ಬಳಕೆಗೆ ಈ ಕಾರು ಲಭ್ಯವಾಗಲು ಇನ್ನೂ ಮೂರ್ನಾಲ್ಕು ವರ್ಷಗಳು ಬೇಕು.
ಬಾಹ್ಯಾಕಾಶ ಯಾನಿಗೆ ನಮಾಜು ಮಾಡುವುದೂ ಸವಾಲು
ಮಲೇಶ್ಯಾದ ಶೇಖ್ ಮುಜಫರ್ ಶುಕೋರ್ ಅಕ್ಟೋಬರ್ ಹತ್ತರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣಿಸಲಿದ್ದರೆ.ಮಲೇಶ್ಯಾದ ಮೊದಲ ಬಾಹ್ಯಾಕಾಶಯಾನಿಯಾಗಲಿರುವ ಶುಕೋರ್,ತಮ್ಮ ಯಾನದ ವೇಳೆ ಮೆಕ್ಕಾದ ಕಡೆಗೆ ಮುಖ ಮಾಡಿ ನಮಾಜು ಮಾಡಲೂ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರಂತೆ.ಆಗಸದಲ್ಲಿರುವಾಗ ಅವರ ದಿಕ್ಕು ಕ್ಷಣಕ್ಷಣ ಬದಲಾಗುವುದರಿಂದ ಮೆಕ್ಕಾದ ಕಡೆ ಮುಖ ಮಾಡಿರುವುದನ್ನು ಖಾತರಿ ಮಾಡಿಕೊಳ್ಳುವುದು ಕಠಿನವಾಗಲಿದೆ.ದಿಕ್ಕಿನ ಕಡೆಗೆ ಹೆಚ್ಚು ತಲೆಕೆಡಿಸಿಕೊಂಡರೆ ಪ್ರಾರ್ಥನೆಯ ಮೇಲೆ ಮನ ತೊಡಗಿರುವುದಿಲ್ಲವಲ್ಲ ಎನುವುದು ಅವರ ಸಂಧಿಗ್ಧ.ಜತೆಗೆ ನೆಲದ ಕಡೆ ಅವರು ಬಗ್ಗಿರುವುದನ್ನೂ ಖಾತರಿ ಪಡಿಸಿಕೊಳ್ಳಬೇಕಾಗುತ್ತದೆ.ಈ ಬಗ್ಗೆಯೇ ವಿಶೇಷ ಮಾರ್ಗದರ್ಶಿ ಸೂತ್ರಗಳು http://blog.wired.com/wiredscience/files/a_guideline_ibadah_at_iss.doc ಇಲ್ಲಿ ಲಭ್ಯವಿದೆ.
*ಅಶೋಕ್‍ಕುಮಾರ್ ಎ