ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇ-ಲೋಕ-೩

ಕಂಪ್ಯೂಟರ್‍ ಬಳಸಿ ಸಹಭೋಜನ!
 ಕುಟುಂಬಿಕರ ಜತೆ ಸಹಭೋಜನ ಮಾಡುವುದು ವೃದ್ಧರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ನಿಮಗೆ ತಿಳಿದಿರಬಹುದು.ಆದರೆ ಈಗಿನ ಕಾಲಘಟ್ಟದಲ್ಲಿ ಹೆತ್ತವರು ಮತ್ತು ಮಕ್ಕಳು ಬೇರೆ ಬೇರೆ ಕಡೆ ವಾಸವಾಗಿರಬೇಕಾದ ಪರಿಸ್ಥಿತಿಯಿರುವುದು ಸಾಮಾನ್ಯ. ಹೀಗಿದ್ದರೂ ಅವರುಗಳು ಸಹಭೋಜನದ ಅನುಭವ ಪಡೆಯಬಹುದು.ಅಕ್ಸೆಂಚುವರ್‍ ಎಂಬ ಕಂಪೆನಿ ಜನರಿಗೆ ಸಹಭೋಜನ ಅನುಭವ ಪಡೆಯುವ ಕಂಪ್ಯೂಟರ್‍ ಆಧಾರಿತ ವ್ಯವಸ್ಥೆಯನ್ನು ಸಿದ್ಧಗೊಳಿಸಿದೆ. ಟಿವಿ,ಕಂಪ್ಯೂಟರ್‍,ಬ್ರಾಡ್‌ಬ್ರಾಂಡ್ ಸಂಪರ್ಕ ಮತ್ತು ವೆಬ್‌ಕ್ಯಾಮರಾದಂತಹ ಸಾಧನ ಇದಕ್ಕೆ ಬೇಕು.ವೃದ್ಧರು ಅಡುಗೆ ಮಾಡಿ, ಊಟಕ್ಕೆ ಸಿದ್ಧತೆ ನಡೆಸುತ್ತಿರುವಂತೆ, ಊಟದ ಕೋಣೆಯಲ್ಲಿಟ್ಟಿರುವ ಕ್ಯಾಮರಾದಿಂದ ಇದನ್ನರಿಯುವ ಕಂಪ್ಯೂಟರ್‍ ತಂತ್ರಾಂಶವೊಂದು ಅಂತರ್ಜಾಲ ಮೂಲಕ, ವೃದ್ಧನ ಕುಟುಂಬಿಕರಿಗೆ ಸೂಚನೆ ನೀಡುತ್ತದೆ.ಟಿವಿ ಅಥವಾ ಕಂಪ್ಯೂಟರ್‍ ಮೂಲಕ ಇದನ್ನರಿಯುವ ಕೌಟುಂಬಿಕರು,ತಮ್ಮ ಟಿವಿ ಚಾನೆಲ್ ಒಂದರಲ್ಲಿ ತಮ್ಮ ಹೆತ್ತವರು ಊಟಕ್ಕೆ ಅಣಿಯಾಗುತ್ತಿರುವುದನ್ನು ಟಿವಿ ಪರದೆಯಲ್ಲಿ ವೀಕ್ಷಿಸುತ್ತಾ, ತಾವೂ ಊಟಕ್ಕೆ ತೊಡಗಬೇಕು. ಅವರ ಚಿತ್ರಗಳು ಹಿರಿಯರ ಟಿವಿ ತೆರೆಯಲ್ಲಿ ಮೂಡತೊಡಗುತ್ತದೆ. ಪರಸ್ಪರರ ಮಾತುಗಳೂ ಕೇಳಿಸುವ ಧ್ವನಿ ವ್ಯವಸ್ಥೆಯೂ ಇದೆ.ಮಾತನಾಡುತ್ತಾ ಊಟ ಮಾಡಬಹುದು. ಏಕಾಂಗಿಯಾಗಿ ಊಟ ಮಾಡುವುದಕ್ಕಿಂತ ಹೆಚ್ಚು ಊಟವನ್ನು ಹಿರಿಯರು ಮಾಡುವುದು ಬಹುತೇಕ ನಿಶ್ಚಿತ!
 ಕಂಪ್ಯೂಟರ್‍ ಬಳಸಲು ಅಂಜುವವರಿಗೂ ಅನುಕೂಲಕರವಾದ ರೀತಿ ಈ ವ್ಯವಸ್ಥೆ ಇರುವುದು ಕಂಪ್ಯೂಟರ್‍ ಸಾಕ್ಷರರಲ್ಲದವರಿಗೂ ಅನುಕೂಲ ಒದಗಿಸಲಿದೆ. ಪ್ರತಿ ಮನೆಗೂ ಈ ವ್ಯವಸ್ಥೆ ಅಳವಡಿಸಲು ಒಂದು ಸಾವಿರ ಡಾಲರ್‍ ವರೆಗೆ ಖರ್ಚು ಬರಬಹುದು ಎಂಬ ಅಂದಾಜಿದೆ.
 

ಮಹಾತ್ಮ ಗಾಂಧಿ

ಮನುಷ್ಯ ತಾನು ಏನು ಯೋಚಿಸುತ್ತಾನೋ ಅದೇ ಆಗಿ ಬಿಡುವ ಸಂಭವಗಳೇ ಹೆಚ್ಚು. ನನ್ನಿಂದ ಇದು ಅಸಾಧ್ಯ ಎಂದು ನನಗೆ ನಾನೇ ಪದೇ ಪದೇ ಹೇಳಿಕೊಂಡಲ್ಲಿ, ಕೊನೆಗೆ ನಾನು ಆ ಕಾರ್ಯದಲ್ಲಿ ವಿಫಲನಾಗುವ ಸಂಭವವೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ, ನಾನಿದನ್ನು ಮಾಡಬಲ್ಲೆ ಎಂಬ ವಿಶ್ವಾಸ ತಳೆದರೆ, ಮೊದಲು ಆ ಕಾರ್ಯವನ್ನು ಸಾಧಿಸಲು ಶಕ್ತಿ ಇಲ್ಲದೇ ಹೋದರೂ ಕ್ರಮೇಣ ಆ ಶಕ್ತಿ ಮೈಗೂಡುತ್ತದೆ.

ಮಹಾತ್ಮ ಗಾಂಧಿ

ಜಗತ್ತಿಗೆ ಹೊಸದಾಗಿ ಬೋಧಿಸಲು ನನ್ನಲ್ಲಿ ಏನೂ ಇಲ್ಲ. ಸತ್ಯ ಮತು ಅಹಿಂಸೆ ಎನ್ನುವ ಈ ತತ್ವಗಳು ಪರ್ವತಗಳಷ್ಟೆ ಪುರಾತನವಾದವು. ನಾನು ಆ ತತ್ವಗಳನ್ನು ನನಗೆ ಸಾಧ್ಯವಾದಷ್ಟೂ ದೊಡ್ಡ ಮಟ್ಟದಲ್ಲಿ ಪ್ರಯೋಗಿಸಿದೆ ಅಷ್ಟೆ.

ಹೊಸ ವಾಚಿಗೊಂದು ಕತೆ...

ಸಣ್ಣವನಿದ್ದಾಗಿನಿಂದ ನಮ್ಮ ಮನೇಲಿ ನಾನು "ಮಲ್ಲಿಗೆ ಬುಟ್ಟಿ". ಚಿತ್ರದುರ್ಗದಲ್ಲಿದ್ದ ಸ್ಕೂಲಿನ ಪಕ್ಕ ಅದ್ಯಾವುದೋ ಧೂಳು ಸಿಡಿಸುವ ಕ್ವಾರಿ (ಕಲ್ಲು ಕೆತ್ತುವ ಫ್ಯಾಕ್ಟರಿ) ಇದ್ದದ್ದು ಜೀವನದುದ್ದಕ್ಕೂ ಬೆನ್ನತ್ತಿದ ಬೇತಾಳವಾಗಿ ಹೋಯ್ತು. (ಚಿತ್ರದುರ್ಗವೇ ಧೂಳುಮಯ, ಇನ್ನು ಕ್ವಾರಿ ಪಕ್ಕದಲ್ಲಿರುವ ಶಾಲೆಯ ವಿದ್ಯಾರ್ಥಿಗಳ ಪೇಚಾಟ ಹೇಳಿತೀರದ್ದು. ಶಿವಮೊಗ್ಗ ರೋಡಿನಲ್ಲಿದ್ದ ಶಾಲೆಯ ಸುತ್ತಲೂ ಬರೀ ಧೂಳೋ ಧೂಳು. ರೋಡಿನ ಆಚೆಗೆ ಇದ್ದ ಹೆಚ್ಚು ಧೂಳಿಲ್ಲದ ಆಟದ ಮೈದಾನಕ್ಕೆ ಕೂಡ ಹೋಗುವಂತಿರಲಿಲ್ಲ - ಅತ್ತಿತ್ತ ನೋಡದೆ ರಸ್ತೆ ದಾಟುತ್ತೇವೆಂದು "ಕೋಟೆ ಕಡೆಯಿಂದ ಚಿರತೆ ಬರುತ್ತದೆ" ಎಂದು ಹೆದರಿಸಿಬಿಟ್ಟಿದ್ದರು. ಸುತ್ತಲೂ ಕಲ್ಲು ಬಂಡೆಗಳ ಗುಡ್ಡಗಳೂ ಹಾಗೆಯೇ ಹೆದರಿಕೆ ತರಿಸುವಂತಿತ್ತು ಕೂಡ).

ಬ್ರಾಂಕೈಟಿಸ್ ಇತ್ತೀಚೆಗೆ ಸಾಮಾನ್ಯವಾದ್ರೂ ಆಗ ಹೆಚ್ಚು ಹುಡುಗರಿಗಿರುತ್ತಿರಲಿಲ್ಲ. ಈಗಿನಂತೆ ಏರೆಸಾಲ್ ಸ್ಪ್ರೇ ಕೂಡ ಇರುತ್ತಿರಲಿಲ್ಲ. ಒಂದಷ್ಟು ಧೂಳು ನುಸುಳಿದರೂ ೧೮ "ಆssಕ್ಷೀ" ಸುರಿಸುತ್ತಿದ್ದೆ. ಹೀಗಾಗಿ ಬೇರೆ ಊರಿನ ಹೊಸ ಶಾಲೆಗೆ ಸೇರುವ ಸಮಯದೊತ್ತಿಗೆ ನಾನು ಬಹಳ 'sensitive' ಆಗಿಬಿಟ್ಟಿದ್ದೆ.

ಆ sensitivity ಇನ್ನೂ ಹೋಗಿಲ್ಲ. ಈಗಲೂ ರೂಮಿನಲ್ಲಿ ಸ್ವಲ್ಪ ಧೂಳಿದ್ದರೂ ಒಂದೆರಡು "ಆssಕ್ಷೀ" ಗ್ಯಾರಂಟಿ. ಮೆಜೆಸ್ಟಿಕ್ ಒಂದ್ಸಾರಿ ಸುತ್ತು ಹೊಡೆದು ಬಂದ್ರೂ ಸಾಕು ಬೆಳಗಾಗೆದ್ದು ೨೦ "ಆssಕ್ಷೀ" ಬರದೇ ತೀರದು! ನೆಶ್ಯ ಕೂಡ ಬೇಡವಾದಷ್ಟು ಶೀನು. ವ್ಯಾಕ್ಯೂಮ್ ಕ್ಲೀನರ್ ಹಿಡಿದು ರೂಮು ಸ್ವಚ್ಛ ಮಾಡುತ್ತಿದ್ದರೆ ನಮ್ಮ ಮನೆಯಲ್ಲಿರುವವರಿಗೆಲ್ಲ *ತಡೆಯಲಾಗದಷ್ಟು* ನಗು. "ಹೋಗಿ ಅಮೇರಿಕದಲ್ಲಿ ಇದ್ದುಬಿಡು" ಎಂಬ ಹಾಸ್ಯ ಅಪ್ಪನದ್ದು. "ಅಮೇರಿಕದಲ್ಲಿ ಹೇಗಿದ್ದೀತು? ಅಲ್ಲಿ ಧೂಳಿರಲಿಕ್ಕಿಲ್ಲವೆ? ಹಾಳಾದ್ದವರು ನನಗೆ ವೀಸ ಕೊಟ್ಟಿದ್ದಿದ್ದರೆ ನಾನೇ ಇಷ್ಟೊತ್ತಿಗೆ ನೋಡಿಬಂದಿರುತ್ತಿದ್ದೆ" ಎಂಬೆಲ್ಲ ಆಲೋಚನೆಯಿಂದ ಪ್ರಾರಂಭವಾಗಿ ಮನಸ್ಸು ಎತ್ತೆತ್ತಲೋ ತಿರುಗಾಡಿ ವಾಪಸ್ ವ್ಯಾಕ್ಯೂಮ್ ಬೇಗ ಮುಗಿಸಿ ಮುನ್ನಡೆಯುವಷ್ಟಕ್ಕೆ ಬಂದರಾಯಿತು -- ಅಂದಿನ ಆ ಸೀನು (sceneಉ ಮತ್ತು ಶೀನಿನ sceneಉ) ಮುಗಿದಂತೆ.

ಹೊಸ ವರ್ಷ, ಹೊಸ resolution ಮತ್ತು ಉಡುಗೊರೆ!

ಹೊಸ ವರ್ಷದ ಸಂಭ್ರಮದಲ್ಲಿ ತೇ(ಓ)ಲಾಡುತ್ತಿರುವವರಿಗೆಲ್ಲರಿಗೆ ತನ್ನ "ಗುಡ್ ಬೈ" ತಿಳಿಸಲು 2006ನೇ ಇಸವಿಯು ಬೊಗಳೆ ರಗಳೆ ಬ್ಯುರೋವನ್ನು ಕೋರಿದೆ. (bogaleragale.blogspot.com)

ಗೃಹಲಕ್ಷ್ಮಿಗೆ

ನಿನ್ನವರೆಲ್ಲರ ಆರೈಕೆಯಲ್ಲಿ, ಬೇಕು-ಬೇಡಗಳಲ್ಲಿ,
ಎಲ್ಲರ ಭವಿಷ್ಯದ ಹೊಂಗನಸ ತುಂಬಿ ನಿನ್ನ ಕಣ್ಣಲ್ಲಿ,
ವಿಶ್ರಾಂತಿಯ ಹಂಗೂ ಇಲ್ಲದೆ ನೀ ಸತತ ಶ್ರಮಿಸುತ್ತಿರಲು 
ಕರೆದು ಸುಮ್ಮನಾಗಲೇ ಬರಿಯ "ಹೆಂಡತಿ"ಯೆಂದು ನಿನ್ನ?
ಇಲ್ಲ, ನಿನಗೊಪ್ಪುವ ಹೆಸರು "ಗೃಹಲಕ್ಷ್ಮಿ" ಚಿನ್ನ!