ಸಾಹಿತ್ಯದಲ್ಲಿ ಎಷ್ಟು ವಿಧ?

ಸಾಹಿತ್ಯದಲ್ಲಿ ಎಷ್ಟು ವಿಧ?

ಬಲ್ಲವರು ಸಾಹಿತ್ಯವನ್ನು ಮೂರು ವಿಧಗಳನ್ನಗು ವಿಭಾಗಿಸುತ್ತಾರೆ.
ಕಾಂತಾ ಸಂಹಿತೇ.
ಮಿತ್ರ ಸಂಹಿತೇ ಮತ್ತು
ಪ್ರಭು ಸಂಹಿತೇ.

ಪ್ರಭು ಸಂಹಿತೆಗಳಿಗೆ ಉದಾಹರಣೆ, ವೇದಗಳು, ಭಗವದ್ಗೀತ, ಸ್ಮ್ರುತಿಗಳು, ಬೈಬಲ್ , ಕುರಾನ್.. ಇತ್ಯಾದಿ. ಇಲ್ಲಿ ಏಕ ಮುಖಿ ಸಂಭಾಷಣೆ. ಒಬ್ಬ ಹೇಳಿದ್ದನ್ನ ಇನ್ನೊಬ್ಬ ( ಉಳಿದವರು) ಕೇಳಬೇಕು. ತಿರುಗಿ ಉಪದೇಶ ನೀಡುವ ಹಾಗಿಲ್ಲ! ಸಂದೇಹ ಗಳಿದ್ದರೆ ಕೇಳಬಹುದು! . ಈ ರೀತಿಯ ಸಾಹಿತ್ಯದಲ್ಲಿ ಉಪದೇಶಗಳು, ಸಂದೇಶ ಗಳೇ ಹೆಚ್ಚು. ನಾನು ಹೇಳಿದ್ದನ್ನ ಮಾಡು ಅನ್ನುವ ದಾರ್ಷ್ಪ ವೆ ಹೆಚ್ಚು!

ಎರಡನೆ ವಿಧ ಮಿತ್ರ ಸಂಹಿತೇ. ಇಲ್ಲಿ ಇಬ್ಬರು ಸಮಾನರು ತಮ್ಮ ವಿಷಯಗಳನ್ನು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಓದುಗನನ್ನು ತನ್ನಷ್ಟೇ ತಿಳಿದವನು ಎಂದು ಬಗೆದು ವಿಚಾರ ಮಂಡಿಸುವ ಎಲ್ಲ ಲೇಖನಗಳು ಈ ವಿಭಾಗಕ್ಕೆ ಸೇರಬಹುದು. ಇತ್ತೀಚಿನ ಅತಿ ಹೆಚ್ಚು ಬರವಣಿಗೆಗಳು ಈ ವಿಧದಲ್ಲಿ ಬರುತ್ತವೆ. ನಾನು ಬರೆಯುತ್ತಿರುವ ಈ ಲೇಖನವನ್ನು ನೀವು ಸಾಹಿತ್ಯ ಎಂದು ಕರೆಯುವುದಾದರೆ(?!) ಲೇಖನ ಮಿತ್ರ ಸಂಹಿತೇ ಎನ್ನಬಹುದು!. ನಮ್ಮ ಇತಿಹಾಸಗಳು, ವಿಜ್ಞಾನಕ್ಕೆ ಸಂಬಂಧಪಟ್ಟಂತಹ ಇತ್ತೀಚಿನ ಲೇಖನಗಳು ಈ ಗುಂಪಿಗೆ ಸೇರುತ್ತವೆ.

ಮೂರನೆಯದು ಕಾಂತ ಸಂ ಹಿತೆ. ಯಾವ ಸಾಹಿತ್ಯ "ಕಾಂತಾ ಸಂಹಿತಾ ರೂಪ" ದಲ್ಲಿ ಇದಯೋ ಅದೇ ಕಾವ್ಯ ವೆಂದು ಕರೆಯಿಸಿಕೊಳ್ಳಲ್ಪಡುತ್ತದೆ! ನಮ್ಮ ಕಾವ್ಯಗಳು ಈ ವಿಧದಲ್ಲಿ ಬರುತ್ತವೆ. ಹೇಗೆ ಕಾಂತ ನು ( ಪ್ರಿಯಕರನು/ಪ್ರಿಯಕರಳು) ತನ್ನ ಪ್ರೇಮಿಯನ್ನು ಯಾವಾಗಲೂ(?!) ಹಾಡಿ ಹೊಗಳಿ ತನ್ನ ಅನಿಸಿಕೆಗಳನ್ನ ದಾಟಿಸಿತ್ತಾನೆಯೋ ಹಾಗೆ.. ಇಲ್ಲಿ ಹೊಗಳಿಕೆ, ಅಲಂಕಾರಗಳು, ಉತ್ಪ್ರೇಕ್ಷೆಗಳು ಹೆಚ್ಚು. ಅಂತಹ ಬರವಣಿಗೆಗಳು ಕಾಂತ ಸಂ ಹಿತೆಯಲ್ಲಿ ಬರುತ್ತವೆ. ಪ್ರಕೃತಿ ಸೌಂದರ್ಯವನ್ನೋ, ಹೆಣ್ಣ್ಅನ್ನೋ ಅತ್ವ ಇನ್ನೇನನ್ನೋ ವರ್ಣಿಸಿ ಹಾಡಿ ಹೊಗಳೀ ಬರೆದ ಸಾಹಿತ್ಯ. ಬಹುಶಃ ಆ ಭಗವಂತನನ್ನು ಹಾಡಿ ಹೊಗಳಿ ಬರೆದ ಸಾಹಿತ್ಯವೂ ಅಂದ್ರೆ ಸ್ತುತಿ-ಸ್ತೋತ್ರ ಗಳೂ, ಕೀರ್ತನೆಗಳೂ ಈ ಪ್ರಾಕಾರದಲ್ಲಿ ಬರುತ್ತವೆ. ನಾಡನ್ನು ಹೊಗಳಿ ಬರೆದ , ತಾಯಿಯನ್ನು ಹೊಗಳಿ ಬರೆದ ಲೇಖನಗಳೂ ಇಲ್ಲಿ ಬರುತ್ತವೆ.

ದಯವಿಟ್ಟು ತಮಗೆ ತಿಳಿದ ಸಾಹಿತ್ಯ ರಾಶಿಯನ್ನು ಮೇಲಿನ ಪ್ರಾಕಾರಗಳಿಗೆ ಹೋಲಿಸಿ. ಬೇರೆ ಯಾವುದಾದ್ರೂ ಪ್ರಾಕಾರ ( ಮೇಲಿನ ವಿಧಗಳಿಗಿನ್ತ ತುಂಬಾನೆ ಭಿನ್ನವಾಗಿರುವಂತದ್ದು ) ಗಳಿದ್ದರೆ ಬರೆಯಿರಿ!.

Rating
No votes yet

Comments