ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!
(ಇ-ಲೋಕ-40)(17/9/2007)
ಕೈಗಾರಿಕೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ.ವಿಶ್ವದ ಅತಿಮಲಿನ ಸ್ಥಳಗಳ ಪಟ್ಟಿ ಪ್ರಕಟವಾಗಿದೆ.ದುರಂತವೆಂದರೆ,ಈ ಪಟ್ಟಿಯಲ್ಲಿ ಭಾರತದ ಎರಡು ಸ್ಥಳಗಳು ಸ್ಥಾನ ಪಡೆದಿವೆ.ಸುಕಿಂದ ಕ್ರೊಮಿಯಮ್ ಗಣಿಗಾರಿಕೆಯಿಂದ ನೀರು ಮಲಿನವಾಗಿದೆಯಂತೆ.ಇಲ್ಲಿನ ಕೆಲಸಗಾರರು ಅದೇ ನೀರನ್ನು ಕುಡಿಯಲು,ದೈನಂದಿನ ಕೆಲಸಗಳಿಗೆ ಬಳಸುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಾರೆ.ಜತೆಗೆ ಬಂಜೆತನ,ವಿಕಲಾಂಗ ಮಕ್ಕಳ ಜನನ ಸಾಮಾನ್ಯ.ಪ್ರಸಿದ್ಧ ಟಾಟಾ ಸ್ಟೀಲ್ ಕಂಪೆನಿ ಈ ಗಣಿಯನ್ನು ನಡೆಸುತ್ತಿದೆ.ಜಂಶದ್‍ಪುರದ ಬಳಿ ಈ ಗಣಿಗಳಿವೆ.ಗುಜರಾತಿನ ವಪಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಂದು ಪಟ್ಟಣ.ಇದಕ್ಕೆ ಕಾರಣವಾಗಿರುವುದು ನೀರಿನ ಮಾಲಿನ್ಯವೇ ಆಗಿದೆ.ಈ ನಗರದಲ್ಲಿರುವ ಅಪಾರ ಸಂಖ್ಯೆಯ ಕೈಗಾರಿಕೆಗಳು ರಾಸಾಯಿನಿಕ,ಕ್ರಿಮಿನಾಶಕಗಳು,ಬಣ್ಣಗಳ ತಯಾರಿಯಲ್ಲಿ ತೊಡಗಿದ್ದು,ಇಲ್ಲಿನ ನೀರಿನ ಮೂಲಗಳು ಮಲಿನವಾಗಲು ಕಾರಣವಾಗಿವೆ.ಇಲ್ಲಿ ಲಭ್ಯ ನೀರಿನಲ್ಲಿ ಪಾದರಸದ ಮಟ್ಟ ಸಾಮಾನ್ಯ ಮಟ್ಟಕ್ಕಿಂತ ತೊಂಭತ್ತಾರು ಪಟ್ಟು ಹೆಚ್ಚು! ಈ ಪಟ್ಟಿಯಲ್ಲಿ ರಷ್ಯಾದ ನಾಲ್ಕು ಸ್ಥಳಗಳು ಇವೆ.ಬ್ಲಾಕ್‍ಸ್ಮಿತ್ ಇನ್ಸ್‍ಸ್ಟಿಟ್ಯೂಟ್ ಎನ್ನುವ ಸ್ವತಂತ್ರ ಪರಿಸರ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ಈ ಪಟ್ಟಿಯನ್ನು ತಯಾರಿಸಲಾಗಿದೆ.ಕಲ್ಲಿದ್ದಲು ಗಣಿಗಳ ಕಾರಣ ಮಲಿನವಾಗಿರುವ ಎರಡು ಚೀನಾದ ಪಟ್ಟಣಗಳೂ ಪಟ್ಟಿಯಲ್ಲಿ ಸೇರಿವೆ.
- Read more about ವಿಶ್ವದ ಮಹಾಮಲಿನ ಸ್ಥಳಗಳಲ್ಲಿ ಭಾರತಕ್ಕೆ ಸ್ಥಾನ!
- 4 comments
- Log in or register to post comments