ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳು - ಶತಾವಧಾನಿ ಗಣೇಶ್ ಅವರಿಂದ

"ಪ್ರವಚನ ವಾಹಿನಿ"ಯ 5ನೇ ವಾರ್ಷಿಕೋತ್ಸವದ ಅಂಗವಾಗಿ,

ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಕುರಿತು ಉಪನ್ಯಾಸ.

ಆವರಣ ಸಂವಾದ - ೧೮ ಮಾರ್ಚ್ ೨೦೦೭, ಭಾನುವಾರ

ಆವರಣ ಸಂವಾದ

ವಿಶೇಷ ಕಾರ್ಯಕ್ರಮ

ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪರವರೊಡನೆ

ದಿನಾಂಕ 18.03.2007, ಭಾನುವಾರ ಬೆಳಗ್ಗೆ ೧೦ ರಿಂದ

ಸ್ಥಳ : ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ ರಸ್ತೆ, ಬೆಂಗಳೂರು.

ph:22421414, 9448494949

ತ ರಾ ಸು ಮತ್ತು ಮಾಸ್ತಿ ಒಂದೇ ಸ್ಥಳಮಹಿಮೆ ಬಗ್ಗೆ ಬರೆದಿದ್ದರೇ?

ತರಾಸು ಅವರ "ಹಂಸಗೀತೆ" ಕಾದಂಬರಿಯನ್ನು ಓದುತ್ತಿದ್ದೇನೆ. ಅದರಲ್ಲಿ ವೀರಣ್ಣಜ್ಜ ಎಂಬ ಅರ್ಚಕರ ಕತೆ ಬರುತ್ತದೆ. ಅರ್ಚಕರು ಓರ್ವ ಮಹಿಳೆಯನ್ನು ಇಟ್ಟುಕೊಂಡಿದ್ದು, ಪೂಜೆ ಮುಗಿಸಿ ಅವಳನ್ನು ಭೇಟಿಯಾಗುವ ಕ್ರಮ ಇಟ್ಟುಕೊಂಡಿದ್ದರಂತೆ.ಪಾಳೆಯಗಾರರು ಆಗಮಿಸಿದ ಬಳಿಕವಷ್ಟೆ ಮಹಾಪೂಜೆ ಮಾಡುವ ಅವರು ಒಂದು ದಿನ ಎಷ್ಟು ಕಾದರೂ ಅವರು ಬರದಿದ್ದಾಗ, ಪೂಜೆ ಮುಗಿಸಿ ಮನೆಗೆ ತೆರಳುತ್ತಾರೆ. ಅಲ್ಲಿ ಅವರ ಹೆಂಗಸು ಹೂ ಮುಡಿದುಕೊಂಡು,ಊಟ ಮುಗಿಸಿ,ಮಲಗಬೇಕೆನ್ನುವಷ್ಟರಲ್ಲಿ ಪಾಳೆಯಗಾರರ ಆಗಮನದ ಸೂಚನೆ ಸಿಗುತ್ತದೆ. ಪಾಳೆಯಗಾರರಿಗೆ ಅಸಮಾಧಾನವಾದೀತೆಂಬ ಹೆದರಿಕೆಯಿಂದ, ಸ್ತ್ರೀಗೆ ಮುಡಿಸಿದ ಹೂವನ್ನು ಮತ್ತೆ ತೆಗೆದುಕೊಂಡು,ದೇವಾಲಯಕ್ಕೆ ಬಂದು,ಪೂಜೆ ಮತ್ತೆ ಮಾಡಿ,ಪಾಳೆಯಗಾರರಿಗೆ ಪ್ರಸಾದರೂಪವಾಗಿ,ಹೂವನ್ನಿತ್ತಾಗ,ಅದರಲ್ಲಿ ಕೂದಲನ್ನು ನೋಡಿ ಪಾಳೆಯಗಾರರು ಕಿಡಿಕಿಡಿಯಾದರೆ, ಅರ್ಚಕರು ಅದು ದೇವರ ಮುಡಿಯ ಕೂದಲು ಎಂದು ಸಾಧಿಸುತ್ತಾರೆ.ಮಾತಿಗೆ ಮಾತು ಬೆಳೆದು,ಮರುದಿನ ಹಗಲು ಪಾಳೆಯಗಾರರು ದೇವಸ್ಥಾನಕ್ಕೆ ಆಗಮಿಸಿ,ದೇವರ ಮುಡಿಯನ್ನು ಪರೀಕ್ಷಿಸುವುದು ಎಂದಾಗುತ್ತದೆ.

ಆಶ್ಚರ್ಯವೆಂದರೆ,ಮಾಸ್ತಿಯವರ ಸಣ್ಣಕತೆಯೊಂದರಲ್ಲಿ,ಇಂತಹದ್ದೇ ಐತಿಹ್ಯದ ಬಗ್ಗೆ ಕತೆಯಿದೆ. ಆದರೆ ಅಂತ್ಯವನ್ನು ತರಾಸು ಅವರಿಗಿಂತ ಭಿನ್ನವಾಗಿ ಮಾಸ್ತಿಯವರು ನಿರೂಪಿಸಿದ್ದಾರೆ.ಮಾಸ್ತಿಯವರು ತಮ್ಮ ಕತೆಯಲ್ಲಿ ಅರ್ಚಕ ದಿಕ್ಕು ಕಾಣದೆ, ದೇವರ ಮುಂದೆ ಪ್ರಾರ್ಥಿಸುತ್ತಾ,ಅಲ್ಲೇ ನಿದ್ದೆ ಹೋದ ಸಂದರ್ಭದಲ್ಲಿ (ಬಹುಶ:) ಅರ್ಚಕರ ಮಗಳು ತನ್ನ ಮುಡಿಯನ್ನು ಕತ್ತರಿಸಿ,ಶಿವಲಿಂಗದ ಮೇಲಿಟ್ಟು,ಅವರನ್ನು ಸಂಕಟದಿಂದ ಪಾರು ಮಾಡಿದಂತೆ ನೈಜವಾಗಿ ಚಿತ್ರಿಸಿದ್ದಾರೆ. ತರಾಸು ಕಾದಂಬರಿಯಲ್ಲಿ ಅರ್ಚಕರು ಮತ್ತು ವೆಂಕಟಸುಬ್ಬಯ್ಯ ಎಂಬ ಸಂಗೀತ ಕಲಾವಿದರು ತನ್ಮಯದಿಂದ ಧ್ಯಾನಿಸಿ, ಪಾಳೆಯಗಾರರು ಬರುವಾಗ,ಶಿವಲಿಂಗದ ಮೇಲೆ ಮುಡಿ ಬಂದಿರುತ್ತದೆ.ಅದು ನೈಜವೇ ಎಂದು ನೋಡಲು ಪಾಳೆಯಗಾರರು ಅದನ್ನು ಕಿತ್ತಾಗ, ಅದರಿಂದ ರಕ್ತ ಬರುತ್ತದೆ ಎಂಬ ಐತಿಹ್ಯದ ಬಗ್ಗೆ ಬರೆದಿದ್ದಾರೆ.

ಇದೇನಾ “ಧಿಮ್ಮಿತನ” ವೆಂದರೆ?

“ಆವರಣ”, ನಾನು ಕೊಂಡು ಓದಿದ ಮೊದಲ ಕಾದಂಬರಿ! ಅದೂ ಕೇವಲ ೪ ದಿನದಲ್ಲಿ! ಇದು ಬೇರೆಯವರಿಗೆ ಸಾಮಾನ್ಯ ಅನ್ನಿಸಬಹುದು, ಆದರೆ ನನ್ನ ಮಟ್ಟಿಗೆ ಇದು 'ಆಶ್ಚರ್ಯ’. ನಾನು ಯಾವತ್ತೂ ಯಾವುದೂ ಕಾದಂಬರಿಯನ್ನ ಕೊಂಡು ಓದಿದವನಲ್ಲ. ಹಾಗಂತ ಓದುವುದೇ ಇಲ್ಲ ಅಂತಲ್ಲ. ಪತ್ರಿಕೆ ಹಾಗು ಅಂಕಣ/ಲೇಖನಗಳನ್ನು ಓದುತ್ತೀನಿ. ದೇಶಕ್ಕೆ ಸಂಬಂಧ ಪಟ್ಟ ಹಾಗೆ ಯಾವುದಾದರೂ ಸರಿ, ಏನೋ ಕುತೂಹಲ. ಅದರಲ್ಲೂ ಇತಿಹಾಸದ ಬಗ್ಗೆ ಸ್ವಲ್ಪ ಹೆಚ್ಚು ಆಸಕ್ತಿ. ಹಾಗಾಗಿ ನನ್ನ ಮನಸ್ಸು ಯಥಾಪ್ರಕಾರ “ಆವರಣ”ದ ಕಡೆ ಓಡಿತು.

DLI ಎಂಬ ಪುಸ್ತಕಾರಣ್ಯದಲ್ಲಿ ಹುಡುಕಾಟ...

ನೀವು "ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ(DLI)"ಗೆ ನಿಯಮಿತವಾಗಿ ಭೇಟಿನೀಡಿ ಪುಸ್ತಕಗಳನ್ನು ಹುಡುಕಿ, ತಿರುವುಹಾಕುವ ಆಸಕ್ತರಲ್ಲೊಬ್ಬರಾದಲ್ಲಿ, ಆ ಹುಡುಕಾಟದ ಕಷ್ಟ-ಸುಖ ನಿಮಗೀಗಾಗಲೇ ಮನದಟ್ಟಾಗಿರುತ್ತದೆ. "ಎ, ಬಿ, ಸಿ..." ಎಂದು ನೇರವಾಗಿ ಅಕ್ಷರಗಳ ರೀತ್ಯಾ ಹುಡುಕಾಡುವುದಾದಲ್ಲಿ ಅಂತಹ ಸಮಸ್ಯೆಯೇನಿಲ್ಲ. ಆದರೆ ಹಾಗೆ ಹುಡುಕಲು ಪುಸ್ತಕದ ಹೆಸರು ಮೊದಲೇ ತಿಳಿದಿರಬೇಕಾಗುತ್ತದೆ. ಅದರ ಬದಲು ಬರೆದವರ (ಕರ್ತೃ) ಹೆಸರನ್ನಾಧರಿಸಿ ಬೇಗ ಹುಡುಕೋಣ, ಆ ಲೇಖಕರ ಯಾವ್ಯಾವ ಪುಸ್ತಕಗಳು ದೊರಕುತ್ತವೆ ನೋಡೋಣವೆಂದು ಹೊರಟಿರೋ, ಆಗ ಶುರು ತಮಾಷೆ! ಇನ್ನೂ ಇದರ ಅನುಭವವಿಲ್ಲದೆ ಇರುವವರು ಪ್ರಯತ್ನಿಸಿ ನೋಡಿ; ಬಹಳ ತಮಾಷೆಯಾಗಿರುತ್ತದೆ. ಹುಡುಕಾಟ ಫಲಿಸುತ್ತದೆ, ಇಲ್ಲವೆಂದಲ್ಲ. ಆದರೆ ಅದಕ್ಕೆ ತಗುಲುವ ಸಮಯ ತುಸು ಹೆಚ್ಚಾಯಿತೇನೋ ಎಂದು ನನ್ನ ಅಭಿಪ್ರಾಯ.

ನಿಜಜೀವನದಲ್ಲಿ ಹಾಸ್ಯ: ನಿಮ್ಮನ್ನು ನೋಡ್ಕೊಳ್ಳೋಕೆ ನಾನಿಲ್ವೇನ್ರೋ!

(ನಿಜಜೀವನದಲ್ಲಿಯೇ ಹಾಸ್ಯವನ್ನು ಹುಡುಕಬಹುದಾದ ಬಗ್ಗೆ ಮತ್ತು ಆ ರೀತಿಯ ಎರಡು ಸ್ವಾರಸ್ಯಕರ ಸನ್ನಿವೇಶಗಳ ಬಗ್ಗೆ ಈ ಹಿಂದೆ ಮೊದಲ ಕಂತಿನಲ್ಲಿ ಬರೆದಿದ್ದೆ. ಭೀಮ-ದುರ್ಯೋಧನರ ಕಾಳಗ ಮತ್ತು ಸಂಕೋಚ್ಯತೆ. ಈ ಬರಹ ಆ ರೀತಿಯ ನಿಜಜೀವನದಲ್ಲಿನ ಹಾಸ್ಯಮಯ ಸನ್ನಿವೇಶಗಳ ಎರಡನೆಯ ಕಂತು.)

ಸ್ತಬ್ಧಗೊಂಡ ಕ್ಷಣಗಳು..

stand still

ಈ ತರಹದ experiment ಗಳನ್ನು ಮಾಡಬೇಕೆಂದು ಬಹಳ ಹಿಂದೆಯೇ ಅಂದು ಕೊಂಡಿದ್ದೆ. ಆದರೆ ನನ್ನ ಹಳೆಯ vivitar (non- digital) ನಲ್ಲಿ ಇದನ್ನು ಮಾಡಲು ಕಷ್ಟವಿತ್ತು.

ಬೆಂಗಳೂರು ಓದುಗರು

ನಮಸ್ಕಾರ,

ನಾನು ಬೆಂಗಳೂರು, ಹಂಪಿ ನಗರದಲ್ಲಿ ವಾಸಿಸುವೆ... ನಾವೆಲ್ಲಾ ಸೇರಿ ಯಾಕೆ ಪುಸ್ತಕಾಲಯವನ್ನು ಮಾಡಿಕೊಳ್ಳಬಾರದು ? ನಮ್ಮಲ್ಲಿರುವ ಪುಸ್ತಕಗಳನ್ನು ಹಂಚಿಕೊಳ್ಳುವ... ಓದಿ ಹಿಂದಿರುಗಿಸುವ.. ಏನಂತಿರ ?