ಬದುಕು
ಕಾಣದ ಕೈಯ ನಡೆಯಾಟ
ಈ ಬದುಕಿನ ಚದುರಂಗದಾಟ
ತಪ್ಪಿದ ನಡೆ, ಕಡಿಯುವುದು ಆ ಕೈಯಲ್ಲ,
ನನ್ನ ತಲೆ... ಅದಕ್ಕೇನು ಬೆಲೆ?
- Read more about ಬದುಕು
- Log in or register to post comments
ಕಾಣದ ಕೈಯ ನಡೆಯಾಟ
ಈ ಬದುಕಿನ ಚದುರಂಗದಾಟ
ತಪ್ಪಿದ ನಡೆ, ಕಡಿಯುವುದು ಆ ಕೈಯಲ್ಲ,
ನನ್ನ ತಲೆ... ಅದಕ್ಕೇನು ಬೆಲೆ?
ಬೆಂಗಳೂರು, ಆಗಸ್ಟ್ 12: ದಟ್ಸ್ ಕನ್ನಡ ಅಂಕಣಕಾರ ಶ್ರೀವತ್ಸ ಜೋಷಿಯವರ ಇನ್ನೊಂದಿಷ್ಟು ವಿಚಿತ್ರಾನ್ನ ಹಾಗೂ ಮತ್ತೊಂದಿಷ್ಟು ವಿಚಿತ್ರಾನ್ನ ಎಂಬ ಪುಸ್ತಕಗಳು ಲೋಕಾರ್ಪಣೆಗೊಂಡಿತು.
Reach for the Sky!' ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಹಂಬಲಿಸುವವರನ್ನು ಪ್ರೋತ್ಸಾಹಿಸುವ ನುಡಿಗಳಿವು. ವಿಮಾನ ಹಾಗೂ ಬಾಹ್ಯಾಕಾಶ ಯಾನಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಬಂದ ಮೇಲೆ, ‘ಮುಗಿಲು ಮುಟ್ಟುವ’ ಅಥವಾ ‘ಆಗಸದತ್ತ ಜಿಗಿಯುವ’ ಕಾರ್ಯಗಳಲ್ಲಿ ನಮಗೆ ವಿಶೇಷತೆಗಳೇನೂ ಕಾಣುತ್ತಿಲ್ಲ. ಡಾ ರೊದ್ದಂ ನರಸಿಂಹ ನಿಮಗೆ ಗೊತ್ತಿರಬೇಕು.
ಈಚೀಚೆಗೆ ಕುಗ್ರಾಮಗಳಲ್ಲಿನ ಜನರು ಸಹಾ ಪೇಸ್ಟು ಸಹವಾಸಕ್ಕೆ ಬಿದ್ದು, ಹಲ್ಲು ತೋರಿಸುತ್ತಿದ್ದಾರೆ! ಮಣ್ಣುಮಸಿ ಜಾಗಕ್ಕೆ ಪೇಸ್ಟು ಬಂದು ಭದ್ರವಾಗಿ ಕುಳಿತಿದೆ! ಪೇಸ್ಟ್ ನ ಅಡ್ಡ ಮತ್ತು ಉದ್ದ ಪರಿಣಾಮಗಳ ಬಗ್ಗೆ ಚರ್ಚೆ ಇದ್ದದ್ದೆ. ಸದ್ಯಕ್ಕೆ ಪೇಸ್ಟುಗೆ ಸಂಬಂಧಿಸಿದ ಕೆಲ ಸ್ವಾರಸ್ಯಕರ ಸಂಗತಿಗಳು ನಿಮ್ಮ ಗಮನಕ್ಕೆ..
(ಇ-ಲೋಕ-34 )(13/8/2007)
ಭೂಕಂಪದ 3ಡಿ ಸಿನೇಮಾ
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ ಪದೇ ಪದೇ ಸಂಭವಿಸುತ್ತಿರುತ್ತದೆ. ಭೂಮಿಯು ಎಷ್ಟು ಕಂಪಿಸಿತು,ಅದರ ಕೇಂದ್ರ ಎಲ್ಲಿತ್ತು,ಅದು ಎಷ್ಟು ಆಳದಲ್ಲಿ ಸಂಭವಿಸಿತು ಮುಂತಾದ ವಿವರಗಳನ್ನು ಭೂಮಿಗೆ ಅಳವಡಿಸಿದ ಸಂವೇದಕಗಳು ದಾಖಲಿಸುತ್ತಿರುತ್ತವೆ. ಮುಂದೆ ಈ ಪ್ರದೇಶದಲ್ಲಿ ಭೂಕಂಪ ಮಾಪಕ ರಿಕ್ಟರ್ ಸ್ಕೇಲಿನಲ್ಲಿ ಮೂರುವರೆಗಿಂತ ಹೆಚ್ಚು ಪ್ರಮಾಣದ ಭೂಕಂಪ ಸಂಭವಿಸಿದ ಅರ್ಧ ಗಂಟೆಯ ಬಳಿಕ ಟಿವಿಯಂತಹ ಮಾಧ್ಯಮಗಳಲ್ಲಿ,ಭೂಕಂಪದಿಂದ ಭೂಮಿ ಅದುರಿದ ಬಗೆಯನ್ನು ಮೂರು ಆಯಾಮಗಳಲ್ಲಿ ತೋರಿಸುತ್ತಾರಂತೆ. ಭೂಕಂಪದ ಬಗೆಗಿನ ವಿವರಗಳು ಸೂಪರ್ ಕಂಪ್ಯೂಟರಿಗೆ ತಲುಪಿ,ಅದರಲ್ಲಿರುವ ತಂತ್ರಾಂಶವು ಭೂಕಂಪದ ಪರಿಣಾಮವನ್ನು ಅನಿಮೇಶನ್ ಚಲನಚಿತ್ರವಾಗಿ ವೀಕ್ಷಕರ ಕಣ್ಣ ಮುಂದಿಡುತ್ತದೆ.ಇದಕ್ಕೆ ಮೂವತ್ತು ನಿಮಿಷಗಳಷ್ಟೇ ಸಾಕು.ಹಿಂದೆ ಈ ಪ್ರದೇಶದಲ್ಲಿ ನಡೆದ ಭೂಕಂಪ ಉಂಟು ಮಾಡಿದ ಪರಿಣಾಮಗಳ ಮಾಹಿತಿಯನ್ನೂ ಕಂಪ್ಯೂಟರ್ ಬಳಸಿಕೊಂಡು ಈ ವಿಶ್ಲೇಷಣೆ ನಡೆಸುತ್ತದೆ."ಆನ್ ಡಿಮಾಂಡ್’ ಹೆಸರಿನ ಸೂಪರ್ ಕಂಪ್ಯೂಟರ್ ಇನ್ನೂರೈವತ್ತರು ಸಂಸ್ಕಾರಕಗಳನ್ನು ಹೊಂದಿದೆ. ಲಿನಕ್ಸ್ ಕಾರ್ಯನಿರ್ವಹಣ ವ್ಯವಸ್ಥೆ ತಂತ್ರಾಂಶ ಇದರಲ್ಲಿದೆ.
[ ಈ ಮಾತಿನ/ಚರ್ಚೆಯ ಗುರಿ/ಉದ್ದೇಶ ಯಾರನ್ನು ನಿಂದಿಸಿ/ಹೀಗಳೆಯುವುದಲ್ಲ. ಕನ್ನಡದ ಬಿನ್ನಣದ ಬರಹಗಳು ಇನ್ನಾದರೂ ಹೆಚ್ಚು ಮಂದಿಯನ್ನು ಮುಟ್ಟಲಿ ಎಂಬ ಒಳ್ಳೆಯ ತೆರೆದ ಮನಸ್ಸಿನಿಂದ ಹಾಕುತ್ತಿದ್ದೇನೆ. ದಯವಿಟ್ಟು ಹೆಚ್ಚಿನ ಅರಿವಿಗೆ ಶಂಕರಬಟ್ಟರ ಹೊತ್ತಗೆಗಳನ್ನು ಓದಿ]
ನಮ್ಮ ಮನೆ ಇರೋದು ಲಂಡನ್ನಿನ ಹ್ಯಾರೋ (ನಾನು ನನ್ನ ಗೆಳೆಯ ಹಾರೂಕೇರಿ ಅಂತ ತಮಾಷೆ ಮಾಡುತ್ತೇವೆ) ದಲ್ಲಿ. ಇಲ್ಲಿ ಜಾಸ್ತಿ ಜನ ಭಾರತೀಯರು, ಪಾಕಿಸ್ತಾನದವರು ಮತ್ತು ಶ್ರೀಲಂಕದವರು. ಮೊನ್ನೆ ನಮ್ಮ ಮನೆಗೆ ಬಂದವರನ್ನು (ಅವರು ಇಂಗ್ಲಂಡಿಗೆ ಬಂದು ೧೦ ವರ್ಷವಾದವು) ಕರೆದುಕೊಂಡು ಹ್ಯಾರೋ-ಅನ್-ದ-ಹಿಲ್ ನ ಶಾಪಿಂಗ್ ಮಾಲ್ ಗೆ ಹೋಗಿದ್ದೆವು.
ಎರಡು ತರ ಖುಷಿ ಇದೆ. ಎರಡೂ ಪ್ರಶ್ನೆಗಳಿಂದ ಹುಟ್ಟೋ ಖುಷಿ. ಪ್ರಶ್ನೆಗಳಲ್ಲೇ ನಿಂತು ಹೋಗೋ ಖುಷಿ. ಯಾಕೆಂದರೆ ಉತ್ತರದಲ್ಲಿ ವಿವರಣೆ ಇದೆ, ಆದರೆ ಖುಷಿ ಇಲ್ಲ. ಪ್ರಶ್ನೆಗಿಂತ ಉತ್ತರ ವಿಪರೀತ ಬೋರಿಂಗ್.
ಮೊದಲನೇ ಪ್ರಶ್ನೆ - ನೀನು ಈ ದೇಶದಲ್ಲೇ ಹುಟ್ಟಿದ್ದ? ಪ್ರಶ್ನೆ ಹಿಂದಿನ ಯೋಚನೆ ಗಮನಿಸಿ. ನುಡಿ, ನಡೆವಳಿಕೆ, ತಿಳವಳಿಕೆ ಇದೆಲ್ಲದರ ಮೇಲೆ ಅವರ ತೀರ್ಪು ಈ ಪ್ರಶ್ನೆ ರೂಪದಲ್ಲಿ ಧುತ್ತಂತ ಎದುರಾಗತ್ತೆ. ಈ ದೇಶದಲ್ಲಿ ಹುಟ್ಟದೇ ಇರೋನಿಗೆ ಅದು ರಾಜಕೀಯವಾದ ಪ್ರಶ್ನೆನೂ ಆಗಬಹುದು. ಉತ್ತರ ಕೊಡೋಕೆ ಇಷ್ಟ ಇಲ್ಲದೇ ಇರೋ ಪ್ರಶ್ನೆನೂ ಆಗಬಹುದು. ಅದೇನೇ ಆದರೂ ಈ ಪ್ರಶ್ನೆ, ಮತ್ತು ಉತ್ತರದ ಅಪೇಕ್ಷೆಯ ಸಂವಾದದಲ್ಲಿ ಒಂದು ಬಗೆಯ ಖುಷಿಯಿದೆ, ಮಜಾಯಿದೆ.
ಎರಡನೇದು - ನೀನು ಈ ದೇಶಕ್ಕೆ ಬಂದು ಎಷ್ಟು ದಿನ ಆಯಿತು? ಇದು "ನೀನು ಈ ದೇಶದಲ್ಲೇ ಹುಟ್ಟಿದ್ದ?" ಅನ್ನೋದಕ್ಕಿಂತ ಸಕ್ಕತ್ ಖುಷಿ ಕೊಡೋ ಪ್ರಶ್ನೆ. ಬೇಜಾನ್ ಒಳತಿರುವುಗಳಿರೋ ಪ್ರಶ್ನೆ. ಏಕ್‌ದಂ ಉತ್ತರಕೊಡೋ ಬದಲು ಪ್ರಶ್ನೆಗೊಂದು ಪ್ರಶ್ನೆ ಎಸೀಲಾ ಅಂತ ಇರಾದೆ ಹುಟ್ಟಿಕೊಳ್ಳತ್ತೆ. ಆ ಇರಾದೆ ತೋರಿಸಿಕೊಳ್ಳೋದು ಕುಚೋದ್ಯವಾಗಿ. "ದಿನಗಳಲ್ಲಿ ಬೇಕಾ ಗಂಟೆಗಳಲ್ಲಿ ಬೇಕಾ" ಅಂತ ಕೇಳೋದಕ್ಕೆ ಒಂದರೆ ಕ್ಷಣ ಯೋಚನೆ ಮಾಡ್ತೀನಿ. ಇದ್ದಕ್ಕಿದ್ದ ಹಾಗೆ ಅಷ್ಟೊಂದು ರಾಜಕೀಯ ಯಾಕೆ ಅಂತ ಮುಚ್ಕೋತೀನಿ. ಆದರೂ ನಾನು ಕಟ್ಟಿಕೊಂಡು ಬಂದಿದ್ದು ಇನ್ನೂ ಕಾಣತಲ್ಲ ಅಂತ ತಕತಕ ಕುಣೀತೀನಿ.
ಆಂಗ್ರಿ ಯಂಗ್ ಮ್ಯಾನ್ ಪ್ರಸಾದ್!!!
ಕಿರುನಗೆ ಮುಖದಲ್ಲಿ ಚಂದ
ಕೋಪ ನಿನಗಲ್ಲ ಕಂದ
ನೀ ನಕ್ಕರೆ ಜಗ ನಗುವುದು
ಜಗಮಗಿಸಲಿ ನಗು ಎಲ್ಲರ ಮೊಗದಲಿ
ಅದೇ ಮಕರಂದ!!!