ಮಳೆ
ಹೋದ ವರ್ಷ ನಾವು ಮನೆ ರಿಪೇರಿ ಮಾಡಿಸಿದೆವು. ರೂಫ್ ಕೂಡ ರಿಪೇರಿ ಮಾಡಿಸಿದೆವು. ರೂಫ್ ಮೇಲಿನ ಸುರ್‍ಕಿ ತೆಗೆದು ಹಾಕಿದ್ದರು ಮಳೆ ಹಿಡಿಯಿತು ನೋಡಿ ಅಬ್ಬ!
- Read more about ಮಳೆ
- Log in or register to post comments
ಹೋದ ವರ್ಷ ನಾವು ಮನೆ ರಿಪೇರಿ ಮಾಡಿಸಿದೆವು. ರೂಫ್ ಕೂಡ ರಿಪೇರಿ ಮಾಡಿಸಿದೆವು. ರೂಫ್ ಮೇಲಿನ ಸುರ್‍ಕಿ ತೆಗೆದು ಹಾಕಿದ್ದರು ಮಳೆ ಹಿಡಿಯಿತು ನೋಡಿ ಅಬ್ಬ!
ನನ್ನ ಗೆಳೆಯ ಇವತ್ತು ಹೊಸ ಲ್ಯಾಪ್ಟಾಪ್ ತಗೊಂಡನಂತೆ ಅವನಿಗೊಸ್ಕರ .
(ಅದೇ ಈ ಕವನದಲ್ಲಿರೊ ಪುಟ್ಟಿ ಅಪಾರ್ಥಮಾಡ್ಕೊಬೇಡಿ ಪ್ಲೀಸ್)
ಬಾಗಲಕೋಟೆಯಿಂದ ಗೆಳೆಯ ಅನಿಲ್ ಢಗೆ 'ಬಾಲೇ, ಒಂದೆರಡು ದಿನ ಇದ್ದೋಗ್ವಿಯಂತೆ', ಎಂದು ಬಹಳ ದಿನದಿಂದ ಕರೆಯುತ್ತಿದ್ದ. ಅಲ್ಲಿವರೆಗೆ ಬಂದು ಸುಮ್ನೆ ಮನೆಯಲ್ಲಿ ಕೂತ್ಕೊಳ್ಳುದು ನನ್ನಿಂದ ಆಗದು, ಅಲ್ಲಿಲ್ಲಿ ಅಡ್ದಾಡಬೇಕು ಎಂದು ನಾನಂದಾಗ, 'ದುನಿಯಾ ತೋರಿಸ್ತೀನಿ ಮಗನ, ದುನಿಯಾ. ನೀ ಬಾ ಮೊದ್ಲ' ಎಂದು ಕೊಚ್ಚಿಕೊಂಡ. ೨೦೦೪ರ ಜೂನ್ ತಿಂಗಳ ಅದೊಂದು ಶುಕ್ರವಾರ ಮುಂಜಾನೆ ೫ಕ್ಕೆ ಬಾಗಲಕೋಟೆಯ ನವನಗರದಲ್ಲಿಳಿದು ಈ ದುನಿಯಾ ತೋರಿಸುವವನಿಗೆ ಫೋನಾಯಿಸಿದರೆ, 'ಯಾರ, ಯಾರ' ಎಂದು ತೊದಲತೊಡಗಿದ. ಒಂದೆರಡು ಝಾಡಿಸಿದೊಡನೇ 'ಯಾವಾಗ್ ಬಂದಿಲೇ, ಬಂದೆ ತಡಿ', ಎನ್ನುತ್ತಾ ೫ ನಿಮಿಷದಲ್ಲಿ ಹಾಜರಾದ.
ಆ ದಿನ ನಾವು ಭೇಟಿ ನೀಡಬೇಕೆಂದಿದ್ದು ಬದಾಮಿ, ಬನಶಂಕರಿ, ಮಹಾಕೂಟ, ಹುಲಿಗೆಮ್ಮನಕೊಳ್ಳ, ಪಟ್ಟದಕಲ್ಲು, ಸಿದ್ಧನಕೊಳ್ಳ ಮತ್ತು ಐಹೊಳೆಗೆ. ಇವುಗಳಲ್ಲಿ ಬದಾಮಿ, ಪಟ್ಟದಕಲ್ಲು ಮತ್ತು ಐಹೊಳೆಗಳನ್ನು ಬಿಟ್ಟರೆ ಉಳಿದ ಸ್ಥಳಗಳ ಬಗ್ಗೆ ಅನಿಲನೇ ನನಗೆ ತಿಳಿಸಿದ್ದು. ಬದಾಮಿಗೆ ೫ಕಿಮಿ ದೂರವಿರುವಾಗ ನಮ್ಮ ಬೈಕಿನ ಟಯರ್ ಪಂಕ್ಚರ್! ಒಂದು ನರಪಿಳ್ಳೆಯೂ ಕಾಣಿಸುತ್ತಿರಲಿಲ್ಲ. ಅನಿಲ್ ಫುಲ್ ಮೂಡ್ ಆಫ್. 'ಆನಿ ಕುಂತಂಗೆ ಕುಂತಿ, ಪಂಕ್ಚರ್ ಆಗದೇ ಇನ್ನೇನ' ಎಂದು ನನಗೇ ಬಯ್ಯತೊಡಗಿದ್ದ. ಟಯರ್ ಕಳಚಲು ಪ್ರಯತ್ನ ಮಾಡತೊಡಗಿದೆವು. ನಮ್ಮಿಂದೆಲ್ಲಿ ಅದು ಸಾಧ್ಯ? ಅರ್ಧ ಗಂಟೆ ಕಳೆದಿರಬಹುದು, ಒಂದು ಗೂಡ್ಸ್ ರಿಕ್ಷಾ ನಮ್ಮತ್ತ ಬರತೊಡಗಿತು. ಅದನ್ನು ನಿಲ್ಲಿಸಿ, ಬೈಕನ್ನು ಅದರ ಹಿಂದೆ ಏರಿಸಿ, ನಾವೂ ಏರಿ, ಬದಾಮಿಯೆಡೆ ಹೊರಟೆವು.
ಈ ಬದಾಮಿ ಕೊಳಕು ಊರು. ಗುಹಾದೇವಸ್ಥಾನಗಳು ಇರುವ ಪ್ರಾಂಗಣ ಬಿಟ್ಟರೆ ಉಳಿದೆಲ್ಲಾ ಕಡೆ ಅಸಹ್ಯ. ಇಲ್ಲಿರುವ ಮಂಗಗಳು ಬಹಳ 'ನೊಟೋರಿಯಸ್'. ಕೈಯಲಿದ್ದನ್ನು ಕಸಿದುಕೊಳ್ಳುವುದು, ವಾಹನದೊಳಗೆ ನೂರಿ ಬ್ಯಾಗ್ ಇತ್ಯಾದಿಗಳನ್ನು ಲಪಟಾಯಿಸುವುದು, ಇತ್ಯಾದಿಗಳಲ್ಲಿ ಇವುಗಳು ಪರಿಣಿತ. ಈ ಗುಹಾದೇವಸ್ಥಾನಗಳ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ. ಒಂದಕ್ಕಿಂತ ಒಂದು ಚೆನ್ನಾಗಿರುವ ಗುಹಾದೇವಸ್ಥಾನಗಳು. ಇದೊಂದು ದೊಡ್ಡ ಕೆಂಪುಬಣ್ಣದ ಬಹೂ ದೂರದವರೆಗೂ ಹಬ್ಬಿರುವ ಬೆಟ್ಟ. ಈ ಬೆಟ್ಟದ ಒಂದು ಪಾರ್ಶ್ವದಲ್ಲಿ ಈ ದೇವಸ್ಥಾನಗಳನ್ನು ಕೆತ್ತಲಾಗಿದೆ. ಬೆಟ್ಟದ ಮೇಲಕ್ಕೆ ತೆರಳಲು ಮೆಟ್ಟಿಲುಗಳಿವೆ. ಈಗ ಅಲ್ಲೊಂದು ಗೇಟನ್ನು ಹಾಕಿ ಬೀಗ ಜಡಿಯಲಾಗಿದೆ. ಕೆಲವು ವರ್ಷಗಳ ಹಿಂದೆ ವಿದೇಶಿ ಮಹಿಳೆಯೊಬ್ಬಳನ್ನು, ಬೆಟ್ಟದ ಮೇಲೆ ಅತ್ಯಾಚಾರಗೈದು ಕೊಲೆ ಮಾಡಲಾಗಿದ್ದರಿಂದ, ಈ ಮುನ್ನೆಚ್ಚರಿಕೆಯ ಕ್ರಮ. ಮೇಲೊಂದು ತುಪಾಕಿಯಿದ್ದು, ಅದನ್ನು ನೋಡುವ ಇರಾದೆ ಇದ್ದ ನನಗೆ, ಬೀಗ ಜಡಿದದ್ದನ್ನು ನೋಡಿ ನಿರಾಸೆ. ಮೇಲೆ ಹೋಗಲೇಬೇಕೆಂಬ ಇಚ್ಛೆ ಇದ್ದಲ್ಲಿ, ಗುಹಾದೇವಸ್ಥಾನಗಳು ಇರುವ ಪ್ರಾಂಗಣದಿಂದ ಹೊರಬಂದು, ಬೆಟ್ಟದ ಬುಡದಲ್ಲೇ ಸ್ವಲ್ಪ ದೂರ ನಡೆದು ನಂತರ ಯಾವುದೇ ಶಿಖರ ಏರುವಂತೆ ಒಂದೆರಡು ತಾಸು ನಡೆದು ಮೇಲೆ ತುಪಾಕಿ ಇದ್ದಲ್ಲಿ ತಲುಪಬಹುದು. ಆದರೆ ನನ್ನಲ್ಲಿ ಅಷ್ಟು ಸಮಯವಿರಲಿಲ್ಲ.
ನೀವು ಪುಸ್ತಕ ಸೆಲೆಕ್ಷನ್ ಹೇಗೆ ಮಾಡುತ್ತಿರಾ ?
ನೀವು ಪುಸ್ತಕದ ಅಂಗಡಿಗೆ ಹೋದಾಗ, ಹೊಸ ಪುಸ್ತಕ ಬಂದಿರುತ್ತೆ, ಅದರ ವಿಮರ್ಶೆ ಎಲ್ಲ ಬಂದಿರೊಲ್ಲ ಅಂತ ತಿಳ್ಕೊಳ್ಳಿ .
ಆ ಪುಸ್ತಕ ತಗೊಬೇಕೊ , ಬೇಡವೋ ಅಂತ ಹೇಗೆ ನಿರ್ಧಾರ ಮಾಡ್ತಿರಾ !?!
- ಪುಸ್ತಕದ ಮುಖಪುಟ ?
- ಪುಸ್ತಕದ ಪೀಠಿಕೆ ?
- ಲೇಖಕರನ್ನು ?
:)
ಪೇಪರ್ ಲೆಸ್ ಆಫಿಸ್
ಇದು ಒಂದು ಉತ್ತಮ ಪ್ರಯತ್ನ. ಈ ಪೇಪರ್ ಬಳಕೆಯಿಂದ ಮಿಲ್ಲಿಯನ್ ಮರಗಳು ನಾಶವಾಗುತ್ತಿವೆ. ನಮ್ಮ ಬ್ಯಾಂಕ್ ಸ್ಟೆಟ್ಮೆಂಟುಗಳು, ಬಿಲ್ಲುಗಳು, ಫ಼್ಯಾಕ್ಸ, ಪುಸ್ತಕಗಳು ಆನ್ಲೈನ್ ಇನ್ನು ಹೆಚ್ಚು ಆದರೆ, ಮರಗಳನ್ನು ಉಳಿಸಿದ ಭಾಗ್ಯ ಎಲ್ಲರಿಗು ಸಿಗುತ್ತದೆ.
ನಿಮ್ಮಗೆ ಏನು ಅನ್ನಿಸುತ್ತೆ !?!
"ಕಾಲಚಕ್ರ ಉರುಳಿದಂತೆ
ಬದುಕಲ್ಲಿ ಬಂದದ್ದು ಹೋಗುತ್ತದೆ,
ಹೋದದ್ದು ಬರುತ್ತದೆ"
ಎಂಬ ಅವನ ಉಪದೇಶ ಕೇಳಿ
-"ಆ ಚಕ್ರದ ನಡು ಎಲ್ಲಿದೆ?"
-"ಯೌವ್ವನ ಯಾವಾಗ ಮರಳತ್ತೆ?"
ಎಂದೆಲ್ಲಾ ಅವನನ್ನು ಮುದ್ದಿಸಿ
ಚರ್ಚೆಯನ್ನೇ ನಾಚಿಸಿಬಿಟ್ಟಳು ತುಂಟಿ.
ಬಕ್ಕಮ್ಬಯಲ್
ಕೂಳಬಕ್ಕ
ಬಯಕೆಮರ
ಬಿನ್ನಣಿ
ಬರ್ದುಗ
ಬಿಸುಗಣ್ಣಣುಗ
ಬೆಂಗದಿರ
ಬೆಂಗದಿರಣುಗ
ಮೊನ್ನೆ ಹೆಬ್ಬಾಲ್ ಕೆರೆಯ ಖಾಸಗೀಕರಣದ ವಿರುದ್ಧ ದನಿಯೆತ್ತಲು ಒ೦ದು ಸಭೆಯನ್ನು ಪರಿಸರವಾದಿಗಳು, ಪಕ್ಷಿ ತಜ್ಞರು, ಕೃಷಿ ಕೇ೦ದ್ರದ ವಿಜ್ಞಾನಿಗಳು ಕರೆದಿದ್ದರು. ಹೆಬ್ಬಾಲ್ ಕೆರೆಯು ನಮ್ಮ ಕೆ೦ಪೇ ಗೌಡರು ಕಟ್ಟಿಸುದ್ದು ಕೃಷಿ ಮತ್ತು ಯಲಹ೦ಕದ ಜನರಿಗೆ ಕುಡಿಯುವ ನೀರಿನ ಕೊರತೆ ನೀಗಲೆ೦ದು.ಆದು ಜನರೆಲ್ಲಾ ಸೇರಿ ಕಟ್ಟಿದ ಕೆರೆ.
ಸಿ ಎಚ್ ಜಾಕೋಬ್ಲೋಬೊ C H JACOB LOBO
ಸಿ ಎಚ್ ಜಾಕೋಬ್ಲೋಬೊರವರು ಕೊಡಗಿನ ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಬೆಪ್ಪನಾಡಿನ ರೈತಕುಟುಂಬದವರು. ಇವರ ಪೂರ್ವಿಕರು ಬಿಟಿಷರ ವಿರುದ್ದ ಟಿಪ್ಪುಸುಲ್ತಾನನಿಗೆ ಕುಮ್ಮಕ್ಕು ನೀಡಿ ಕಷ್ಟಕ್ಕೀಡಾದ ತುಕ್ಕಡಿ ಎಂಬ ಊರಿನವರು.