ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಕ್ರಾಂತ ಕರ್ನಾಟಕ - ಪತ್ರಿಕೆ ಬಿಡುಗಡೆ ಹಾಗೂ ವೆಬ್ಸೈಟ್ ಉದ್ಘಾಟನಾ ಸಮಾರಂಭ

ಅಧ್ಯಕ್ಷತೆ: ಎಂ ಪಿ ಪ್ರಕಾಶ್, ಗೃಹ ಸಚಿವರು

ಪತ್ರಿಕೆ ಬಿಡುಗಡೆ: ಎನ್. ವೆಂಕಟಾಚಲ, ಮಾಜಿ ಲೋಕಾಯುಕ್ತರು.

ಇವರು ಮೂಲತಃ ಧಾರವಾಡದವರಾಗಿ ಜಾತಿಯಿಂದ ಲಿಂಗವಂತರಾದ್ದರಿಂದ........ (ಉ.ಕ.ಕ-೧೦)

೧೮೬೬ರ 'ಮಠಪತ್ರಿಕೆ'ಯು ಹೀಗೆ ಹೇಳಿದೆ ."ರಸೆಲ್ ದೊರೆಗಳವರು ಬಂದದಂದಿನಿಂದ ಮಹಾರಾಷ್ಟ್ರ , ಗುಜರಾಥ ಪ್ರಾಂತಗಳಲ್ಲಿ ದೇಶಭಾಷೆಗಳು ಹ್ಯಾಗೆ ಅಭಿವೃದ್ದಿಯಾಗಿರುತ್ತವೆಯೋ , ಅದೇ ಮೇರಿಗೆ ಈ ಭಾಗದಲ್ಲಿ ಕರ್ನಾಟಕಭಾಷೆಯಾಗಬೇಕೆಂದು ಅವರು ಬಹಳ ಯತ್ನಪಡುತ್ತಿದ್ದಾರೆ .

ಭಾಷೆ ಮತ್ತು ಸಾಮಾಜಿಕ ವಾಸ್ತವ

ಭಾಷೆ ಚಲನಶೀಲವಾಗಿದ್ದರಷ್ಟೇ ಉಳಿದುಕೊಳ್ಳುತ್ತದೆ. ಕನ್ನಡ ಉಳಿದು ಬೆಳೆಯಬೇಕಾದರೆ ಅದು ಚಲನಶೀಲವಾಗಿರಲೇ ಬೇಕಾಗುತ್ತದೆ. ಎಲ್ಲ ಜೀವಂತ ಭಾಷೆಗಳೂ ಹೀಗೆ ಸದಾ ಬದಲಾಗುತ್ತಿರುತ್ತವೆ. ಎಷ್ಟೋ ಪದಗಳು ಬಳಕೆಯಾಗದೆ ಕಾಣೆಯಾಗುವಂತೆಯೇ ಹೊಸ ಪದಗಳೂ ಸೇರಿಕೊಳ್ಳುತ್ತಿರುತ್ತವೆ. ಕೆಲವು ಪದಗಳು ಅರ್ಥವನ್ನೇ ಬದಲಾಯಿಸಿಕೊಂಡು ಉಳಿದುಕೊಂಡಿರುತ್ತವೆ. ಈ ಬದಲಾವಣೆಯನ್ನು ಪ್ರಜ್ಞಾಪೂರ್ವಕವಾಗಿ ತಡೆಯುಲು ಸಾಧ್ಯವೇ?

ಜೋಗ ನೋಡಿರಿ ಈಗ

ಮೊನ್ನೆ ಶನಿವಾರ ವಿಪರೀತ ಕೆಲಸವಿದ್ದುದರಿಂದ ರಾತ್ರಿ ಮನೆಗೆ ಬಂದಾಗ ಮಧ್ಯರಾತ್ರಿ ದಾಟಿತ್ತು. ನಿನ್ನೆ ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ, ಮೊದಲ ಪುಟದಲ್ಲೇ ಜೋಗ ಜಲಪಾತದ ರಮಣೀಯವಾಗಿ ಮೈತುಂಬಿಕೊಂಡು ಧುಮುಕುತ್ತಿರುವ ಅದ್ಭುತ ಚಿತ್ರ. ಆರು ಸಲ ಜೋಗಕ್ಕೆ ಹೋದರೂ, ಸಮಾಧಾನವಿರಲಿಲ್ಲ. ಚಿತ್ರ ನೋಡಿದ ಕೂಡಲೇ, ಉದಯವಾಣಿಯನ್ನು ಅಲ್ಲೇ ಬಿಟ್ಟು, ಗಡಿಬಿಡಿಯಲ್ಲಿ ಸ್ನಾನ, ಉಪಹಾರ ಮುಗಿಸಿ ಸರಿಯಾಗಿ ೧೦ಕ್ಕೆ ನನ್ನ ಹೀರೋ ಹೊಂಡ ಪ್ಯಾಶನ್ ಏರಿ ಜೋಗಕ್ಕೆ ಹೊರಟೇಬಿಟ್ಟೆ. ದಾರಿಯುದ್ದಕ್ಕೂ ಮಳೆ ಮಳೆ ಮಳೆ. ಕೊಲ್ಲೂರು ತನಕ ಅಗಾಗ ಮಳೆ ಸುರಿಯುತ್ತಾ ಇತ್ತು. ಕೊಲ್ಲೂರು ದಾಟಿ ಕಾರ್ಗಲ್ ಮುಟ್ಟುವ ತನಕ ಎಡೆಬಿಡದೆ ಸುರಿದ ಮಳೆ, ನಾನು ಜೋಗ ಸಮೀಪಿಸಿದಂತೆ ನಿಂತಿತು. ಸಮಯ ಮಧ್ಯಾಹ್ನ ೨.೩೦ ಹಾಗೂ ಕ್ರಮಿಸಿದ ದೂರ ೧೬೩ ಕಿ.ಮಿ.Jog falls

೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್ ನೀರನ್ನು ಲಿಂಗನಮಕ್ಕಿ ಜಲಾಶಯದಿಂದ ಹೊರಬಿಡುತ್ತಿರುವ ಕಾರಣ ಜೋಗ ಜಲಪಾತ ೧೦ ಮಳೆಗಾಲಗಳ ಬಳಿಕ ಮತ್ತೊಮ್ಮೆ ರಮಣೀಯವಾಗಿ ಧುಮುಕುವ ದೃಶ್ಯ ನೋಡಲು ಜನಜಾತ್ರೆಯೇ ಅಲ್ಲಿ ಸೇರಿತ್ತು. ಕರ್ನಾಟಕ - ಗೋವಾ ಗಡಿಯಲ್ಲಿರುವ ದೂದಸಾಗರ್ ಜಲಪಾತವನ್ನು ಯಾಕೆ ಆ ಹೆಸರಿನಿಂದ ಕರೆಯುತ್ತಾರೆ ಎಂಬುದು, ಜಲಪಾತ ನೋಡಿದ ಬಳಿಕ ನನಗೆ ತಿಳಿದಿತ್ತು. ಆಕಾಶದಿಂದ ಹಾಲಿನ ರಾಶಿಯೇ ಧರೆಗೆ ಬೀಳುತ್ತಿರುವಂತೆ ಕಾಣುವ ದೂದಸಾಗರ್ ಜಲಪಾತದ ದೃಶ್ಯ ಅದ್ಭುತ. ಇದರ ಮುಂದೆ ನನಗೆ ಇದುವರೆಗೆ ನಮ್ಮ ಜೋಗ ನೀರಸ ಎಂದೆನಿಸುತ್ತಿತ್ತು. ಆದರೆ ದೂದಸಾಗರ್ ಮೇಲ್ಭಾಗದಲ್ಲಿ, ಜೋಗ ಜಲಪಾತಕ್ಕಿರುವಂತೆ ಯಾವುದೇ ಆಣೆಕಟ್ಟು ಇಲ್ಲ. ಲಿಂಗನಮಕ್ಕಿ ಆಣೆಕಟ್ಟು ಇರದಿದ್ದರೆ ಜೋಗ ಜಲಪಾತ ಹೇಗಿರಬಹುದು ಎಂಬುದು ಊಹಿಸುವುದು ಕಷ್ಟ. ಆದರೆ ನಿನ್ನೆ ಜೋಗ 'ಎಟ್ ಇಟ್ಸ್ ಬೆಸ್ಟ್' ನೋಡಿದ ಬಳಿಕ, ಜೋಗವನ್ನು 'ನೀರಸ' ಎಂದು ಕಲ್ಪನೆ ಮಾಡಿಕೊಳ್ಳುವ ಅಪರಾಧ ಮಾಡಲಾರೆ.

ಸಮಯ .

ಓಡುತಿರುವೆ ಓಡುತಿರುವೆ ಸತತ ಎಲ್ಲಿಗೆ ?
ಕರಗುತಿದೆ ಸವಿಯುತಿದೆ ಬಂಡೆ ಮೆಲ್ಲಗೆ .

ಸೂರ್ಯ ಸೃಷ್ಟಿ ಭುವಿಯ ಸೃಷ್ಟಿ ಪ್ರತ್ಯಕ್ಶ ನೋಡಿದೆ ,
ಜೀವ ಸೃಷ್ಟಿಯಾಗಲು ನೀನು ಬಹಳ ಕಾದಿದೆ .
ಅರಿಯದೆ ಮನುಜ ನಿನಗೆ ಆಪ್ತನಾದನು ,
ಹುಟ್ಟಿದ ದಿನಕೆ ಕ್ಷಣದ ಸುಖಕೆ ಧನ್ಯನಾದನು ;
ಸಾವು - ನೋವು ನರಳಿದಾತ ದೂರವಾದನು ,
ನಿಜವನರಿಯದೇ ಏಕೆ ಹೀಗೆ ದಿಕ್ಕು ಕೆಟ್ಟನು ?

ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು !

ಹೌದು. ನಾಳಿದ್ದೇ ಅಲ್ವೆ, "ಸ್ವಾತಂತ್ರ್ಯದಿನಾಚರಣೆ" ದಿನ ! ತಿಲಕ್, ಗಾಂಧಿ, ನೆಹರು, ಪಟೇಲ್, ಬೋಸ್ ನಮ್ಮ ದೇಶಕ್ಕಾಗಿ ತಮ್ಮ ತನು,ಮನ,ಧನಗಳನ್ನು ಒತ್ತೆ ಇಟ್ಟು ಗಳಿಸಿ ಕೊಟ್ಟ ಸ್ವಾಧೀನತಾ ದಿನ ! ಬನ್ನಿ ಮೊದಲು ನಾವು ಇದರ ಮಹತ್ವವನ್ನು ಸರಿಯಾಗಿ ತಿಳಿದುಕೊಂಡು ನಮ್ಮ ಮಕ್ಕಳೊಡನೆ ನಮ್ಮ ಅನುಭವಗಳನ್ನು ಹಂಚಿಕೊಳ್ಳೋಣ. ಈ 'ಸುದಿನ' ದಂದು ನಾವು ಅವರ ಹೃದಯದಲ್ಲಿ ದೇಶಪ್ರೇಮ ಬಿತ್ತಿ, ನೀರೆರದು ಬೆಳೆಸಲು ಪ್ರತಿಜ್ಞೆ ಮಾಡಬೇಕು. ಅದಕ್ಕಾಗಿ ನಾಳಿದ್ದು ಬರುವ ೧೫ ನೆಯ ತಾರೀಖಿನ 'ರಾಷ್ಟ್ರವ್ಯಾಪಿ ಹಬ್ಬ'ಕ್ಕೆ ಮಾನಸಿಕವಾಗಿ ಪೂರ್ತಿಯಾಗಿ ಸಿದ್ಧರಾಗಬೇಕಾಗಿದೆ.

ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ

ತೆಗೆದುಕೊಂಡು ಹೋಗಿದ್ದ ಐದಾರು ಎಂಟಿಆರ್ ಪ್ಯಾಕೆಟ್‌ಗಳೆಲ್ಲ ಮೂರ್ನಾಲ್ಕು ದಿನಗಳಲ್ಲಿ ಮುಗಿದುಹೋಗಿತ್ತು. ಒಬ್ಬರೇ ಇದ್ದಾಗ ಬೇಜಾರು ಹಾಗೂ ಸೋಂಬೇರಿತನ ಕಳೆಯಲು ನಾವು ಒಂದು ಕೆಲಸ ಮಾಡುತ್ತೇವೆ. ಅದೇನೆಂದರೆ ತಿಂದ ಒಂದರ್ಧ ಗಂಟೆಯಲ್ಲಿ ಹಸಿವು ಮಾಡಿಕೊಳ್ಳುತ್ತೇವೆ. ಮತ್ತೆ ತಿನ್ನುತ್ತೇವೆ. ಹತ್ತು ದಿನವಾದರೂ ಬಂದೀತೆಂದು ಭಾವಿಸಿಕೊಂಡಿದ್ದ ಎಂಟಿಆರ್, ಮೂರು ದಿನಗಳಲ್ಲಿ 'ಎಂಪ್ಟಿ'ಯಾಗಿತ್ತು. ಅದರ ರುಚಿ ಹಾಗಿತ್ತೆಂದೇನಲ್ಲ. ನಮ್ಮ ಭಾರತೀಯ ಹೊಟ್ಟೆಯ ಹಸಿವು ಫಾರಿನ್ ಲೊಕೇಶನ್ನಿನಲ್ಲಿ ಹಾಗಿತ್ತು.

ಒಂದೇ ಅಡುಗೆ ಎರಡು ದೇಶಗಳಲ್ಲಿ ಎರಡು ರುಚಿ ಪಡೆವ 'ರಸ'ಸ್ವಾದ ಆಶ್ಚರ್ಯಕರ! ಭಾರತದಲ್ಲಿ ಉಪ್ಪಿಟ್ಟಿನಂತೆ ಅನ್‌ವಾಂಟೆಡ್ ಆದ ಎಂಟಿಆರ್ ಅದೇ ಫಿನ್ಲೆಂಡಿನಲ್ಲಿ ಮೃಷ್ಟಾನ್ನ. ಕಳೆದ ವಾಕ್ಯದ ಕೊನೆಗೆ ಬರುವ ಫುಲ್‌ಸ್ಟಾಪ್‌ನ ಮುಂಚಿನ ಪದದ ಅರ್ಥ ನನಗೆ ಗೊತ್ತಿಲ್ಲದಿದ್ದರೂ ಎಂಟಿಆರ್ ಫಿನ್ಲೆಂಡಿನಲ್ಲಿ ಅದಾಗಿತ್ತು. ನಾನು ಮತ್ತು ನನ್ನ ಸ್ಡುಡಿಯೋ

ತಲಾ ನಮ್ಮ ತರ್ಟಿ-ಫಾರ್ಟಿ ಸೈಟಿನ ಅಳತೆಯ ಎರಡು ಸ್ಟುಡಿಯೊ. ಮಧ್ಯದಲ್ಲಿ ಕಾಮನ್ ಅಡುಗೆಮನೆ. ಹೆಲ್ಸಿಂಕಿಯ ವಿಯಟ್ನಾಮಿ ಅಂಗಡಿಯಲ್ಲಿ ಭಾರತೀಯ ದಿನಸಿ ಹಾಗೂ ಆಫ್ರಿಕನ್ ಅಂಗಡಿಯಲ್ಲಿ ಮಸಾಲೆಗಳನ್ನು ಕೊಂಡಿದ್ದೆ. ನಿಜವಾದ ಮಲ್ಟಿ ಕಲ್ಚರಲ್ ಎಂದರೆ ಇದೇ ಅಲ್ಲವೆ. ಅಡುಗೆ ಮಾಡಲು ಪ್ರಾರಂಭಿಸಿದೆ. ಆರಾರು ವರ್ಷಕಾಲ ನಮ್ಮ ಡೆಡ್‌ಬಾಡಿ ಡೆಡ್ಲಿಯಾಗಿದ್ದರೂ "ಕ್ಯಾರೆತುಮಾರೆ" ಎನ್ನದವರು ಫಿನ್ನಿಶ್ ಮಂದಿ ಎಂದು ಈಗಾಗಲೇ ನಿಮಗೆ ತಿಳಿಸಿರುವೆ. ಹಾಗಂತ ನನಗೆ ನಾನೇ ಹೇಳಿಕೊಂಡೆ ಕೂಡ-ಅಡುಗೆ ಮಾಡುವ ಮೊದಲು! ಏಕೆಂದರೆ ಅಡುಗೆ ಮನೆಯಲ್ಲಿ ಮತ್ತು/ಅಥವ ಸ್ಟುಡಿಯೊದಲ್ಲಿ ಸಿಗರೇಟು ಸೇದುವಂತಿಲ್ಲ. ಅದರ ಹೊಗೆ (ಯಾವ ಹೊಗೆಯಾದರೂ ಸರಿ) ಸೀದ ಹೊಗೆ-ಸೆನ್ಸರ್‌ಅನ್ನು ತಲುಪಿ ಅದು ಸೀದ ಅಗ್ನಿಶಾಮಕ ದಳಕ್ಕೆ ಬಿಸಿ ಮುಟ್ಟಿಸಿ ಅವರು ಸೀದ ನಮ್ಮ ಸ್ಟುಡಿಯೋಕ್ಕೆ ಬರುವುದು ವಾಡಿಕೆಯಾಗಿತ್ತು. ಏಕೆಂದರೆ ಪರದೇಶಿ ಕಲಾವಿದರು ರೂಲ್ಸ್ ಮುರಿಯುವಲ್ಲಿ ನಿಷ್ಣಾತರು. ದಂಡ ಭಾರತೀಯ ಕರೆನ್ಸಿಯಲ್ಲಿ ಕೇವಲ ಎಂಟು ಸಾವಿರ ರೂಪಾಯಿ. ಆದ್ದರಿಂದ ಹುಷಾರಾಗಿ ಅಡುಗೆ ಮಾಡತೊಡಗಿದೆ.

KA-10 ಸಾ

ನಮಸ್ಕಾರ, ಎನ್ನಪ್ಪಾ ಇದು KA-10 ಸಾ ಎಂದು ತೆಲೆ ಕೆಡಿಸಿಕೊಳ್ಳಬೇಡಿ, ಇದು ನಮ್ಮ ಜಿಲ್ಲೆ ಚಾಮರಾಜನಗರ ಜಿಲ್ಲೆಯ R.T.O ವಿಭಾಗದ ಸಂಖ್ಯೆ, ರಾಜ್ಯದಲ್ಲಿ ಅತ್ಯಂತ ನಿರ್ಲಕ್ಷಿತ ಪ್ರದೇಶಗಳಲ್ಲಿ ಚಾಮರಾಜನಗರ ಜಿಲ್ಲೆ ಪ್ರಮುಖವಾದುದು, ಈ ಜಿಲ್ಲೆ ಎಲ್ಲಾ ಕೆಟ್ಟು ಕಾರಣಗಳಿಗೆ ಖ್ಯಾತಿಯನ್ನು ಪಡೆದಿದೆ, ಅವುಗಳಲ್ಲಿ ಪ್ರಮುಖವಾದುದು ವೀರಪ್ಪನ್, ನಮ್ಮ ಜಿಲ್ಲೆಗೆ ಮುಖ್ಯಮಂತ್ರಿಗಳು ಬರುವುದಿಲ್ಲ, ಮಂತ್ರಿಗಳು ತಿರುಗಿ ನೋಡುವುದಿಲ್ಲ, ಜಿಲ್ಲಾ ಉಸ್ಥುವಾರಿ ಮಂತ್ರಿ ಕೂಡ ಬೇರೆ ಜಿಲ್ಲೆಯರೆ, ರಸ್ತೆಗಳು, ಅನಿಷ್ಠಕೇಳ್ಳ ಶನೀಶ್ವರನೇ ಕಾರಣ ಎನ್ನುವ ಹಾಗೆ ಜಗತ್ತಿನ ಪ್ರತಿಯೊಂದು ಅವಘಡಕ್ಕೂ ಚಾ.ನಗರವನ್ನು ದೂರುತ್ತಾರೆ, ಆ ಜಿಲ್ಲೆಗೆ ಸೇರಿದವನಾಗಿರುವ ನನಗೆ ಇದು ಸೋಜಿಗ ಹಾಗು ಕೋಪ ಎರಡನ್ನು ತರುತ್ತದೆ, ಯಾರಿಗೂ ಪರಿಚಯವಿರದ ಚಾ.ನಗರ ವನ್ನು

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ ಬಗ್ಗೆ ನನ್ನ ಲೇಖನ

ಎಲ್ಲರಿಗೂ ನಮಸ್ಕಾರ,

ಬಹುದಿನಗಳ ನಂತರ ಇಲ್ಲಿ ಬರೆಯುತ್ತಿದ್ದೇನೆ.

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಸರಿಯಾದ ಅಳವಡಿಕೆ ಮತ್ತು ಶಿಷ್ಟತೆ ಬಗ್ಗೆ ಸಲಹೆ ನೀಡಲು ಸಮಿತಿಯೊಂದನ್ನು ಕರ್ನಾಟಕ ಸರಕಾರವು ಹಿಂದೊಮ್ಮೆ ನೇಮಿಸಿತ್ತು. ಆ ಸಮಿತಿ ತನ್ನ ವರದಿ ನೀಡಿ ಅದರಂತೆ ಕೆಲವು ಅಧಿಸೂಚನೆ ಹೊರಡಿಸಿದ್ದು, ನುಡಿ ಎಂಬ ತಂತ್ರಾಶವನ್ನು ತಯಾರಿಸಿ ಬಿಡುಗಡೆ ಮಾಡಿದ್ದು -ಇವೆಲ್ಲ ಈಗ ಇತಿಹಾಸ. ಆದರೆ ಯುನಿಕೋಡ್ ಜಗತ್ತಿನಲ್ಲಿ ನುಡಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಕಾರಣ ವಿಂಡೋಸ್ ಎಕ್ಸ್‌ಪಿ ಮತ್ತು ಲಿನಕ್ಸ್‌ಗಳಲ್ಲಿ ಕಾರ್ಯಾಚರಣೆಯ ವ್ಯವಸ್ಥೆಯಲ್ಲೇ ಕನ್ನಡ ಯುನಿಕೋಡ್ ಬಳಸಲು ಬೇಕಾದ ಎಲ್ಲ ಸವಲತ್ತುಗಳು ಲಭ್ಯವಿವೆ. ಲಿನಕ್ಸ್‌ನಲ್ಲಿ ನುಡಿ ಕೆಲಸ ಮಾಡುವುದೂ ಇಲ್ಲ.