ನಿಮ್ಮೆಲ್ಲರ ಭಾಗವಹಿಸುವಿಕೆ ಅಗತ್ಯ

ನಿಮ್ಮೆಲ್ಲರ ಭಾಗವಹಿಸುವಿಕೆ ಅಗತ್ಯ

ಬರಹ

ಸ್ನೇಹಿತರೆ,

ಕಳೆದ ವಾರ ಸರ್ವರಿನ ಲೋಡ್ ಹಿಗ್ಗಾಮುಗ್ಗಿ ಹೆಚ್ಚಾದದ್ದರಿಂದ ಕಳೆದ ಕೆಲವು ಗಾಬರಿಯ ದಿನಗಳು ಸಂಪದದಲ್ಲಿ ನಾವು ಬದಲಾವಣೆಗಳನ್ನು ಮಾಡಬೇಕೆಂದುಕೊಂಡು ಹಮ್ಮಿಕೊಂಡಿದ್ದ ಕೆಲಸಕ್ಕೆ ಬ್ರೇಕ್ ಹಾಕಿದೆ. ಈ ತಿಂಗಳ ಕೊನೆಯಲ್ಲಿ ಸರ್ವರಿನ ಹಾರ್ಡ್ವೇರ್ ಕ್ಷಮತೆ ಹೆಚ್ಚಿಸುತ್ತಿದ್ದೇವೆ. ಆದರೆ ಎಲ್ಲೆಡೆಯಿಂದ ಇದನ್ನು ಉತ್ತಮಪಡಿಸಲು ನಿಮ್ಮೆಲ್ಲರ ಭಾಗವಹಿಸುವಿಕೆಯ ಅಗತ್ಯವುಂಟು.

ಮೊದಲಾಗಿ ಸಂಪದದ ಕಂಟೆಂಟ್ ಮೇಲೊಂದು ಕಣ್ಣಿಟ್ಟು ಮಾಡರೇಟ್ ಮಾಡುವಲ್ಲಿ ಆಸಕ್ತಿಯುಳ್ಳವರು ದಯವಿಟ್ಟು [:http://sampada.net/contact|ನನ್ನನ್ನು ಸಂಪರ್ಕಿಸಿ]. ಆಸಕ್ತಿಯುಳ್ಳವರು ಸಕ್ರಿಯ ಸದಸ್ಯರಾಗಿರಬೇಕು.

ಎರಡನೆಯದಾಗಿ ಸರ್ವರ್ optimize ಮಾಡಿ ಅಭ್ಯಾಸವಿರುವ ತಂತ್ರಾಂಶ ತಜ್ಞ ಓದುಗರಿದ್ದಲ್ಲಿ ದಯವಿಟ್ಟು [:http://sampada.net/user/12/contact|ಶಶಿಯವರನ್ನು ಸಂಪರ್ಕಿಸಿ].
(ನಾವು ಬಳಸುತ್ತಿರುವ ಸರ್ವರ್ Apache, ಡೇಟಬೇಸ್ MySQL - ಬಳಸುತ್ತಿರುವ ಪ್ರತಿಯೊಂದೂ ಮುಕ್ತ ತಂತ್ರಾಂಶ).

ಮೂರನೆಯದಾಗಿ ಸಂಪದವನ್ನು ಉತ್ತಮಪಡಿಸುವತ್ತ [:http://sampada.net/contact|ನಿಮ್ಮ ಸಲಹೆ, ಅಭಿಪ್ರಾಯಗಳನ್ನು ತಪ್ಪದೆ ಕಳುಹಿಸಿಕೊಡಿ]. ಈಗಾಗಲೇ ಕಳುಹಿಸಿಕೊಟ್ಟವರಿಗೆ ನಮ್ಮೆಲ್ಲರ ವಂದನೆಗಳು - ಬಂದಿರುವ ಸಲಹೆ ಅಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ಸಂಪದದ ಹೊಸ ರೂಪದಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ.

ಈ ಕನ್ನಡ ಸಮುದಾಯ ಅಂತರ್ಜಾಲದಲ್ಲಿರುವ ಇತರ ಭಾಷೆಗಳ ಸಮುದಾಯಗಳಿಗಿಂತ ಉತ್ತಮ ಸಮುದಾಯವಾಗಿಸುವತ್ತ ಹೆಜ್ಜೆಯಿಡಬೇಕಾದರೆ ನಿಮ್ಮೆಲ್ಲರ ಭಾಗವಹಿಸುವಿಕೆ ಅತ್ಯಗತ್ಯ.

(ಇವೆಲ್ಲ ಧಿಡೀರ್ ಈಗ್ಯಾಕೆ ಎಂಬ ಪ್ರಶ್ನೆಗೆ ಕ್ಯಾಲೆಂಡರ್ ಉತ್ತರ ನೀಡಬಹುದು - ಸಂಪದ ಪ್ರಾರಂಭವಾಗಿ ಸರಿಯಾಗಿ ಎರಡು ವರ್ಷವಾಗುತ್ತ ಬಂತು, ಈಗ ಒಮ್ಮೆ ಬ್ರೇಕ್ ಹಾಕಿ ಮುಂದಿರುವ ಹಾದಿಗೆ ರೆಡಿಯಾಗಿ ಮುಂದುವರೆಯೋಣ).

P.S: ಸಂಪದದ ಸರ್ವರಿನ ಈ ವರ್ಷದ (೨೦೦೬-೨೦೦೭) ಬಿಲ್ ಕಟ್ಟುವಲ್ಲಿ ನೀವೂ ಸಹಾಯಮಾಡಬಹುದು. [:http://sampada.net/Donate/2007|ವಿವರ ಇಲ್ಲಿದೆ]. ಕ್ರೆಡಿಟ್ ಕಾರ್ಡ್ ಬಳಸದವರು ಡೆಬಿಟ್ ಕಾರ್ಡ್ ಬಳಸಬಹುದು.
ಸದ್ಯಕ್ಕೆ ಪೇಪಾಲ್ ಮೂಲಕ ಕಳುಹಿಸಿದರೇ ನಮಗೆ ನೇರ ಬಿಲ್ ಪಾವತಿ ಮಾಡಲು ಸುಲಭ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet