ಬೆಳಕು
ನನ್ನ ಕಣ್ಣಿಗೆ ನನ್ನಾಕೆ
ತುಂಬಾ ಅಂದ.
ಕಾರಣ, ಅವಳಿಲ್ಲದಾಗ
ನಾನೊಬ್ಬ ಅಂಧ.
- Read more about ಬೆಳಕು
- Log in or register to post comments
ನನ್ನ ಕಣ್ಣಿಗೆ ನನ್ನಾಕೆ
ತುಂಬಾ ಅಂದ.
ಕಾರಣ, ಅವಳಿಲ್ಲದಾಗ
ನಾನೊಬ್ಬ ಅಂಧ.
ನೋಡಿ ಮದುವೆಯಾದೆ ನನ್ನವಳ
ರ್ಯಾಂಕು, ಸರ್ಟಿಫಿಕೇಟು.
ಆದರೀಗ ನನ್ನ ಕೈಲಿರುವುದು
ಬರೇ ಪಾತ್ರೆ, ಸೌಟು!
ಹಳೆಯದೇ ಯಾವಾಗಲೂ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಹಾಗೆಯೇ ಹೊಸದು ಚೆನ್ನಾಗಿರುವುದಿಲ್ಲ ಎಂದೂ ಹೇಳಲಾಗುವುದಿಲ್ಲ. ಸಹೃದಯರು ಮೊದಲು ಪರೀಕ್ಷಿಸಿ ನಂತರ ತೀರ್ಮಾನಿಸುತ್ತಾರೆ. ಮೂಢರು ಪರರ ನಂಬಿಕೆಯನ್ನು ಆಶ್ರಯಿಸುತ್ತಾರೆ. - ಕಾಳಿದಾಸ
ಪ್ರೀತಿಯ ಗೆಳೆಯ - ಗೆಳತಿಯರೆ ....
ಈ ವರ್ಷ ಮುಂಗಾರುಮಳೆಯ ಹಾಡುಗಳುsuper hit.ಕಳೆದ ವರ್ಷ ಜೋಗಿ ಹಾಡುಗಳು super super hit.ಅದಕ್ಕೂ ಹಿಂದೆ ಆಪ್ತಮಿತ್ರhitಮೇಲೆhitಮೇಲೆhit.
ಪುಟ್ಟಣ್ಣ ಕಣಗಾಲ್ (೧ ಡಿಸೆಂಬರ್ ೧೯೩೩ - ೫ ಜೂನ್ ೧೯೮೫) ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಮಹೋನ್ನತ ಚಿತ್ರಗಳನ್ನು ನಿರ್ದೇಶಿಸಿ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಮೇಧಾವಿ.
ಹುಡುಕಾಟ
ಕಪ್ಪು ಕತ್ತಲಲಿ, ಗೊಂಡಾರಣ್ಯದಲಿ, ಬಾಳ ಬೆಳಕಿನ ಹುಡುಕಾಟ
ರವಿಯೇ ಬರಲೊಲ್ಲೆ ಎನುತಿರೆ, ನಾ ಬಿಡಲಾರೆ ನನ್ನ ತಿಣುಕಾಟ
ಕಲ್ಲು ಮುಳ್ಳೆನದೆ, ಹಳ್ಳ ದಿಣ್ಣೆ ಎನದೆ, ನಾ ಸಾಗುತಿರೆ ಗುರಿಯತ್ತ ಭರದಿ
ಮೂರ್ಖತನ ಎನಬೇಡ ನಂಬಿಕೆಯಿದೆ, ನಾನೊಬ್ಬ ಆಶಾವಾದಿ
ಮಿಂಚುಹುಳದ ಬೆಳಕ ನಿರ್ಲಕ್ಷಿಸಲಾರೆ
ನನ್ನ ದೀಪದ ಹುಡುಕಾಟವ ನಿಲ್ಲಿಸಲಾರೆ
ಕಾವೇರಿ
ರಾಮರಾಜ್ಯದ ಜನ ಕಾದರು,
ರಾಮ ಮುಗಿಸಿ ಬರುವನು ವನವಾಸದ ಹದಿನಾಲ್ಕು ವರುಷ
ಜನ ಮತ್ತೆ ಕಾದರು,
ಕಾವೇರಿ ತೀರ್ಪು ಬರಲು ಇನ್ನೂ ಹದಿನಾಲ್ಕು ವರುಷ
ಕಾದು ಕಾದು ಬೇಸತ್ತಿರಬೇಕು ಆಕೆಯೂ
ಜೀವನಾಡಿಯಲ್ಲಿ ನೆತ್ತರಂತೆ ಹರಿವ ನೀರ
ಸುಡುಬಿಸಿಲಿಗೆ ಮೈಯೊಡ್ಡಿ ಒಣಗಿಸಿ ಬರಿದಾಗಿಸಿ
ಜೀವನದಿಗೇನಾದರು ಜೀವವಿದ್ದಿದ್ದರೆ!
ಕಾವೇರಿ ನಕ್ಕಳೆಷ್ಟೊ, ಅತ್ತಳೆಷ್ಟೊ?
ಪ್ರಕ್ರತಿ
ಅಪರೂಪಕೊಮ್ಮೆ ಎಂಬಂತೆ ಹೊರ ನಡೆದಿದ್ದೆ ಕಾವೇರಿ ತಡಲಿಗೆ
ತಂಪಾದ ಗಾಳಿ ಬೀಸಲು ಜಾರಬೇಕೆನಿಸಿತು ಹಸಿರ ಮಡಿಲಿಗೆ
ದೂರದಿ ನದಿ ನೀರು ಹರಿಯೆ ಕೇಳುತಿದೆ ಜುಳು ಜುಳು
ಚಿಂವ್ ಚಿಂವ್ ಎಂದು ದನಿಗೂಡಿ ಹಾಡಿವೆ ಗಿಣಿಗಳು
ಘಮ್ಮನೆ ಕಂಪ ಸೂಸುತಿರೆ ಅರಳಿ ಬೀಗುತಿಹ ಮಂದಾರ ಪುಷ್ಪ
ನೋಡುಗನ ಕಣ್ಣಿಗೆ, ಧರೆಗಿಳಿದು ಬಂದ ದೇವತೆಯ ಪ್ರತಿರೂಪ
ಸೋಲು
ಕುಹುಕ ನಗುವಿನ ಪ್ರಪಂಚ ಕಾಡಿ ಕದಡುತಿತ್ತು ಮನವ
ಮೈಯ ತುಂಬ ಉಟ್ಟಿತ್ತು ಏಮಾರಿಸಿದ ಜಂಬತನವ
ಅರೆಕ್ಷಣದಲಿ ವಿಲಕ್ಷಣವಾಗಿ ಬಂದೆರಗಿದ ಸೋಲು
ಹಾಕಿ ಉಳಿಸಿಕೊಂಡ ಅಡಿಪಾಯಕ್ಕೆ ಮುಟ್ಟಗೋಲು
ಅಟ್ಟಹಾಸದಿ ಮೆರೆಯುತಾ ನಡೆಸುತ್ತಿತ್ತು ವಿಜಯದ ವಿಜ್ರಂಮಣೆ
ಸೋಲಿನ ಅಳಲು, ಅಸಹಾಯಕತೆಯ ಮಡಿಲು, ಮಾಡಿತ್ತು ಮತಿಭ್ರಮಣೆ