ಕಾವೇರಿ
ಬರಹ
ಕಾವೇರಿ
ರಾಮರಾಜ್ಯದ ಜನ ಕಾದರು,
ರಾಮ ಮುಗಿಸಿ ಬರುವನು ವನವಾಸದ ಹದಿನಾಲ್ಕು ವರುಷ
ಜನ ಮತ್ತೆ ಕಾದರು,
ಕಾವೇರಿ ತೀರ್ಪು ಬರಲು ಇನ್ನೂ ಹದಿನಾಲ್ಕು ವರುಷ
ಕಾದು ಕಾದು ಬೇಸತ್ತಿರಬೇಕು ಆಕೆಯೂ
ಜೀವನಾಡಿಯಲ್ಲಿ ನೆತ್ತರಂತೆ ಹರಿವ ನೀರ
ಸುಡುಬಿಸಿಲಿಗೆ ಮೈಯೊಡ್ಡಿ ಒಣಗಿಸಿ ಬರಿದಾಗಿಸಿ
ಜೀವನದಿಗೇನಾದರು ಜೀವವಿದ್ದಿದ್ದರೆ!
ಕಾವೇರಿ ನಕ್ಕಳೆಷ್ಟೊ, ಅತ್ತಳೆಷ್ಟೊ?
ತನ್ನನ್ನೇ ಹಂಚಿ ತಿನ್ನ ಹೊರಟ ಜನರ ಮರಳುತನ ನೋಡಿ
ಅಡೆ ತಂದಿಟ್ಟರು, ಹರಿವ ನೀರ ಸ್ವಾತಂತ್ರ್ಯ ಕಸಿದು
ಬದಲಾಗಿ, ಹಿತವಾಗಿ ಅಲೆಯೆಬ್ಬಿಸಿದಳು, ಸವಿಗಾನ ಹಾಡಿ
ತೀರ್ಪು ಹೊರ ಬಂತು, ಜನ ಶುರು ಮಾಡಿದರು ದೊಂಬಿ
ಎಲ್ಲವ ಮರೆತು ಹರಿಯುತಿಹಳಾಕೆ, ತನ್ನ ಪಾಡಿಗೆ ಮೈದುಂಬಿ