ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಯತ್ತು

ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನದಾಗೆ ಯಾವ ನನ್ನ ಮಗಂಗೂ ಹೆದರಲಿಲ್ಲ..ನೋಡೆಬಿಡಾವ ಅದೇನೋ” ಅಂತ ಮತ್ತೆ ಇನ್ನು ಒಳಕ್ಕೆ ನುಗ್ಗಿದರು.ಒಂದು ತಿಂಗಳಿನಾಗೆ ಆಗಲೇ ಮೂರು ಜನ ಕಾ

*ಮರದೊಂದಿಗೆ. (ಪು. ೮೯.)

ನದೀತೀರದಲ್ಲಿ [ಕವಿತಾ ಸಂಕಲನ]

ಲೇಖಕರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.

*ಮರದೊಂದಿಗೆ. (ಪು. ೮೯.)

ಯತ್ಕಿಂಚಿತ್ ಕಷ್ಟವಲ್ಲ ಮರದೊಂದಿಗೆ ಮಾತುಕತೆ !
ನಿಲ್ಲಬೇಕು ಅಷ್ಟೆ, ಅದರ ಮುಂದೆ ನೀವು ಮರದಂತೆ.

ತೋಳುಗಳೇ ಹರೆಗಳಾಗಿ ತೂಗಲಿ ಅವು ತಂಗಾಳಿಗೆ ;
ಕಾಲೆ ಕಾಂಡವಾಗಿ, ಬೆರಳು ಬೇರಾಗಲಿ ಅರೆಗಳಿಗೆ.

ಮುಖದ ತುಂಬ ನಗೆಯ ಹೂವು ಅರಳಲಿ ಬಲು ಮೆಲ್ಲಗೆ

ವಿಚಾರವಾದಿ ಕೆ.ರಾಮದಾಸ್ ಅನಂತದಲ್ಲಿ ಲೀನ

ತಾಯಿ ಮಂಜಮ್ಮನ ಮುದ್ದಿನ ಮಗನಾಗಿ, ತಂಗಿ ಕಮಲಮ್ಮನ ಪ್ರೀತಿಯ ಅಣ್ಣನಾಗಿ, ಹೆಂಡತಿ ನಿರ್ಮಲಳ ನಲ್ಮೆಯ ಪತಿಯಾಗಿ, ಮಗಳು ಸಮತಾಳ (ಸ್ನೇಹ) ಮೆಚ್ಚಿನ ತಂದೆಯಾಗಿ, ಅಳಿಯ ಓಂಕಾರ್ ನ ನೆಚ್ಚಿನ ಮಾವನಾಗಿ, ಎಲ್ಲಕ್ಕಿಂತ ಮಿಗಿಲಾಗಿ ಬಡ, ದೀನ ದಲಿತರಿಗೆ ಮಾರ್ಗದರ್ಶಿಯಾಗಿದ್ದ, ಎಲ್ಲರಿಗೂ ಬೇಕಾದವರಾಗಿದ್ದ ಮೇಸ್ಟ್ರು ಇನ್ನಿಲ್ಲ.

ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಇಲ್ಲಿ ಹೇಳಬಯಸುತ್ತೇನೆ.

ಸರಳ ವಿವಾಹಕ್ಕೆ ಒತ್ತು ನೀಡುತ್ತಿದ್ದ ಅವರು, ಯಾವುದೇ ಅದ್ದೂರಿ ಸಮಾರಂಭಗಳಿಗೆ ಭೇಟಿ ನೀಡುತ್ತಿರಲಿಲ್ಲವೆನಿಸುತ್ತದೆ. ನಮ್ಮ ಮದುವೆಗೂ ಸಮತಾಳನ್ನು ಮಾತ್ರ ಕಳುಹಿಸಿದ್ದು ಇದೇ ಕಾರಣಕ್ಕೆ ಎಂಬುದು ನನಗೆ ತಡವಾಗಿ ಅರ್ಥವಾಯಿತು. ನನ್ನ ಅತ್ತೆ (ರಾಮದಾಸ್ ರ ತಂಗಿ) ಅಣ್ಣನ ಒಂದೊಂದು ನೆನಪಿನ ಬುತ್ತಿಯನ್ನು ಬಿಚ್ಚಿದಂತೆ, ನನಗೂ ಆ ಅದಮ್ಯ ಚೇತನದ ಅಂತ್ಯ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರ ಆತಿಥ್ಯ ನಿಜಕ್ಕೂ ಅವಿಸ್ಮರಣೀಯ. ಮನೆಗೆ ಯಾರೇ ಭೇಟಿ ನೀಡಿದರೂ, ಒಂದು ಕಪ್ ಕಾಫಿ ಕುಡಿಯದೇ ಹಿಂದಿರುಗುವಂತಿರಲಿಲ್ಲ. ಇನ್ನು ತಾಯಿ ಮಂಜಮ್ಮನ ಕೈ ರುಚಿ ಸವಿದವೆರೆಷ್ಟೊ.