ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಿತನುಡಿ

ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದಿಲ್ಲ, ಉತ್ಸಾಹೀ ಪುರುಷನಿಗೆ ಜಗತ್ತಿನಲ್ಲಿ ದುರ್ಲಭ ವಸ್ತುವೆಂಬುದೇ ಇಲ್ಲ.

ಹಿತನುಡಿ

ಈ ಭೂಮೀಲಿ ಜೀವಿಸೋಕೆ ಭಗವಂತನಿಗೆ ಕೊಡೋ ಬಾಡಿಗೆ, ಸುತ್ತಮುತ್ತಲೂ ಇರೋ ಜನರಿಗೆ ಉಪಕಾರವಾಗಿರೋದೇ...

ಅಧ್ವಾನದ ಬಸ್ಗಳು

· ಪುಷ್ಪಕ್ ವಾಹನಸೇವೆ ಪ್ರಾರಂಭಗೊಂಡಾಗ ಅದರಲ್ಲಿ ನಿಲ್ಲುವ ಪ್ರಯಾಣಕ್ಕೆ ಆಸ್ಪದವಿಲ್ಲ, ಸಂಸ್ಥೆಯ ಸಿಬ್ಬಂದಿಗೆ ಪ್ರವೇಶವಿಲ್ಲ, ಸೀಮಿತ ನಿಲುಗಡೆ, ವೇಗಕ್ಕೆ ಆದ್ಯತೆ ಎಂಬುದಾಗಿತ್ತು. ದುಬಾರಿ ರಿಕ್ಷಾಗಳಿಗಿಂತ ಪುಷ್ಪಕ್ಗಳು ವೇಗ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜನರ ಮೆಚ್ಚುಗೆ ಗಳಿಸಿದವು.

ಕಿರಗೂರಿನ ಗಯ್ಯಾಳಿಗಳು

ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಎಂಬ ನೀಳ್ಗತೆ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಕುಗ್ರಾಮವೊಂದರ ವನಿತೆಯರ ಚಿತ್ರಣವನ್ನು ತೆರೆದಿಡುತ್ತದೆ.

ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ. ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು (ಪುಟ ೨) ಎಂಬುದು ಕಥೆಯ ಉದ್ದಕ್ಕೂ ಸ್ಥಿರವಾಗುತ್ತಾ ಹೋಗುವುದೇ ಇದರ ವೈಶಿಷ್ಟ್ಯ.

ಮೂರು ದಿನಗಳು ಸತತವಾಗಿ ಬೀಸಿದ ಗಾಳಿ ಕಥೆಯ ಹಂದರಕ್ಕೆ ಮುಖ್ಯ ನೆಲೆ ಒದಗಿಸಿದ್ದರೂ ನಂತರದ ಸಾಮಾಜಿಕ ಬದಲಾವಣೆಗೆ ವನಿತಾಕ್ರಾಂತಿಗೆ ದಾನಮ್ಮನೇ ಮೂಲ ಕಾರಣವಾಗಿ ನಿಲ್ಲುತ್ತಾಳೆ. ಒಂದು ರೀತಿಯಲ್ಲಿ ದಾನಮ್ಮನೇ ಕಥಾನಾಯಕಿ ಎಂದರೂ ತಪ್ಪಾಗದು. ದಾನಮ್ಮನ ಸಿಟ್ಟು ಭಯಂಕರ, ಅವಳಿಗೆ ಸಿಟ್ಟು ಬಂದಾಗ ದೆವ್ವ ಬಂದವರನ್ನು ಮಾತಾಡಿಸುವಂತೆ ಅವಳ ಗಂಡನೂ ಮಾವನೂ ಆಕೆಯನ್ನು ಗೌರವದಿಂದ ಮಾತಾಡಿಸುತ್ತಿದ್ದರು.(ಪುಟ ೬) ಹೇಗೆ ಹೇಗೋ ಎಲ್ಲರನ್ನೂ ಕಲಾತ್ಮಕವಾಗಿ ಸಂಯೋಜಿಸಿ ಭಾವಗೀತೆಯಂತೆ ಝಾಡಿಸಿ ಉಗಿದಿದ್ದರಿಂದ ಪುಟ(೭) ಕಾಕತಾಳೀಯವೋ ಎಂಬಂತೆ ಬಿರುಗಾಳಿ ಕಡಿಮೆಯಾಗಿ. ಆ ಗಯ್ಯಾಳಿ ಬಾಯಿಗೆ ಮಳೆಗಾಳಿ ಸುತ ಹೆದರ್ತದೆ ಅಂತಾಯ್ತು ಎಂಬಂತೆ ಊರಿನವರಿಂದ ಅನ್ನಿಸಿಕೊಳ್ಳುತ್ತಾಳೆ.

ದಾನಮ್ಮ ಮಾತ್ರವಲ್ಲ ಊರಿನ ಇತರ ಹೆಂಗಸರು ಸಹ ಇದೇ ರೀತಿ ಗಯ್ಯಾಳಿಗಳೇ. ಅವರ ಗಯ್ಯಾಳಿತನ ಕೇವಲ ಮಾತುಗಾರಿಕೆಯಲ್ಲಿ ಮಾತ್ರವಲ್ಲದೆ ದೈಹಿಕ ಕಸುವಿನಲ್ಲೂ ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಊರಿನ ಗಂಡಸರ ದೌರ್ಬಲ್ಯ ಶಾರೀರಿಕವಾಗಿಯಲ್ಲದೆ ಆಲೋಚನಾ ಶಕ್ತಿಯಲ್ಲೂ ಕಾಣುತ್ತದೆ.

ಬೀಳ್ಕೊಡುಗೆ...

ಇಂದು ನಮ್ಮ ಕಛೇರಿಯಲ್ಲಿ ಸಹೋದ್ಯೋಗಿಯೊಬ್ಬರಿಗೆ ಕೊನೆಯ ದಿನ, ಅರ್ಚನ ಅಂತ QA ವಿಭಾಗದಲ್ಲಿದ್ದರು, ಅವರಿಗೋಸ್ಕರ ಈ ಕವನ...
ವಾರ ಬಂತಮ್ಮ, ಶುಕ್ರವಾರ ಬಂತಮ್ಮ
ಅರ್ಚನ ನೆನೆಯಮ್ಮ, QA ಅರ್ಚನ ನೆನೆಯಮ್ಮ;
ಸ್ಮರಣೆ ಮಾತ್ರದಿ, war ಪುಟ ಬಂದೆ ಬಿಡುವುದಮ್ಮ, (WAR-Weekly Activity Report)
ವಾರ ಬಂತಮ್ಮ, ಶುಕ್ರವಾರ ಬಂತಮ್ಮ;
ವಾರು ತುಂಬಿಸಮ್ಮ, ಕೆಲಸದ ವಾರು ತುಂಬಿಸಮ್ಮ,

ಕಥೆಯೊಂದು ಪೂರ್ತಿಯಾಗಿದ್ದು ....

ಈ ಜನ, ಗಲಾಟೆ, ಗಡಿಬಿಡಿಗಳನ್ನ ಎಷ್ಟೂಂತ ನೋಡೋದು ಅನ್ನಿಸಿ ಮುಖಕ್ಕೆ ಮೋಡದ ಮುಸುಕು ಹೊದ್ದು ಉದಾಸೀನಗೊಂಡ ಆಕಾಶ; ಅತ್ತ ಬಿಸಿಲೂ ಅಲ್ಲದೆ, ಇತ್ತ ತಂಪೂ ಇಲ್ಲದೆ ಇದ್ದ ಈ ವಾತಾವರಣದಲ್ಲಿ ಗಿಜಿಗುಡುತ್ತಿದ್ದ ಬಸ್ ಸ್ಟ್ಯಾಂಡು; ಎಲ್ಲಿ ನೋಡಿದರೂ ಜನ,

ಎಲ್ಲರೂ ಎಲ್ಲಿಗೋ ಹೊರಟವರು
ಎಲ್ಲಿಗೋ. . . ?
ಎಲ್ಲರೂ ಎಲ್ಲಿಂದಲೋ ಬಂದವರು,
ಎಲ್ಲಿಂದಲೋ. . .?

ನನ್ನ ಹೊಸ "ಅಪಾರ್ಥಗಳು"

ಎಕ್ಸ್‌ಪೋಸ್ : ಇದ್ದವುಗಳನ್ನು ಇರುವುದಕ್ಕಿಂತ “ಚೆನ್ನಾಗಿ” ತೋರಿಸುವ ಕಲೆ.

ವಿಮರ್ಶನೆ : ಬರೆಯಲಾಗದವರು ಬರೆದು, ಬೈದು ತೀರಿಸಿಕೊಳ್ಳುವ ಚಟ

ಡೈವರಿಸು : ಡೈವರ್ಸ್ ಕೊಟ್ಟು ಮತ್ತೊಮ್ಮೆ ಮತ್ತೊಬ್ಬರನ್ನು ವರಿಸು.

ವಧು ವರರ ಸಮಾವೇಶ : ಅವಕಾಶ ವಂಚಿತರ, ಪ್ರೇಮಾನುಭವ ವಂಚಿತರ, ನತದೃಷ್ಟರ ಸಮಾವೇಶ

Horse : ಹಾರಿಸಲಿಕ್ಕಾಗಿ ರೇಸುಗಳಲ್ಲಿ..

ಮೀನಖಂಡ : ಕರಾವಳಿಗಳು

ಅನಂತಮೂರ್ತಿಯವರ ಅಭಿಮಾನಿ

ಅನಂತಮೂರ್ತಿಯವರ ಭಾಷಣವನ್ನು ಓದಿ ಸಂತೋಷವಾಯ್ತು, ಇದೋ ನನ್ನ ಪ್ರತಿಕ್ರಿಯೆ...

೧. ಆವರಣ ಒ೦ದು ಯೋಗ್ಯವಾದ ಕೃತಿಯಲ್ಲ ಎ೦ದು, ಅದರ ಬಗ್ಗೆ ಚರ್ಚೆ ನಡೆಸದೇ, ಕೇವಲ ಭೈರಪ್ಪನವರ ಬಗ್ಗೆ ಚರ್ಚೆ ನಡೆಸಿ ಅವರೊಬ್ಬ ಯೋಗ್ಯಮನುಷ್ಯ ಎ೦ದು ನಿಮ್ಮದೇ ತರ್ಕದಲ್ಲಿ ತಿಳಿಯೋಣವೋ..ಅಥವಾ ಅಷ್ಟು ಅತಿರೇಕಕ್ಕೆ ನಾವು ಹೋಗಬಾರದೋ ?

ಅನಂತಮೂರ್ತಿಯವರು ಅವಶ್ಯ ಮಾತಾಡಬಹುದು !

ಮಾತನಾಡಬಾರದು ಅಂತ ಯಾರು ಹೇಳೂದಿಲ್ಲ ಮತ್ತು ಹೇಳ್ಲಿಕ್ಕೆ ಶಕ್ಯನೂ ಇಲ್ಲಾ..ಯಾಕಂದ್ರ ನಮ್ಮದು ಪ್ರಜಾರಾಜ್ಯ ನೋಡ್ರಿ..ಅದೇ ಫ್ಯಾಸಿಸ್ಟ್ ಆಡಳಿತ ಇದ್ರ ಹಂಗನಬಹುದಿತ್ತೇನೋ?