ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಪ್ತಗಿರಿ ಸಂಪದ(ಪೌರಾಣಿಕ ಕಥಾನಕ) ಸಂಚಿಕೆ-3

ದೇವರು ಎಲ್ಲಿದ್ದಾನೆ? ಇಲ್ಲ ಅವನು ಇದ್ದಿದ್ದರೆ ಇಷ್ಟೆಲ್ಲಾ ಅನಾಹುತಗಳು ಆಗುತ್ತಿರಲಿಲ್ಲ ಎಂದು ಹೇಳುತ್ತೇವೆ. ಅಂಥವರು ಈಗಾಗಲೇ ಹೇಳಿದಂತೆ ಈ ಜಗತ್ತಿನ ತ್ರಿಗುಣಾತ್ಮಕ ತತ್ವವನ್ನು ಮನಗಾಣಬೇಕಾಗುತ್ತದೆ. ಈಗ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಪರಪಮ ಪಾಪಿಗಳೂ ಹೆಚ್ಚುತ್ತಲೇ ಇದ್ದಾರಷ್ಟೇ... ಕೇವಲ ಕಾಲುಭಾಗ ಮಾತ್ರವೆ ಆದರೂ ಸಾತ್ವಿಕ ಶಕ್ತಿ ಯಾವಾಗಲೂ ಬೆಂಕಿ ಮುಚ್ಚಿದ ಕೆಂಡದಂತೆಯೆ ಇರುತ್ತದೆಯಲ್ಲ... ಅದು ಸಿಡಿದೆದ್ದ ಸಂದರ್ಭಗಳಲ್ಲೆಲ್ಲ ಪಾಪಿಗಳ ದಮನವಾಗುತ್ತಲೆ ಇರುತ್ತದೆಯಾದರೂ ನಾವು ಅವರ ಸಂಖ್ಯೆ ಹೆಚ್ಚುತ್ತಲೆ ಇರುವುದು ಇನ್ನೂ ನಡೆದೇ ತೀರುವುದರಿಂದ, ಎಷ್ಟೇ ದುಷ್ಟ ನಿಗ್ರಹವಾದರೂ ಕೂಡ ನಮಗೆ ತೃಪ್ತಿ ಇಲ್ಲವಾಗಿರುತ್ತದೆ
ದೇವರಿಲ್ಲ ಎಂದು ಸುಲಭವಾಗಿ ಹೇಳಿಬಿಡುವ ವ್ಯಕ್ತಿ ತಾನು ಸ್ವತಃ ದೇವರೇ ಆಗಿರಬೇಕಷ್ಟೇ. ಆತನ ಅಪರಾಧಗಳಿಗೆ ಕ್ಷಮೆ ಎಂಬುದೇ ಇಲ್ಲವಲ್ಲ... ! ಹಾಗೆಯೆ, ದೇವರಿದ್ದಾನೆಂದು ಪರಮ ಭಕ್ತಿಯಿಂದ ಮಾಡಬಾರದ ಪಾತಕಗಳನ್ನೂ ಮಾಡುವ ವ್ಯಕ್ತಿ ಕೂಡ ಕ್ಷಮಾರ್ಹನಲ್ಲ; ಅವನಿಗೆ ಆ ದೇವರೇ ಅವನ ಜೀವಿತದಲ್ಲಿ ನಾವೇ ಕಾಣುವಂತೆ ಶಿಕ್ಷೆ ವಿಧಿಸದಿರಲಾರ. ಶಿಶುಪಾಲ ನೂರೊಂದು ತಪ್ಪು ಮಾಡುವವರೆಗೆ ಶ್ರೀ ಕೃಷ್ಣ ಕಾದು ಕುಳಿತವನಂತೆ ನಾವು ಅಂಥ ಪಾತಕಿಗಳ ಪಾಪದ ಕೊಡ ತುಂಬುವ ತನಕವೂ ಕಾಯುವುದು ಅನಿವಾರ್ಯ.....
ದೇವರು, ಮನುಷ್ಯನಿಗೆ ದೈವತ್ವದಲ್ಲಿ ನಂಬಿಕೆ ಎಂದರೆ- ಸತ್ಯ ಧರ್ಮ, ಪ್ರಾಮಾಣಿಕತೆ, ಇತರರಿಗೆ ಉಪದ್ರವ ಕೊಡದೇನೆ, ದ್ವೇಷಾಸೂಯೆಗಳಿಗೆ ಮನ ತೆರದೇನೆ, ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಲೇ ಬದುಕನ್ನು ನಿಭಾಯಿಸುವುದು. ಯಾವಾಗಲೂ, ಸಭ್ಯರಿಗೆ, ಜ್ಞಾನಿಗಳಿಗೇ ಈ ಜಗತ್ತಿನಲ್ಲಿ ತೊಂದರೆಗಳು ಅಧಿಕ. ಅದು ವಿಧಿ ನಿಯಮವೇ ಸರಿ. ಅದನ್ನು ಮೀರಿ ಅಡ್ಡ ದಾರಿ ಹಿಡಿಯುವುದೆಂದರೆ ಅಪಗತಿ ತಂದು ಕೊಂಡಂತೆಯೆ ಸರಿ. ಅಷ್ಟೇಕೆ , ಮಾನವೀಯ ಪ್ರಜ್ಞೆಯೊಂದಿದ್ದರೆ, ಸಾಲದು ದೈವ ಶ್ರದ್ಧೆ ಇರಲೇಬೇಕು. ನೀವೇ ಯೋಚಿಸಿ; ಅದಿಲ್ಲದಿದ್ದರೆ, ಈ ಜಗತ್ತು ತನ್ನ ವ್ಯಾಪಾರ ವ್ಯವಹಾರದಲ್ಲಿಯೂ ನಂಬಿಕೆಯುಳ್ಳವರಿಲ್ಲದೇನೆ ಸ್ತಗಿತಗೊಳ್ಳುವುದಿಲ್ಲವೇ? ವ್ಯವಹಾರದಲ್ಲಿ ಎಷ್ಟೇ ಲೆಕ್ಕಪತ್ರಗಳು, ದಾಖಲೆಗಳಿರಲಿ ನಂಬಿಕೆಯ ಮೇಲೇ ಕೊಟ್ಯಂತರ ರೂ.ಗಳ ವಹಿವಾಟು ನಡೆಯುತ್ತಲೇ ಇರುವುದನ್ನು ಕಾಣುತ್ತಲೇ ಇದ್ದೇವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ಬೃಹತ್ ಬಂಡವಾಳ ಶಾಹಿಗಳೂ ಇಂದಿಗೂ ದೇವರನ್ನು ನಂಬದೇನೆ ತಮ್ಮ ಹಣ ಹೂಡಿಕೆ ಮಾಡದಿರುವವರು ವಿರಳವೇ ಸರಿ. ಕೋಟಿಗಟ್ಟಲೆ ಚೆಲ್ಲುವ ಚಿತ್ರೋದ್ಯಮಿಗಳಂತೂ, ದೇವರು ಹಾಗೂ ತಮ್ಮ ಭವಿಷ್ಯದಲ್ಲಿ ನಂಬಿಕೆ ಎಂದಿಗೂ ಬಿಡಲಾರರಲ್ಲ...!
*********

ಸಪ್ತಗಿರಿ ಸಂಪದ(ಪುರಾಣ ಕಥಾನಕ) ಸಂಚಿಕೆ-3

ಮಡಿ ಭಾಷೆ, ಮಡಿ ಭಾಷೆ

ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು!
ಮಡಿ ಎಂದರೆ ಶುದ್ಧ ಅಂತಲೂ ಹೌದು, ಮಡಿ ಅಂದರೆ ಸಾಯಿ ಅಂತಲೂ ಹೌದು. ಯಾವುದೇ ಭಾಷೆ ತುಂಬ ಮಡಿಯಾದರೆ ಸತ್ತೇ ಹೋಗುತ್ತದೆ. ಸಂಸ್ಕೃತ. ಲ್ಯಾಟಿನ್, ಗ್ರೀಕ್ ಇತ್ಯಾದಿಗಳೆಲ್ಲ ತುಂಬ ಮಡಿವಂತ ಭಾಷೆಗಳಾದವು, ಆಯಾ ಭಾಷಾ ಪಂಡಿತರಿಂದ. ಹಾಗೆ ಅವರು ಮಡಿ ಮಾಡಿ ಮಾಡಿ ಇವತ್ತು ಅವು ಅಷ್ಟೇನೂ ಮಡಿಯಲ್ಲದ ಭಾಷೆಗಳಲ್ಲಿ ಮಾತ್ರ ಪದಗಳಾಗಿ ಉಳಿದುಕೊಂಡಿವೆ.

ಇಂಗ್ಲಿಷು ಇದೆಯಲ್ಲ, ಅದರಲ್ಲಿ ಶೇ ೯೦ ಬೇರೆ ಭಾಷೆಯ ಪದಗಳೇ ಇವೆ. ಟವಲ್, ಟೊಮೆಟೊ, ಕ್ವೆಶ್ಚನ್, ಲ್ಯಾಂಗ್ವೆಜ್, ವಕಾಬುಲರಿ ಇಂಥ ನಾವು ಇಂಗ್ಲಿಷ್ ಅಂದುಕೊಂಡ ಪದಗಳು ಎಲ್ಲೆಲ್ಲಿಂದಲೋ ಬಂದು ಇಂಗ್ಲಿಷಿನಲ್ಲಿ ಮನೆ ಮಾಡಿಕೊಂಡಿವೆ. ಇತ್ತೀಚಿನ ಆಕ್ಸ್-ಫರ್ಡ್ ಡಿಕ್ಷನರಿಯಲ್ಲಿ ಭಾರತೀಯ ಮೂಲದ ಸುಮಾರು ಎಂಟು ಸಾವಿರದಷ್ಟು ಪದಗಳ ಪಟ್ಟಿ ಕಾಣುತ್ತದೆ. ಆಕ್ಸ್ ಅಂದರೆ ಗೋವುಗಳು, ಫರ್ಡ್ ಅಂದರೆ ತೀರ್ಥ. ತೀರ್ಥ ಅಂದರೆ ನದಿ ದಾಟುವ ಜಾಗ. ಅದಕ್ಕೇ ಆ ಊರಿನ ಹೆಸರನ್ನು ಗೋತೀರ್ಥ ಎಂದು ಬದಲಾಯಿಸಿದ್ದೂ ಇದೆ. ಇದು ಕಡ್ಡಿಪುಡಿ ಕರಿಬಸಯ್ಯ ಅನ್ನುವ ಹೆಸರನ್ನು ಕಾಷ್ಠಚೂರ್ಣಕಾಳವೃಷಭಾರ್ಯ ಕಾಷ್ಠ (ಕಡ್ಡಿ) ಚೂರ್ಣ (ಪುಡಿ) ಕಾಳ (ಕರಿ) ವೃಷಭ (ಬಸವ) ಆರ್ಯ (ಅಯ್ಯ) ಅಂತ ಬದಲಾಯಿಸಿದ ಹಾಗೆ. ಸಿಗ್ನಲ್ ಅನ್ನುವುದನ್ನು ಧೂಮ್ರಚಾಲಿತ ಬಹುಚಕ್ರಶಕಟ ಗಮನಾಗಮನಸೂಚೀ ಲೋಹಪಟ್ಟಿಕಾ ಅಂದಹಾಗೆ. ಮಡಿ ಅತಿಯಾದರೆ ಹೀಗಾದೀತು. ಸಂಸ್ಕೃತವು ದೇಸೀಭಾಷೆಗಳಿಂದ ಪದಗಳನ್ನು ತೆಗೆದುಕೊಂಡೇ ಇಲ್ಲ ಎಂದಲ್ಲ, ತೀರ ಕಡಮೆ. ಸಾವಿರಕ್ಕೆ ಒಂದು ಹತ್ತು ಇದ್ದಾವು.

ಇಂಗ್ಲಿಷಿನ ಗತಿ ಇನ್ನೊಂದು ಥರದ್ದು. ಅದು ಹೊಟ್ಟೆಬಾಕನಂತೆ ಎಲ್ಲ ಪದಗಳನ್ನೂ ಗಿಡಿದುಕೊಂಡು ಎಗ್ಗಿಲ್ಲದೆ ಸಿಗ್ಗಿಲ್ಲದೆ ಜಗತ್ತಿನ ಮುಖ್ಯಭಾಷೆ ಆಯಿತು. ಅಷ್ಟಾದರೂ ಜಗತ್ತಿನಲ್ಲಿ ಅತಿ ಹೆಚ್ಚು ಜನ ಬಳಸುವ ಭಾಷೆಗಳ ಪೈಕಿ ಇಂಗ್ಲಿಷಿಗೆ ಎಂಟನೆಯ ಸ್ಥಾನವಂತೆ.

ದೆಹಲಿಯಲ್ಲಿ ಭಗವದ್ಗೀತಾ ಪ್ರವಚನ

ಆತ್ಮೀಯರೇ, ದಿನಾಂಕ ೨೬.೦೮.೨೦೦೬ ರಿಂದ ೩೦.೦೮.೨೦೦೬ರ ವರೆಗೆ ಸಂಜೆ ೬.೦೧೫ ರಿಂದ ೭.೩೦ರವೆರೆಗೆ ಖ್ಯಾತ ವಾಗ್ಮಿಗಳೂ ಹಾಗು ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ ಪಾತ್ರರೂ ಆದ ಶ್ರೀಬನ್ನಂಜೆ ಗೋವಿಂದಾಚಾರ್ಯರು ಭಗವದ್ಗೀತೆಯನ್ನು ಕುರಿತು ಶ್ರೀಮಧ್ವಾಚಾರ್ಯರ ಹಾಗು ಶ್ರೀರಾಘವೇಂದ್ರಸ್ವಾಮಿಗಳ ಜ್ಞಾನಕೌಶಲವನ್ನು ವಿವರಿಸುವ ಪ್ರವಚನವನ್ನು ಮಾಡಲಿದ್ದಾರೆ. ದೆಹಲಿ ನಗರದ ಕನ್ನಡಿಗರಿಗೆ ಇದೊಂದು ಸುಸಂದರ್ಭ. ಎಲ್ಲರಿಗೂ ಆದರದ ಸ್ವಾಗತ. ಸಂಪದಿಗರಲ್ಲಿ ಯಾರಾದರೂ ದೆಹಲಿಯಲ್ಲಿದ್ದರೆ ಈ ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಬೇಕಾಗಿ ಮನವಿ.

ಇಲ್ಲದೆಯೂ ಇರುವವನ ಕಥೆ

ಸಾಮಿಯ ಮನೆಯ ಮೊದಲ ಮಹಡಿಯಲ್ಲಿ ಬಿಸಿಲಿಗೆ ಮೈಯೊಡ್ಡುವ ಸಂತೋಷಆತನ ಡಾರ್ಕ್‌ರೂಂ. ಆತ ಫೋಟೋ ಹಾಗೂ ವಿಡಿಯೋ ಕಲಾವಿದ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಬೇಕೆಂದೇ ಆತ ನೆಗೆಟಿವ್-ಫೋಟೋಗ್ರಫಿ ಮಾಡುತ್ತಿದ್ದ. ಆಧುನಿಕೋತ್ತರಕ್ಕೆ ಆತನದು ನೆಗೆಟಿವ್ ಪ್ರತಿಕ್ರಿಯೆ. ಆ ಡಾರ್ಕ್‌ರೂಂನಲ್ಲಿ ಚಜ್ಜೆಯನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಬಿಟ್ಟಿದ್ದ. ಅಥವ ಕಪ್ಪು ಕೋಣೆಯನ್ನು ಡಾರ್ಕ್ ಬಟ್ಟೆಯಿಂದ ಮುಚ್ಚಿದ್ದ. ಆ ಹಳೆಯ ಕಾಲದ ಕಪ್ಪುಬಿಳುಪು ಛಾಯಾಚಿತ್ರವನ್ನು ಹಳೆಯ ಕಾಲದ್ದೆಂದು ಪರಿಣಾಮಕಾರಿಯಾಗಿ ಮೂಡಿಸಲು ಸಹಾಯಕ್ಕಾಗಿ ಅನೇಕ ಕಂಪ್ಯೂಟರ್‌ಗಳನ್ನೂ ಇರಿಸಿಕೊಂಡಿದ್ದ. ಗಾಂಧೀಜಿಯನ್ನು ಬಡತನದಲ್ಲಿ ಇರಿಸಲು ಭಾರತ ಸರ್ಕಾರವು ಸಾಕಷ್ಟು ಖರ್ಚು ಮಾಡಿದಂತಿತ್ತು ಇದು. ಸಂಸಾರಸ್ಥರ ಮನೆಯೊಂದರಲ್ಲಿ ಮೇಜು, ಕುರ್ಚಿ, ಟೀಪಾಯಿ, ಹೂದಾನಿಗಳಿದ್ದಂತೆ ಆ ಕೋಣೆಯ ತುಂಬೆಲ್ಲ ವೈರುಗಳು, 'ಮೌಸುಗಳು' (ಇಲಿಗಳಿಲ್ಲದಿದ್ದರೂ), ಫ್ಲಾಪಿಗಳು, ಡಿಸ್ಕ್‌ಗಳು ಮರದ ಬೇರುಗಳಂತೆ ಟಿಸಿಲೊಡೆದಿದ್ದವು. ಮುಂಚಿನ ವಾಕ್ಯದ ಪ್ರತಿಯೊಂದು ಪದಕ್ಕೂ ನಾನು 'ಗಳು' ಸಿಕ್ಕಿಸಿರುವುದಕ್ಕೆ ಕಾರಣ ಅಂತಹ ವಸ್ತುಗಳಲ್ಲಿ ಯಾವುವೂ ಒಂಟಿಯಾಗಿರಲಿಲ್ಲ.

ನಾಲ್ಕನೆ ಅಂತರರಾಷ್ಟ್ರೀಯ GPLv3 ಸಮ್ಮೇಳನ

ಆಗಸ್ಟ್ ೨೩, ೨೪ ರಂದು ನಾಲ್ಕನೆ ಅಂತರರಾಷ್ಟ್ರೀಯ GPLv3 (GNU Public license version 3) ಸಮ್ಮೇಳನ ಐ ಐ ಎಮ್ ಬೆಂಗಳೂರು, ಬನ್ನೇರುಘಟ್ಟ ರಸ್ತೆ - ಇಲ್ಲಿ ನಡೆಯಲಿದೆ.

ಜೀವನ

ಮೊನ್ನೆ ಸುಮ್ಮನೆ ಕುಳಿತಾಗ ತಲೆಯಲ್ಲಿ ಯೊಚನೆಯೊಂದು ಹೊಕ್ಕಿತು. ನಾನು ಜೊತೆಯಲ್ಲಿರಲು ಬಯಸುವ ವ್ಯಕ್ತಿ ಯಾರದರೂ ಇದ್ದಾರೆಯೆ? ಯೊಚಿಸಿದಾಗ ಕಂಡಿದ್ದು ಇದು: ಇದುವರೆಗೆ ನನ್ನ ಜೀವನದಲ್ಲಿ ನಾನು ಹೊಂದಿಕೊಳ್ಳಲಾಗದಂಥ ವ್ಯಕ್ತಿ ಸಿಕ್ಕಿಲ್ಲ ಮತ್ತು ನಾನು ಹೊಂದಿಕೊಳ್ಳುವ ಅವಶ್ಯಕತೆ ಇರದ ವ್ಯಕ್ತಿಯೂ ಸಿಕ್ಕಿಲ್ಲ...

'ಶಿಲೆಯೊಳಗಣ ಪಾವಕನಂತೆ'

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣ ಸಂಬಂಧ

ಭಾಷೆಗೆ ಸಾಹಿತ್ಯೇತರ ಕೊಡುಗೆ

ಎಲ್ಲರಿಗೂ ಗೊತ್ತಿರುವ ವಿಷಯವಾದರೂ, ತಿರುಗಿ ನೆನಪಿಸಿಕೊಳ್ಳಬಹುದಾದದ್ದರಿಂದ ನಮೂದಿಸುತ್ತಿದ್ದೇನೆ. ಭಾಷೆಯೊಂದರ ಬೆಳವಣಿಗೆ ಕುರಿತು ಯೋಚಿಸುವಾಗ ಸಾಮನ್ಯವಾಗಿ ನಾವು ಸಾಹಿತಿಗಳನ್ನು ನೆನಪಿಸಿಕೊಳ್ಳುತ್ತೇವೆ. ಕವಿಗಳು, ಕತೆಗಾರರು, ವಿಶೇಷಜ್ನರುಗಳೆಲ್ಲ ನೆನಪಿಗೆ ಬರುತ್ತಾರೆ. ಇಂಥ ಸಂದರ್ಭದಲ್ಲಿ ನಮ್ಮ ಭಾಷೆಯ ಅಚ್ಚುಗಳನ್ನು ಮೊದಲಿಗೆ ತಯಾರಿಸಿದ, ಟೈಪರೈಟರಿನಲ್ಲಿ ಕನ್ನಡ ಅಳವಡಿಸಿದ, ಗಣಕಕ್ಕಾಗಿ ಕನ್ನಡ ತಂತ್ರಾಂಶಗಳನ್ನು ಹುಟ್ಟುಹಾಕಿದ, ಬಗೆಬಗೆಯ ಅಕ್ಷರ ಶೈಲಿಗಳನ್ನು ತಯಾರಿಸಿದ ಹಲವು ತಂತ್ರಜ್ನರನ್ನು ಭಾಷಾಬೆಳವಣಿಗೆಯ ದೃಷ್ಟಿಯಿಂದ ನೆನಪಿಸಿಕೊಳ್ಳುವುದು ಕಡಿಮೆ. ಹಲವು ಬರಹಗಾರರು, ತಂತಮ್ಮ ವಲಯಗಳಲ್ಲಿ ಬರೆದ ಪುಸ್ತಕಗಳು ಆಯಾ ವಲಯಗಳಲ್ಲಿ ನಮ್ಮ ಭಾಷೆ ಶ್ರೀಮಂತವಾಗುವಂತೇ ಮಾಡಿದ್ದಾರೆ. ಉದಾ: ಜಿ. ಟಿ. ನಾರಾಯಣ ರಾವ್ ವಿಜ್ನಾನ ಕುರಿತಾದ ಎಷ್ಟೆಲ್ಲ ಪುಸ್ತಕಗಳನ್ನು ಬರೆದಿದ್ದಾರೆ. ಎಚ್ಚೆಸ್ಕೆ ಅರ್ಥಶಾಸ್ತ್ರದ ಕುರಿತು ಬಹಳ ಬರೆದಿದ್ದಾರೆ. ಹೀಗೆ ಬರೆಯುತ್ತ ಇವರುಗಳು ಕನ್ನಡದಲ್ಲಿ ಆಯಾ ಕ್ಷೇತ್ರದ ಪರಿಭಾಷೆಗಳು ತಯಾರಾಗುವಂತೇ ಮಾಡಿದ್ದಾರೆ. ಹೀಗೆ ಬಹಳ ಜನರಿದ್ದಾರೆ. ಕನ್ನಡ ಭಾಷೆ ಆಧುನಿಕ ಜ್ನಾನವಲಯಗಳಲ್ಲಿ ತನ್ನದೇ ಶಬ್ದಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ತಂತ್ರಾಂಶಗಳನ್ನು ಬೇಕಿದ್ದಷ್ಟು ಹೊಂದಿಲ್ಲವಾದರೂ, ಆ ದಿಕ್ಕಿನಲ್ಲಿ ಕೆಲಸ ಮಾಡಿದವರನ್ನು ನಾವು ನೆನಪಿಸಿಕೊಳ್ಳುತ್ತಿರುವುದು ಒಳ್ಳೆಯದು.