ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕರ್ನಾಟಕದ ಮುಕುಟಕ್ಕೆ ಪ್ರವಾಸ

ಸುಮಾರು ಆರೇಳು ವರ್ಷಗಳಿಂದಲೂ ಗುಲ್ಬರ್ಗ ಹಾಗೂ ಬೀದರ್ ಸುತ್ತಾಡಿಬರಬೇಕೆಂಬುದು ನನ್ನ ಒಂದು ದೊಡ್ಡ ಆಸೆಯಾಗಿತ್ತು. ಗೆಳೆಯರ ಮದುವೆ ಪ್ರಯುಕ್ತ ಎರಡು ಸಲ ಗುಲ್ಬರ್ಗಕ್ಕೆ ತೆರಳಿದರೂ, ಸುತ್ತಾಡುವ ಅವಕಾಶ ಇರಲಿಲ್ಲ. ಬೀದರಂತೂ ಹೇಗಿದೆ ಎಂಬ ಕಲ್ಪನೆಯೇ ಇರಲಿಲ್ಲ. ಪ್ರಜಾವಾಣಿ, ಕನ್ನಡ ಪ್ರಭ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಗುಲ್ಬರ್ಗ ಹಾಗೂ ಬೀದರ್ ಬಗ್ಗೆ ಬಂದ ಎಲ್ಲಾ ಲೇಖನಗಳನ್ನು ಸಂಗ್ರಹಿಸಿಟ್ಟುಕೊಂಡು, ಭೇಟಿ ನೀಡುವ ಅವಕಾಶವನ್ನು ಕಾಯುತ್ತಾ ಇದ್ದೆ. ಕಳೆದ ಮೇ ತಿಂಗಳಂದು ಮಂಗಳೂರಿನ ಗೆಳೆಯರಿಬ್ಬರು, ಮೂರ್ನಾಲ್ಕು ದಿನ ಎಲ್ಲಾದರೂ ಸುತ್ತಾಡಿಕೊಂಡು ಬರ್‍ಓಣ ಎಂದಾಗ ಗುಲ್ಬರ್ಗ, ಬೀದರ್ ಹಾಗೂ ಬಸವಕಲ್ಯಾಣ ಸುತ್ತಾಡಿಕೊಂಡು ಬರ್‍ಓಣವೆಂದು ನಿರ್ಧರಿಸಿದೆವು. ನನ್ನ ಬಳಿಯಿದ್ದ ಲೇಖನಗಳೆಲ್ಲವನ್ನೂ ಹಲವಾರು ಸಲ ಓದಿ, ಅಂತರ್ಜಾಲವನ್ನು ಜಾಲಾಡಿ, ನನ್ನ ಆತ್ಮೀಯ 'ಜೋಳದ ರೊಟ್ಟಿ' ಗೆಳೆಯರೊಂದಿಗೆ ಸಮಾಲೋಚಿಸಿ ನೋಡಬೇಕಾದ ಎಲ್ಲಾ ಸ್ಥಳಗಳ ಪಟ್ಟಿಯೊಂದನ್ನು ಅಂತಿಮಗೊಳಿಸಿದೆ. ಶುಕ್ರವಾರ ಜೂನ್ ೨ರ ಅಪರಾಹ್ನ ಹೊರಟು, ಮಂಗಳವಾರ ಜೂನ್ ೬ರಂದು ಹಿಂತಿರುಗುವಂತೆ ಒಂದು ನೀಲಿನಕ್ಷೆ ಹೊರಡುವ ಒಂದು ವಾರದ ಮುಂಚೆ ತಯಾರಾಯಿತು ಹಾಗೇನೆ ಗೆಳೆಯರಿಬ್ಬರೂ ಒಪ್ಪಿಗೆ ಸೂಚಿಸಿದರು. ಆದರೆ ಹೊರದುವ ಮುನ್ನಾ ದಿನ ರಾತ್ರಿ ಗೆಳೆಯರಿಬ್ಬರೂ ಕ್ಷುಲ್ಲಕ ಸಬೂಬುಗಳನ್ನು ಹೇಳಿ ಹಿಂದೆ ಸರಿದರು. ಬಹಳ ದಿನಗಳ ಆಸೆ ಈಡೇರುವಂತಿರುವಾಗ, ನಾನು ಒಬ್ಬನೇ ಹೋಗುವ ನಿರ್ಧಾರ ಮಾಡಿದೆ.

 

ಕಾವೇರಿಯಿಂದಮಾ ಗೋದಾವರಿ.....

ಕೇಳಿದ್ದೆ , ಓದಿದ್ದೆ . ಕಾವೇರಿಯಿಂದ ಗೋದಾವರಿವರೆಗೆ ಕನ್ನಡನಾಡು ವ್ಯಾಪಿಸಿತ್ತು ಮತ್ತು ಇದು 'ಕವಿರಾಜಮಾರ್ಗ'ದಲ್ಲಿದೆ ಎಂದಷ್ಟೇ ಗೊತ್ತಿತ್ತು. ಇದರಲ್ಲಿ 'ಮಾ' ಎಂದರೇನು ಗೊತ್ತಿರಲಿಲ್ಲ . ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ ಎಂದೇನೋ ನಂತರದ ಸಾಲು ಇದೆ ಎಂದು ಗೊತ್ತಿತ್ತು ಅದರರ್ಥ ಗೊತ್ತಿರಲಿಲ್ಲ . ಈಗ ನನಗೆ ಈ ಬಗ್ಗೆ ಶ್ರೀ ಕೆ.ವಿ.ಸುಬ್ಬಣ್ಣ ಅವರ ಲೇಖನವೊಂದರಲ್ಲಿ ಮಾಹಿತಿ ಸಿಕ್ಕಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ.

ಶಹಬ್ಬಾಶ್ ಮುಂಬೈಕಾರ್!

ಮುಂಬೈನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು ಸಾವನ್ನಪ್ಪಿರುವ ಸುದ್ದಿ ಬೆಳಗಿನ ಪತ್ರಿಕೆಗಳಲ್ಲಿ ಅಚ್ಚಾಗಿ ಅದರ ಶಾಯಿ ಆರುವ ಮುನ್ನವೇ ಜುಲೈ 12ರ ಬೆಳಗ್ಗೆ ಅಲ್ಲಿನ ಜನಜೀವನ ಮಾಮೂಲಿ ಸ್ಥಿತಿಗೆ ಬಂದಾಗಿತ್ತು.

ಆಲೂರು ವೆಂಕಟರಾಯರು - ೧೨೬ನೇ ಜನ್ಮ ದಿನ

 

ವಿಜಯ ಕರ್ನಾಟಕದ ದಿನ ವಿಶೇಷ ಗಮನಿಸುತ್ತಿದ್ದಾಗ ಮೇಲಿನ ವಿಚಾರ ಅರಿವಿಗೆ ಬಂತು. ೧೮೮೦ರಲ್ಲಿ ಈ ದಿನ ವಿಜಾಪುರದಲ್ಲಿ 'ಕರ್ನಾಟಕ ಕುಲಪುರೋಹಿತ' ಆಲೂರು ವೆಂಕಟರಾಯರ ಜನನವಾಗಿತ್ತು.

ತಮಿಳು ಚಿತ್ರದಲ್ಲಿ ಸಂಗೊಳ್ಳಿ ರಾಯಣ್ಣನ ಅವಮಾನ

ದಿನಾಂಕ ೧೨ ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ತಮಿಳು ಸಿನಿಮಾವೊಂದರಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿ ಪ್ರಾಣ ತೆತ್ತ ಗಂಡುಗಲಿ ಸಂಗೊಳ್ಳಿ ರಾಯಣ್ಣನ ಹೆಸರನ್ನು ದೇಶದ್ರೋಹಿ ಪಾತ್ರವೊಂದಕ್ಕೆ ಕೊಟ್ಟಿದ್ದಾರಂತೆ ನೋಡಿ ಇವರ ಉದ್ಧಟತನ. ನನ್ನ ಲೇಖನಗಳಲ್ಲಿ ದೋಷ ಕ್ಂಡು ಬಂದಲ್ಲಿ ನನ್ನನ್ನು ಕ್ಷಮಿಸಬೇಕು ಏಕೆಂದರೆ, ನನ್ನ ಆಪರೇಟಿಂಗ್ ಸಿಸ್ಟಮ್ windows 2000 ಇದರಲ್ಲಿ ಕನ್ನಡ ಫ಼ಾಂಟ್ ಸರಿಯಾಗಿ ಬರೋದಿಲ್ಲ, ಆದರೂ ಆದಷ್ಟು ತಪ್ಪುಗಳನ್ನು ಮಾಡದಿರಲು ಪ್ರಯತ್ನಿಸುತ್ತೇನೆ.......

ಸುಕೃತಿ

                          ಸುಕೃತಿ

                     ಅಕಾರದಿಂದ ಆಕೃತಿ,
                     ಉಕಾರದಿಂದ ಪ್ರಕೃತಿ,
                     ಮಕಾರದಿಂದ ಸಂಸ್ಕೃತಿ,
                     ಓಂ ಕಾರದಿಂದ ಸುಕೃತಿ.//ಪ//