ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?

ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?

Comments

ಬರಹ

ಭಾರವಾದ ಮನಸ್ಸಿನಿಂದಲೇ ಟಿವಿ ಯಲ್ಲಿ ಪೂಚಂತೆ ಬಗ್ಗೆ ಬರುತ್ತಿದ್ದ ಕಾರ್ಯಕ್ರಮಗಳನ್ನು ನೋಡ್ತಿದ್ದೆ. ಕೆಲವು ಜನರದ್ದು ಅದೇ ರಾಗ ಅದೇ ಹಾಡು. ಯಾರು ತೀರಿಕೊಂಡರೂ ಒಂದೇ ಥರದ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡ ಹಾಗೆ ಒದರಿಬಿಡ್ತಾರೆ. ತೇಜಸ್ವಿ ಬಗ್ಗೆ ಹೇಳಿ ಅಂದ್ರೆ ತೇಜಸ್ವಿಯವರ ಬಯೋಡಾಟ ಹೇಳೋಕೆ ಶುರು ಮಾಡ್ತಾರೆ. ತೇಜಸ್ವಿ ಕುವೆಂಪು ಅವರ ಮಗ, ಅವರು ಕತೆ ಕಾದಂಬರಿ ಬರಿತಿದ್ರು, ಇಂಥ ಕಡೆ ಹುಟ್ಟಿದ್ರು ಇಲ್ಲಿ ವಾಸಿಸುತ್ತಿದ್ರು ಹೀಗಿರ್ತವೆ ಅವರ ಮಾತುಗಳು. ಕೊನೆಗೆ ತುಂಬಲಾರದ ನಷ್ಟ ಅಂದುಬಿಡ್ತಾರೆ ಒಬ್ಬರಾದರು ಅವರ ಬರಹಗಳನ್ನ ಓದಿರ್ತಾರೋ ಇಲ್ವೋ? ಆದರೆ ಟಿವಿ ೯ ನಲ್ಲಿ ಇಸ್ಮಾಯಿಲ್(ನಮ್ಮ ಸಂಪದದ ಇಸ್ಮಾಯಿಲ್ಲೇ ತಾನೆ?) ಆಡಿದ ಮಾತುಗಳು ನೆನೆದ ನೆನಪುಗಳು ಅಗಲಿದ ಚೇತನಕ್ಕೆ ಸರಿಯಾದ ಶ್ರದ್ದಾಂಜಲಿಯಂತಿತ್ತು. ಅವಕಾಶ ಸಿಕ್ಕರೆ ಖಂಡಿತ ಕೇಳಿ. ತೇಜಸ್ವಿಯಂತಹ ವಿಶಿಷ್ಟ ವ್ಯಕ್ತಿಯ ಜೊತೆ ದಿನಗಳನ್ನು ಕಳೆದ ನೀವೇ ಅದೃಷ್ಟವಂತರು ಇಸ್ಮಾಯಿಲ್.

-ದೃವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet