ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada

ಇದು ಮಾಹಿತಿ ಮೀಮಾಂಸೆ(information theory) ಓದಿದವರಿಗೆ ಗೊತ್ತಿರುವ ವಿಷಯವೆ. ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ.
ತಪ್ಪಿದ್ದರೆ ದಯವಿಟ್ಟು ತಿದ್ದಿ.
ದೋಷ ನಿಯಂತ್ರಣ ಸಾಂಕೇತತ್ವ

ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು

ವೆಂಕಟೇಶ್ ಅವರ ಲೇಖನ "ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು" ಓದಿದ ನಂತರ ಈ ಪ್ರತಿಕ್ರಿಯೆ ಬರೆಯಲು ಶುರು ಮಾಡಿದೆ. ಅಷ್ಟರಲ್ಲಿ ಸುನಿಲ್‌ರವರ ಲೇಖನ "ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ..." ಬಂತು. ಅದನ್ನು ಓದಿ ಮನಸ್ಸಿನಲ್ಲಿ ಇನ್ನೂ ಹಲವಾರು ವಿಚಾರಗಳು ಕಾಡತೊಡಗಿದವು. ಸರಿ ಬರಹ ರೂಪಕ್ಕೆ ಇಳಿಸಿಯೇ ಬಿಡೋಣ ಅಂತ ಕೂತಿದ್ದೀನಿ. ನನ್ನ ಅನಿಸಿಕೆಗಳೂ ಬಹಳಷ್ಟು ಇರುವುದರಿಂದ ಬೇರೆ ಲೇಖನದ ರೂಪದಲ್ಲಿ ಹೇಳೋದು ವಾಸಿ ಅಂತನ್ನಿಸಿ ಪ್ರತ್ಯೇಕವಾದ ಲೇಖನದ ರೂಪದಲ್ಲಿ ಬರೆಯುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅನಿಸಿಕೆ ಮತ್ತು ಲೇಖನಗಳಲ್ಲಿದ್ದ ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ವಸ್ತುನಿಷ್ಠವಾಗಿ ಹೇಳುವ ಪ್ರಯತ್ನ ಅಷ್ಟೇ ಹೊರತು "ಯಾರನ್ನೂ ಕುರಿತು" ಆರೋಪವಲ್ಲ/ಉದ್ದೇಶಪೂರ್ವಕ ಟೀಕೆಯಲ್ಲ. ಹಾಗೇನಾದರೂ ಯಾರಿಗಾದರೂ ಅನಿಸಿದಲ್ಲಿ, ನೋವುಂಟುಮಾಡಿದಲ್ಲಿ ದಯವಿಟ್ಟು ಕ್ಷಮಿಸಿ. ನನಗೊಂದು ಪ್ರತಿಕ್ರಿಯೆ ನೀಡಿ, ತಿದ್ದಿಕೊಳ್ಳಲು ಸಿದ್ಧ. ಇನ್ನೊಂದು ವಿಚಾರ, ಎಲ್ಲವನ್ನೂ ಪುಲ್ಲಿಂಗದಲ್ಲೇ ಬರೆದಿದ್ದೇನೆ. ಮಹಿಳೆಯರು ಕೊಂಚ ಸಹಿಸಬೇಕು! ೧. ಶತಮಾನವೇ ಕಳೆದರೂ ಇನ್ನೂ ಕಿಟ್ಟೆಲ್ ನಿಘಂಟು ಕನ್ನಡದ ಅತ್ಯುತ್ತಮ ನಿಘಂಟಾಗಿದೆ ಅನ್ನುವುದು ಕಿಟ್ಟೆಲ್ ಅವರ ಪ್ರತಿಭೆಗೆ ಸಂದ ಗೌರವ ಅಂತ ಮನಸ್ಸು ತಲೆಬಾಗಿದರೂ, ಹೃದಯ "ಅಯ್ಯೋ" ಅಂತನ್ನುತ್ತಿದೆ (ಅಳುತ್ತಿದೆ) Cry. ಇಂಗ್ಲೀಷಲ್ಲಿ ಸರಾಸರಿ ಎರಡು ವರ್ಷಕ್ಕೊಮ್ಮೆ Oxford ನಂತಹ ನಿಘಂಟುಗಳೂ "ಅಪ್‌ಡೇಟ್" ಆಗುತ್ತವೆ. ಹತ್ತಾರು "ಹೊಸ ಪದಗಳು" (ಹೊಸದು ಅಂದರೆ ಸಮಕಾಲೀನವಾದವು, ಈಗಿನ ಕಾಲಕ್ಕೆ ತಕ್ಕಂತೆ ಬಳಸುವಂತಹದ್ದು) ಮುಖ್ಯವಾಹಿನಿಗೆ ಸೇರಿಕೊಳ್ಳುತ್ತವೆ. ನಮ್ಮ ಕನ್ನಡದಲ್ಲಿ?!!! ಈ ಬಗ್ಗೆ ಯಾರಾದರೂ ಚಿಂತಿಸಿದ್ದೀರಾ? ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕೆ, ಕನ್ನಡ ನಿಂತ ನೀರಾಗುತ್ತಿದೆ ಅನ್ನೋದಕ್ಕೆ. ಕಿಟ್ಟೆಲ್ ಅವರ ಬಗ್ಗೆ ತುಂಬು ಗೌರವ ಇದೆ. ಆದರೆ ಅವರ ನಿಘಂಟನ್ನು "ಅಪ್‌ಡೇಟ್ ಮಾಡಲೇಬಾರದು" ಅಂತ ಅವರೇನಾದರೂ ಉಯಿಲು ಬರೆದು ಇಟ್ಟಿದ್ದರೇ? ಇದು ಸಾಧ್ಯ ಆಗುತ್ತಿಲ್ಲ ಯಾಕೆ? ಇತ್ತೀಚಿನ ವರ್ಷಗಳಲ್ಲಿ ಕಿಟ್ಟೆಲ್ ನಿಘಂಟು "ಅಪ್‌ಡೇಟ್" ಆದದ್ದು ನನಗೆ ತಿಳಿದಂತೆ ಇಲ್ಲ.

೨. ಕನ್ನಡ ಸಾಹಿತ್ಯದ ಆರಂಭದಿಂದಲೂ ಪ್ರತಿ ಸಾಹಿತಿಯೂ ತನಗೆ ಬೇಕಾದಾಗ, ಸನ್ನಿವೇಶಕ್ಕೆ, ಅಗತ್ಯಕ್ಕೆ ತಕ್ಕಂತೆ ಪದಗಳನ್ನು ಬಳಸುತ್ತಲೇ ಬಂದಿದ್ದಾನೆ. ಇದು ಆಯಾ ಕೃತಿಕಾರರಿಗೆ ಮತ್ತು ರಸಾಸ್ವಾದನೆಗೆ ಸಂಬಂಧಿಸಿದ ವಿಷಯ. ಹಾಗಂತ ಕನ್ನಡ ಪದಗಳನ್ನು ಹುಡುಕಲಿಲ್ಲ ಅಂತಲ್ಲ. ನಿಘಂಟನ್ನು ಓದುವ ಹವ್ಯಾಸ ನನಗೂ ಸ್ವಲ್ಪ ಮಟ್ಟಿಗಿದೆ. ಆದರೆ "ಕೆಲವೊಮ್ಮೆ" ನಿಘಂಟಿನಿಂದ ಪದಗಳನ್ನು ಬಳಸಲೇಬೇಕೆಂದು ಬಳಸಿದಲ್ಲಿ ರಸಾಸ್ವಾದನೆಗೆ ಭಂಗವಾದೀತೆಂದು ನನ್ನ ಅನಿಸಿಕೆ. ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸೋಣ. ಅದರಲ್ಲಿ ಹಿಂಜರಿಕೆ, ತಪ್ಪಿತಸ್ಥ ಮನೋಭಾವ ಯಾಕೆ? ಈ ರೀತಿಯ ಪ್ರಯತ್ನಗಳು (ಶುದ್ಧ ಕನ್ನಡ ಪರ್ಯಾಯ ಪದಗಳ ಬಳಕೆ) ನಿಧಾನವಾಗಿ ಪ್ರಾರಂಭವಾಗಿ, ಕ್ರಮೇಣ ರೂಢಿಗೆ ಬರಬೇಕೆ ಹೊರತು ಒಮ್ಮೆಗೇ ಹಿಂದಿನ ಎಲ್ಲವನ್ನೂ ತಿರಸ್ಕರಿಸಬೇಕು ಎಂದಲ್ಲ. ಎಲ್ಲಕ್ಕಿಂತ ರಸಾಸ್ವಾದನೆ ಮತ್ತು ಸಂವಹನ ಮುಖ್ಯ ಅಂತ ನನ್ನ ಭಾವನೆ. ಹಾಗಂತ ಕನ್ನಡ ತನ್ನ ಸ್ವಾಭಿಮಾನ ಕಳೆದುಕೊಳ್ಳಬೇಕು ಅಂತ ನಾನು ಖಂಡಿತ ಹೇಳುತ್ತಿಲ್ಲ. ನಾನೂ ಒಬ್ಬ "ಹದಿನಾರಾಣೆ ಕನ್ನಡಿಗ". ಉದಾಹರಣೆಗೆ ಆಂಡಯ್ಯನವರ "ಕಬ್ಬಿಗರ ಕಬ್ಬ" ಸಂಪೂರ್ಣ ಕನ್ನಡದ ಕೃತಿ ಅಂತ ಹೇಳುತ್ತಾರೆ. ಆದರೆ ಯಾಕೆ ಅವರ ನಂತರ ಯಾರೂ ಆ ಪ್ರಯತ್ನವನ್ನು ಪದೇ ಪದೇ (ಇನ್ನಷ್ಟು ದೊಡ್ಡ ಮಟ್ಟದಲ್ಲಿ) ಮಾಡಲಿಲ್ಲ? ಅಥವಾ ಆ ಒಂದು ಕೃತಿ ಕೂಡ ಯಾಕೆ ನಮ್ಮನ್ನು "ಗದುಗಿನ ಭಾರತ", ವಚನಗಳು, ದಾಸಸಾಹಿತ್ಯಗಳಷ್ಟು ಆವರಿಸಲಿಲ್ಲ? (ನಾನು ಕೇವಲ ಜನಪ್ರಿಯತೆಯ ಮಾನದಂಡವನ್ನಿಟ್ಟುಕೊಂಡು ಹೇಳುತ್ತಿಲ್ಲ) ನೀವೇ ಹೇಳಿ? ದಯವಿಟ್ಟು ತಪ್ಪು ತಿಳಿಯದಿರಿ, ನಾನು ಆಂಡಯ್ಯನವರ ಕಾವ್ಯದ ಬಗ್ಗೆ ಟೀಕಿಸುತ್ತಿಲ್ಲ. ಆ ಮಟ್ಟಿಗಿನ ಪಾಂಡಿತ್ಯ/ಅರ್ಹತೆ ನನಗಿಲ್ಲವೇ ಇಲ್ಲ. ಇರುವ ವಿಚಾರ ಹೇಳುತ್ತಿದ್ದೀನಿ ಅಷ್ಟೇ.

ಕರ್ನಾಟಕ ಕುಲಪುರೋಹಿತರ ಆತ್ಮಚರಿತ್ರೆಯಿಂದ - ಭಾಗ ೧

(ಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರ 'ನನ್ನ ಜೀವನಸ್ಮೃತಿಗಳು' ಪುಸ್ತಕದಿಂದ ಆಯ್ದ ಕೆಲವು ಕುತೂಹಲಕರ ಭಾಗಗಳು )

ಮನುಷ್ಯ ದೇವರ ಒಂದು ಅಪೂರ್ಣ ಕೃತಿ ....

ಎರಿಕ್ ಹಾಫರ್ ನ ಮಾತಿನಲ್ಲಿ - ಮನುಷ್ಯ ದೇವರ ಒಂದು ಅಪೂರ್ಣ ಕೃತಿ . ಹಾಗೂ ಆತನ ಪ್ರತಿಯೊಂದು ಹೋರಾಟ ದೇವರು ಅರ್ಧಕ್ಕೇ ಬಿಟ್ಟ ಕೆಲಸವನ್ನು ಪೂರ್ತಿಗೊಳಿಸುವ ಪ್ರಯತ್ನವಾಗಿದೆ

ಇರ್ಫಾನ್ ಮತ್ತು ರಾಷ್ಟ್ರೀಯ ಚಲನಚಿತ್ರ ಮಾಧ್ಯಮಗಳು

ಅಲ್ಲ, ಇರ್ಫಾನ್ ಎಂಬ ಲಷ್ಕರೇ ತೋಯ್ಬ ಉಗ್ರಗಾಮಿಯನ್ನು ಹಿಡಿದಾದ ಮೇಲೆ ಅವರ ಯೋಜನೆಗಳು ಹಾಗಿತ್ತು ಹೀಗಿತ್ತು, ಅಂಥಾ ಕನೆಕ್ಷನ್ ಇಟ್ಕಂಡಿದ್ದ, ಇಂಥಾ ಪ್ಲಾನ್ ಹಾಕಿದ್ದ ಅಂತ ನಮ್ಮ ಸ್ಥಳೀಯ ಪೇಪರ್ ಮತ್ತು ಟೀವಿ ಚಾನೆಲ್ಲುಗಳಲ್ಲಿ ಸುದ್ದಿಯೋ ಸುದ್ದಿ, ರಾಷ್ಟ್ರೀಯ ಚಲನಚಿತ್ರ ಮಾಧ್ಯಮದವರು ಇದನ್ನೇನು ತೋರಿಸುತ್ತಲೇ ಇಲ್ಲವಲ್ಲ, ಏನು ಕರ್ನಾಟಕದಲ್ಲಿ ಭಯೋತ್ಪಾದಕರು ಬಾಂಬ್ ಎಸೆದ ಮೇಲೇ ವರದಿ ಮಾಡೋದು ಅಂತ ನಿರ್ಧರಿಸಿದ್ದಾರೋ ಹೇಗೆ ಇವರು?

ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು

ಈ ವಿಷಯ ಬರೆಯಲು ಹೊರಟಾಗ ನನಗೆ ಬಂದ ಮೊದಲ ಸಂಶಯ ಇದನ್ನು ಯಾವ ವರ್ಗದಲ್ಲಿ ಸೇರಿಸಬೇಕು ಎಂಬುದು. ರಾಜಕೀಯವೇ ಸೂಕ್ತ ಎಂದು ಅದಕ್ಕೆ ಸೇರಿಸಿದ್ದೇನೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ ತಮ್ಮ ನೂರೆಂಟು ಮಾತು ಅಂಕಣದಲ್ಲಿ ಕರ್ನಾಟಕದ ಮಠಗಳ ಬಗ್ಗೆ ಬರೆದಿದ್ದರು. ಈ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕಾಣಿಕೆಗಳು ಇತ್ಯಾದಿಗಳನ್ನು ವಿವರಿಸಿದ್ದ ಲೇಖನದಲ್ಲಿ ಮಠಗಳ ಸಾಧನೆಗಳನ್ನು ಪಟ್ಟಿ ಮಾಡಲಾಗಿತ್ತು.

ಈ ಲೇಖನ ಓದಿದಾಗ ಕೆಲಕಾಲದ ಹಿಂದೆ ನಮ್ಮ ಕಾಲೇಜಿನಲ್ಲಿ ಉಪನ್ಯಾಸ ನೀಡಿದ್ದ ಎ.ನಾರಾಯಣ ಅವರು ಎತ್ತಿದ್ದ ಪ್ರಶ್ನೆಯೊಂದು ನೆನಪಾಯಿತು. ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳಿಗಿರುವ ಇರುವ ಸ್ಥಾನ ಯಾವುದು? ಇವುಗಳನ್ನು ಎನ್.ಜಿ.ಓಗಳು ಎಂದು ಕರೆಯುವಂತೆ ಇಲ್ಲ. ಶಿಕ್ಷಣ ಸಂಸ್ಥೆಗಳೆಂದು ಹೇಳಲೂ ಸಾಧ್ಯವಿಲ್ಲ. ಇವು ರಾಜಕೀಯ ಪಕ್ಷಗಳೂ ಅಲ್ಲ. ಧರ್ಮ ಪ್ರಸಾರವನ್ನು ಮಾಡುವ ಸಂಸ್ಥೆಗಳೆಂದು ವರ್ಗೀಕರಿಸಲೂ ಸಾಧ್ಯವಿಲ್ಲ. ಏಕೆಂದರೆ ಕರ್ನಾಟಕದಲ್ಲಿ ಇರುವ ಎಲ್ಲಾ ಪ್ರಭಾವೀ ಮಠಗಳೂ ರಾಜಕೀಯದಲ್ಲೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿವೆ. ಕೆಲವು ಮಠಗಳಂತೂ ಅಭ್ಯರ್ಥಿಗಳ ಸೋಲು ಗೆಲುವನ್ನು ನಿರ್ಧರಿಸುವಷ್ಟು ಪ್ರಬಲ ಎನ್ನಲಾಗುತ್ತಿದೆ. ಹಾಗಿದ್ದರೆ ಈ ಮಠಗಳು ಏನು?

ಡೆವಲಪ್ ಮೆಂಟ್ ಸ್ಟಡೀಸ್ ಎಂದು ಕರೆಯುವ ಅಧ್ಯಯನ ವಿಭಾಗದಲ್ಲಿ ಈಗ ರಿಲಿಜನ್ ಮತ್ತು ಡೆವಲಪ್ ಮೆಂಟ್ ಗಳ ಮಧ್ಯೆ ಇರುವ ಸಂಬಂಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳ ಸ್ಥಾನ ಏನು ಎಂಬುದನ್ನು ನಿರ್ಧರಿಸಬೇಕಾದ ಅಗತ್ಯವಿದೆ. ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡುತ್ತಿವೆ ಎಂಬುದು ನಿಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸ ಮಾಡಬೇಕಿರುವುದು ಸರಕಾರ. ಸರಕಾರ ಅದನ್ನು ಮಾಡದೇ ಇದ್ದರೆ ಅದು ಅದರ ವೈಫಲ್ಯವನ್ನು ಸೂಚಿಸುತ್ತದೆ. ಈ ವೈಫಲ್ಯವನ್ನು ಸರಿಪಡಿಸುವಂತೆ ಒತ್ತಡ ಹೇರಬೇಕಾದ ಸಮುದಾಯಕ್ಕೆ ಚಾರಿಟಿಯ ಮೂಲಕ ಆ ಸವಲತ್ತನ್ನು ಒದಗಿಸುವುದು ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಸಡಿಲಗೊಳಿಸುವುದಿಲ್ಲವೇ?

ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

Rev Ferdinand Kittelರೆವೆರೆಂಡ್ ಎಫ್. ಕಿಟ್ಟೆಲ್ ರ ಕನ್ನಡ- ಇಂಗ್ಲೀಷ್ ನಿಘಂಟಿನಷ್ಟು ಅಪೂರ್ವವಾದದ್ದು ಕನ್ನಡದಲ್ಲಿ ಇನ್ನೊಂದಿಲ್ಲ. ಅದರ ಗಾತ್ರ, ಘನತೆ, ಸಂಗ್ರಹ, ಪದ್ಧತಿಗಳು ಅನನ್ಯವಾದವುಗಳು. ಅದರ ಪ್ರಕಟಣೆ ನೂರುವರ್ಷದ ಮೇಲಾದಾಗ್ಯೂ ಇಂದಿನ ಸಂದರ್ಭದಲ್ಲೂ ಕಿಟೆಲ್ ರು ಕನ್ನಡ ಸಾರಸ್ವತಕ್ಕೆ ಸಲ್ಲಿಸಿದ ಅಮೋಘ ಸೇವೆಯ ಸ್ಮರಣೆ ಮಾಡುವುದು ಔಚಿತ್ಯಪೂರ್ಣವಾಗಿದೆ.

ಅವರು ಕ್ರೈಸ್ತ ಮತ ಪ್ರಚಾರಕ್ಕಾಗಿಯೇ ೧೮೫೩ ರಲ್ಲಿ ಬಾರತಕ್ಕೆ ಬಂದವರು. ಮೊದಲು ಧಾರವಾಡ, ಮಂಗಳೂರು, ಹುಬ್ಬಳ್ಳಿ ಯಲ್ಲಿ ಮತಪ್ರಚಾರದ ಕಾರ್ಯ ನಡೆಸಿದರು. ಭಾಷಾ ಪ್ರಚಾರಕ್ಕೆ ಮುಖ್ಯವಾದದ್ದು ಅಲ್ಲಿನ ದೇಸಿ ಭಾಷೆ. ಅದಕ್ಕಾಗಿ ಅವರು ಎಲ್ಲಕ್ಕಿಂತ ಮೊದಲೇ ಕನ್ನಡಭಾಷೆಯನ್ನು ಕಲಿತರು. ಧರ್ಮಪ್ರಚಾರವನ್ನು ಸ್ವಲ್ಪ ಕಾಲ ಬದಿಗಿಟ್ಟು ದೇಸಿ ಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳನ್ನು ಕಲಿತಿದ್ದಲ್ಲದೆ ಅದರಲ್ಲಿ ಪ್ರಾವೀಣ್ಯತೆಯನ್ನೂ ಪಡೆದರೆಂಬುದು ಇಲ್ಲಿ ನಾವು ಗಮನಿಸಬೇಕಾದ ಸಂಗತಿ.

ರೆವರೆಂಡ್ .ಕಿಟ್ಟಲ್ ಅದರಲ್ಲಿ ಅಗ್ರೇಸರು ಎಂದು ಖಂಡಿತವಾಗಿ ಹೇಳಬಹುದು. ಕಿಟ್ಟೆಲ್ ರು ಜರ್ಮನಿಯ 'ಹ್ಯಾನ್ ವರ್ 'ನಲ್ಲಿ ೧೮೩೨ ನೆಯ ಏಪ್ರಿಲ್ ೭ ರಂದು ಜನಿಸಿದರು. ಅವರ ಫಾಸ್ಟರ್ ತಂದೆಯೂ ಮತಪ್ರಚಾರ ಮಾಡುತ್ತಿದ್ದರು. ಹೀಗೆ ತಮ್ಮ ಚಿಕ್ಕಂದಿನಲ್ಲೇ ಅವರು ಮತಪ್ರಚಾರವನ್ನು ಸ್ವೀಕರಿಸಲೇಬೇಕಾಯಿತು. ಕಿಟ್ಟಲ್ ಮಂಗಳೂರಿನ 'ಪಾಲೆನಿತ್'' ಎಂಬ ಹುಡುಗಿಯೊಡನೆ ೧೮೬೦ ರಲ್ಲಿ ವಿವಾಹವಾದರು. ಈ ಮದುವೆ ೪ ವರ್ಷಗಳಲ್ಲೇ ಅಂತ್ಯವಾಯಿತು. ಬಹುಬೇಗ ಅವರ ಹೆಂಡತಿ ತೀರಿಕೊಂಡರು. ಸುಮಾರು ೧೪ ವರ್ಷಗಳಕಾಲ ಮತಪ್ರಚಾರದ ಕೆಲಸ ಮುಂದುವರೆಸಿ, ಜರ್ಮನಿಗೆ ತೆರಳಿದರು. ಅವರು ಮತ್ತೆ ಭಾರತಕ್ಕೆ ಮರಳಿ ಬಂದಿದ್ದು ೧೮೬೭ ರಲ್ಲಿ. ಈ ಬಾರಿ ಅವರು ಮರು ಮದುವೆಯಾದರು. ಆಕೆ ತಮ್ಮ ಮೊದಲನೆಯ ಪತ್ನಿ ಯ ತಂಗಿ- 'ಜೂಲಿಯ' ಎಂಬುವಳೊಡನೆ.

ಹೆಲನ್ ಕೆಲ್ಲರ್

ನಾನು ಎಲ್ಲ ಕೆಲಸಗಳನ್ನೂ ಸಾಧಿಸಲಾರೆ ನಿಜ; ಆದರೆ ಕೆಲವನ್ನಾದರೂ ಖಂಡಿತ ಸಾಧಿಸಬಲ್ಲೆ. ನನ್ನಿಂದ ಎಲ್ಲ ಕೆಲಸಗಳನ್ನೂ ಮಾಡಲಾಗುವುದಿಲ್ಲ ಎಂದು ನಿರಾಶಳಾಗಿ ನಾನು ನನ್ನಿಂದಾಗುವ ಕೆಲವು ಕೆಲಸಗಳನ್ನಾದರೂ ಮಾಡದೇ ಕೈಕಟ್ಟಿ ಕೂರುವುದಿಲ್ಲ.

ಹೆಲನ್ ಕೆಲ್ಲರ್

ಯಾವುದಾದರೂ ಉನ್ನತ ಧ್ಯೇಯವನ್ನು ಮನಸ್ಸಿನಲ್ಲಿಟ್ಟುಕೊಂಡು ಮಾಡಿದ ಯಾವುದೇ ಪ್ರಯತ್ನವೂ ಎಂದಿಗೂ ವ್ಯರ್ಥವಾಗುವುದಿಲ್ಲ. ಇಂದಲ್ಲ ನಾಳೆ ಅವು ಖಂಡಿತ ಫಲಿಸುತ್ತವೆ.