ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜರ್ಮನ್ ಕವಿತೆ: ರಿಲ್ಕ್: ಚನ್ನಾಗಿಯೇ ಗೊತ್ತಿದೆ, ಆದರೂ...

ಪ್ರೀತಿಯ ನಾಡಿನ ಭೂಪಟ ನಮಗೆ ಚನ್ನಾಗಿಯೇ ಗೊತ್ತಿದೆ
ಅಲ್ಲಿರುವ ದೇವಾಲಯ, ಅದರ ಬಳಿಯ ಸ್ಮಶಾನ ಚನ್ನಾಗಿಯೇ ಗೊತ್ತಿದೆ

ಹೀಗೊಬ್ಬ ಪ್ರಾಮಾಣಿಕ ಬಸವರಾಜ: ವಾಚನಾಭಿರುಚಿ ಶಿಬಿರದ ಒಂದು ಘಟನೆ

ಸೆಪ್ಟೆಂಬರ್ ೨೭, ೨೦೦೫.
ಚಿತ್ರದುರ್ಗದ ಸರ್ಕಾರೀ ಕಲಾ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ.
ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ವಾಚನಾಭಿರುಚಿ ಶಿಬಿರ. ಭಾಗವಹಿಸಿದ್ದವರು ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದಿದ್ದ ಸುಮಾರು ನೂರು ಮಂದಿ ವಿದ್ಯಾರ್ಥಿಗಳು.

ಮುಂಬಯಿ ಪೋಲೀಸರ ಕಾರ್ಯವೈಖರಿ

ಮೊನ್ನೆ ತಾನೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾರಾ ಹೋಟೆಲಿನ ಎದುರುಗಡೆಯಿಂದ ಟ್ಯಾಕ್ಸಿ ಹಿಡಿದುದಕ್ಕೆ ಇರಬೇಕು, “ನೂರು ರೂಪಾಯಿ ಆಗುತ್ತದೆ” ಎಂದ. ನಾನು “ಮೀಟರು ಪ್ರಕಾರ ಬರುವುದಿದ್ದರೆ ಮಾತ್ರ ಬಾ. ಇಲ್ಲದಿದ್ದರೆ ಬೇರೆ ಟ್ಯಾಕ್ಸಿ ಹಿಡಿಯುತ್ತೇನೆ” ಎಂದು ಹೇಳಿ ಟ್ಯಾಕ್ಸಿಯಿಂದ ಇಳಿಯಲು ಅನುವಾದೆ. ಆತ ಕೂಡಲೆ ವರಸೆ ಬದಲಿಸಿ “ಕುಳಿತುಕೊಳ್ಳಿ, ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ನನಗೆ ಬೇಕಾದಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ಇಳಿದಾಗ ಪುನ ನೂರು ರೂಪಾಯಿ ಕೊಡಲು ಒತ್ತಾಯಿಸಿದ. ಮೀಟರಿನಲ್ಲಿ ಎಪ್ಪತ್ತು ರೂ ಆಗಿತ್ತು. ನಾನು ನೂರು ರೂ ಕೊಡಲು ಒಪ್ಪಲಿಲ್ಲ. ಎಪ್ಪತ್ತು ರೂ ಮಾತ್ರ ಕೊಡುತ್ತೇನೆ ಎಂದು ಹೇಳಿ, ನನ್ನಲ್ಲಿ ಚಿಲ್ಲರೆ ಇಲ್ಲದಿದ್ದ ಪ್ರಯುಕ್ತ ನೂರು ರೂಪಾಯಿನ ನೋಟು ನೀಡಿದೆ. ಆತ ಟ್ಯಾಕ್ಸಿ ಹೊರಡಿಸಲು ಅನುವಾದ. ಬಾಕಿ ಮೂವತ್ತು ರೂ ಕೇಳಿದರೆ “ಬೇಕಿದ್ದರೆ ಪೋಲೀಸ್ ಸ್ಟೇಶನ್ನಿಗೆ ಹೋಗಿ ಕೇಳು” ಎಂದು ದಬಾಯಿಸಿ ಟ್ಯಾಕ್ಸಿಯನ್ನು ಓಡಿಸಿಕೊಂಡು ಹೋದ. ಅಲ್ಲಿ ನಾನು ಹೋಗಬೇಕಾಗಿದ್ದ ಕಂಪೆನಿಯಲ್ಲಿ ನನ್ನ ಕೆಲಸ ಆದ ಬಳಿಕ ಸಮೀಪದಲ್ಲೇ ಇದ್ದ ಪೋಲೀಸ್ ಠಾಣೆಗೆ ಹೋಗಿ ಕಥೆ ಪೂರ್ತಿ ಹೇಳಿ ಟ್ಯಾಕ್ಸಿಯ ನಂಬರ್ ಬರೆದುಕೊಂಡಿದ್ದ ಕಾಗದದ ಚೂರನ್ನು ನೀಡಿದೆ. ಆತ ಆ ಕಾಗದವನ್ನು ಕಿಸೆಗೆ ಹಾಕಿಕೊಂಡು “ಈಗ ನಿಮಗೆ ಮೂವತ್ತು ರೂ ಬರಬೇಕು, ಅಷ್ಟೆ ತಾನೆ” ಎಂದು ಹೇಳಿ ಕಿಸೆಯಿಂದ ಮೂವತ್ತು ರೂ ತೆಗೆದು ನೀಡಿದ. ನನಗೆ ಆಶ್ಚರ್ಯವಾಯಿತು. “ನೀವು ಯಾಕೆ ಕೊಡುತ್ತಿದ್ದೀರಾ?” ಎಂದು ಪ್ರಶ್ನಿಸಿದೆ. ಆತ “ಈ ಟ್ಯಾಕ್ಸಿ ಡ್ರೈವರ್ ಇಲ್ಲೇ ಸುತ್ತಾಡುತ್ತಿರುತ್ತಾನೆ. ನಮಗೆ ಸಿಕ್ಕೇ ಸಿಗುತ್ತಾನೆ. ಆತನ ಕೈಯಿಂದ ನಾವು ವಸೂಲು ಮಾಡಿಕೊಳ್ಳುತ್ತೇವೆ. ಈಗ ನೀವು ಇಲ್ಲಿಂದ ಹೋಗಬಹುದು” ಎಂದ! ಬೆಂಗಳೂರಿನಲ್ಲಿ ರಿಕ್ಷಾ ಡ್ರೈವರುಗಳ ವಿರುದ್ಧ ಪೋಲೀಸರಿಗೆ ದೂರು ನೀಡಲು ಪ್ರಯತ್ನಿಸಿದ್ದೀರಾ?

ಗ್ರಹಣದಲ್ಲಿ ಗರಿಕೆ ಹುಲ್ಲು

ನಮ್ಮ ಕಡೆ (ಮಂಗಳೂರು ಸುತ್ತ ಮುತ್ತ) ಸೂರ್ಯ ಗ್ರಹಣದ ಸಮಯದಲ್ಲಿ ಉಳಿದ ಆಹಾರ (ಅನ್ನ ಪಲ್ಯ)ಕ್ಕೆ ಗರಿಕೆ ಹುಲ್ಲನ್ನು ಹಾಕಿ ಇಡುತ್ತಾರೆ.. ಬಾವಿಗೂ ಹಾಕುವ ಕ್ರಮ ಇದೆ.. ಈ ಗರಿಕೆ ಹುಲ್ಲಿನ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದು ನನಗೆ ಇದುವರೆಗೂ ತಿಳಿದಿಲ್ಲ.. ಯಾರಿಗಾದರೂ ತಿಳಿದಿದೆಯೇ. ಹಿಂದಿನವರು ಏನಾದರೂ ಕಾರಣವಿರದೆ ಇದನ್ನು ಪಾಲಿಸಲಾರರು ಎಂಬುವುದೇ ನನ್ನ ನಂಬಿಕೆ.

ಭಾರತಕ್ಕಾಗಿ ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ

(ಅರುಣ್ ಶರ್ಮರವರ ಬ್ಲಾಗಿನಿಂದ)

ಮೈಕ್ರೊಸಾಫ್ಟ್ ಭಾರತಕ್ಕಾಗಿಯೇ ಒಂದು ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ ತರಲಿದೆ ಎಂದು [:http://news.yahoo.com/s/nm/20051001/tc_nm/india_microsoft_dc|ಯಾಹೂ ವರದಿ ಮಾಡಿದೆ]. ಹೊರದೇಶದಲ್ಲಿ ತುಟ್ಟಿಯಾದ ಪುಸ್ತಕಗಳು ಭಾರತದಲ್ಲಿ ಕಡೆಮೆ ಬೆಲೆಗೆ ಲಭ್ಯವಿರುವಂತೆ ಇದೂ ಕೂಡ ಎನ್ನುತ್ತದೆ, ವರದಿ.