ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕೆಲಸ

                       ಕೆಲಸ 
         ಕೆಲಸ ಕಲಿಸುವ ಕೆಲಸ, ಕೈಲಾಸದಾ ಕೆಲಸ.
         ಕೆಲಸ ಕೊಡಿಸುವ ಕೆಲಸ, ಕೇದಾರನಾ ಕೆಲಸ.
         ಕೆಲಸ ನಡೆಸುವ ಕೆಲಸ, ಕೇಶವನಾಅ ಕೆಲಸ.
         ಕೆಲಸ ಮುಗಿಸುವ ಕೆಲಸ, ಕೈವಲ್ಯದಾ ಕೆಲಸ.//ಪ//.

ಆಸೆಯ ದೋಸೆ

ಆಸೆಯ ದೋಸೆ.

ಮಂಗಳೂರ ನೀರು ದೋಸೆ
ಬೆಂಗಳೂರ ಖಾಲಿ ದೋಸೆ
ಮೈಸೂರ್ ಮಸಾಲೆ ದೋಸೆ

ಸೂರ್ಯನಂತೆ ಬಣ್ಣ ದೋಸೆ
ಚಂದ್ರನ ಪ್ರತಿಬಿಂಬ ದೋಸೆ
ಅಗ್ನಿಯಿಲ್ಲದಿಲ್ಲ ದೋಸೆ

ತ್ರಿಗುಣಾಕಾರ ಈರುಳ್ಳಿ

ತ್ರಿಗುಣಾಕಾರ ಈರುಳ್ಳಿ.

ತರಕಾರಿಯ ರಾಜ್ಯದಲ್ಲಿ
ಈರುಳ್ಳಿಯು ರಾಜನಾಗಿ
ರಾಮನಂತೆ ನ್ಯಾಯವಾಗಿ
ಆಳುತಿದ್ದನು
ಮತ್ಸರದ ಕುಂಬಳನು
ಈರುಳ್ಳಿಯು ಚಿಕ್ಕದೆಂದು
ತನ್ನ ದೇಹ ದೊಡ್ಡದೆಂದು
ದೊಡ್ಡ ಹೊಟ್ಟೆ ಉರಿಯಿಂದ
ರಾಜ ಪದವಿಗಾಗಿ ತಾನು
ಮನವಿಯಿಟ್ಟನು.
ಪ್ರಜೆಗಳೆಲ್ಲ ಒಟ್ಟುಗೂಡಿ
ಈರುಳ್ಳಿಗೆ ಓಟು ಹಾಕಿ
ಕುಂಬಳದಾ ಬಾಲ ಮುರಿದು
ಕಳುಹಿಕೊಟ್ಟರು.
ಮತ್ತೆ ಬಂದ ಕುಂಬಳನು
ತಾನು ಮೋಸಹೋದೆನೆಂದು
ನ್ಯಾಯ ತನಗೆ ಬೇಕೆಂದು
ಧರ್ಮವಾದಿ ರಾಜನಲ್ಲಿ
ಮೊರೆಯನಿಟ್ಟಿತು
ಶುದ್ಧ ಮನದ ಈರುಳ್ಳಿಯು
ಕುಂಬಳನನು ಕರೆದುಕೊಂಡು
ದೇವೇಂದ್ರನ ಕೇಳಲೆಂದು
ದಿವಿಗೆ ಹೊರಟನು
ದಿವಿಯ ದೇವತೆಗಳೆಲ್ಲ
ಉಪವಾಸದ ಒಪ್ಪೊತ್ತಿನ
ದೈವಭಕ್ತ ಈರುಳ್ಳಿಯ
ರಹಿತವಾದ ಊಟವನ್ನು
ಭುಜಿಸುತಿದ್ದರು
ಪುಣ್ಯ ಕರ್ಮದಿಂದ ಮಾತ್ರ
ರಾಜ ಪದವಿ ಸಿಗುವುದೆಂದು
ಈರಿಳ್ಳಿಗೆ ಜಯವ ಹೇಳಿ
ಕುಂಬಳಕ್ಕೆ ಬುದ್ಧಿ ಹೇಳಿ
ಬೀಳುಕೊಟ್ಟರು.
ಅಲ್ಲಿಗೂ ತೃಪ್ತಿಯಿರದ
ಹಠವಾದಿ ಕುಂಬಳನು
ಈರುಳ್ಳಿಯ ಖ್ಯಾತಿಗಾಗಿ
ಕಾರಣವ ಬೇಕೆಂದು
ತ್ರಿಮೂರ್ತಿಗಳ ಲೋಕದಲ್ಲಿ
ತೀರ್ಮಾನವಾಗಲೆಂದು
ಮೊಂಡು ಹಿಡಿದನು.
ನಿಷ್ಕಲ್ಮಶ ಈರುಳ್ಳಿಯು
ಕುಂಬಳನ ತೃಪ್ತಿಗಾಗಿ
ಚತುರ್ಮುಖ ಬ್ರಹ್ಮನಲ್ಲೂ
ಮನವಿಯಿಟ್ಟಿತು.
ಸಕಲ ಜಗದ ಸೃಷ್ಟಿ ಕರ್ತ
ನಗುನಗುತಾಉತ್ತರಿಸಿ
ತನ್ನ ಹಾಗೆ ಗಡ್ಡ ಶಿಖೆಯ
ಮುಖಲಕ್ಷಣ ಹೊಂದಿರುವ
ಗಿಡದ ಸರ್ವ ಜೀವಾಳ
ತಾಯಿಬೇರು ಈರುಳ್ಳಿ
ಬಳ್ಳಿಯಲ್ಲಿ ಹುಟ್ಟಿರುವ
ಬೂದುಗುಂಬಳಕಿಂತಲೂ
ಉತ್ತಮೋತ್ತಮನೆಂದು
ತಿಳಿಯಹೇಳಿದ.
ಬ್ರಹ್ಮನನ್ನು ನಿಂದಿಸುತ
ಕ್ರೋದದಿಂದ ಕುಂಬಳನು
ವೈಕುಂಟಕೆ ಹೋಗುವಂತೆ
ಶಾಂತಿದೂತ ಈರುಳ್ಳಿಗೆ
ಆಗ್ರಹಿಸಿದನು
ಜಗದ ಹಿರಿಯ ಹರಿಯು ಕೂಡ
ಈರುಳ್ಳಿಯು ಸರಿಯೆನಲು
ಸೊಗಸಾದ ಕಾರಣವನು
ಕೊಡುತ ಹೇಳಿದ
ಈರುಳ್ಳಿಯ ದೇಹವನ್ನು
ಅಡ್ಡವಾಗಿ ಕತ್ತರಿಸಲು
ಸುದರ್ಶನ ಚಕ್ರವಿದೆ
ಉದ್ದವಾಗಿ ಕತ್ತರಿಸಲು
ಪಾಂಚಜನ್ಯ ಶಂಖವಿದೆ
ಜನ್ಮಾಂತರ ಕರ್ಮದಿಂದ
ಹೀಗಾಗಲು ಸಾಧ್ಯವೆಂದು
ಅಹಂಕಾರಿ ಕುಂಬಳಕೆ
ಸಲಹೆಯಿತ್ತನು
ಆಶೆಯೆಲ್ಲ ನೀರಾಗಲು
ವಿಧಿಯಿಲ್ಲದೆ ಕುಂಬಳನು
ಈರುಳ್ಳಿಯೆ ರಾಜನೆಂದು
ಬಲವಂತದಿ ಒಪ್ಪುತಿರಲು
ಸತ್ಭುದ್ಧಿಯ ಈರುಳ್ಳಿ
ಲಯಕರ್ತ ಶಿವನಲ್ಲಿ
ಕೇಳಲೆಂದು ಕೈಲಾಸಕೆ
ಹತ್ತಿ ಹೋದನು
ಉಮಾಮಹೇಶ್ವರನು
ಇವರ ನೋಡಿ ನಸುನಕ್ಕು
ಈರುಳ್ಳಿಯ ಎತ್ತಿಕೊಂಡು
ಕುಂಬಳದ ಮೇಲಿಡಲು
ಸಮಯಾಂತರದಲ್ಲಿ
ದಷ್ಟಪುಷ್ಟ ಕುಂಬಳನು
ಕೊಳೆತುಹೋದನು
ಲಯದ ಗುಣವ ಹೊಂದಿರುವ
ಈಶ್ವರಪ್ರಿಯ ಈರುಳ್ಳಿ
ಕಡಿಯುವವರ ಕಣ್ಣಲ್ಲಿ
ನೀರು ಬರಿಸೊ ಈರುಳ್ಳಿ
ತ್ರಿಮೂರ್ತಿಯ ಅಂಶವೆಂದು
ಹೆಸರು ಪಡೆದನು.

ಗರ್ಭದಲ್ಲಿ ದಶಾವತಾರ

                           ಗರ್ಭದಲ್ಲಿ ದಶಾವತಾರ

               ತಾಯಿ ಬ್ರಹ್ಮಾಂಡವು ಮಗುವು ಪಿಂಡಾಂಡವು,
               ಪಿಂಡದಿಂದ ಬ್ರಹ್ಮ ಮಾಡೊ ಅಂಡ ವೇದವು.//ಪ//.

ಬಯಕೆ.

ಬಯಕೆ.

ಮನಸಿನಿಂದ ಮಾನವ,
ಮುನಿಸಿನಿಂದ ದಾನವ,
ಬಯಕೆ ತೀರದಾಗ ಮುನಿಸು,
ಮುನಿಸಿನಿಂದ ಎಲ್ಲ ಹೊಲಸು,
ಹೊಲಸು ಬೇಡ,
ಮುನಿಸು ಬೇಡ,
ಬಯಸುವುದನು ನಿಲ್ಲಿಸು,
ಸರಸದಿಂದ ಜೀವಿಸು.
ಮನಸಿನಿಂದ ಮುನಿಸ ಮರೆತು,
ಮುನಿಯ ತರಹ ಮನ್ನಿಸು.
ಮುನಿಸಬೇಕು ಬಯಕೆಯನ್ನು ಬಯಸಲೆಂದು ಹರಿಯನು.
ಸುಖದಸಿರಿಯ ದೊರೆಯನು.

ಪ್ರಣತಿ ಮತ್ತು ತಂತ್ರ

ಪ್ರಣತಿ

ನಮ್ಮ ಮನೆಯ ಹಣತಿ,
ಸಣ್ಣ ಪಾಪ ಪ್ರಣತಿ.
ಎತ್ತಿಕೊಳಲು ನಗುತಿ,
ಮುತ್ತುಕೊಡಲು ಅಳುತಿ.
ಅರಿವು ಕೊಟ್ಟ ಆರತಿ,
ಬೆಳಕು ಕೊಟ್ಟ ಭಾಮತಿ,
ನಮ್ಮ ಪುಟ್ಟ ಭಾರತಿ.

ಅಂತರ ಮತ್ತು ಅರಸ

ಅಂತರ

ಬಂಗಾರದ ಉಂಗುರದಲ್ಲಿ,
ಬಂಗಾರ ನಿರಾಕಾರ,
ಉಂಗುರ ಸಾಕಾರ,
ಉಂಗುರ ಬಂಗಾರದ್ದು,
ಆದರೆ
ಬಂಗಾರವೆಂದರೆ ಉಂಗುರವಲ್ಲ
ಹೀಗಿದೆ
ನಮ್ಮ ಮತ್ತು ದೇವರ
ಅಂತರ.

ನೂರು ದಿನ ಪೂರೈಸಿದ `ಸರ್ಕಾರ್' `ಸಿನಿಮಾ'!!!

ಎಲ್ಲಾ ಸಿನೆಮಾಗಳಲ್ಲಿ ಮಧ್ಯಂತರ ಇನ್ನೇನು ಒಂದೆರಡು ಕ್ಷಣಗಳಿರುವಾಗ ಕತೆಗೆ ಒಂದು ತಿರುವು ಬಂದು ವೀಕ್ಷಕರ ಕುತೂಹಲ ಕೆರಳಿಸುತ್ತದೆ. ಆದರೆ ಈ ಶನಿವಾರ(13.05.06) ನೂರು ದಿನ ಪೂರೈಸಿದ `ಸಿನಿಮಾ' ಮಾತ್ರ ವಿಭಿನ್ನ ರೀತಿಯದು. ಹೆಸರು `ಸರ್ಕಾರ್'. ಇದು ಪ್ರಾರಂಭ ಆಗಿದ್ದೆ ಒಂದು ವಿಚಿತ್ರ `ತಿರುವು' ನಿಂದ!

ಇನ್ನೊಂದು ವಿಶೇಷ ಎಂದರೆ ಈ (ವಿ)ಚಿತ್ರದಲ್ಲಿ ನಾಯಕ ಯಾರು ಖಳನಾಯಕನಾರು ಎಂಬ ಗೊಂದಲ ಪ್ರಾರಂಭದಿಂದಲೂ ಕಾಡುತಿದೆ. ಡೈಲಾಗ್ ವಿಷಯದಲ್ಲಿ ಎಲ್ಲಾ ಸಿನಿಮಾಗಳನ್ನು ಹಿಮ್ಮೆಟ್ಟಿಸುತ್ತದೆ. ಶೆಟ್ಟರ್ ಹೆಸರಿನ ಮಂತ್ರಿ ಪಾತ್ರವೊಂದು ಈ ಡೈಲಾಗ್ ಹೆಳುತ್ತೆ-"ಕಂದಾಯ ಇಲಾಖೆಯಲ್ಲಿ ಯಾರಾದರು ಲಂಚ ಕೇಳಿದರೆ ನೇರವಾಗಿ ಅವರ ವಿವರಗಳನ್ನು ನನ್ನ ಮೊಬೈಲ್ ಗೆ ಕರೆ ಮಾಡಿ ತಿಳಿಸಿ. ನಾನು ಕ್ರಮ ತೆಗೆದುಕೊಳ್ಳುತ್ತೇನೆ" ಎಂದು. ಪತ್ರಿಕೆಗಳ ಮೂಲಕ ಮೊಬೈಲ್ ನಂಬರ್ ಜನತಾಜನಾರ್ಧನ್ ಗೆ ದೊರೆಯುತ್ತದೆ. ಆದರೆ ಮುಂದೇನಾಯಿತು ಎಂದು ಕೇಳಬೇಡಿ. ಆ ಮೊಬೈಲಿಗೆ ಎಷ್ಟು ದೂರುಗಳು, ಅವುಗಳಲ್ಲಿ ಕ್ರಮ ತೆಗೆದುಕೊಂಡಿದ್ದೆಷ್ಟು ಎಂಬುದರ ಬಗ್ಗೆ ಒಂದಿಷ್ಟೂ ಮಾಹಿತಿ ಇಲ್ಲ.

"ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡಲಾಗುವುದು" ಎಂಬುದು ಆಗಾಗ ಕೇಳಿ ಬರುವ ಡೈಲಾಗು.

ಇನ್ನೊಂದು ವಿಶೇಷ ಎಂದರೆ ಅ ಒಂದೇ ಚಿತ್ರಕ್ಕೆ ಹಲವು ನಿರ್ದೇಶಕರು!!!!!!

ಈ ಸಿನಿಮಾ ನೂರು ದಿನ `ಓಡಿ'ದ್ದರು ಸಹ ಬಾಕ್ಸ್ ಆಫೀಸ್ `ಕಮಾಯಿ' ಅಷ್ಟಕಷ್ಟೆ ಎಂಬ ಸೂಚನೆ ದೊರೆತಿದೆ. ಏಕೆಂದರೆ, ನೂರು ದಿನ ಪೂರೈಸಿದ ಸಂದರ್ಭದಲ್ಲಿ ಈ ಸಿನಿಮಾದ ಪ್ರಮುಖ ಪಾತ್ರ(ನಾಯಕ?) ತನ್ನ ಸಂದರ್ಶನದಲ್ಲಿ"ಈ ನೂರು ದಿನ ನನಗೆ ತೃಪ್ತಿ ನೀಡಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ವೆಬ್ ಅಲೆಮಾರಿಗಳೇ! ದಯವಿಟ್ಟು ಗಮನದಲ್ಲಿಡಿ;ಈ ಚಿತ್ರದ ಅವಧಿ 40 ತಿಂಗಳು!!!!!! ಆದರೆ ಅದಕ್ಕಿಂತ ಮುಂಚೆಯೂ ಮುಗಿಯಬಹುದು!