ಕಾರಂಜಿ
ಗೆಳೆಯರೇ, ಬಹುಶಃ ಬ್ಲಾಗ್ ಅನ್ನೊದು ಒಂದು ಇಲ್ಲದೇ ಇದ್ದಿದ್ದರೆ, ನಾನು ನನ್ನ ಅನಿಸಿಕೆಗಳನ್ನು (ಕನ್ನಡದಲ್ಲಿ) ಬರೆಯುವ ಪ್ರಯತ್ನವನ್ನು ಮಾಡ್ತನೇ ಇರ್ಲಿಲ್ಲ ಅನ್ಸುತ್ತೆ. ಮೊದಲೇ ನನ್ನ ಪರಿಚಯ ಹೇಳಿ ಬಿಡ್ತೇನೆ. ನಾನೊಬ್ಬ ಮೆಕಾನಿಕಲ್ ಇಂಜಿನಿಯರ್. ಅದು ಓದಿದ್ದು. ಆದರೆ ಆದದ್ದು ಸಾಪ್ಟ್ ವೇರ್ ಕಂಸಲ್ಟೆಂಟ್. ನಾ ಹುಟ್ಟಿದ್ದು ಶಿಕಾರಿಪುರದಲ್ಲಿ. ಶಿವಮೊಗ್ಗ ಜಿಲ್ಲೆ. ಬೆಳೆದಿದ್ದು, ಓದಿದ್ದು ಎಲ್ಲ ತುಮಕೂರಿನಲ್ಲಿ. ಬೆಳವಾಡಿ ಅನ್ನೋದು ನಮ್ಮ ತಂದೆಯವರು ಹುಟ್ಟಿ ಬೆಳೆದ ಹಳ್ಳಿ. ಚಿಕ್ಕಮಗಳೂರು ಜಿಲ್ಲೆಗೆ ಸೇರಿದ್ದು. ಜಾವಗಲ್ ಮತ್ತ್ತು ಕಳಸಾಪುರದ ನಡುವೆ ಇದೆ.
ಪ್ರಪಂಚವೆಲ್ಲ ತಿರುಗಿ ಸಧ್ಯಕ್ಕೆ ನೊಯ್ಡ ದಲ್ಲಿ ಇದ್ದೇನೆ.ರೀಟೈಲ್ ಸಾಪ್ಟ್ ವೇರ್ ಕೆಲಸ. HCL Technologies ನಲ್ಲಿ ಕೆಲಸ.
ಇಷ್ಟು ಬರಿಯೋ ಹೊತ್ತಿಗೆ ಸಾಕಷ್ಟು ಹೊತ್ತಾಗಿದೆ. ನಾಳೆ ನನ್ನ ಬರೆಯುವ ಪ್ರಯತ್ನಕ್ಕೆ ನಾಂದಿ ಮಾಡೋಣ ಅಂತಿದೀನಿ. ನೋಡುವ!
ಪ್ರದ್ಯುಮ್ನ ಬೆಳವಾಡಿ
Feb 26, 2007 00:12 AM
Rating