ಚಲುವ ಕನ್ನಡ ಕಸ್ತೂರಿ
ಬರಹ
ಕೋಟಿ ಕೋಟಿ ಹುಡೂಗಿಯರಲ್ಲಿ
ಲಕ್ಷಾಂತರ ಚಲುವೆಯರಲ್ಲಿ
ನೀ ಮನಸಿಗೆ ಹಿಡಿಸಿದೆಯಮ್ಮ ಚಲುವ ಕನ್ನಡ ಕಸ್ತೂರಿ
ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿ
ಭುವನೇಶ್ವರಿಯ ಮುದ್ದಿನ ಮಗಳಾಗಿ
ನೀ ಜನಿಸಿರುವೆ ಚಲುವ ಕನ್ನದ ಕಸ್ತೂರಿ
ನೂರಾರು ಹುಡುಗಿಯರ ನಾ ನೋಡಿದೆ
ಹಿಡಿಸಲಿಲ್ಲ ನನ್ನ ಮನಸಿಗೆ ನಿನ್ನ ಹಾಂಗ್ಯಾರು
ನಿನ್ನ ನೋಡಿದಾಗಿಂದ ನಿನ್ನ ಬಿಂಬಎದೆಯಲ್ಲಿ ಚಲುವ ಕನ್ನಡ ಕಸ್ತೂರಿ
ಚಲುವೆಯರ ಚಲುವೆ ನೀನು ಚಂದನದ ಗೊಂಬೆ ನೀನು
ಚಂದಿರನ ಸೋದರಿ ನೀನು ಇಂದಿರನ ಮಗಳು ನೀನು
ಜಕ್ಕಣ್ಣನ ಕಲೆಯು ನೀನು ಚಲುವ ಕನ್ನಡ ಕಸ್ತೂರಿ
ಉತ್ತಮ ಸಂಸ್ಕೃತಿಯ ವನಿತೆ ನೀನು
ನಿನ್ನಂತವಳ ಎಲ್ಲೂ ಕಾಣೆ ನಾನು
ನಿನ್ನ ತಾಳ್ಮೆ ಯಾರಲು ಇಲ್ಲ ನಿನ್ನ ಕರುಣೆ ಎಲ್ಲರಲಿಲ್ಲ
ನಿನ್ನದೆ ಕಂಪು ಜಗದಲೆಲ್ಲ ನಿನ್ನ ಮರೆತರೆ ಜೀವನವಿಲ್ಲ ಚಲುವ ಕನ್ನಡ ಕಸ್ತೂರಿ
-ಕೃಷ್ಣಮೊರ್ತಿ ಐ ಇ ಎಂ ಬಿ ಎಂ ಎಸ್ ಸಿ ಇ